Karnataka Old Age Pension- 4,52,451 ಜನರ ವೃದ್ಧಾಪ್ಯ ವೇತನಕ್ಕೆ ಕತ್ತರಿ | ಅನರ್ಹರ ಪತ್ತೆ ಅಭಿಯಾನಕ್ಕೆ ಮುಂದಾದ ಸರ್ಕಾರ
Karnataka Old Age Pension Ineligible Beneficiaries

ವೃದ್ಧಾಪ್ಯ ವೇತನ, ವಿಧವಾ ವೇತನದಂತಹ ಪಿಂಚಣಿ ಯೋಜನೆಗಳು (Karnataka Old Age Pension) ವ್ಯಾಪಕವಾಗಿ ದುರುಪಯೋಗ ಆಗುತ್ತಿದ್ದು; ಸರ್ಕಾರ ಇದೀಗ ಅನರ್ಹರರ ಪತ್ತೆಗೆ ದಿಟ್ಟ ಹೆಜ್ಜೆ ಇಟ್ಟಿದೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ…
ಸರ್ಕಾರ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ಹಾಗೂ ಅಂಗವಿಕಲರ ಮಾಶಾಸನಗಳನ್ನು ನಿಜವಾದ ಅರ್ಹರಿಗೆ ಆಪತ್ಕಾಲದಲ್ಲಿ ಆರ್ಥಿಕ ನೆರವು ನೀಡುವ ಸದುದ್ದೇಶದಿಂದ ಜಾರಿಗೊಳಿಸಲಾಗಿದೆ.
ಆದರೆ, ಈ ಮಹತ್ವದ ಯೋಜನೆಗಳ ದುರುಪಯೋಗ ಮಿತಿ ಮೀರುತ್ತಿದೆ.ಇದಕ್ಕೆ ಕಠಿಣ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದ್ದು; ಸುಮಾರು 4.52 ಲಕ್ಷ ಜನರ ವೃದ್ಧಾಪ್ಯ ವೇತನಕ್ಕೆ ಕತ್ತರಿ ಬೀಳುವ ಸಂಭವವಿದೆ.
ಮನೆಮನೆಗೆ ಪರಿಶೀಲನೆ
ಮುಂದಿನ ತಿಂಗಳು ರಾಜ್ಯ ಸರ್ಕಾರವು ಮನೆಮನೆಗೆ ಬೇಟೆ ನೀಡಿ ಫಲಾನುಭವಿಗಳ ನೈಜತೆ ಪರಿಶೀಲಿಸಲು ನಿರ್ಧರಿಸಿದೆ. ಇದಕ್ಕೂ ಮುನ್ನವೇ ‘ಕುಟುಂಬ’ ಅಪ್ಲಿಕೇಶನ್ ಮೂಲಕ ಫಲಾನುಭವಿಗಳ ವಿವರಗಳನ್ನು ತಾಳೆ ಮಾಡಿ ಸಂಶಯಾಸ್ಪದ ಪ್ರಕರಣಗಳನ್ನು ಗುರುತಿಸಲಾಗಿದೆ.
ಇದರ ಜೊತೆಗೆ ಆಧಾರ್ ಲಿಂಕ್, ಆದಾಯ ಪ್ರಮಾಣ ಪತ್ರ, HRMS (ಸರ್ಕಾರಿ ನೌಕರರ ವೇತನ/ಪಿಂಚಣಿ ಡೇಟಾ) ಮುಂತಾದ ಮಾಹಿತಿಗಳನ್ನೂ ಕ್ರಾಸ್‌ಚೆಕ್ ಮಾಡಲಾಗುತ್ತಿದೆ.

4,52,451 ಅನರ್ಹರಿಗೆ ವೃದ್ಧಾಪ್ಯ ವೇತನ
ಪರಿಶೀಲನೆ ವೇಳೆ ಬಹಿರಂಗವಾದ ಹಲವು ಅನರ್ಹರ ಪತ್ತೆಯಾಗಿದೆ. ಈ ಪೈಕಿ 4,52,451 ಮಂದಿ 60 ವರ್ಷ ಪೂರೈಸದೇ ಇದ್ದರೂ ಕೂಡ ವೃದ್ಧಾಪ್ಯ ವೇತನ ಪಡೆಯುತ್ತಿದ್ದಾರೆ. 3,59,397 ಮಂದಿ ನಿಗದಿಪಡಿಸಿದ ಆದಾಯಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರೂ ಪಿಂಚಣಿ ಪಡೆಯುತ್ತಿದ್ದಾರೆ.
