KMF SHIMUL Recruitment- ಕೆಎಂಎಫ್ 194 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಶಿಮುಲ್ ಹಾಲು ಒಕ್ಕೂಟ ನೇಮಕಾತಿ

Spread the love

WhatsApp Group Join Now
Telegram Group Join Now

ಕೆಎಂಎಫ್ ಶಿಮುಲ್’ನಲ್ಲಿ (KMF SHIMUL Recruitment) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ವಿವರ, ವಿದ್ಯಾರ್ಹತೆ, ಅನುಭವ, ಸಂಬಳ, ಶುಲ್ಕ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ (SHIMUL) ವತಿಯಿಂದ 2025ನೇ ಸಾಲಿಗೆ ಒಟ್ಟು 194 ವಿವಿಧ ವೃಂದದ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಇದೀಗ, ಅರ್ಜಿಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದೂಡಲಾಗಿದ್ದು, ಅಭ್ಯರ್ಥಿಗಳು 21-02-2026 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಇಲಾಖೆ ಅಧಿಸೂಚನೆ ಹೊರಡಿಸಿದೆ.

ಇದನ್ನೂ ಓದಿ: Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ

ಹುದ್ದೆಗಳ ವಿವರ

ಒಟ್ಟು 17 ಪದನಾಮವುಳ್ಳ ವಿವಿಧ 194 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ವಿವರ, ವಿದ್ಯಾರ್ಹತೆ, ಅನುಭವ, ಸಂಬಳಗಳ ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ…

  1. ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ)
    ಹುದ್ದೆಗಳು: 17
    ವೇತನ ಶ್ರೇಣಿ: ರೂ. 83,700-1,55,200
    ವಿದ್ಯಾರ್ಹತೆ: ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್ ಎಹೆಚ್) ಪದವಿಯನ್ನು ಹೊಂದಿರಬೇಕು.

2. ಸಹಾಯಕ ವ್ಯವಸ್ಥಾಪಕರು (ಆಡಳಿತ)
ಹುದ್ದೆಗಳು: 01
ವೇತನ ಶ್ರೇಣಿ: ರೂ. 83,700-1,55,200
ವಿದ್ಯಾರ್ಹತೆ: ಮಾನವ ಸಂಪನ್ಮೂಲ ವಿಷಯದಲ್ಲಿ 02 ವರ್ಷಗಳ ಪೂರ್ಣಾವಧಿ ಎಂಬಿಎ ಜೊತೆಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆಯಲ್ಲಿ 03 ವರ್ಷಗಳ ಸೇವಾನುಭವ ಹಾಗೂ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

3. ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್)
ಹುದ್ದೆಗಳು: 03
ವೇತನ ಶ್ರೇಣಿ: ರೂ. 83,700-1,55,200
ವಿದ್ಯಾರ್ಹತೆ: ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರಬೇಕು.

4. ಎಂಐಎಸ್ / ಸಿಸ್ಟಂ ಆಫೀಸರ್
ಹುದ್ದೆಗಳು: 01
ವೇತನ ಶ್ರೇಣಿ: ರೂ. 69,250-1,34,200
ವಿದ್ಯಾರ್ಹತೆ: ಬಿಇ ಕಂಪ್ಯೂಟರ್ ಸೈನ್ಸ್ / ಇನ್‌ಫಾರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು.

5. ಮಾರುಕಟ್ಟೆ ಅಧಿಕಾರಿ
ಹುದ್ದೆಗಳು: 02
ವೇತನ ಶ್ರೇಣಿ: ರೂ. 69,250-1,34,200
ವಿದ್ಯಾರ್ಹತೆ: ಬಿ.ಕಾಂ, ಬಿ.ಎಸ್ಸಿ, ಬಿಬಿಎಂ ಪದವಿ ಜೊತೆಗೆ ಹೆಸರಾಂತ ಸಂಸ್ಥೆಗಳಲ್ಲಿ ಮಾರುಕಟ್ಟೆಯಲ್ಲಿ 03 ವರ್ಷಗಳ ಅನುಭವದೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಇದನ್ನೂ ಓದಿ: Kisan Tractor Yojana- ಸರ್ಕಾರದಿಂದ ರೈತರಿಗೆ ಅರ್ಧ ಬೆಲೆಗೆ ಹೊಸ ಟ್ರಾಕ್ಟರ್ ವಿತರಣೆ | ಈಗಲೇ ಅರ್ಜಿ ಹಾಕಿ

6. ತಾಂತ್ರಿಕ ಅಧಿಕಾರಿ (ಅಭಿಯಂತರ)
ಹುದ್ದೆಗಳು: 02
ವೇತನ ಶ್ರೇಣಿ: ರೂ. 69,250-1,34,200
ವಿದ್ಯಾರ್ಹತೆ: ಬಿಇ (ಮೆಕಾನಿಕಲ್, ಎಲೆಕ್ಟಿಕಲ್ & ಎಲೆಕ್ಟ್ರಾನಿಕ್ಸ್) ಪದವಿ ಹೊಂದಿರಬೇಕು.

7. ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ)
ಹುದ್ದೆಗಳು: 02
ವೇತನ ಶ್ರೇಣಿ: ರೂ. 69,250-1,34,200
ವಿದ್ಯಾರ್ಹತೆ: ಎಂ.ಎಸ್ಸಿ (ಕೆಮಿಸ್ಟ್ರಿ, ಮೈಕ್ರೋಬಯಾಲಜಿ) ಸ್ನಾತಕೋತ್ತರ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

8. ತಾಂತ್ರಿಕ ಅಧಿಕಾರಿ (ಡಿಟಿ)
ಹುದ್ದೆಗಳು: 14
ವೇತನ ಶ್ರೇಣಿ: ರೂ. 69,250-1,34,200
ವಿದ್ಯಾರ್ಹತೆ: ಬಿ.ಟೆಕ್ (ಡೈರಿ ಟೆಕ್ನಾಲಜಿ) ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

9. ಕೆಮಿಸ್ಟ್ ದರ್ಜೆ-1
ಹುದ್ದೆಗಳು: 04
ವೇತನ ಶ್ರೇಣಿ: ರೂ. 54,175-99,400
ವಿದ್ಯಾರ್ಹತೆ: ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ, ಮೈಕ್ರೋಬಯಾಲಜಿ ವಿಷಯವನ್ನು ವ್ಯಾಸಂಗ ಮಾಡಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು ಹಾಗೂ ಡೇರಿ / ಆಹಾರ ಸಂಸ್ಕರಣಾ ಘಟಕಗಳಲ್ಲಿ ಕನಿಷ್ಟ 02 ವರ್ಷಗಳ ಅನುಭವ ಹೊಂದಿರಬೇಕು.

WhatsApp Group Join Now
Telegram Group Join Now

ಇದನ್ನೂ ಓದಿ: Thayi Lakshmi Bond Yojana: ಈ ಮಹಿಳೆಯರಿಗೆ 50,000 ರೂ. ಹೆರಿಗೆ ಸಹಾಯಧನ | ತಾಯಿ ಲಕ್ಷ್ಮೀ ಬಾಂಡ್ ಯೋಜನೆ ಸಂಪೂರ್ಣ ಮಾಹಿತಿ

10. ವಿಸ್ತರಣಾಧಿಕಾರಿ ದರ್ಜೆ-3
ಹುದ್ದೆಗಳು: 17
ವೇತನ ಶ್ರೇಣಿ: ರೂ. 54,175-99,400
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

11. ಆಡಳಿತ ಸಹಾಯಕ ದರ್ಜೆ-2
ಹುದ್ದೆಗಳು: 17
ವೇತನ ಶ್ರೇಣಿ ರೂ. 44,425-83,700
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

12. ಲೆಕ್ಕ ಸಹಾಯಕ ದರ್ಜೆ-2
ವೇತನ ಶ್ರೇಣಿ ರೂ. 44,425-83,700
ಹುದ್ದೆಗಳು: 12
ವಿದ್ಯಾರ್ಹತೆ: ಬಿ.ಕಾಂ ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಕೆಎಂಎಫ್ ಶಿಮುಲ್’ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ವಿವರ, ವಿದ್ಯಾರ್ಹತೆ, ಸಂಬಳ ಇತ್ಯಾದಿ ಮಾಹಿತಿ ಇಲ್ಲಿದೆ...
KMF SHIMUL Recruitment 2025

13. ಮಾರುಕಟ್ಟೆ ಸಹಾಯಕ ದರ್ಜೆ-2
ಹುದ್ದೆಗಳು: 10
ವೇತನ ಶ್ರೇಣಿ: ರೂ. 44,425-83,700
ವಿದ್ಯಾರ್ಹತೆ: ಬಿಬಿಎಂ, ಬಿ.ಎಸ್ಸಿ / ಬಿ.ಕಾಂ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

14. ಕೆಮಿಸ್ಟ್ ದರ್ಜೆ-2
ಹುದ್ದೆಗಳು: 28
ವೇತನ ಶ್ರೇಣಿ: ರೂ. 44,425-83,700
ವಿದ್ಯಾರ್ಹತೆ: ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ, ಮೈಕ್ರೋಬಯಾಲಜಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.

ಇದನ್ನೂ ಓದಿ: SBI Recruitment 2026- ಬೆಂಗಳೂರು ಎಸ್‌ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕನ್ನಡ ಬಲ್ಲವರಿಗೆ ಭರ್ಜರಿ ಅವಕಾಶ

15. ಕಿರಿಯ ಸಿಸ್ಟಂ ಆಪರೇಟರ್
ಹುದ್ದೆಗಳು: 13
ವೇತನ ಶ್ರೇಣಿ: ರೂ. 44,425-83,700
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಕನಿಷ್ಟ ಒಂದು ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 03 ವರ್ಷಗಳ ಅನುಭವ ಹೊಂದಿರಬೇಕು.

