KSRTC Drivers Outsourcing Recruitment 2024 : ಕರ್ನಾಟಕ ರಾಜ್ಯ ಸಾರಿಗೆ ನಿಗಮದಲ್ಲಿ ಕರ್ನಾಟಕ ರಾಜ್ಯಾದ್ಯಂತ ವಿವಿಧ ಡಿಪೋಗಳಲ್ಲಿ ಒಟ್ಟು 13,000ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿಯಿದ್ದು ಈ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ನಿಗಮ ಮಂಡಳಿಯಿ೦ದ ನಿರ್ಧಾರ ಮಾಡಿದ್ದು ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…
ಕಳೆದ ಒಂದು ವರ್ಷದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 13,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂಬ ಸುದ್ದು ಹರಿದಾಡುತ್ತ ಬಂದಿದ್ದು; ಈ ಸಂಬ೦ಧ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಹಲವು ಬಾರಿ ಆಗ್ರಹಗಳೂ ಕೇಳಿ ಬಂದಿವೆ. ಸದ್ಯಕ್ಕೆ ಇದೀಗ ರಾಜ್ಯದ ವಿವಿಧ ಜಿಲ್ಲೆಗಳ ಡಿಪೋಗಳು ಖಾಲಿ ಇರುವಂತಹ ಚಾಲಕ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಪ್ರಕಟಣೆ ಹೊರಡಿಸಿವೆ.
ಯಾವ ಜಿಲ್ಲೆಗಳ ಡಿಪೂಗಳಲ್ಲಿ ಈ ನೇಮಕಾತಿ ನಡೆಯುತ್ತಿದೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಸೇರಿದಂತೆ ಇತರೆ ಅವಶ್ಯಕ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ರೈತರ 2 ಲಕ್ಷ ರೂಪಾಯಿ ಸಾಲಮನ್ನಾ | ₹31 ಸಾವಿರ ಕೋಟಿ ಅನುದಾನ Farmers Loan Waiver
ಸದ್ಯಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿರುವ ಡಿಪೋಗಳ ವಿವರ
ರಾಜ್ಯದ ಚಾಮರಾಜನಗರ, ರಾಮನಗರ ಹಾಗೂ ಆನೇಕಲ್ ಡಿಪೋಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ಅರ್ಜಿ ಸಲ್ಲಿಸಲು ಡಿಪೋಗಳ ವಿವರವನ್ನು ಲೇಖನದ ಕೊನೆಯ ಭಾಗದಲ್ಲಿ ನೀಡಲಾಗಿದೆ.
ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳೇನು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 7ನೇ ತರಗತಿಯಲ್ಲಿ ಪಾಸಾಗಿರಬೇಕು.
- ಮಾನ್ಯತೆ ಪಡೆದಿರುವ ವಾಹನ ಚಾಲನಾ ಪರವಾನಗಿ ಹೊಂದಿರಬೇಕು.
- ಲಘು ಮೋಟಾರ್ ವಾಹನ ಚಾಲಕರಾಗಿ ಕನಿಷ್ಠ 2 ವರ್ಷಗಳ ಸೇವಾನುಭವ ಹೊಂದಿರಬೇಕು.
ವೇತನ ಹಾಗೂ ಇತರೆ ಸೌಲಭ್ಯಗಳ ವಿವರ
ಈ ಹೊರಗುತ್ತಿಗೆ ಆಧಾರದ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 23,000 ರೂಪಾಯಿ ವೇತನ ನೀಡಲಾಗುತ್ತದೆ ಹಾಗೂ ಇದರ ಜೊತೆಗೆ ಇಎಸ್‌ಐ, ಇಪಿಎಪ್ ಸೌಲಭ್ಯವನ್ನು ಕೂಡ ನೀಡಲಾಗುತ್ತದೆ.
ಈ ಹುದ್ದೆಗಳ ನೇಮಕಾತಿಯು ಹೊರಗುತ್ತಿಗೆ ಆಧಾರದ ನೇಮಕಾತಿ ಆಗುವುದರಿಂದ ಹುದ್ದೆಗಳ ಮೇಲೆ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಖಾಯಂ ಹುದ್ದೆಗಳ ಭರ್ತಿ ಸಂದರ್ಭದಲ್ಲಿ ಈ ಅಭ್ಯರ್ಥಿಗಳನ್ನು ತೆರವುಗೊಳಿಸಲಾಗುವುದು.
ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನೀಡಿರುವ ಸಂಬ೦ಧಪಟ್ಟ ಡಿಪೋಗಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
- ಚಾಮರಾಜನಗರ ಜಿಲ್ಲೆ KSRTC ಡಿಪೋ ಸಂಪರ್ಕಿಸಿ : 8050980889, 8618876846
- ರಾಮನಗರ ಹಾಗೂ ಆನೇಕಲ್ KSRTC ಡಿಪೋ ಸಂಪರ್ಕಿಸಿ : 8050980889, 8618876846
1 thought on “7ನೇ ತರಗತಿ ಪಾಸಾದವರಿಂದ KSRTC ಹುದ್ದೆಗಳಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆ ಹೇಗೆ? KSRTC Drivers Outsourcing Recruitment 2024”