
ಕರ್ನಾಟಕ ಗ್ರಾಮೀಣ ಬ್ಯಾಂಕಿನ 1,425 ಹುದ್ದೆಗಳ ಭರ್ತಿಗೆ (Karnataka Gramin Bank Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಎಲ್ಲ ಹಂತದ, ಎಲ್ಲ ರೀತಿಯ ವಿದ್ಯಾರ್ಹತೆಗೂ ಅವಕಾಶವಿದ್ದು; ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸೇರಿ ದೇಶದ ಒಟ್ಟು 28 ಗ್ರಾಮೀಣ ಬ್ಯಾಂಕುಗಳಲ್ಲಿ (RRB) ಖಾಲಿ ಇರುವ 13,217 ಹುದ್ದೆಗಳ ಭರ್ತಿ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (Institute of Banking Personnel Selection- IBPS) ಅರ್ಜಿ ಆಹ್ವಾನಿಸಿದೆ. ಇದು ