ಕರ್ನಾಟಕದ ಎಲ್ಲಾ ವಲಯದ ಕಾರ್ಮಿಕರ ಸಂಬಳ (Karnataka Labour Minimum Wage Hike) ಏರಿಕೆಯಾಗಿದ್ದು; ಕಾರ್ಮಿಕ ಇಲಾಖೆಯ (Karnataka Labour Department) ಕರಡು ಅಧಿಸೂಚನೆಯಲ್ಲಿ ₹19,000 ದಿಂದ ₹34,000 ವರೆಗೆ ಏರಿಸಲು ಪ್ರಸ್ತಾಪಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕರ್ನಾಟಕ ರಾಜ್ಯದ ಕಾರ್ಮಿಕರ ಸಂಬಳದ ಕುರಿತಂತೆ ರಾಜ್ಯ ಸರ್ಕಾರವು (Government of Karnataka) ಇತ್ತೀಚೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ದೀರ್ಘಕಾಲದ ಬಳಿಕ ಹೊಸ ಕನಿಷ್ಠ ವೇತನ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕರ ಜೀವನಕ್ಕೆ ಹೊಸ ಬದಲಾವಣೆ ತರುವ ಸಾಧ್ಯತೆಯಿದೆ.
ಕರ್ನಾಟಕ ರಾಜ್ಯದ ಹೆಗ್ಗಳಿಕೆ
ಈ ಹೊಸ ಕ್ರಮದಂತೆ ಕಾರ್ಮಿಕರ ಕನಿಷ್ಠ ಮಾಸಿಕ ವೇತನವನ್ನು ₹19,000 ದಿಂದ ₹34,000ದ ವರೆಗೆ ಏರಿಸಲು ಪ್ರಸ್ತಾಪಿಸಲಾಗಿದೆ. ಈ ಕ್ರಮವು ಭಾರತದಲ್ಲಿಯೇ ಅತ್ಯಧಿಕ ಕನಿಷ್ಠ ವೇತನವನ್ನು ನಿಗದಿಪಡಿಸಿದ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕವನ್ನು ಭಾಜನ ಮಾಡಿದೆ.
ಈ ಅಧಿಸೂಚನೆಯು ರಾಜ್ಯದ ಸುಮಾರು 60ಕ್ಕೂ ಹೆಚ್ಚು ಉದ್ಯಮ ಮತ್ತು ವೃತ್ತಿ ವಲಯಗಳನ್ನು ಒಳಗೊಂಡಿದ್ದು, ಕಾರ್ಮಿಕರ ಸಂಪೂರ್ಣ ವರ್ಗೀಕರಣದ ಆಧಾರದ ಮೇಲೆ ವೇತನದ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಈ ವಲಯಗಳಲ್ಲಿ ಕೃಷಿ, ತಾಂತ್ರಿಕ, ನಿರ್ಮಾಣ, ಕೈಗಾರಿಕಾ, ಸೇವಾ ಕ್ಷೇತ್ರಗಳು ಸೇರಿದಂತೆ ಹಲವಾರು ಪ್ರಮುಖ ಉದ್ಯಮಗಳು ಸೇರಿವೆ.
Personal Loans Guide- ವಿಶೇಷ ವೈಯಕ್ತಿಕ ಸಾಲ ಯೋಜನೆಗಳು | ಟಾಪ್ ಫೈವ್ ಪರ್ಸನಲ್ ಲೋನ್ ಲಿಸ್ಟ್ ಇಲ್ಲಿದೆ…
ಯಾವ್ಯಾವ ಕಾರ್ಮಿಕರ ಸಂಬಳ ಏರಿಕೆ ಅನ್ವಯ?
ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆ ಹೊರಡಿಸಿರುವ ಸದರಿ ಹೊಸ ಕರಡು ಅಧಿಸೂಚನೆಯಲ್ಲಿ ನಮೂದಿಸಿದ ಉದ್ಯೋಗಿಗಳನ್ನು ನಾಲ್ಕು ಪ್ರವರ್ಗಗಳನ್ನಾಗಿ ವಿಂಗಡಿಸಿದ್ದು, ಪ್ರತಿ ಪ್ರವರ್ಗದ ವ್ಯಾಖ್ಯಾನವು ಕೆಳಗಿನಂತಿರುತ್ತದೆ:
ಅಕುಶಲ ಕಾರ್ಮಿಕರು (Unskilled Workers): ಇವರು ಸಾಧಾರಣ ಶಕ್ತಿಶಾಲಿ ಶ್ರಮದ ಕೆಲಸಗಳನ್ನು ನಿರ್ವಹಿಸುತ್ತಾರೆ. ವಿಶೇಷ ಪರಿಣತಿ ಅಥವಾ ಪೂರ್ವ ಅನುಭವ ಇಲ್ಲದೆ ಸರಳ ಕಾರ್ಯಗಳಲ್ಲಿ ತೊಡಗಿರುವವರು.
