Labour Children Scholarship- ರಾಜ್ಯ ಸರ್ಕಾರದಿಂದ ಕಾರ್ಮಿಕರ ಮಕ್ಕಳಿಗೆ ₹10,000 ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

2025-26ನೇ ಶೈಕ್ಷಣಿಕ ಸಾಲಿಗೆ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ (Labour Children Scholarship) ಮತ್ತು ಪ್ರತಿಭಾ ಪುರಸ್ಕಾರದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕಾರ್ಮಿಕ ಕುಟುಂಬಗಳ ಮಕ್ಕಳ ಶಿಕ್ಷಣದ ಗುರಿಯನ್ನು ಬೆಂಬಲಿಸುವ ಉದ್ದೇಶದಿಂದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ 2025-26ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರದ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಕಾರ್ಯಕ್ರಮಗಳು ಆರ್ಥಿಕವಾಗಿ ಹಿಂದುಳಿದ ಶ್ರಮಿಕ ಕುಟುಂಬಗಳ ಮಕ್ಕಳಿಗೆ ಶಿಕ್ಷಣದಲ್ಲಿ ಪ್ರೋತ್ಸಾಹ ನೀಡುವ ಮಹತ್ವದ ಹೆಜ್ಜೆಯಾಗಿದ್ದು; ಅರ್ಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.

LIC BIMA SAKHI Scheme- ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಂದ ಎಲ್‌ಐಸಿ ಉದ್ಯೋಗಕ್ಕೆ ಅರ್ಜಿ ಆಹ್ವಾನ | ನಿಮ್ಮೂರಲ್ಲೇ ಸರ್ಕಾರಿ ನೌಕರಿ ಮಾಡಿ…

ವಿದ್ಯಾರ್ಥಿವೇತನ (ಶೈಕ್ಷಣಿಕ ಸಹಾಯಧನ) ವಿವರ

ಈ ಯೋಜನೆಯಡಿ ಪ್ರೌಢ ಶಾಲೆಯಿಂದ ಪ್ರಾರಂಭಿಸಿ ಸ್ನಾತಕೋತ್ತರ ಮಟ್ಟದ ವರೆಗೆ ಶಿಕ್ಷಣ ಪಡೆಯುತ್ತಿರುವ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ರೂಪದಲ್ಲಿ ಹಣಕಾಸು ನೆರವು ಒದಗಿಸಲಾಗುತ್ತದೆ.

ಇದರ ಪ್ರಯೋಜನ ಪಡೆಯಲು ಅರ್ಜಿದಾರರ ತಂದೆ ಅಥವಾ ತಾಯಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 2025ರ ಮೇ 31ರೊಳಗೆ ನೋಂದಾಯಿತರಾಗಿರಬೇಕು.

ಕಾರ್ಮಿಕರ ಮಕ್ಕಳಿಗೆ ಮಾನ್ಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶವಿರಬೇಕು. ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಅರ್ಹರಾಗದಂತೆ ನೇರವಾಗಿ ಮುಂದಿನ ತರಗತಿಗೆ ಉತ್ತೀರ್ಣರಾಗಿರಬೇಕು.

2025-26ನೇ ಶೈಕ್ಷಣಿಕ ಸಾಲಿಗೆ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Labour Children Scholarship 2025
ಯಾರಿಗೆ ಎಷ್ಟೆಷ್ಟು ವಿದ್ಯಾರ್ಥಿವೇತನ?
  • 8 ರಿಂದ 10ನೇ ತರಗತಿ ವರೆಗೆ: ರೂ.3000/-
  • ಪಿಯುಸಿ/ಡಿಪ್ಲೊಮಾ/ಐಟಿಐ/ಟಿಸಿಹೆಚ್ ಇತ್ಯಾದಿ: ರೂ. 4000/-
  • ಪದವಿ ತರಗತಿಗೆ: ರೂ.5000/-
  • ಸ್ನಾತಕೋತ್ತರ ಪದವಿ ತರಗತಿಗಳಿಗೆ: ರೂ.5000/-
  • ಇಂಜಿನೀಯರಿಂಗ್/ವೈದ್ಯಕೀಯ: ರೂ.10,000/

Karnataka Hosa BPL Card- ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಸಲ್ಲಿಕೆ ಶೀಘ್ರದಲ್ಲೇ ಆರಂಭ? ಆಹಾರ ಸಚಿವರು ನೀಡಿದ ಮಹತ್ವದ ಮಾಹಿತಿ ಇಲ್ಲಿದೆ…

ಅರ್ಜಿ ಸಲ್ಲಿಕೆ ವಿಧಾನ

ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಅರ್ಜಿಯನ್ನು SSP (State Scholarship Portal) ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬೇಕಾಗಿದೆ.

ವಿದ್ಯಾರ್ಥಿಯ ಗುರುತಿನ ಚೀಟಿ, ಗುರುತಿನ ಸಂಖ್ಯೆ (UID), ಬ್ಯಾಂಕ್ ಖಾತೆ ವಿವರ, ಪಾಸು ಮಾಡಿದ ಅಂಕಪಟ್ಟಿ ಹಾಗೂ ಕಾರ್ಮಿಕರ ನೋಂದಣಿ ಪ್ರಮಾಣಪತ್ರದೊಂದಿಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

  • ಅರ್ಜಿ ಸಲ್ಲಿಸಲು ಕೊನೆ ದಿನ: 31-10-2025
  • ಅರ್ಜಿ ಲಿಂಕ್: ssp.karnataka.gov.in
  • ಸಹಾಯವಾಣಿ: 155214

PM Kisan 20th Installment- ರೈತರ ಖಾತೆಗೆ ಆಗಸ್ಟ್ 2ರಂದು ಪಿಎಂ ಕಿಸಾನ್ ₹2,000 ಹಣ ಜಮಾ | ನಿಮಗೆ ಹಣ ಸಿಗುತ್ತಾ? ಈಗಲೇ ಚೆಕ್ ಮಾಡಿ…

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ

ವಿದ್ಯಾರ್ಥಿಗಳ ಮನೋಸ್ಥಿತಿಗೆ ಬಲ ನೀಡುವ ಹಾಗೂ ಶಿಕ್ಷಣದಲ್ಲಿ ಮುಂದುವರಿಯಲು ಪ್ರೇರಣೆ ನೀಡುವ ಉದ್ದೇಶದಿಂದ ಅಧಿಕ ಅಂಕಗಳನ್ನು ಗಳಿಸಿ ಅತ್ಯುತ್ತಮ ಸಾಧನೆ ಮಾಡಿರುವ ಕಾರ್ಮಿಕರ ಮಕ್ಕಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಲಾಗುತ್ತಿದೆ.

2024-25ನೇ ಸಾಲಿನಲ್ಲಿ SSLC ಅಥವಾ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪೋಷಕರು 2025ರ ಮೇ 2ರೊಳಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳ ಪೋಷಕರು 2025ರ ಏಪ್ರಿಲ್ 8ರೊಳಗೆ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರಬೇಕು.

  • ಅರ್ಜಿ ಸಲ್ಲಿಸಲು ಕೊನೆ ದಿನ: 15-09-2025
  • ಅರ್ಜಿ ಲಿಂಕ್: karbwwb.karnataka.gov.in
  • ಸಹಾಯವಾಣಿ: 155214

ನೀವು ಕಾರ್ಮಿಕರಾಗಿದ್ದರೆ ಅಥವಾ ನಿಮ್ಮ ನೆರೆಹೊರೆಯಲ್ಲಿ ಯಾರಾದರೂ ಅರ್ಹರಿದ್ದರೆ ಈ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಿ. ಶಿಕ್ಷಣವು ಒಬ್ಬರ ಬದುಕನ್ನು ಬದಲಾಯಿಸಬಲ್ಲ ಶಕ್ತಿಯಾಗಿದೆ – ಈ ಶಕ್ತಿಗೆ ದಾರಿ ಕಲ್ಪಿಸೋಣ.

Gruhalakshmi Women Loan Scheme- ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ 5 ಲಕ್ಷ ರೂ.ವರೆಗೆ ಶೂರಿಟಿ ಇಲ್ಲದ ಸಾಲ ಸೌಲಭ್ಯ | ಸರ್ಕಾರದ ಹೊಸ ಯೋಜನೆ ಆರಂಭ


Spread the love
WhatsApp Group Join Now
Telegram Group Join Now
error: Content is protected !!