KVP Post Office Scheme- ಹಣ ಡಬಲ್ ಮಾಡುವ ಅಂಚೆ ಇಲಾಖೆ ಯೋಜನೆ | ₹5 ಲಕ್ಷಕ್ಕೆ ₹10 ಲಕ್ಷ ಪಡೆಯಿರಿ | ಕಿಸಾನ್ ವಿಕಾಸ ಪತ್ರ (KVP) ಸಂಪೂರ್ಣ ಮಾಹಿತಿ

Spread the love

ಅಂಚೆ ಲಾಲಾಖೆಯ ಕಿಸಾನ್ ವಿಕಾಸ ಪತ್ರ (Kisan Vikas Patra – KVP) ಯೋಜನೆಯು ‘ಹಣ ಡಬಲ್ ಮಾಡುವ ಯೋಜನೆ’ ಎಂದೇ ಖ್ಯಾತಿ ಪಡೆದುಕೊಂಡಿದೆ. ಈ ಯೋಜನೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ನಿಮ್ಮ ಹಣವನ್ನು ಸುರಕ್ಷಿತವಾಗಿ ನಿಗದಿತ ಅವಧಿಗೆ ದ್ವಿಗುಣಗೊಳಿಸಲು ಇಚ್ಛಿಸುತ್ತೀರಾ? ಅಪಾಯವಿಲ್ಲದೆ ಗ್ಯಾರಂಟಿ ಲಾಭದ ಹೂಡಿಕೆಯನ್ನು ಹುಡುಕುತ್ತೀರಾ? ಹಾಗಾದರೆ ಕಿಸಾನ್ ವಿಕಾಸ್ ಪತ್ರ ಯೋಜನೆ ನಿಮಗೆ ಪೂರಕವಾಗಿದೆ.

ಹೌದು, ಹೆಚ್ಚು ಲಾಭ ಮತ್ತು ನಿಶ್ಚಿತ ಮ್ಯಾಚ್ಯೂರಿಟಿ ಲಾಭ ಹುಡುಕುವ ಹೂಡಿಕೆದಾರರಿಗೆ ಅಂಚೆ ಇಲಾಖೆಯ ‘ಕಿಸಾನ್ ವಿಕಾಸ್ ಪತ್ರ’ (KVP) ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ. ‘ಹಣ ಡಬಲ್ ಮಾಡುವ ಯೋಜನೆ’ ಎಂದೇ ಖ್ಯಾತಿಯ ಈ ಯೋಜನೆ, ದೀರ್ಘಕಾಲಿಕ ಉಳಿತಾಯ ಮತ್ತು ನಿಗದಿತ ಆದಾಯದ ಕನಸು ನಿಜವಾಗಿಸುತ್ತದೆ.

UPI Payment New Rule- ಫೋನ್ ಪೇ, ಗೂಗಲ್ ಪೇ ಹಣ ಪಾವತಿಗೆ ಹೊಸ ನಿಯಮ | ಇನ್ಮುಂದೆ 15 ಸೆಕೆಂಡ್’ನಲ್ಲಿ ಹಣ ವರ್ಗಾವಣೆ

ಹೂಡಿದ ಹಣ ಗ್ಯಾರಂಟಿ ದ್ವಿಗುಣ

1988ರಲ್ಲಿ ಸಣ್ಣ ಉಳಿತಾಯದ ಯೋಜನೆಯಾಗಿ ಆರಂಭಗೊಂಡ ‘ಕಿಸಾನ್ ವಿಕಾಸ್ ಪತ್ರ’, ವರ್ಷದಿಂದ ವರ್ಷಕ್ಕೆ ಜನಪ್ರಿಯತೆಯನ್ನು ಗಳಿಸುತ್ತಲೇ ಬಂದಿದೆ. ದೀರ್ಘಾವಧಿ ಉಳಿತಾಯ ಚಟುವಟಿಕೆಯನ್ನು ಉತ್ತೇಜಿಸುವುದು, ಭದ್ರತೆ ಮತ್ತು ನಿಗದಿತ ಆದಾಯ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಕನಿಷ್ಠ ಹೂಡಿಕೆ ₹1,000, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಹೂಡಿದ ಹಣವನ್ನು ಮಾಸಿಕ ಅಥವಾ ವಾರ್ಷಿಕ ಬಡ್ಡಿ ರೂಪದಲ್ಲಿ ನೀಡದೇ, ಮ್ಯಾಚ್ಯೂರಿಟಿ ಸಮಯದಲ್ಲಿ ದ್ವಿಗುಣ ಹಣವಾಗಿ ಪಾವತಿಸಲಾಗುತ್ತದೆ.

CBSE 10th & 12th Result 2025- ಸಿಬಿಎಸ್‌ಇ 10th ಮತ್ತು 12th ಫಲಿತಾಂಶ ಯಾವಾಗ ಪ್ರಕಟವಾಗುತ್ತೇ? CBSE ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ…

ಇದರಲ್ಲಿ ಹೂಡಿದ ಮೊತ್ತ 9 ವರ್ಷ 5 ತಿಂಗಳಲ್ಲಿ (115 ತಿಂಗಳು) ದ್ವಿಗುಣವಾಗುತ್ತದೆ. ಉದಾಹರಣೆಗೆ:

