ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ (Karnataka SSLC Result 2025) ಪ್ರಕಟಣೆಗೆ ದಿನಗಣನೆ ಶುರುವಾಗಿದೆ. ಇನ್ನೆರಡು ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದ್ದು; ಈ ಕುರಿತ ಅಧಿಕೃತ ಮಾಹಿತಿ ಇಲ್ಲಿದೆ…
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ (SSLC Exam 2025) ಫಲಿತಾಂಶ ಈ ವಾರದಲ್ಲಿ ಪ್ರಕಟವಾಗಲಿದೆ. ಈ ಬಾರಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ನಡೆದಿದ್ದು, ರಾಜ್ಯದಾದ್ಯಂತ ದಾಖಲೆಯ 8.93 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಈಗಾಗಲೇ ಉತ್ತರಪತ್ರಿಕೆಗಳ ಮೌಲ್ಯಮಾಪನ ಕೆಲಸ ಪೂರ್ಣಗೊಂಡಿದ್ದು, ತಾಂತ್ರಿಕ ತಿದ್ದುಪಡಿ, ಡೇಟಾ ಎಂಟ್ರಿ ಹಾಗೂ ಫಲಿತಾಂಶ ಪ್ರಕಟಣೆಯ ಅಂತಿಮ ಹಂತದಲ್ಲಿ ಕಾರ್ಯ ನಡೆಯುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ಮೂಲಗಳು ತಿಳಿಸಿವೆ.
ಫಲಿತಾಂಶ ದಿನಾಂಕ ಯಾವಾಗ?
ಮೇ 1ರಂದು ಕಾರ್ಮಿಕರ ದಿನದ ಅಂಗವಾಗಿ ಸರ್ಕಾರಿ ರಜೆ ಇರುವ ಕಾರಣ, ಫಲಿತಾಂಶವು ಮೇ 2 ಅಥವಾ ಮೇ 3ರಂದು ಪ್ರಕಟವಾಗುವ ಸಾಧ್ಯತೆ ಬಹಳ ಹೆಚ್ಚಾಗಿದೆ.
ಎಲ್ಲ ತಾಂತ್ರಿಕ ಹಂತಗಳು ಪೂರ್ಣಗೊಂಡ ನಂತರ, ಫಲಿತಾಂಶದ ಸಮಯ ಮತ್ತು ದಿನಾಂಕದ ಅಧಿಕೃತ ಅಧಿಸೂಚನೆ ಶಾಲಾ ಪರೀಕ್ಷಾ ಮಂಡಳಿಯಿAದ ಹೊರ ಬೀಳಲಿದೆ.
ಹಿಂದಿನ ವರ್ಷಗಳ ಫಲಿತಾಂಶ ಬಿಡುಗಡೆ ದಿನಾಂಕಗಳು
ಹಿAದಿನ ಪ್ರತೀ ವರ್ಷವೂ ಮೇ ತಿಂಗಳಿನಲ್ಲಿಯೇ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗುತ್ತ ಬಂದಿದೆ. ಆ ಪ್ರಕಾರ 2025ರ ಫಲಿತಾಂಶ ಕೂಡ ಮೇ ಮೊದಲ ವಾರದಲ್ಲಿ ಪ್ರಕಟವಾಗುವುದು ಬಹುತೇಕ ಖಚಿತವಾಗಿದೆ. ಹಿಂದಿನ ವರ್ಷಗಳ ಫಲಿತಾಂಶ ಪ್ರಕಟಣೆ ವಿವರ ಈ ಕೆಳಗಿನಂತಿದೆ:
- 2024: ಮೇ 9
- 2023: ಮೇ 8
- 2022: ಮೇ 19
- 2021: ಜುಲೈ (ಕೋವಿಡ್ ಕಾರಣ)
Karnataka Weekly Weather Alert- ಬಂಗಾಳಕೊಲ್ಲಿಯ ವಾಯುಭಾರ ಕುಸಿತ | ಕರ್ನಾಟಕದಲ್ಲಿ ವಾರಪೂರ್ತಿ ಮಳೆಯ ಅಬ್ಬರ

ಫಲಿತಾಂಶ ಪ್ರಕಟವಾಗುವ ವೆಬ್‌ಸೈಟ್‌ಗಳು
ಎಲ್ಲ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಬಹುದು:
ಫಲಿತಾಂಶ ವೀಕ್ಷಿಸುವ ವಿಧಾನ
ಮೇಲ್ಕಂಡ ಯಾವುದೇ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ‘SSLC Result 2025’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕ ನಮೂದಿಸಿ.
