Karnataka Weather Alert- ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ | ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಣೆ

Spread the love

WhatsApp Group Join Now
Telegram Group Join Now

ಹವಾಮಾನ ಇಲಾಖೆಯು (Meteorological Department) ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ (Rain forecast) ನೀಡಿದೆ. ಮೇಲೆ ಬಿರುಸು ಹೆಚ್ಚಿರುವ ಜಿಲ್ಲೆಗಳ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ನಿನ್ನೆ ಮೇ 13ರಂದು ಮಳೆ ಭಾರೀ ಹಾನಿ ಉಂಟು ಮಾಡಿದೆ. ರಾಜ್ಯಾದ್ಯಂತ ಸಿಡಿಲಿಗೆ ಸಿಕ್ಕು 11 ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ ಹೊರಡಿಸಿದ್ದು; ಮೇ 15ರಿಂದ 18ರ ತನಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ (Yellow Alert) ಘೋಷಣೆ ಮಾಡಿದೆ.

ಈ ಅವಧಿಯಲ್ಲಿ ಗುಡುಗು ಸಹಿತ ಭಾರಿ ಗಾಳಿ ಹಾಗೂ ಮಳೆಯ ಸಂಭವವಿದೆ. ಮೇ 20ರ ವರೆಗೆ ಈ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದ ಜಿಲ್ಲೆಗಳ ವಿವರ ಇಲ್ಲಿದೆ.

Gruhalakshmi Pending Payments- ಇದೇ ತಿಂಗಳಲ್ಲೇ ಮೂರು ಕಂತುಗಳ ‘ಗೃಹಲಕ್ಷ್ಮೀ’ ಹಣ ಜಮೆ | ಸರ್ಕಾರದಿಂದ ಹಂತಹಂತವಾಗಿ ಬಿಡುಗಡೆಗೆ ಸಿದ್ಧತೆ

ಕರಾವಳಿ ಜಿಲ್ಲೆಗಳು: ಕರಾವಳಿ ಪ್ರದೇಶದಲ್ಲಿ ಮಳೆ ಮತ್ತು ಗಾಳಿಯ ಪ್ರಮಾಣ ಹೆಚ್ಚು ಇರಲಿದ್ದು, ಕೆಲವೊಂದು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮೇ 14ರಿಂದಲೇ ಗುಡುಗು ಸಹಿತ ಭಾರಿ ಮಳೆ ಆರ್ಭಟಿಸಲಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದ್ದು, ಕೆಲವೊಂದು ಭಾಗಗಳಲ್ಲಿ ತೀವ್ರ ಗಾಳಿಯೂ ಇರಬಹುದು.

ಉತ್ತರ ಒಳನಾಡು: ಈ ಭಾಗದಲ್ಲಿ ಹೆಚ್ಚುವರಿ ವೇಗದ ಗಾಳಿಯು ಮಳೆಗೆ ಜೊತೆಯಾಗುವ ಸಾಧ್ಯತೆ ಇದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ ಭಾಗಗಳಲ್ಲಿ ಗಂಟೆಗೆ 50-60 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಇನ್ನು ಬಾಗಲಕೋಟೆ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ: ಸಾಧಾರಣ ಮಳೆಯಾಗುವ ನಿರೀಕ್ಷೆ ಇದ್ದು, ಕೆಲ ಕಡೆಗಳಲ್ಲಿ ಗಾಳಿ ಹೆಚ್ಚು ತೀವ್ರವಾಗಿರಬಹುದು.

ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದೆ. ಮೇಲೆ ಬಿರುಸು ಹೆಚ್ಚಿರುವ ಜಿಲ್ಲೆಗಳ ಮಾಹಿತಿ ಇಲ್ಲಿದೆ...
Karnataka Weather Alert

ದಕ್ಷಿಣ ಒಳನಾಡು: ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಗಾಳಿಯ ವೇಗ ಹೆಚ್ಚಿರುವ ಸಾಧ್ಯತೆ ಇದೆ. ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸುತ್ತಲಿನ ಭಾಗಗಳಲ್ಲೂ ಮಳೆ ಬಿರುಸು ಇರಲಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ವಿಜಯನಗರ ಭಾಗಗಳಲ್ಲಿ ಸಾಧಾರಣ ಮಳೆ ಹಾಗೂ ಕೆಲವೊಂದು ಪ್ರದೇಶಗಳಲ್ಲಿ ಭಾರಿ ಗಾಳಿ ಬೀಸುವ ಸಾಧ್ಯತೆ ಇದೆ.

