2026-27ನೇ ಶೈಕ್ಷಣಿಕ ಸಾಲಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ (Karnataka Morarji Residential School) ಸೇರಿ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರವು ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ನಡೆಸುತ್ತಿರುವ ಉಚಿತ ವಸತಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಮತ್ತೊಮ್ಮೆ ಆರಂಭವಾಗಿದೆ.
2026-27ನೇ ಶೈಕ್ಷಣಿಕ ಸಾಲಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ (Morarji Desai Residential School) ಸೇರಿ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಗ್ರಾಮೀಣ, ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ವಸತಿ ಶಾಲೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಈ ಬಾರಿ ರಾಜ್ಯದಾದ್ಯಂತ ಇರುವ ಒಟ್ಟು 807 ಉಚಿತ ವಸತಿ ಶಾಲೆಗಳಲ್ಲಿ (Karnataka Free Residential Schools) ಪ್ರವೇಶ ನೀಡಲಾಗುತ್ತಿದೆ ಎಂಬುದು ಗಮನಾರ್ಹ ವಿಷಯ.
ಇದನ್ನೂ ಓದಿ: Gold Price Rs.1.54 Lakh- ಚಿನ್ನದ ಬೆಲೆ ಈಗ 1.54 ಲಕ್ಷ ರೂ. | ಒಂದೇ ದಿನಕ್ಕೆ 5020 ರೂ ಜಂಪ್!
Eligible Residential Schools- ಯಾವ್ಯಾವ ವಸತಿ ಶಾಲೆಗಳಲ್ಲಿ ಪ್ರವೇಶ?
ಈ ಪ್ರವೇಶ ಪ್ರಕ್ರಿಯೆಯ ಅಡಿಯಲ್ಲಿ ಕೆಳಕಂಡ ಉಚಿತ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ದಾಖಲಾತಿ ನಡೆಯಲಿದೆ:
- ಮೊರಾರ್ಜಿ ದೇಸಾಯಿ ವಸತಿ ಶಾಲೆ
- ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
- ಏಕಲವ್ಯ ಮಾದರಿ ವಸತಿ ಶಾಲೆ
- ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
- ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ
- ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ
- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಸತಿ ಶಾಲೆ
- ಸಂಗೊಳ್ಳಿ ರಾಯಣ್ಣ ವಸತಿ ಶಾಲೆ
- ಕವಿ ರನ್ನ ವಸತಿ ಶಾಲೆ
- ಗಾಂಧಿ ತತ್ವ ವಸತಿ ಶಾಲೆ
- ಶ್ರೀ ನಾರಾಯಣ ಗುರು ವಸತಿ ಶಾಲೆ
ಈ ಎಲ್ಲಾ ಶಾಲೆಗಳಲ್ಲಿ ಉಚಿತ ಶಿಕ್ಷಣ, ವಸತಿ, ಆಹಾರ, ಪಠ್ಯಪುಸ್ತಕಗಳು ಹಾಗೂ ಗುಣಮಟ್ಟದ ಅಧ್ಯಯನ ಸೌಲಭ್ಯಗಳು ಒದಗಿಸಲಾಗುತ್ತವೆ.
ಇದನ್ನೂ ಓದಿ: Pumpset Akrama Sakrama Yojana- ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ: ರೈತರಿಗೆ ಹಗಲು ಹೊತ್ತಲ್ಲೇ 7 ಗಂಟೆ ಉಚಿತ ವಿದ್ಯುತ್
Entrance Exam Selection- ಪ್ರವೇಶ ಪರೀಕ್ಷೆ ಮೂಲಕವೇ ಆಯ್ಕೆ
ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ವೇಳಾಪಟ್ಟಿಯಂತೆ, ಪ್ರವೇಶ ಪರೀಕ್ಷೆ ಮಾರ್ಚ್ 1, 2026 (ಭಾನುವಾರ) ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00ರ ವರೆಗೆ ನಡೆಯಲಿದೆ.
ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ ತಯಾರಿಸಿ, ಮೀಸಲಾತಿ ಹಾಗೂ ಆದ್ಯತಾ ಕ್ರಮದಂತೆ ಅರ್ಹ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ.

Eligibility Criteria- ಯಾರು ಅರ್ಜಿ ಹಾಕಬಹುದು?
ಉಚಿತ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಕುಟುಂಬದ ವಾರ್ಷಿಕ ಆದಾಯವು ಪರಿಶಿಷ್ಟ ಜಾತಿ (SC), ಪರಿಶಿಷ್ಟ ವರ್ಗ (ST) ₹2.50 ಲಕ್ಷ, ಹಿಂದುಳಿದ ವರ್ಗಗಳು (ಪ್ರವರ್ಗ-1) ₹2.50 ಲಕ್ಷ ಒಳಗೆ ಹಾಗೂ ಇತರ ವರ್ಗಗಳು ₹1 ಲಕ್ಷ ಒಳಗೆ ಹೊಂದಿರಬೇಕು.
ಇದನ್ನೂ ಓದಿ: Mobile Kaladare Enu Madabeku- ಮೊಬೈಲ್ ಕಳುವಾದರೆ ಏನು ಮಾಡಬೇಕು? ಗಾಬರಿಯಾಗದೆ ಕೈಗೊಳ್ಳಬೇಕಾದ ಸರಿಯಾದ ಕ್ರಮಗಳು ಇಲ್ಲಿವೆ…
Application Process- ಹೇಗೆ ಅರ್ಜಿ ಸಲ್ಲಿಸಬೇಕು?
ವಿದ್ಯಾರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಘೋಷಣಾ ಪತ್ರವನ್ನು (Application Form) ಡೌನ್‌ಲೋಡ್ ಮಾಡಿಕೊಳ್ಳಬೇಕು.
ಆ ಘೋಷಣಾ ಪತ್ರವನ್ನು ಭರ್ತಿ ಮಾಡಿ ಸಮೀಪದ ಯಾವುದೇ ವಸತಿ ಶಾಲೆಗೆ ದಿನಾಂಕ ಜನವರಿ 25, 2026ರೊಳಗೇ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಬಳಿಕ, ಸಂಬಂಧಿಸಿದ ಶಾಲೆಯಿಂದ ಸ್ವೀಕೃತಿ ಪತ್ರ (Acknowledgement) ಪಡೆಯುವುದು ಕಡ್ಡಾಯ.
ಗಮನಿಸಿ: ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯು ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರಬೇಕು. ಪ್ರಸ್ತುತ ಶಾಲೆಯಿಂದ SATS ಸಂಖ್ಯೆ ಪಡೆದುಕೊಳ್ಳಬೇಕು. ಅಗತ್ಯ ದಾಖಲೆಗಳೊಂದಿಗೆ ವಸತಿ ಶಾಲೆಯ ಮುಖ್ಯಶಿಕ್ಷಕರನ್ನು ಸಂಪರ್ಕಿಸಬೇಕು.
ಇದನ್ನೂ ಓದಿ: Hero Splendor Bike- ಕೇವಲ 1,000 ರೂ. ಇಐಎಂ ನಲ್ಲಿ ಮನೆಗೆ ತನ್ನಿ ಹೀರೋ ಸ್ಪೆೆಂಡರ್ ಮೈಲೇಜ್ ಬೈಕ್
School Preference- ಶಾಲೆಗಳ ಆಯ್ಕೆ ಹೇಗೆ ಮಾಡಬೇಕು?
- ಅಭ್ಯರ್ಥಿಯು ತಾನು ಪ್ರವೇಶ ಬಯಸುವ ಜಿಲ್ಲೆಯಲ್ಲಿರುವ ಎಲ್ಲಾ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಬೇಕು.