ಊಖಒS ದಾಖಲೆ ಪ್ರಕಾರ ಸರ್ಕಾರಿ ನೌಕರರ ಕುಟುಂಬದಲ್ಲಿಯೇ ವೃದ್ಧಾಪ್ಯವೇತನ ಪಡೆಯುವವರು ಇದ್ದಾರೆ. 3,600 ಮಂದಿ ಆದಾಯ ತೆರಿಗೆ ಪಾವತಿದಾರರು ಸಹ ವೃದ್ಧಾಪ್ಯವೇತನ ಪಡೆಯುತ್ತಿರುವುದು ಪತ್ತೆಯಾಗಿದೆ.
ಇನ್ನು ‘ಸಂಧ್ಯಾ ಸುರಕ್ಷಾ ಯೋಜನೆ’ಯಿಂದ 7 ಲಕ್ಷಕ್ಕೂ ಹೆಚ್ಚು ಮಂದಿ 60 ವರ್ಷ ತುಂಬದೇ ಸೌಲಭ್ಯ ಪಡೆಯುತ್ತಿದ್ದಾರೆ. ಇದರ ಜೊತೆಗೆ 3.71 ಲಕ್ಷ ಜನ ಮಹಿಳೆಯರು ಹೆಚ್ಚಿನ ಆದಾಯ ಹೊಂದಿದ್ದರೂ ಕೂಡ ವಿಧವಾ ವೇತನ ಪಡೆಯುತ್ತಿದ್ದಾರೆ.
ನಿಜವಾದ ಫಲಾನುಭವಿಗಳಿಗೂ ಸಂಕಷ್ಟ
ದಿನಗೂಲಿ ಕಾರ್ಮಿಕರು, ಕಡಿಮೆ ಆದಾಯ ಹೊಂದಿರುವವರಿಗೆ ವೃದ್ಧಾಪ್ಯದ ಹೊತ್ತಿನಲ್ಲಿ ಈ ಪಿಂಚಣಿಯೇ ದೊಡ್ಡ ಆಸರೆಯಾಗಿದೆ. ಆದರೆ ಅನರ್ಹರು ನುಸುಳುವುದರಿಂದ ನಿಜವಾದ ಫಲಾನುಭವಿಗಳು ಅರ್ಜಿ ಸಲ್ಲಿಸಿದರೂ ತಿರಸ್ಕೃತರಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಸಲ್ಲಿಕೆಯಾಗಿದ್ದ 15.13 ಲಕ್ಷ ಅರ್ಜಿಗಳಲ್ಲಿ 10.95 ಲಕ್ಷ ಮಾತ್ರ ಮಾನ್ಯಗೊಂಡಿವೆ. ಮಾತ್ರವಲ್ಲ ಕಳೆದ ಎರಡು ವರ್ಷಗಳಲ್ಲಿ 7.90 ಲಕ್ಷ ಫಲಾನುಭವಿಗಳ ಪಿಂಚಣಿ ಆದೇಶಗಳನ್ನು ಸರ್ಕಾರ ರದ್ದುಗೊಳಿಸಿದೆ. ಇದು ದುರುಪಯೋಗ ಎಷ್ಟು ಹೆಚ್ಚಾಗಿದೆ ಎಂಬುದಕ್ಕೆ ನಿದರ್ಶನ.
ಸರ್ಕಾರ ಈಗ ನಿಖರ ಪರಿಶೀಲನೆ ನಡೆಸಿ ಅನರ್ಹರನ್ನು ಹೊರ ಹಾಕುವತ್ತ ಗಂಭೀರ ಹೆಜ್ಜೆ ಇಟ್ಟಿದೆ. ಜಿಲ್ಲಾಧಿಕಾರಿಗಳ ಮೂಲಕ ಶಂಕಿತ ಫಲಾನುಭವಿಗಳ ಪರಿಶೀಲನೆ, ಮನೆಮನೆಗೆ ಭೇಟಿ, ಆಧಾರ್ ಲಿಂಕ್ ಮಾಡುವುದು ಮುಂತಾದ ಕ್ರಮಗಳು ಜಾರಿಗೆ ಬರಲಿವೆ.
New BPL Card – ಮುಂದಿನ ತಿಂಗಳು ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಆಹ್ವಾನ | ಸರ್ಕಾರದ ಮಹತ್ವದ ನಿರ್ಧಾರ