ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ರ ಫಲಿತಾಂಶ (Karnataka SSLC Exam 2 Result) ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಈ ಕುರಿತ ಪ್ರಮುಖ ಮಾಹಿತಿ ಇಲ್ಲಿದೆ…
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ (SSLC Exam-2) ಫಲಿತಾಂಶವನ್ನು ಇಂದು ಜೂನ್ 13, 2025 ರಂದು ಅಧಿಕೃತವಾಗಿ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು KSEABನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು.
SSLC ಪರೀಕ್ಷೆ-1ರಲ್ಲಿ (ಮುಖ್ಯ ಪರೀಕ್ಷೆ) ಅನುತ್ತೀರ್ಣರಾದ ವಿದ್ಯಾರ್ಥಿಗಳು ಅಥವಾ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಇಚ್ಛಿಸಿದವರು SSLC ಪರೀಕ್ಷೆ-2ರಲ್ಲಿ ಭಾಗವಹಿಸಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದೇ ಮುಂದಿನ ಹಂತಕ್ಕೆ ಸಾಗುವ ಅವಕಾಶ ಒದಗುತ್ತಿದೆ.
ಅಧಿಕೃತ ಫಲಿತಾಂಶ ಪ್ರಕಟ
ಕಳೆದ ಮೇ 26 ರಿಂದ ಜೂನ್ 2ರ ವರೆಗೆ ಒಟ್ಟು 967 ಪರೀಕ್ಷಾ ಕೇಂದ್ರಗಳಲ್ಲಿ ‘SSLC ಪರೀಕ್ಷೆ-2 (ಪೂರಕ ಪರೀಕ್ಷೆ)’ಯನ್ನು ರಾಜ್ಯಾದ್ಯಂತ ನಡೆಸಲಾಗಿತ್ತು.
ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಕಳೆದ ಜೂನ್ 6ರಿಂದ ಜೂನ 10ರ ವರೆಗೆ ರಾಜ್ಯದ 30 ಶೈಕ್ಷಣಿಕ ಜಿಲ್ಲೆಗಳ 105 ಮೌಲ್ಯಮಾಪನ ಕೇಂದ್ರಗಳಲ್ಲಿ 24,236 ಮೌಲ್ಯಮಾಪಕರಿಂದ ನಡೆಸಲಾಗಿದ್ದು; ಇಂದು ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
ಈ ಪರೀಕ್ಷೆಯಲ್ಲಿ ಒಟ್ಟು 87,330 ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ಶ್ರೇಷ್ಠ ಸಾಧನೆ ಮಾಡಿದ್ದಾರೆ.

ಫಲಿತಾಂಶ ವೀಕ್ಷಿಸಲು ಅಧಿಕೃತ ವೆಬ್‌ಸೈಟ್‌ಗಳು
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವೀಕ್ಷಿಸಬಹುದು:
- karresults.nic.in
- kseab.karnataka.gov.in
ಫಲಿತಾಂಶ ಪರಿಶೀಲಿಸುವ ವಿಧಾನ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಅಧಿಕೃತ ವೆಬ್‌ಸೈಟ್ karresults.nic.in ಭೇಟಿ ನೀಡಿ.
ಅಲ್ಲಿ ‘ಎಸ್.ಎಸ್.ಎಲ್.ಸಿ. 2025 ಪರೀಕ್ಷೆ -1 ಮತ್ತು 2ರ ಉತ್ತಮ ಅಂಕಗಳ ಸಂಯೋಜಿತ ಫಲಿತಾಂಶ ಪ್ರಕಟಣೆ /SSLC 2025 BEST OF EXAM – 1 & 2 RESULT ANNOUNCED ON 13th June 2025’ ಲಿಂಕ್ ಕ್ಲಿಕ್ ಮಾಡಿ
ನಿಮ್ಮ Registration Number ಮತ್ತು Date of Birth ವಿವರಗಳನ್ನು ನಮೂದಿಸಿ “Submit” ಮೇಲೆ ಕ್ಲಿಕ್ ಮಾಡಿದ ನಂತರ ಫಲಿತಾಂಶದ ವಿವರವನ್ನು ಪರದೆಯ ಮೇಲೆ ತೋರಿಸಲಾಗುತ್ತದೆ.
ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ, ಪ್ರಿಂಟ್‌ಔಟ್ ತೆಗೆದು ಭವಿಷ್ಯದಲ್ಲಿ ಉಪಯೋಗಕ್ಕೆ ಇಟ್ಟುಕೊಳ್ಳಿ.
ವಿದ್ಯಾರ್ಥಿಗಳಿಗೆ ಕೆಲವು ಉಪಯುಕ್ತ ಸೂಚನೆಗಳು
- ಫಲಿತಾಂಶ ಪರಿಶೀಲಿಸಿದ ನಂತರ ತಪ್ಪಿಲ್ಲದಂತೆ ಅಂಕಗಳ ಪರಿಶೀಲನೆ ಮಾಡಿ.
- ನಿಮ್ಮ ಶಾಲೆಯ ಅಥವಾ ಕಾಲೇಜಿನ ಅಧ್ಯಾಪಕರ ಮಾರ್ಗದರ್ಶನದಲ್ಲಿ ಮುಂದಿನ ಶಿಕ್ಷಣದ ನಿರ್ಧಾರ ತೆಗೆದುಕೊಳ್ಳಿ.
- ಅರ್ಹತೆ ಹೊಂದಿದ್ದರೆ, ಪಿಯುಸಿ, ITI ಅಥವಾ ಡಿಪ್ಲೋಮಾ ಕೋರ್ಸ್ಗಳಿಗೆ ಸೇರಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿ.
SSLC ಪೂರಕ ಪರೀಕ್ಷೆ ಫಲಿತಾಂಶವು ಅನೇಕ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಒದಗಿಸಿದೆ. ಇದು ಹೊಸ ಆರಂಭಕ್ಕೆ ದಾರಿ ಹಾಕುವ ಅವಕಾಶ. ವಿದ್ಯಾರ್ಥಿಗಳು ಸೋಲಿನಿಂದ ಬೆದರುವ ಬದಲು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಶೈಕ್ಷಣಿಕ ಗುರಿಗಳನ್ನು ಸಾಧಿಸಬೇಕು.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.