Karnataka SSLC Result 2025- ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2025: ಮೊಬೈಲ್‌ನಲ್ಲಿ ರಿಸಲ್ಟ್ ನೋಡುವ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ (Karnataka SSLC Result 2025) ಪ್ರಕಟವಾಗಲಿದೆ. ಮೊಬೈಲ್‌ನಲ್ಲಿಯೇ ಫಲಿತಾಂಶ ವೀಕ್ಷಿಸುವ ವಿಧಾನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ವತಿಯಿಂದ 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇಂದು (ಮೇ 2) ಮಧ್ಯಾಹ್ನ 12:30ಕ್ಕೆ ಅಧಿಕೃತವಾಗಿ ಪ್ರಕಟಿಸಲಾಗುತ್ತಿದೆ. ಈ ಕುರಿತು ಶಾಲಾ ಶಿಕ್ಷಣ ಸಚಿವರು ಸುದ್ದಿಗೋಷ್ಠಿಯಲ್ಲಿ ಘೋಷಿಸಲಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗಳ ಮೂಲಕ ಮನೆಯಲ್ಲಿಯೇ ಕೂತು ಫಲಿತಾಂಶವನ್ನು ಸುಲಭವಾಗಿ ವೀಕ್ಷಿಸಬಹುದು. ಈ ಲೇಖನದಲ್ಲಿ ಫಲಿತಾಂಶ ವೀಕ್ಷಿಸುವ ವಿಧಾನ, ಅಗತ್ಯ ಮಾಹಿತಿ ಮತ್ತು ಕೆಲವು ಮಹತ್ವದ ಸೂಚನೆಗಳನ್ನು ನೀಡಲಾಗಿದೆ.

ಈ ಬಾರಿ ಫಲಿತಾಂಶದಲ್ಲಿ ಹೊಸದೇನಿದೆ?
  • ಕಳೆದ ವರ್ಷ (2024) ಫಲಿತಾಂಶವನ್ನು ಮೇ 9ರಂದು ಪ್ರಕಟಿಸಲಾಗಿತ್ತು. ಆದರೆ ಈ ಬಾರಿ ವಾರ ಮುಂಚಿತವಾಗಿ ಪ್ರಕಟವಾಗುತ್ತಿದೆ.
  • ಶಿಕ್ಷಣ ಇಲಾಖೆ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅತ್ಯಂತ ಸುಲಭವಾಗಿ ಫಲಿತಾಂಶ ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ.
  • ಒಟ್ಟು 8.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ.

SBI Loan Interest Rate Cut- ಎಸ್‌ಬಿಐ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಹೊಸ ಬಡ್ಡಿದರಗಳ ಮಾಹಿತಿ ಇಲ್ಲಿದೆ…

ಪ್ರಮುಖ ಮಾಹಿತಿ
  • ಫಲಿತಾಂಶ ಪ್ರಕಟ ದಿನಾಂಕ: ಮೇ 2, 2025, ಮಧ್ಯಾಹ್ನ 12:30ಕ್ಕೆ
  • ಸಮಯ: ಮಧ್ಯಾಹ್ನ 12:30 ಗಂಟೆಗೆ
  • ಅಧಿಕೃತ ವೆಬ್‌ಸೈಟ್: https://karresults.nic.in
ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಲಿದೆ. ಮೊಬೈಲ್‌ನಲ್ಲಿಯೇ ಫಲಿತಾಂಶ ವೀಕ್ಷಿಸುವ ವಿಧಾನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Karnataka SSLC Result 2025 Mobile Check Guide
ಮೊಬೈಲ್‌ನಲ್ಲಿ ಫಲಿತಾಂಶ ವೀಕ್ಷಣೆಯ ಸರಳ ವಿಧಾನ

ಹಂತ 1: ಮೊದಲಿಗೆ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇಂಟರ್ನೆಟ್ ಬ್ರೌಸರ್ (Chrome/Safari/Firefox) ಓಪನ್ ಮಾಡಿ. ಈ ಕೆಳಗಿನ ವೆಬ್‌ಸೈಟ್ ವಿಳಾಸವನ್ನು ಟೈಪ್ ಮಾಡಿ: https://karresults.nic.in

ಹಂತ 2: ಆಗ Karnataka Examination Results 2025 ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಹೋಮ್ ಪೇಜ್‌ನಲ್ಲಿ ‘ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಣೆ / SSLC Annual Exam Result announced on 02/05/2025’ ಎಂಬ ಲಿಂಕ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ.

Gruhalakshmi Three Months Payment- ಒಂದೇ ತಿಂಗಳಲ್ಲಿ ಮೂರು ಕಂತಿನ ₹6,000 ಗೃಹಲಕ್ಷ್ಮೀ ಹಣ ಜಮಾ | ಮಹಿಳಾ ಸಚಿವರು ಹೇಳಿದ್ದೇನು?

ಹಂತ 3: ಇದೀಗ ತೆರೆಯುವ ಪುಟದಲ್ಲಿ ನೀವು ನಿಮ್ಮ ನೋಂದಣಿ ಸಂಖ್ಯೆ (Registration Number) ಅಥವಾ ಹಾಲ್ ಟಿಕೆಟ್ ನಂಬರ್ ಅನ್ನು ನಮೂದಿಸಬೇಕು. ನಿಖರವಾಗಿ ನಮೂದಿಸಿ, ನಂತರ ‘Submit’ ಬಟನ್ ಕ್ಲಿಕ್ ಮಾಡಿ.