‘Submit’ ಬಟನ್ ಕ್ಲಿಕ್ ಮಾಡಿದರೆ, ನಿಮ್ಮ ಫಲಿತಾಂಶದ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಫಲಿತಾಂಶದ ಜೊತೆಗೆ ಪ್ರಕಟವಾಗುವ ಅಂಶಗಳು
ಎಸ್‌ಎಸ್‌ಎಲ್‌ಸಿ ಫಲಿತಾಂಶದ ಜೊತೆಗೆ ಈ ಕೆಳಗಿನ ಮಾಹಿತಿ ಕೂಡ ಬಹಿರಂಗವಾಗುತ್ತದೆ:
- ಒಟ್ಟು ಉತ್ತೀರ್ಣ ಶೇಕಡಾವಾರು
- ಬಾಲಕರು ಹಾಗೂ ಬಾಲಕಿಯರ ಫಲಿತಾಂಶ ಶೇಕಡಾವಾರು
- ಜಿಲ್ಲೆಯ ಪ್ರಕಾರ ಫಲಿತಾಂಶದ ಪ್ರಮಾಣ
- 100% ಉತ್ತೀರ್ಣ ಶಾಲೆಗಳ ಪಟ್ಟಿ
- ರಾಜ್ಯ ಮಟ್ಟದ ಟಾಪರ್‌ಗಳ ಹೆಸರುಗಳು ಮತ್ತು ಅಂಕಗಳು
- ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರಗಳು
ವಿದ್ಯಾರ್ಥಿಗಳಿಗೆ ಸಲಹೆಗಳು
- ಅಧಿಕೃತ ವೆಬ್‌ಸೈಟ್‌ಗೆ ನೇರವಾಗಿ ಲಾಗಿನ್ ಮಾಡಿ, ಇತರ ಅನಧಿಕೃತ ವೆಬ್‌ಸೈಟ್ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
- ಫಲಿತಾಂಶ ಪ್ರಕಟವಾಗುವ ದಿನದಲ್ಲಿ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಟ್ರಾಫಿಕ್ ಇರಬಹುದಾದ್ದರಿಂದ, ಸಮಾಧಾನದಿಂದ ಪುಟ ಲೋಡ್ ಆಗುವವರೆಗೆ ನಿರೀಕ್ಷಿಸಿ.
- ನಿಮ್ಮ ನೋಂದಣಿ ಸಂಖ್ಯೆಯನ್ನು ಹಾಗೂ ಜನ್ಮದಿನಾಂಕವನ್ನು ಸರಿಯಾಗಿ ನಮೂದಿಸಿ.
- ಡೌನ್‌ಲೋಡ್ ಮಾಡಿದ ಫಲಿತಾಂಶದ ಪ್ರಿಂಟ್ ಔಟ್ ಅನ್ನು ಭವಿಷ್ಯದ ದಾಖಲೆಗಾಗಿ ಉಳಿಸಿಟ್ಟುಕೊಳ್ಳಿ.
2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಬಳಿಕ ಎಲ್ಲಾ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಅಧ್ಯಯನದ ಮೇಲೆ ಗಮನಹರಿಸಬೇಕಾದ ಸಮಯ. ಫಲಿತಾಂಶವೇ ಎಲ್ಲವೂ ಅಲ್ಲ; ಇದು ನಿಮ್ಮ ಮುಂದಿನ ಹೆಜ್ಜೆಗಳಿಗೆ ಒಂದು ಹಂತ ಮಾತ್ರ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣಗುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.