ಅರೆ ಕುಶಲ ಕಾರ್ಮಿಕರು (Semi-skilled Workers): ನಿರ್ದಿಷ್ಟ ನಿಯಮಿತ ಪ್ರಕ್ರಿಯೆಯ ಅಡಿಯಲ್ಲಿ, ಯಂತ್ರೋಪಕರಣಗಳ ಸಹಾಯದಿಂದ ಪುನರಾವರ್ತನೆಯ ಕೆಲಸಗಳನ್ನು ಮಾಡುವವರು.

ಕುಶಲ ಕಾರ್ಮಿಕರು (Skilled Workers): ತಮ್ಮ ಕಾರ್ಯದ ಕ್ಷೇತ್ರದಲ್ಲಿ ಪರಿಣಿತರು, ಸ್ವಂತ ತೀರ್ಮಾನ ತೆಗೆದುಕೊಳ್ಳುವಷ್ಟು ಸಮರ್ಥರು. ಶಿಕ್ಷಣ, ಅನುಭವ ಹಾಗೂ ಜವಾಬ್ದಾರಿಯುತ ಕೆಲಸಗಳನ್ನು ನಿರ್ವಹಿಸುವವರು.
ಅತಿ ಕುಶಲ ಕಾರ್ಮಿಕರು (Highly Skilled Workers): ದಕ್ಷತೆಯಲ್ಲಿ ಅತ್ಯುನ್ನತ, ಕೆಲಸದ ಮೇಲ್ವಿಚಾರಣೆ, ನಿರ್ವಹಣಾ ಸಾಮರ್ಥ್ಯ ಹೊಂದಿರುವವರು. ತಂತ್ರಜ್ಞಾನ ಹಾಗೂ ನಿರ್ವಹಣಾ ಪರಿಣತಿ ಇರುವವರು.
Salary Package Account- ರಾಜ್ಯ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ | ಮಹತ್ವದ ಮಾಹಿತಿ ಇಲ್ಲಿದೆ…
ಯಾರು ಎಷ್ಟು ಸಂಬಳ ಪಡೆಯುತ್ತಾರೆ?
2022-23ನೇ ಸಾಲಿನ ಕನಿಷ್ಠ ವೇತನ ದರವನ್ನು ಆಧಾರವಾಗಿಟ್ಟುಕೊಂಡು ಈ ಸಂಬಳ ದರವನ್ನು ನಿಗದಿಪಡಿಸಲಾಗಿದ್ದು; ಮೇಲ್ಕಾಣಿಸಿದ ಪ್ರವರ್ಗಗಳ ಅಡಿಯಲ್ಲಿ ಬರುವ ಕಾರ್ಮಿಕರಿಗೆ ಈ ಕೆಳಗಿನಂತೆ ಶೇ.5 ರಿಂದ 10ರಷ್ಟು ತನಕ ಏರಿಕೆ ಮಾಡಲಾಗಿದೆ:
- ಅತಿ ಕುಶಲ ಕಾರ್ಮಿಕರು: ಪ್ರತಿದಿ ₹1,316, ತಿಂಗಳಿಗೆ ₹34,225
- ಕುಶಲ ಕಾರ್ಮಿಕರು: ಪ್ರತಿದಿನ ₹1,196, ತಿಂಗಳಿಗೆ ₹31,114
- ಅರೆ ಕುಶಲ ಕಾರ್ಮಿಕರು: ಪ್ರತಿದಿನ ₹1,087, ತಿಂಗಳಿಗೆ ₹28,285
- ಅಕುಶಲ ಕಾರ್ಮಿಕರು: ಪ್ರತಿದಿ ₹989, ತಿಂಗಳಿಗೆ ₹25,714
ಕೋರ್ಟ್ ಆಣತಿಯ ಮೇಲೆ ಕರಡು ಅಧಿಸೂಚನೆ
ಅಂದಹಾಗೇ ರಾಜ್ಯ ಸರ್ಕಾರ ಇದೀಗ ಹೊರಡಿಸಿರುವ ಈ ಹೊಸ ಅಧಿಸೂಚನೆಯು ಏಕಾಏಕಿ ಹುಟ್ಟಿಕೊಂಡದ್ದಲ್ಲ. ಕಾರ್ಮಿಕ ಸಂಘಟನೆಗಳು ಈ ಕುರಿತು ಅನೇಕ ಬಾರಿ ಸರ್ಕಾರದ ಗಮನ ಸೆಳೆದಿದ್ದವು. ಎಐಟಿಯುಸಿ (All India Trade Union Congress- AITUC) ಕಾರ್ಮಿಕ ಸಂಘವು 2023ರಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಹೈಕೋರ್ಟ್ ಈ ಅರ್ಜಿಯನ್ನು ಪರಿಗಣಿಸಿ, ರಾಜ್ಯ ಸರ್ಕಾರಕ್ಕೆ ಕನಿಷ್ಠ ವೇತನವನ್ನು ಪರಿಷ್ಕರಿಸುವಂತೆ ನಿರ್ದೇಶನ ನೀಡಿತ್ತು.
