Karnataka Jatiganati Mobile Self Survey- ಮೊಬೈಲ್‌ನಲ್ಲಿ ನೀವೇ ಮಾಡಿಕೊಳ್ಳಿ ಜಾತಿಗಣತಿ ಸಮೀಕ್ಷೆ | ನೇರ ಲಿಂಕ್ ಇಲ್ಲಿದೆ…
Karnataka Jatiganati Mobile Self Survey 2025

ಜಾತಿಗಣತಿ ಕಾರ್ಯ ತ್ವರಿತಗೊಳಿಸಲು ರಾಜ್ಯ ಸರ್ಕಾರ ಸ್ವಯಂ ಸಮೀಕ್ಷೆಗೆ ಅವಕಾಶ ಕಲ್ಪಿಸಿದೆ. ನಾಗರಿಕರು ತಮ್ಮ ಮೊಬೈಲ್’ನಲ್ಲೇ ಸ್ವಯಂ ಸಮೀಕ್ಷೆ ಮಾಡಬಹುದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿ ಜಾತಿ ಗಣತಿ ಅರ್ಥಾತ್ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025ರ (Karnataka Social and Educational Survey 2025) ಕಾರ್ಯ ಚುರುಕು ಪಡೆದುಕೊಂಡಿದೆ. ರಾಜ್ಯಾದ್ಯಂತ ಶಿಕ್ಷಕ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಕೆಲವು ತಾಂತ್ರಿಕ ದೋಷದ ಕಾರಣದಿಂದ ಗಣತಿ ಕಾರ್ಯ ನಿಧಾನವಾಗುತ್ತಿದೆ ಎಂಬ ದೂರುಗಳಿವೆ.
ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ನಿಗದಿತ ಅವಧಿಯೊಳಗೆ ಸಮೀಕ್ಷೆ ಪೂರ್ಣಗೊಳಿಸುವ ಬದ್ಧತೆಯಿಂದ ಇದೀಗ ಸ್ವತಃ ನಾಗರಿಕರೇ ತಮ್ಮ ಮೊಬೈಲ್‌ನಲ್ಲಿ ಸ್ವಯಂ ಸಮೀಕ್ಷೆಯಲ್ಲಿ (Mobile Self Survey) ಭಾಗಿಯಾಗಲು ಅವಕಾಶ ಕಲ್ಪಿಸಿದೆ.
ಸಮೀಕ್ಷೆಗೆ ಬೇಕಾಗುವ ಅಗತ್ಯ ದಾಖಲೆಗಳು
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ಇದೇ ಅಕ್ಟೋಬರ್ 07, 2025 ಕೊನೆಯ ದಿನಾಂಕವಾಗಿದ್ದು; ಸಮೀಕ್ಷೆಗೆ ಈ ಕೆಳಗಿನ ದಾಖಲೆಗಳು ಅಗತ್ಯವಾಗಿವೆ:
- ಆಧಾರ್ ಕಾರ್ಡ್
- ರೇಶನ್ ಕಾರ್ಡ್
- ಮನೆಯ ಸದಸ್ಯರ ಆಧಾರ್ ಕಾರ್ಡ್
- ಮೊಬೈಲ್ ನಂಬರ್

ಮೊಬೈಲ್’ನಲ್ಲೇ ಸಮೀಕ್ಷೆ ಮಾಡುವುದು ಹೇಗೆ?
ಸಾರ್ವಜನಿಕರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಮೊಬೈಲ್’ನಲ್ಲಿಯೇ ಸ್ವಯಂ ಸಮೀಕ್ಷಾ ಕಾರ್ಯಕ್ಕೆ ಮಾಹಿತಿ ಒದಗಿಸಬಹುದಾಗಿದೆ.
ಇದಕ್ಕಾಗಿ ಮೊದಲಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಜಾಲತಾಣವನ್ನು ಪ್ರವೇಶ ಮಾಡಬೇಕು. ಆಯೋಗದ ನೇರ ಲಿಂಕ್ ಅನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸರ್ಕಾರದ ಅಧಿಕೃತ ಜಾಲತಾಣ ತೆರೆದುಕೊಳ್ಳುತ್ತದೆ.
ನಿಮ್ಮ ಮಾಹಿತಿ ಭರ್ತಿ ಮಾಡಿ
ಮುಖಪುಟದಲ್ಲಿ ‘ಲಾಗಿನ್ ಆಯ್ಕೆ ಮಾಡಿ / Choose Login’ ಕೆಳಗೆ ‘ಸಮೀಕ್ಷೆದಾರ / Enumerator’ ಹಾಗೂ ‘ನಾಗರಿಕ / Citizen’ ಎಂಬ ಎರಡು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ‘ನಾಗರಿಕ / Citizen’ ಆಪ್ಷನ್ ಆಯ್ಕೆ ಮಾಡಿಕೊಳ್ಳಿ.
ಬಳಿಕ ನಿಮ್ಮ ಹತ್ತು ಸಂಖ್ಯೆಯ ಮೊಬೈಲ್ ನಂಬರ್ ನಮೂದಿಸಿ. ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಬರುವ OTP ಟೈಪ್ ಮಾಡಿ ಮುಂದುವರೆಯಿರಿ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ – ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ – 2025 ಪುಟದಲ್ಲಿ ಮಾಹಿತಿ ಫಾರಂ ತೆರೆದುಕೊಳ್ಳುತ್ತದೆ.
ಅಲ್ಲಿ ಮೊದಲಿಗೆ ನಿಮ್ಮ ಮನೆಗೆ ಅಂಟಿಸಿ ಹೋದ UHID ನಂಬರ್ ನಮೂದಿಸಿ. ಬಳಿಕ ರೇಷನ್ ಕಾರ್ಡ್ ಅಥವಾ ಆಧಾರ ಕಾರ್ಡ್ ನಂಬರ್ ದಾಖಲಿಸಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಕೊನೆಯಲ್ಲಿ Submit ಕ್ಲಿಕ್ ಮಾಡುವ ಮೂಲಕ ಸ್ವಯಂ ಸಮೀಕ್ಷೆ ಪೂರ್ಣಗೊಳಿಸಬಹುದಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸ್ವಯಂ ಸಮೀಕ್ಷೆ ನೇರ ಲಿಂಕ್: kscbcselfdeclaration.karnataka.gov.in