Karnataka Post Master Recruitment 2024 : ಅಂಚೆ ಇಲಾಖೆ (IndiaPost) ಮತ್ತೊಂದು ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ದೇಶಾದ್ಯಂತ ಒಟ್ಟು 44,248 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಕರ್ನಾಟಕಕ್ಕೆ (Karnataka Postal Circle) 1,940 ಹುದ್ದೆಗಳನ್ನು ಮೀಸಲಿಡಲಾಗಿದ್ದು; 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ. ಆಸಕ್ತರು ಆಗಸ್ಟ್ 5, 2024ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಕರ್ನಾಟಕ ಅಂಚೆ ವೃತ್ತದಲ್ಲಿ ಒಟ್ಟು 37 ಅಂಚೆ ವಿಭಾಗಳಿದ್ದು; ಎಲ್ಲ ವಿಭಾಗಗಳಲ್ಲೂ ಬ್ರಾಂಚ್ ಪೋಸ್ಟ್ ಮಾಸ್ಟರ್ (Branch Postmaster-BPM) ಹಾಗೂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (Assistant Branch Postmaster-ABPM) ಹುದ್ದೆಗಳು ಖಾಲಿ ಇವೆ. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ (ಅಂಚೆ ವಿಭಾಗ) ಎಷ್ಟೆಷ್ಟು ಹುದ್ದೆಗಳಿವೆ? ಗ್ರಾಮವಾರು ಖಾಲಿ ಹುದ್ದೆಗಳ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ….
ವಿದ್ಯಾರ್ಹತೆ ಏನಿರಬೇಕು?
ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ನೇಮಕ ನಡೆಯಲಿದ್ದು; ಈ ಹುದ್ದೆಗಳಿಗೆ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿAದ 10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು.
10ನೇ ತರಗತಿಯಲ್ಲಿ ಇಂಗ್ಲಿಷ್ ಮತ್ತು ಗಣಿತ ವಿಷಯಗಳನ್ನು ಒಳಗೊಂಡಿರುವುದು ಕಡ್ಡಾಯ. ಅಲ್ಲದೆ, ಅಭ್ಯರ್ಥಿಗಳು ಆಯಾ ಸ್ಥಳೀಯ ಭಾಷೆಯನ್ನು ಓದಲು ಮತ್ತು ಬರೆಯಲು, ಮಾತನಾಡಲು ಬಲ್ಲವರಾಗಿರಬೇಕು. ಕಂಪ್ಯೂಟರ್ ಜ್ಞಾನ, ಸೈಕಲ್ ಸವಾರಿ ತಿಳಿದಿರಬೇಕು.
ವಯೋಮಿತಿ ವಿವರ
ಬ್ರಾಂಚ್ ಪೋಸ್ಟ್ ಮಾಸ್ಟರ್ ಹಾಗೂ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಯೋಮಿತಿ ಸಡಿಲಿಕೆ ಇದೆ.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ವಿಶೇಷ ಚೇತನ ವರ್ಗದ ಅಭ್ಯರ್ಥಿಗಳಿಗೆ 10 ವರ್ಷ, ಒಬಿಸಿ ವರ್ಗದ ವಿಶೇಷ ಚೇತನ ಅಭ್ಯರ್ಥಿಗಳಿಗೆ 13 ವರ್ಷ, ಎಸ್‌ಸಿ/ಎ ವರ್ಗದ ವಿಶೇಷ ಚೇತನ ಅಭ್ಯರ್ಥಿಗಳಿಗೆ 15 ವರ್ಷ ಸಡಿಲಿಕೆ ನೀಡಲಾಗಿದೆ.
ಅರ್ಜಿ ಶುಲ್ಕ, ನೇಮಕ ಪ್ರಕ್ರಿಯೆ ವಿವರ
ಎಸ್‌ಸಿ/ ಎಸ್‌ಟಿ / ವಿಶೇಷ ಚೇತನ / ಮಹಿಳೆಯರು/ ತೃತೀಯ ಲಿಂಗಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಮೆರಿಟ್ ಪಟ್ಟಿಯನ್ನು ರಚಿಸಲಾಗುತ್ತದೆ.
ಮಾಸಿಕ ಸಂಬಳದ ವಿವರ
- ಬ್ರಾಂಚ್ ಪೋಸ್ಟ್ ಮಾಸ್ಟರ್ : ₹12,000 ರಿಂದ ₹29,380
- ಅಸಿಸ್ಟೆಂಟ್ ಬ್ಯಾಂಚ್ ಪೋಸ್ಟ್ ಮಾಸ್ಟರ್ : ₹10,000 ರಿಂದ ₹24,470
ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಹುದ್ದೆಗಳು?
- ಬಾಗಲಕೋಟೆ : 23
- ಬಳ್ಳಾರಿ : 50
- ಬೆಂಗಳೂರು ಜಿಪಿಒ : 04
- ಬೆಳಗಾವಿ : 33
- ಬೆಂಗಳೂರು ಪೂರ್ವ : 83
- ಬೆಂಗಳೂರು ದಕ್ಷಿಣ : 62
- ಬೆಂಗಳೂರು ಪಶ್ಚಿಮ : 39
- ಬೀದರ್ : 59
- ಚನ್ನಪಟ್ಟಣ : 87
- ಚಿಕ್ಕಮಗಳೂರು : 60
- ಚಿಕ್ಕೋಡಿ : 19
- ಚಿತ್ರದುರ್ಗ : 27
- ದಾವಣಗೆರೆ : 40
- ಧಾರವಾಡ : 22
- ಗದಗ : 18
- ಗೋಕಾಕ್ : 07
- ಹಾಸನ : 78
- ಹಾವೇರಿ : 44
- ಕಲಬುರಗಿ : 83
- ಕಾರವಾರ : 43
- ಕೊಡಗು : 76
- ಕೋಲಾರ : 106
- ಕೊಪ್ಪಳ : 36
- ಮಂಡ್ಯ : 65
- ಮಂಗಳೂರು : 62
- ಮೈಸೂರು : 42
- ನಂಜನಗೂಡು : 66
- ಪುತ್ತೂರು : 89
- ರಾಯಚೂರು : 63
- ಆರ್‌ಎಂಎಸ್ -ಎಚ್‌ಬಿ : 03
- ಆರ್‌ಎಂಎಸ್ ಕ್ಯೂ : 09
- ಶಿವಮೊಗ್ಗ : 89
- ಶಿರಸಿ : 66
- ತುಮಕೂರು : 107
- ಉಡುಪಿ : 90
- ವಿಜಯಪುರ : 40
- ಯಾದಗಿರಿ : 50
- ಅರ್ಜಿ ಸಲ್ಲಿಸಲು ಕೊನೆಯ ದಿನ :
05-08-2024 - ಅರ್ಜಿ ತಿದ್ದುಪಡಿಗೆ ಕಾಲಾವಕಾಶ :
06-08-2024ರಿಂದ 08-08-2024ರ ವರೆಗೆ
ಅರ್ಜಿ ಸಲ್ಲಿಕೆ ಲಿಂಕ್ : Apply Now
ಅಧಿಸೂಚನೆ : Download
ಕರ್ನಾಟಕ ವೃತ್ತದ ಗ್ರಾಮವಾರು ಖಾಲಿ ಹುದ್ದೆಗಳ ವಿವರ : ಇಲ್ಲಿ ಒತ್ತಿ…
Works
Hirelingadahalli
Tq-Haveri
Dis-Haveri
Post-Kurubagonda
At-Hirelingadahalli
Dis-Haveri
Tq-Haveri
Post-Kurubagonda
SSLC result-88.32