ಹಂತ 4: ನೀವು ದಾಖಲಿಸಿದ ಮಾಹಿತಿಯ ಆಧಾರದಲ್ಲಿ ನಿಮ್ಮ ವೈಯಕ್ತಿಕ ಫಲಿತಾಂಶ ತಕ್ಷಣವೇ ನಿಮ್ಮ ಸ್ಕ್ರೀನ್‌ನಲ್ಲಿ ತೋರಿಸಲಾಗುತ್ತದೆ. ಇಲ್ಲಿ ನಿಮ್ಮ ವಿಷಯವಾರು ಅಂಕಗಳು, ಒಟ್ಟು ಅಂಕಗಳು, ಶೇಕಡಾವಾರು ಫಲಿತಾಂಶ ಹಾಗೂ ಗ್ರೇಡ್ ಇತ್ಯಾದಿ ವಿವರಗಳು ಕಾಣುತ್ತವೆ.

ಹಂತ 5: ಈ ವಿವರವಾದ ಮಾಹಿತಿಯನ್ನು ಭವಿಷ್ಯಕ್ಕಾಗಿ ಉಳಿಸಿಕೊಳ್ಳಲು ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಮಹತ್ವದ ಸೂಚನೆಗಳು

ಅಧಿಕೃತ ವೆಬ್‌ಸೈಟ್ https://karresults.nic.in ಮೂಲಕ ಮಾತ್ರ ಫಲಿತಾಂಶ ವೀಕ್ಷಿಸಿ. ಅನಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ಗಳಿಗೆ ನಿಮ್ಮ ವೈಯಕ್ತಿಕ ಮಾಹಿತಿ ನೀಡಬೇಡಿ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಎಲ್ಲಾ ವಿದ್ಯಾರ್ಥಿಗಳು ಸೈಟ್‌ಗೆ ಪ್ರವೇಶ ಮಾಡುವುದರಿಂದ ಕೆಲವೊಮ್ಮೆ ಸೈಟ್ ಸ್ವಲ್ಪ ನಿಧಾನವಾಗಿ ಲೋಡ್ ಆಗಬಹುದು. ದಯವಿಟ್ಟು ಆತುರ ಪಡದೆ ಮತ್ತೆ ಪ್ರಯತ್ನಿಸಿ.

Arivu Education Loan Scheme- ಸರ್ಕಾರದಿಂದ 5 ಲಕ್ಷ ರೂಪಾಯಿ ವರೆಗೆ ಶಿಕ್ಷಣ ಸಾಲ | ಅರ್ಜಿ ಆಹ್ವಾನ

ಫಲಿತಾಂಶದ ನಂತರ ಮುಂದಿನ ಹೆಜ್ಜೆ ಏನು?

ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಆಧಾರದಲ್ಲಿ ಪಿಯುಸಿ (PUC), ಡಿಪ್ಲೊಮಾ, ಐಟಿಐ ಮತ್ತು ಇತರ ಪದವಿ ಪೂರ್ವ ಕೋರ್ಸ್’ಗಳ ಆಯ್ಕೆ ಬಗ್ಗೆ ತೀರ್ಮಾನಿಸಬಹುದು.

ಸರ್ಕಾರದ ವಿದ್ಯಾರ್ಥಿವೇತನ, ಮತ್ತು ವಿವಿಧ ವಿದ್ಯಾರ್ಥಿ ಸಹಾಯ ಯೋಜನೆಗಳಿಗೆ ಅರ್ಜಿ ಹಾಕಬಹುದಾಗಿದೆ. ಕಡಿಮೆ ಅಂಕಗಳಿದ್ದರೆ ಪುರಸ್ಕೃತ ಪರೀಕ್ಷೆಗೆ (Supplementary) ಅರ್ಜಿ ಸಲ್ಲಿಸಲು ಶಿಕ್ಷಣ ಮಂಡಳಿ ಅವಕಾಶ ನೀಡುತ್ತದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರತಿಯೋಬ್ಬ ವಿದ್ಯಾರ್ಥಿಯ ಜೀವನದ ಒಂದು ಪ್ರಮುಖ ಹಂತ. ನೀವು ಪಡೆದ ಫಲಿತಾಂಶ, ನಿಮ್ಮ ಮುಂದಿನ ಶಿಕ್ಷಣದ ದಾರಿಯ ಮೆಟ್ಟಿಲು ಆಗಲಿದೆ. ಆದ್ದರಿಂದ ಫಲಿತಾಂಶವನ್ನು ಧೈರ್ಯದಿಂದ ಸ್ವೀಕರಿಸಿ, ನಿಮ್ಮ ಕಠಿಣ ಪರಿಶ್ರಮದ ಫಲವನ್ನು ಗೌರವದಿಂದ ಸ್ವಾಗತಿಸಿಕೊಳ್ಳಿ…

ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು!

SBI Loan Interest Rate Cut- ಎಸ್‌ಬಿಐ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಹೊಸ ಬಡ್ಡಿದರಗಳ ಮಾಹಿತಿ ಇಲ್ಲಿದೆ…


Spread the love
WhatsApp Group Join Now
Telegram Group Join Now
error: Content is protected !!