- ಆದ್ಯತೆಯಲ್ಲಿ ನಮೂದಿಸಿದ ಶಾಲೆಗಳನ್ನಷ್ಟೇ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ.
- ಮೆರಿಟ್, ಮೀಸಲಾತಿ ಹಾಗೂ ಆದ್ಯತಾ ಕ್ರಮದ ಆಧಾರದ ಮೇಲೆ ಕಂಪ್ಯೂಟರೀಕೃತ ವಿಧಾನದಿಂದ ಸೀಟು ಹಂಚಿಕೆ ನಡೆಯುತ್ತದೆ.
Local Candidate Preference- ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ
ರಾಜ್ಯ ಸರ್ಕಾರ ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತಂದಿದೆ. ಸ್ಥಳೀಯ ತಾಲೂಕು ಅಭ್ಯರ್ಥಿಗಳಿಗೆ ಶೇ.75ರಷ್ಟು ಸೀಟುಗಳು, ಅದೇ ಜಿಲ್ಲೆಯ ಇತರ ತಾಲೂಕು ಅಭ್ಯರ್ಥಿಗಳಿಗೆ ಶೇ.25ರಷ್ಟು ಸೀಟುಗಳನ್ನು ನೀಡಲಾಗುತ್ತದೆ.
ಇದನ್ನೂ ಓದಿ: Bhu Odetan Yojana- ಸ್ವಂತ ಜಮೀನು ಖರೀದಿಸಲು ಸರ್ಕಾರದಿಂದ 12.50 ಲಕ್ಷ ರೂ. ವರೆಗೆ ಹಣಕಾಸು ನೆರವು!
ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
- SATS ಸಂಖ್ಯೆ
- ವಿದ್ಯಾರ್ಥಿಯ ಇತ್ತೀಚಿನ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ / ರೇಷನ್ ಕಾರ್ಡ್
- ಸ್ಥಳೀಯ ನಿವಾಸಿ ಪ್ರಮಾಣಪತ್ರ
- ಅವಿಶೇಷ ಪ್ರವರ್ಗದ ಅಭ್ಯರ್ಥಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರ
Important Dates – ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಕೊನೆಯ ದಿನ: ಜನವರಿ 25, 2026
- ಪ್ರವೇಶಪತ್ರ ಬಿಡುಗಡೆ: ಫೆಬ್ರವರಿ 18, 2026
- ಪ್ರವೇಶ ಪರೀಕ್ಷೆ: ಮಾರ್ಚ್ 1, 2026
ಇದನ್ನೂ ಓದಿ: Agniveer Vayu Recruitment 2026- ಪಿಯುಸಿ, ಡಿಪ್ಲೊಮಾ ಅಭ್ಯರ್ಥಿಗಳಿಗೆ ವಾಯುಪಡೆ ಅಗ್ನಿವೀರರ್ ಹುದ್ದೆಗಳು
ಮೊರಾರ್ಜಿ ದೇಸಾಯಿ ಸೇರಿದಂತೆ ವಿವಿಧ ಉಚಿತ ವಸತಿ ಶಾಲೆಗಳು ಗ್ರಾಮೀಣ ಮತ್ತು ಬಡ ಕುಟುಂಬದ ಮಕ್ಕಳ ಜೀವನ ಬದಲಾಯಿಸುವ ಶಕ್ತಿಯುತ ವೇದಿಕೆಳಾಗಿವೆ. ನಿಮ್ಮ ಮಗು ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿದ್ದರೆ, ಈ ಅಮೂಲ್ಯ ಅವಕಾಶವನ್ನು ತಪ್ಪಿಸಿಕೊಳ್ಳದೇ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ.
ಘೋಷಣಾ ಪತ್ರ, ಶಾಲೆಗಳ ವಿವರ ಮತ್ತು ಅಧಿಕೃತ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಅತ್ಯಂತ ಮುಖ್ಯ.
ಹೆಚ್ಚಿನ ಮಾಹಿತಿಗೆ: kreis.karnataka.gov.in

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.