  • ₹5 ಲಕ್ಷ ಹೂಡಿಸಿದರೆ ₹10 ಲಕ್ಷ
  • ₹1 ಲಕ್ಷ ಹೂಡಿಸಿದರೆ ₹2 ಲಕ್ಷ
  • ₹50,000 ಹೂಡಿಸಿದರೆ ₹1 ಲಕ್ಷ
ಯಾರು ಈ ಯೋಜನೆಯ ಖಾತೆಗಳ ಪ್ರಕಾರ
  • ಸಿಂಗಲ್ ಹೋಲ್ಡರ್ ಖಾತೆ – ಸ್ವತಂತ್ರ ಹೂಡಿಕೆದಾರರಿಗೆ
  • ಜಂಟಿ ಎ ಖಾತೆ – ಇಬ್ಬರಿಗೂ ಪಾವತಿ ನೀಡಲಾಗುತ್ತದೆ
  • ಜಂಟಿ ಬಿ ಖಾತೆ – ಯಾವುದಾದರೂ ಒಬ್ಬರಿಗೆ ಪಾವತಿ

ಅಪ್ರಾಪ್ತ ವಯಸ್ಕರು ಅಥವಾ ದೈಹಿಕ/ಮಾನಸಿಕವಾಗಿ ದುರ್ಬಲರ ಪೋಷಕರು ಅಥವಾ ಕಾನೂನು ಪಾಲಕರು ಕೂಡ ಖಾತೆ ತೆರೆಯಬಹುದು.

ಖಾತೆ ತೆರೆಯಲು ಅಗತ್ಯ ದಾಖಲೆಗಳು
  • 2 ಪಾಸ್‌ಪೋರ್ಟ್ ಸೈಜ್ ಫೋಟೋ
  • ಗುರುತಿನ ಚೀಟಿ (ಪ್ಯಾನ್ ಕಾರ್ಡ್ / ಆಧಾರ್ ಕಾರ್ಡ್ / ಚಾಲನಾ ಪರವಾನಗಿ / ಪಾಸ್‌ಪೋರ್ಟ್)
  • ವಿಳಾಸ ಪುರಾವೆ (ವಿದ್ಯುತ್ ಬಿಲ್ / ಟೆಲಿಫೋನ್ ಬಿಲ್ / ಬ್ಯಾಂಕ್ ಪಾಸ್‌ಬುಕ್)
  • ₹50,000ಕ್ಕಿಂತ ಹೆಚ್ಚು ಹೂಡಿಕೆ ಮಾಡುವವರಿಗೆ ಪ್ಯಾನ್ ಮತ್ತು ಆಧಾರ್ ಕಡ್ಡಾಯ

Best Low Interest Home Loans- ಅತೀ ಕಡಿಮೆ ಬಡ್ಡಿದರದ ಗೃಹ ಸಾಲ | SBI, HDFC, ICICI ಪ್ರಮುಖ ಬ್ಯಾಂಕುಗಳಲ್ಲಿ ಬಡ್ಡಿದರ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ…

ಈ ಯೋಜನೆಯ ಪ್ರಮುಖ ಲಾಭಗಳು

ಇದು ಸರ್ಕಾರದ ಗ್ಯಾರಂಟಿ ಹೊಂದಿರುವ ಯೋಜನೆಯಾಗಿರುವುದರಿಂದ ಹೂಡಿದ ಹಣ ಸುಭದ್ರ ಮತ್ತು ಸುರಕ್ಷಿತ. 115 ತಿಂಗಳಲ್ಲಿ ಹೂಡಿಕೆ ಹಣ ದ್ವಿಗುಣವಾಗುವುದರಿಂದ ಲಾಭ ಕೂಡ ನಿಶ್ಚಿತ ಲಾಭ.

ಕೆವಿಪಿ ಪತ್ರವನ್ನು ಲೋನ್‌ಗಾಗಿ ಅಡಮಾನವಿಡಬಹುದು. ಒಂದೇ ಖಾತೆಯನ್ನು ಭಾರತದೆಲ್ಲೆಡೆ ವರ್ಗಾಯಿಸಬಹುದು, ಅಗತ್ಯವಿದ್ದರೆ 2.5 ವರ್ಷಗಳ ನಂತರ (30 ತಿಂಗಳು) ಹಣ ಹಿಂತೆಗೆದುಕೊಳ್ಳುವ ಅವಕಾಶವಿದೆ.

ಖಾತೆದಾರನ ನಿಧನದ ಬಳಿಕ, ಹೂಡಿಕೆ ಪಾವತಿಯನ್ನು ಕಾನೂನು ವಾರಸುದಾರರಿಗೆ ವರ್ಗಾಯಿಸಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80ಸಿ ಅಡಿಯಲ್ಲಿ ವಿನಾಯಿತಿ ಲಭ್ಯವಿಲ್ಲ. ಮ್ಯಾಚ್ಯೂರಿಟಿಯ ನಂತರ ಹಣ ವಾಪಾಸು ಪಡೆಯುವಾಗ TDS (Tax Deducted at Source) ವಿಧಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ. ಇಂದೇ ಅಂಚೆ ಕಚೇರಿಗೆ ಭೇಟಿ ನೀಡಿ ಮತ್ತು ನಿಮ್ಮ ಭವಿಷ್ಯ ಉಜ್ವಲಗೊಳಿಸಲು ಮೊದಲ ಹೆಜ್ಜೆ ಇಡಿ!

ಅಧಿಕೃತ ವೆಬ್‌ಸೈಟ್: Click Here

E-Swathu Rural Property- ಸರ್ಕಾರಿ ಜಾಗ, ಕೃಷಿ ಭೂಮಿಯಲ್ಲಿ ಕಟ್ಟಿರುವ ಮನೆ, ಸೈಟುಗಳಿಗೆ ಸಕ್ರಮ ಭಾಗ್ಯ | ಇ-ಸ್ವತ್ತು ಸಮಸ್ಯೆಗಳಿಗೆ ಸರ್ಕಾರದ ಪರಿಹಾರ


Spread the love
WhatsApp Group Join Now
Telegram Group Join Now
error: Content is protected !!