KSCCF Recruitment 2026- ಪಿಯುಸಿ, ಪದವಿಧರರಿಗೆ ಸಹಕಾರ ಮಹಾ ಮಂಡಳಿಯಲ್ಲಿ ಉದ್ಯೋಗಾವಕಾಶ | ಅರ್ಜಿ ಆಹ್ವಾನ

Spread the love

WhatsApp Group Join Now
Telegram Group Join Now

ರಾಜ್ಯ ಸರ್ಕಾರದ ಅಧೀನದ ಸಹಕಾರ ಮಹಾಮಂಡಳದ (KSCCF Recruitment 2026) ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಪೂರ್ಣ ಮಾಹಿತಿ ಇಲ್ಲಿದೆ…

ಸಹಕಾರ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ ನಿಯಮಿತ (Karnataka State Co-operative Consumers Federation Ltd-KSCCF) ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದ್ದು, ವಿವಿಧ ವೃಂದದ ಖಾಲಿ ಇರುವ ಒಟ್ಟು 34 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಸಂಸ್ಥೆಯಲ್ಲಿ ಫಾರ್ಮಾಸಿಸ್ಟ್ (Pharmacist), ಪ್ರಥಮ ದರ್ಜೆ ಗುಮಾಸ್ತರು (First Division Assistant) ಹಾಗೂ ಸಹಾಯಕ (Sales Assistant) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಈ ಅವಕಾಶ ಬಳಸಿಒಳ್ಳಬಹುದಾಗಿದೆ.

ಇದನ್ನೂ ಓದಿ: Karnataka Yashasvini Yojana 2026- ಯಶಸ್ವಿನಿ ಯೋಜನೆಯಡಿ ಹಸುಗೂಸಿನಿಂದ ವೃದ್ಧರ ವರೆಗೂ 5 ಲಕ್ಷ ರೂ. ಉಚಿತ ಚಿಕಿತ್ಸೆ | ಹೊಸ ಮಾರ್ಗಸೂಚಿ ಬಿಡುಗಡೆ

Post Details – ಹುದ್ದೆಗಳ ವಿವರ
  • ಫಾರ್ಮಾಸಿಸ್ಟ್: 07
  • ಪ್ರಥಮ ದರ್ಜೆ ಗುಮಾಸ್ತರು: 10
  • ವಿಕ್ರಯ ಸಹಾಯಕರು: 16
  • ಸಹಾಯಕರು: 01
KSCCF Recruitment 2026
KSCCF Recruitment 2026
Educational Qualification – ವಿದ್ಯಾರ್ಹತೆ

ಫಾರ್ಮಾಸಿಸ್ಟ್ ಹುದ್ದೆಗೆ ಡಿಪ್ಲೋಮಾ ಇನ್ ಫಾರ್ಮಸಿ ಪಡೆದಿರಬೇಕು. ಪ್ರಥಮ ದರ್ಜೆ ಗುಮಾಸ್ತರಿಗಾಗಿ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.

ಇನ್ನು ಸಹಾಯಕರು /ವಿಕ್ರಯ ಸಹಾಯಕರ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಎಲ್ಲ ಹುದ್ದೆಗಳಿಗೂ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಭಾಷೆಯನ್ನು ಓದಲು, ಬರೆಯಲು ಹಾಗೂ ಮಾತನಾಡಲು ತಿಳಿದಿರಬೇಕು.

ಇದನ್ನೂ ಓದಿ: February New Ration Card Application- ಫೆಬ್ರವರಿಯಿಂದ ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ | ಆಹಾರ ಸಚಿವರ ಮಹತ್ವದ ಮಾಹಿತಿ

Age Limit Details – ವಯೋಮಿತಿ ವಿವರ

ಕನಿಷ್ಠ ವಯಸ್ಸು 18 ವರ್ಷ ತುಂಬಿರಬೇಕು. ಗರಿಷ್ಠ ವಯೋಮಿತಿಯಲ್ಲಿ ಸರ್ಕಾರದ ಆದೇಶದಂತೆ ಪ್ರತಿ ವರ್ಗದವರಿಗೂ 3 ವರ್ಷಗಳ ಸಡಿಲಿಕೆ ನೀಡಲಾಗಿದೆ. ವಿಕಲಚೇತನರು ಮತ್ತು ವಿಧವೆಯರಿಗೆ ಹೆಚ್ಚುವರಿಯಾಗಿ 10 ವರ್ಷಗಳ ಸಡಿಲಿಕೆ ಇರುತ್ತದೆ.