Monsoon Arrival 2025- ಮುಂಗಾರು ಮಳೆ ಇದೇ ತಿಂಗಳು ಆರಂಭ | ಈ ಬಾರಿ ಸಾವಿರ ಮಿ.ಮೀ ನಿರೀಕ್ಷೆ | ರೈತರಿಗೆ ಭರ್ಜರಿ ಸಿಹಿಸುದ್ದಿ

ಯೆಲ್ಲೋ ಅಲರ್ಟ್ ಎಂದರೇನು?

ಯೆಲ್ಲೋ ಅಲರ್ಟ್ ಎಂಬುದು ಹವಾಮಾನ ಇಲಾಖೆ ನೀಡುವ ಎಚ್ಚರಿಕೆಯ ಮೊದಲ ಹಂತವಾಗಿದ್ದು, ಇದನ್ನು ಃe ಂತಿಚಿಡಿe ಎಚ್ಚರಿಕೆಯಾಗಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ತೀವ್ರ ಹವಾಮಾನ ಚಟುವಟಿಕೆಗಳು ಸಂಭವಿಸಬಹುದಾದ ಕಾರಣ ಸಾರ್ವಜನಿಕರು ಮುನ್ನೆಚ್ಚರಿಕೆಯಿಂದ ಇರಲು ಮುನ್ಸೂಚನೆಯಾಗಿ ಯೆಲ್ಲೋ ಅಲರ್ಟ್ ಘೋಷಿಸಲಾಗುತ್ತದೆ.

ಸಾರ್ವಜನಿಕರಿಗೆ ಸುರಕ್ಷತಾ ಸಲಹೆಗಳು
  • ಮನೆ ಬಿಟ್ಟು ಹೊರಬರುವ ಸಂದರ್ಭಗಳಲ್ಲಿ ಗಾಳಿಪಟ, ಮರಗಳ ಕೆಳಗೆ ನಿಲ್ಲುವುದು ತಪ್ಪಿಸಿಕೊಳ್ಳಿ.
  • ವಿದ್ಯುತ್ ಕಂಬಗಳು, ತಂತಿಗಳು ಮುರಿಯುವ ಸಾಧ್ಯತೆ ಇರುವುದರಿಂದ, ನಡು ರಸ್ತೆಯಲ್ಲಿ ನಿಂತು ಮಾತನಾಡುವುದು ತಪ್ಪಿಸಿ.
  • ಇತ್ತೀಚೆಗೆ ಬೀದಿಗಳಲ್ಲಿ ನೀರು ನಿಲ್ಲುವ ಪ್ರಸಂಗಗಳು ಹೆಚ್ಚಿರುವುದರಿಂದ ವಾಹನಚಾಲಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು.
  • ವೃದ್ಧರು, ಮಕ್ಕಳನ್ನು ಮಳೆ ಅಥವಾ ಗುಡುಗು ವೇಳೆ ಹೊರ ಹೋಗುವುದರಿಂದ ತಪ್ಪಿಸಿ.

ಮೇ ತಿಂಗಳಲ್ಲಿ ಈ ರೀತಿ ವಾತಾವರಣ ಬದಲಾವಣೆ ಸಾಮಾನ್ಯವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಮಳೆ ಮತ್ತು ಗಾಳಿಯ ತೀವ್ರತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸುರಕ್ಷಿತ!

E-Swattu Circular 2025- ಗ್ರಾಮ ಪಂಚಾಯತಿಯಿಂದ ಇ-ಸ್ವತ್ತು ಇನ್ನಷ್ಟು ಸುಲಭ | ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ


Spread the love
error: Content is protected !!