ರಾಜ್ಯಾದ್ಯಂತ ಪೂರ್ವ ಮುಂಗಾರು ಮಳೆ ಅಬ್ಬರ ಜೋರಾಗಿದ್ದು; ಈ ವರ್ಷದಲ್ಲಿ ‘ಮುಂಗಾರು ಮಳೆ’ ಭರ್ಜರಿಯಾಗಿ ಸುರಿಯವ ಮುನ್ಸೂಚನೆ ಸಿಕ್ಕಿದೆ. ಮುಂಗಾರು ಪೂರ್ವ ಮಳೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಈ ವರ್ಷದಲ್ಲಿ ರಾಜ್ಯಾದ್ಯಂತ ‘ಮುಂಗಾರು ಮಳೆ’ ಭರ್ಜರಿಯಾಗಿ ಸುರಿಯವ ಮುನ್ಸೂಚನೆ ಲಭ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ ಮಾರ್ಚ್ 1ರಿಂದ ಆರಂಭವಾಗಿರುವ ‘ಪೂರ್ವ ಮುಂಗಾರು ಮಳೆ’ ರಾಜ್ಯಾದ್ಯಂತ ವಾಡಿಕೆಗಿಂತ ಅತೀ ಹೆಚ್ಚು ಪ್ರಮಾಣದಲ್ಲಿ ಸುರಿಯತೊಡಗಿದೆ.
ಮಾರ್ಚ್ 1ರಿಂದ ಈವರೆಗೆ ರಾಜ್ಯದಲ್ಲಿ ಪೂರ್ವ ಮುಂಗಾರು ಸರಾಸರಿ 15.3 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಈ ಬಾರಿ ಅದಕ್ಕಿಂತ ದ್ವಿಗುಣಕ್ಕಿಂತಲೂ ಹೆಚ್ಚು, ಅಂದರೆ 30.1 ಮಿ.ಮೀ. ಮಳೆ ಸುರಿದಿದ್ದು, ವಾಡಿಕೆಗೆ ಹೋಲಿಸಿದರೆ ಶೇ.97ರಷ್ಟು ಹೆಚ್ಚಳವಾಗಿದೆ. ಪ್ರದೇಶವಾರ ಮಳೆಯ ಸ್ಥಿತಿ ಈ ಕೆಳಗಿನಂತಿದೆ:
- ದಕ್ಷಿಣ ಒಳನಾಡು: ವಾಡಿಕೆಗೆ ಹೋಲಿಸಿದರೆ ಶೇ.98ರಷ್ಟು ಹೆಚ್ಚಾಗಿ 35.2 ಮಿ.ಮೀ. ಮಳೆ ಸುರಿದಿದೆ.
- ಉತ್ತರ ಒಳನಾಡು: ಶೇ.42ರಷ್ಟು ಹೆಚ್ಚಳದೊಂದಿಗೆ 17 ಮಿ.ಮೀ. ಮಳೆಯಾಗಿದೆ.
- ಮಲೆನಾಡು: ವಾಡಿಕೆಯಿಂದ ಶೇ.122ರಷ್ಟು ಹೆಚ್ಚಾಗಿ 52.1 ಮಿ.ಮೀ. ಮಳೆ ಸುರಿದಿದೆ.
- ಕರಾವಳಿ: ಇಲ್ಲಿ ಮಳೆ ಪ್ರಮಾಣ ಶೇ.210ರಷ್ಟು ಹೆಚ್ಚಾಗಿ 45 ಮಿ.ಮೀ. ಮಳೆಯಾಗಿದೆ.
BPL Ration Card- 2.86 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…
ಐದು ವರ್ಷದಿಂದಲೂ ಪೂರ್ವ ಮುಂಗಾರು ಅಬ್ಬರ
ರಾಜ್ಯದಲ್ಲಿ ಮಾರ್ಚ್’ನಿಂದ ಮೇ ವರೆಗಿನ ‘ಪೂರ್ವ ಮುಂಗಾರು ಮಳೆ’ ಅವಧಿಯಲ್ಲಿ ಕಳೆದ ಐದು ವರ್ಷಗಳಿಂದ ವಾಡಿಕೆಗಿಂತ ಅಧಿಕ ಮಳೆ ಸುರಿಯುತ್ತಿದೆ. ವಾಡಿಕೆಯಂತೆ ರಾಜ್ಯದಲ್ಲಿ 119.6 ಮಿ.ಮೀ. ಮಳೆಯಾಗಬೇಕು. ಆದರೆ ಕಳೆದ ಐದು ವರ್ಷದ ಪೂರ್ವ ಮುಂಗಾರು ಮಳೆ ಪ್ರಮಾಣ ಈ ಕೆಳಗಿನಂತಿದೆ:
- 2021- 166 ಮಿ.ಮೀ.
- 2022- 237 ಮಿ.ಮೀ.
- 2023- 116 ಮಿ.ಮೀ.
- 2024- 159.5 ಮಿ.ಮೀ.
