ಕರ್ನಾಟಕದಲ್ಲಿ ಮುಂಗಾರು ಮಳೆ ರಭಸ ಜೋರಾಗಿದ್ದು; ಈ ವಾರ ಪೂರ್ತಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯ ಜಿಲ್ಲಾವಾರು ವಿವರ ಇಲ್ಲಿದೆ…
ರಾಜ್ಯಾದ್ಯಂತ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಕರಾವಳಿ, ಮಲೆನಾಡು, ದಕ್ಷಿಣ ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಜುಲೈ 27ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತ ಹವಾಮಾನ ಇಲಾಖೆ (IMD) ಹಲವೆಡೆ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರಾವಳಿ ಪ್ರದೇಶ – ಆರೆಂಜ್ ಅಲರ್ಟ್
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸತತ ಮಳೆ ಮುಂದುವರೆದಿದ್ದು, ಕೆಲವು ಪ್ರದೇಶಗಳಲ್ಲಿ ಮಳೆ ಪ್ರಮಾಣ 10 ಸೆಂ.ಮೀ. ದಾಟಿದೆ. ಇದರಿಂದ ಸಮುದ್ರದ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಮೀನುಗಾರರಿಗೆ ಸಮುದ್ರ ಪ್ರವೇಶ ನಿಷೇಧ ವಿಧಿಸಲಾಗಿದೆ.
New Ration Card Applications- ಹೊಸ ರೇಷನ್ ಕಾರ್ಡ್ ಅರ್ಜಿ | ಜಿಲ್ಲಾವಾರು ಅರ್ಜಿದಾರರ ಮಾಹಿತಿ ಇಲ್ಲಿದೆ…
ಮಲೆನಾಡು ಪ್ರದೇಶ – ಭಾರಿ ಮಳೆಯ ಮುನ್ಸೂಚನೆ
ಚಿಕ್ಕಮಗಳೂರು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಮುಂಗಾರು ಹಂತದಲ್ಲಿಯೇ ಭಾರೀ ಮಳೆ ಆರಂಭವಾಗಿದೆ. ಇಲ್ಲಿಯ ಮಳೆ ಪ್ರಮಾಣವು 5 ಸೆಂ.ಮೀ. ವರೆಗೆ ದಾಖಲಾಗಿದ್ದು, ಜುಲೈ 27ರ ವರೆಗೆ ಮಳೆಯ ಮುನ್ಸೂಚನೆ ಇದೆ.

ದಕ್ಷಿಣ ಒಳನಾಡು ಜಿಲ್ಲೆಗಳು – ಯೆಲ್ಲೋ ಅಲರ್ಟ್
ಕೋಲಾರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ವರೆಗೆ (ಜುಲೈ 21-22) ಮಿತ ಮಳೆಯಾಗಲಿದೆ. ಆದರೆ, ಮೋಡ ಕವಿದ ವಾತಾವರಣದಿಂದ ಸಂಜೆ-ರಾತ್ರಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ
ಜುಲೈ 22ರಿಂದ 23ರ ವರೆಗೆ ಭಾರೀ ಮಳೆಯ ಮುನ್ಸೂಚನೆ ಇದೆ. ಮೋಡ ಕವಿದ ವಾತಾವರಣ, ಗಂಟೆಗೆ 30-40 ಕಿಮೀ ವೇಗದ ಗಾಳಿ ಇರಲಿದ್ದು; ತಾಪಮಾನವು ಗರಿಷ್ಠ 29ಲಿಅ, ಕನಿಷ್ಠ 20ಲಿಅ ಇರಲಿದೆ. ಕೆಲವು ಪ್ರದೇಶಗಳಲ್ಲಿ ಮಳೆಗಿಂತ ಹೆಚ್ಚು ಗಾಳಿ ಬೀಸುವ ಸಾಧ್ಯತೆ ಇದೆ.
ವಾಯುವ್ಯ ಹಾಗೂ ಉತ್ತರ ಕರ್ನಾಟಕ
ಗದಗ, ರಾಯಚೂರು, ಯಾದಗಿರಿ, ಹಾವೇರಿ, ವಿಜಯಪುರ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಮುಂದುವರೆಯಲಿದೆ. ಗಂಟೆಗೆ 40-50 ಕಿಮೀ ವೇಗದ ಗಾಳಿಯ ಮುನ್ಸೂಚನೆ ಇದ್ದು; ಮೋಡ, ಶೀತ ವಾತಾವರಣ ಇರಲಿದೆ.
ಈ ಬಾರಿ ಮುಂಗಾರು ಕರ್ನಾಟಕದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಿದ್ದು, ಆಯಾ ಪ್ರದೇಶದ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಹವಾಮಾನ ಇಲಾಖೆಯ ಸೂಚನೆಗಳನ್ನು ಗಮನಿಸಿ, ಸಾರ್ವಜನಿಕರು ಸುರಕ್ಷಿತವಾಗಿರುವುದು ಅಗತ್ಯವಾಗಿದೆ.