ಈ ತೀರ್ಪು ವಿರುದ್ಧ ಸರಕಾರ ಹಾಗೂ ಉದ್ಯಮ ವಲಯದವರು ಮೇಲ್ಮನವಿ ಸಲ್ಲಿಸಿದರೂ, ವಿಭಾಗೀಯ ಪೀಠ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ, ಸರಿಯಾದ ನಿಯಮಾನುಸಾರ 10 ವಾರಗಳೊಳಗೆ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು.ಅದರಂತೆ ಈಗ ಕಾರ್ಮಿಕ ಇಲಾಖೆ ಈ ತಾತ್ಕಾಲಿಕ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿದೆ.
ಈ ಅಧಿಸೂಚನೆ ಕುರಿತು ಯಾವುದೇ ಆಕ್ಷೇಪಣೆ, ಸಲಹೆ ಅಥವಾ ಅಭಿಪ್ರಾಯ ಇದ್ದಲ್ಲಿ, ಸಾರ್ವಜನಿಕರು ಮತ್ತು ಉದ್ಯಮಸ್ಥರು ಕಾರ್ಮಿಕ ಇಲಾಖೆ ಸಮೀಕ್ಷಾ ವೇದಿಕೆ ಅಥವಾ ಕಚೇರಿಗೆ ನೇರವಾಗಿ ಸಲ್ಲಿಸಬಹುದು. ಈ ಅಭಿಪ್ರಾಯಗಳು ಪರಿಶೀಲನೆಗೊಳ್ಳಲಿದ್ದು, ಅಂತಿಮ ಅಧಿಸೂಚನೆ ರೂಪುಗೊಳ್ಳುವ ಸಂದರ್ಭದಲ್ಲಿ ಪರಿಗಣಿಸಲ್ಪಡಲಿದೆ.
BPL Ration Card- 2.86 ಲಕ್ಷ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ | ಆಹಾರ ಇಲಾಖೆಯ ಮಹತ್ವದ ಮಾಹಿತಿ ಇಲ್ಲಿದೆ…
ಕಾರ್ಮಿಕರ ಜೀವನಮಟ್ಟ ಸುಧಾರಣೆ
ಈ ವೇತನ ಏರಿಕೆಯಿಂದ ಕಾರ್ಮಿಕರ ಜೀವನಮಟ್ಟ ಸುಧಾರಣೆಗೆ ಅನುಕೂಲವಾಗಲಿದೆ. ಸ್ಮಾರ್ಟ್ ನಗರ ಯೋಜನೆಗಳಲ್ಲಿ ತೊಡಗಿರುವ ಕಾರ್ಮಿಕರ ನೆಲೆ ಭದ್ರತೆಗೆ ಸಹಕಾರಿಯಾಗುತ್ತದೆ. ಕಾರ್ಮಿಕರ ಆರ್ಥಿಕ ಶಕ್ತಿ ಮತ್ತು ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಾರ್ಮಿಕರಿಗೆ ಗೌರವಯುತ ಜೀವನ ಮತ್ತು ಸುರಕ್ಷಿತ ಉದ್ಯೋಗದ ಭರವಸೆಯನ್ನು ನೀಡುತ್ತದೆ.
ಕರ್ನಾಟಕ ಸರ್ಕಾರದ ಈ ಹೊಸ ತೀರ್ಮಾನವು ಕಾರ್ಮಿಕರ ಪರವಾಗಿ ತೆಗೆದುಕೊಳ್ಳಲಾದ ಮಹತ್ತರ ಹೆಜ್ಜೆಯಾಗಿದೆ. ಮಾನವೀಯತೆ, ನ್ಯಾಯ ಮತ್ತು ಸಮಾನತೆಯ ಪರಿಕಲ್ಪನೆಯಲ್ಲಿ ಈ ಕ್ರಮ ನಿಜಕ್ಕೂ ಪ್ರಶಂಸನೀಯ. ಈ ಅಧಿಸೂಚನೆ ತ್ವರಿತವಾಗಿ ಜಾರಿಗೆ ಬಂದು, ಶ್ರಮಿಕರಿಗೆ ನಿಜವಾದ ಗೌರವ ದೊರೆಯಲಿ ಎಂಬುದೇ ಎಲ್ಲರ ಆಶಯ.
ಕರ್ನಾಟಕ ರಾಜ್ಯ ಕಾರ್ಮಿಕ ಇಲಾಖೆ ಹೊರಡಿಸಿರುವ ಕರುಡು ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ…
ಈ ಜಿಲ್ಲೆಗಳ 917 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, PUC ಪಾಸಾದ ಮಹಿಳೆಯರಿಗೆ ಭರ್ಜರಿ ಅವಕಾಶ