ಹವಾಮಾನ ವೈಪರಿತ್ಯವೇ ಮಳೆಗೆ ಕಾರಣ
ಈ ವರ್ಷದ ಚಳಿಗಾಲದ ಅವಧಿ ಕಡಿಮೆಯಾಗಿತ್ತು. ಕರಾವಳಿಯಲ್ಲಿ ಫೆಬ್ರವರಿಯ ಅಂತ್ಯದ ವೇಳೆಗೆ ಚಳಿಗಾಲ ಮುಕ್ತಾಯಗೊಂಡಿದ್ದರೆ, ರಾಜ್ಯದ ಇತರ ಭಾಗಗಳಲ್ಲಿ ಕೂಡ ತೀವ್ರ ಬಿಸಿಲಿನ ಪ್ರಭಾವ ಹೆಚ್ಚಾಗಿತ್ತು.
ಕೆಲವು ದಿನಗಳಲ್ಲಿ ಗಾಳಿಯಲ್ಲಿ ಸೆಕೆ ಹೆಚ್ಚು ಕಾಣಿಸಿಕೊಂಡಿತ್ತು. ಇದರಿಂದಾಗಿ ಬಿಸಿಲಿನ ಪ್ರಭಾವದಿಂದ ಮೋಡಗಳು ಸಹಜವಾಗಿ ಸೃಷ್ಟಿಯಾಗಿ, ಮುಂಜಾನೆ ಭಾರೀ ಬಿಸಿಲಾದರೂ ಸಂಜೆ ವೇಳೆಗೆ ಬಿರು ಮಳೆ ಸುರಿಯುತ್ತಿದೆ.

Gold Price Drop- ಅಕ್ಷಯ ತೃತೀಯಕ್ಕೆ ಪಾತಾಳಕ್ಕೆ ಇಳಿಯುತ್ತಾ ಚಿನ್ನದ ಬೆಲೆ? ಸತತ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ
ಮಳೆ ಕೊರತೆ ಇರುವ ಜಿಲ್ಲೆಗಳು
ರಾಜ್ಯದ ಬಹುತೇಕ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆಯು ಸಮೃದ್ಧವಾಗಿದೆ. ಆದರೆ, ಈ ವರ್ಷ ಉತ್ತರ ಒಳನಾಡು ಈ ಕೆಳಗಿನ ಜಿಲ್ಲೆಗಳಲ್ಲಿ ಮಾತ್ರ ಮಳೆ ಕೊರತೆ ಉಂಟಾಗಿದೆ.
- ಕೊಪ್ಪಳ: ಶೇ.14 ಕೊರತೆ
- ರಾಯಚೂರು: ಶೇ.17 ಕೊರತೆ
- ಯಾದಗಿರಿ: ಶೇ.11 ಕೊರತೆ
- ಬೀದರ್: ಶೇ.7 ಕೊರತೆ
- ಬಾಗಲಕೋಟೆ: ಶೇ.17 ಕೊರತೆ
ಕರಾವಳಿಯಲ್ಲಿ ಭರ್ಜರಿ ಮಳೆ
ವಿಸೇಷವೆಂದರೆ ಕರಾವಳಿ ಜಿಲ್ಲೆಗಳು ಈ ಬಾರಿ ಮಳೆಯ ಅಚ್ಚರಿಯ ಪ್ರಮಾಣವನ್ನು ದಾಖಲಿಸಿದ್ದು; ಜಿಲ್ಲಾವಾರು ಮಳೆ ಪ್ರಮಾಣ ಈ ಕೆಳಗಿನಂತಿದೆ:
- ದಕ್ಷಿಣ ಕನ್ನಡ- ವಾಡಿಕೆಗಿಂತ (27.7) ಶೇ.182ರಷ್ಟು ಹೆಚ್ಚಳ
- ಉಡುಪಿ- ವಾಡಿಕೆಗಿಂತ (13.8) ಶೇ.149ರಷ್ಟು ಹೆಚ್ಚಳ
- ಉತ್ತರ ಕನ್ನಡ- ವಾಡಿಕೆಗಿಂತ (7.9) ಶೇ.323ರಷ್ಟು ಹೆಚ್ಚಳ
MUDRA Loan- ಶ್ಯೂರಿಟಿ ಇಲ್ಲದೇ ₹20 ಲಕ್ಷ ಸಾಲ | 33 ಲಕ್ಷ ಕೋಟಿ ರೂ. ಸಾಲ ವಿತರಣೆ
ರಾಜ್ಯಾದ್ಯಂತ ಏಪ್ರಿಲ್ 14ರ ವರೆಗೆ ಮಳೆ
ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಏಪ್ರಿಲ್ 14ರ ವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಹಗುರದಿಂದ ಗಂಭೀರ ಮಳೆಯ ಸಂಭವವಿದೆ. ಈ ಪೈಕಿ ಇಂದು (ಏಪ್ರಿಲ್ 11) ಗುಡುಗು ಸಹಿತ ಹಗುರ ಮಳೆಯ ಸಾಧ್ಯತೆ
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ. ವೇಗದ ಬಿರುಗಾಳಿಯೊಂದಿಗೆ ಮಳೆಯಾಗುವ ಮುನ್ಸೂಚನೆ ಇದೆ.
ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು; ದಕ್ಷಿಣ ಒಳನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಭಾಗಗಳಲ್ಲಿ ಹಗುರ ಮಳೆಯ ಸಾಧ್ಯತೆ ಇದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.