16. ಶೀಘ್ರ ಲಿಪಿಗಾರರು ದರ್ಜೆ-2
ಹುದ್ದೆಗಳು 01
ವೇತನ ಶ್ರೇಣಿ ರೂ. 44,425-83,700
ವಿದ್ಯಾರ್ಹತೆ: ಯಾವುದೇ ಪದವಿಯೊಂದಿಗೆ ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್‌ನೊಂದಿಗೆ ಕಂಪ್ಯೂಟರ್ ಆಫೀಸ್ ಪ್ಯಾಕೇಜ್ ನಿರ್ವಹಣೆಗಳ ಜ್ಞಾನ ಹೊಂದಿರಬೇಕು.

17. ಕಿರಿಯ ತಾಂತ್ರಿಕರು
ಹುದ್ದೆಗಳು: 50
ವೇತನ ಶ್ರೇಣಿ ರೂ. 34,100-67,600
ವಿದ್ಯಾರ್ಹತೆ: ಇಲೆಕ್ಟ್ರಿಕಲ್, ರೆಫ್ರಿಜರೇಷನ್, ಬಾಯ್ಲರ್ ಅಟೆಂಡೆಂಟ್, ಫಿಟ್ಟರ್, ವೆಲ್ಡರ್ ವಿಭಾಗದ ಹುದ್ದೆಗಳಾಗಿದ್ದು; ಎಸ್‌ಎಸ್‌ಎಲ್‌ಸಿಯೊಂದಿಗೆ ಆಯಾ ಟ್ರೇಡ್’ನಲ್ಲಿ ತೇರ್ಗಡೆ ಹೊಂದಿರಬೇಕು.

ಕಡ್ಡಾಯವಾಗಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ) ಅಥವಾ ಪ್ರಾವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ನ್ಯಾಷನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ (ಎನ್.ಸಿ.ವಿ.ಟಿ) ಸರ್ಟಿಫಿಕೇಟ್ ಪಡೆದಿರಬೇಕು.

ಇದನ್ನೂ ಓದಿ: Gramathana Map Information- ನಿಮ್ಮೂರಿನ ನಕ್ಷೆ ನಿಮಗೆ ಗೊತ್ತಾ? | ಪ್ರತಿಯೊಬ್ಬರೂ ಅರಿತಿರಬೇಕಾದ ಗ್ರಾಮಠಾಣಾ ನಕ್ಷೆ ಮಾಹಿತಿ ಇಲ್ಲಿದೆ…

ಅರ್ಜಿ ಶುಲ್ಕದ ವಿವರ

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ರೂ. 500/- (ಬ್ಯಾಂಕ್ ಶುಲ್ಕ ಪ್ರತ್ಯೇಕ)
  • ಇತರೆ ವರ್ಗದ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ರೂ. 1000/- (ಬ್ಯಾಂಕ್ ಶುಲ್ಕ ಪ್ರತ್ಯೇಕ)

ವಯೋಮಿತಿ ವಿವರ

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 14-12-2025ಕ್ಕೆ ಅನ್ವಯವಾಗುವಂತೆ ಕನಿಷ್ಟ / ಗರಿಷ್ಟ ವಯೋಮಿತಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ:

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ ಕನಿಷ್ಟ 18 ಗರಿಷ್ಠ 40 ವರ್ಷ ನಗದಿಪಡಿಸಲಾಗಿದೆ. ಈ ವರ್ಗದ ಅಭ್ಯರ್ಥಿಗಳಿಗೆ 43 ವರ್ಷ ಗರಿಷ್ಟ ವಯೋಮಿತಿ ಸಡಿಲಿಕೆ ನೀಡಲಾಗಿದೆ.
  • ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಟ 38 ವರ್ಷ ವಯೋಮಿತಿ ಇದ್ದು; ಗರಿಷ್ಟ ವಯೋಮಿತಿ ಸಡಿಲಿಕೆಯನ್ನು 41 ವರ್ಷಕ್ಕೆ ನಿಗದಿಪಡಿಸಲಾಗಿದೆ.
  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಟ 18 ವರ್ಷ ಹಾಗೂ ಗರಿಷ್ಟ 35 ವರ್ಷ ವರ್ಷ 38 ವಾಗಿದ್ದು; ಗರಿಷ್ಟ ವಯೋಮಿತಿ ಸಡಿಕೆಯನ್ನು 38 ವರ್ಷಕ್ಕೆ ನಿಗದಿಪಡಿಸಲಾಗಿದೆ.

ಈ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿ ಹೊರಡಿಸಿರುವ ನೇಮಕಾತಿ ಪ್ರಕಟಣೆ ಅನ್ವಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೇಲಿನ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರದ ಆದೇಶದ ಅನ್ವಯ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಟ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 03 ವರ್ಷಗಳ ಸಡಿಲಿಕೆ ಇರುತ್ತದೆ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 14-11-2025
  • ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 21-02-2026

ಪ್ರಮುಖ ಲಿಂಕುಗಳು

PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…


Spread the love
error: Content is protected !!