
2026ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ-1 ಮತ್ತು ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿ (Karnataka SSLC PUC Exam Time Table 2026) ಪ್ರಕಟವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಪ್ರಕಟಿಸಿದ ತಾತ್ಕಾಲಿತ ವೇಳಾಪಟ್ಟಿಯಂತೆ ಪಿಯುಸಿ 1ನೇ ಪರೀಕ್ಷೆಯು 2026ರ ಫೆಬ್ರವರಿ 28ರಿಂದ ಪ್ರಾರಂಭವಾಗಿ 2026ರ ಮಾರ್ಚ್ 17ರ ವರೆಗೆ ನಡೆಯಲಿವೆ. 2ನೇ ಪರೀಕ್ಷೆಯು ಏಪ್ರಿಲ್ 25ರಿಂದ ಮೇ 9ರ ವರೆಗೆ ನಡೆಯಲಿವೆ.
ಎಸ್ಸೆಸ್ಸೆಲ್ಸಿ 1ನೇ ಪರೀಕ್ಷೆಯು ಮಾರ್ಚ್ 18ರಿಂದ ಆರಂಭವಾಗಿ ಏಪ್ರಿಲ್ 1ರ ವರೆಗೆ ನಡೆಯಲಿವೆ. 2ನೇ ಪರೀಕ್ಷೆಯು ಮೇ 18ರಿಂದ ಪ್ರಾರಂಭವಾಗಿ 25ರ ವರೆಗೆ ನಡೆಯಲಿವೆ.
ದ್ವಿತೀಯ ಪಿಯುಸಿ ಪರೀಕ್ಷೆ-1 ವೇಳಾಪಟ್ಟಿ
- ಫೆಬ್ರವರಿ: 28 ಕನ್ನಡ, ಅರೇಬಿಕ್
- ಮಾರ್ಚ್ 02: ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
- ಮಾರ್ಚ್ 03: ಇಂಗ್ಲಿಷ್
- ಮಾರ್ಚ್ 04: ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮಾರ್ಚ್ 05: ಇತಿಹಾಸ, ಗೃಹವಿಜ್ಞಾನ
- ಮಾರ್ಚ್ 06: ಭೌತಶಾಸ್ತ್ರ
- ಮಾರ್ಚ್ 07: ಐಚ್ಚಿಕ ಕನ್ನಡ, ವ್ಯವಹಾರ ಅಧ್ಯ ಯನ, ಭೂಗರ್ಭ ಶಾಸ್ತ್ರ
- ಮಾರ್ಚ್ 09: ರಸಾಯನಶಾಸ್ತ್ರ, ಶಿಕ್ಷಣ, ಮೂಲ ಗಣಿತ
- ಮಾರ್ಚ್ 10: ಅರ್ಥಶಾಸ್ತ್ರ
- ಮಾರ್ಚ್ 11: ತರ್ಕಶಾಸ್ತ್ರ,, ಜೀವಶಾಸ್ತ್ರ, ವಿದ್ಯುನ್ಮಾನ, ಗಣಕಶಾಸ್ತ್ರ
- ಮಾರ್ಚ್ 12: ಹಿಂದಿ
- ಮಾರ್ಚ್ 13: ರಾಜ್ಯಶಾಸ್ತ್ರ
- ಮಾರ್ಚ್ 14: ಲೆಕ್ಕಶಾಸ್ತ್ರ
- ಮಾರ್ಚ್ 16: ಸಮಾಜಶಾಸ್ತ್ರ, ಗಣಿತ
- ಮಾರ್ಚ್ 17: ಹಿಂದೂಸ್ತಾನಿ ಸಂಗೀತ, ಎನ್‌ಎಕ್ಯೂಎಫ್ ವಿಷಯಗಳು

ದ್ವಿತೀಯ ಪಿಯುಸಿ ಪರೀಕ್ಷೆ-2 ವೇಳಾಪಟ್ಟಿ
- ಮಾರ್ಚ್ 29: ಗಣಿತ, ಗೃಹವಿಜ್ಞಾನ, ಮೂಲ ಗಣಿತ
- ಏಪ್ರಿಲ್ 25: ಕನ್ನಡ, ಅರೇಬಿಕ್
- ಏಪ್ರಿಲ್ 27: ಐಚ್ಚಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕ, ಜೀವ ಶಾಸ್ತ್ರ
- ಏಪ್ರಿಲ್ 28: ರಾಜ್ಯಶಾಸ್ತ್ರ, ವಿದ್ಯುನ್ಮಾನ, ಗಣಕಶಾಸ್ತ್ರ
- ಏಪ್ರಿಲ್ 30: ಅರ್ಥಶಾಸ್ತ್ರ
- ಮೇ 2: ಇತಿಹಾಸ, ರಸಾಯನಶಾಸ್ತ್ರ
- ಮೇ 4: ಇಂಗ್ಲಿಷ್
- ಮೇ 5: ಹಿಂದಿ
- ಮೇ 6: ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ
- ಮೇ 7: ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
- ಮೇ 8: ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ
- ಮೇ 9: (ಬೆಳಗ್ಗೆ) ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮೇ 9: (ಮಧ್ಯಾಹ್ನ) ಹಿಂದೂಸ್ತಾನಿ ಸಂಗೀತ, ಎನ್‌ಎಸ್‌ಕ್ಯೂಎಫ್ ವಿಷಯಗಳು
ಇದನ್ನೂ ಓದಿ: New BPL Card – ಮುಂದಿನ ತಿಂಗಳು ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಆಹ್ವಾನ | ಸರ್ಕಾರದ ಮಹತ್ವದ ನಿರ್ಧಾರ
ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ವೇಳಾಪಟ್ಟಿ
- ಮಾರ್ಚ್ 18: ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್ (ಎನ್‌ಸಿಇಆರ್‌ಟಿ), ಸಂಸ್ಕೃತ
- ಮಾರ್ಚ್ 20: ಗಣಿತ, ಸಮಾಜಶಾಸ್ತ್ರ
- ಮಾರ್ಚ್ 23: ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
- ಮಾರ್ಚ್ 25: ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ
- ಮಾರ್ಚ್ 28: ಸಮಾಜ ವಿಜ್ಞಾನ
- ಮಾರ್ಚ್ 30: ತೃತೀಯ ಭಾಷೆ ಹಿಂದಿ, ಎನ್‌ಎಸ್‌ಕ್ಯೂಎಫ್ ವಿಷಯಗಳು
- ಏಪ್ರಿಲ್ 01: ಜೆಟಿಎಸ್ ವಿಷಯಗಳು
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ವೇಳಾಪಟ್ಟಿ
- ಮೇ 18: ಪ್ರಥಮ ಭಾಷೆ- ಕನ್ನಡ, ತೆಲುಗು, ತಮಿಳು ಇತ್ಯಾದಿ
- ಮೇ 19: ಕೋರ್ ಸಬ್ಜೆಕ್ಟ್- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
- ಮೇ 20: ದ್ವಿತೀಯ ಭಾಷೆ ಇಂಗ್ಲಿಷ್, ಕನ್ನಡ
- ಮೇ 21: ಗಣಿತ, ಸಮಾಜಶಾಸ್ತ್ರ
- ಮೇ 22: ತೃತೀಯ ಭಾಷೆ ಹಿಂದಿ, ಎನ್‌ಎಸ್‌ಕ್ಯೂಎಫ್ ವಿಷಯಗಳು
- ಮೇ 23: ಸಮಾಜ ವಿಜ್ಞಾನ
- ಮೇ 25: ಜೆಟಿಎಸ್ ವಿಷಯಗಳು
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಈ ತಾತ್ಕಾಲಿಕ ವೇಳಾಪಟ್ಟಿ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಆಕ್ಷೇಪಣೆ ಸಲ್ಲಿಸಲು ಇಲಾಖೆ ಅವಕಾಶ ಕಲ್ಪಿಸಿದ್ದು, chairpersonkseab@gmail.com ಇಮೇಲ್ ವಿಳಾಸಕ್ಕೆ 2025ರ ಅಕ್ಟೋಬರ್ 9ರೊಳಗೆ ಕಳಿಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ: kseab.karnataka.gov.in