ಅದರಂತೆ ಸಾಮಾನ್ಯ ವರ್ಗದವರಿಗೆ 35 ವರ್ಷ, ಪ್ರ.ವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ 1ರ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ಸಡಿಲಿಕೆ ನಿಗದಿ ಮಾಡಲಾಗಿದೆ.

Monthly Salary Range – ಮಾಸಿಕ ವೇತನ ಶ್ರೇಣಿ
  • ಫಾರ್ಮಾಸಿಸ್ಟ್ ಹುದ್ದೆಗಳಿಗೆ : 25,800-52,650
  • ಪ್ರಥಮ ದರ್ಜೆ ಗುಮಾಸ್ತರು ಹುದ್ದೆಗಳಿಗೆ: 21,400-45,300
  • ಸಹಾಯಕರು ಹುದ್ದೆಗಳಿಗೆ: 19,950-37,900

ಇದನ್ನೂ ಓದಿ: Karnataka Cold Wave Warning- ಕರ್ನಾಟಕದಲ್ಲಿ ಮತ್ತೆ ಹೆಚ್ಚಿದ ಚಳಿ | ಹಲವು ಜಿಲ್ಲೆಗಳಲ್ಲಿ ಶೀತ ಅಲೆ ಎಚ್ಚರಿಕೆ!

Application Fee – ಅರ್ಜಿ ಶುಲ್ಕವೆಷ್ಟು?

ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗದವರಿಗೆ 1,000 ರೂ. ಹಾಗೂ ಪ.ಜಾತಿ, ಪ.ಪಂಗಡ, ಪ್ರವರ್ಗ1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗದೆ.

KSCCF Recruitment 2026
KSCCF Recruitment 2026
Selection Process – ಆಯ್ಕೆ ವಿಧಾನ ಹೇಗೆ?

ಅರ್ಜಿ ಸಲ್ಲಸಿದ ಅಭ್ಯರ್ಥಿಗಳನ್ನು 200 ಅಂಕಗಳ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಕನ್ನಡ (50 ಅಂಕ), ಸಾಮಾನ್ಯ ಇಂಗ್ಲಿಷ್ (25 ಅಂಕ), ಸಾಮಾನ್ಯ ಜ್ಞಾನ (25 ಅಂಕ), ಸಹಕಾರಿ ವಿಷಯ (50 ಅಂಕ), ಸಂವಿಧಾನ (25 ಅಂಕ) ಮತ್ತು ಸಾಮಾಜಿಕ ಚಟುವಟಿಕೆಗಳ (25 ಅಂಕ) ವಿಷಯಗಳಿರುತ್ತವೆ.

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು 15 ಅಂಕಗಳ ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Morarji Desai Residential School Admission 2026-27- ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಆಹ್ವಾನ | ಸಂಪೂರ್ಣ ಉಚಿತ ಶಿಕ್ಷಣ

WhatsApp Group Join Now
Telegram Group Join Now

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-02-2026

  • ವಿವರವಾದ ಅಧಿಸೂಚನೆ: Download
  • ಅರ್ಜಿ ಸಲ್ಲಿಕೆ ಲಿಂಕ್: Apply Now

LIC Bima Sakhi Yojana- ಎಸ್‌ಎಸ್‌ಎಲ್‌ಸಿ ಪಾಸಾದ ಮಹಿಳೆಯರಿಗೆ ಎಲ್‌ಐಸಿ ಉದ್ಯೋಗ | ನಿಮ್ಮೂರಲ್ಲೇ ಸರ್ಕಾರಿ ನೌಕರಿ ಮಾಡುವ ಸುವರ್ಣಾವಕಾಶ


Spread the love
error: Content is protected !!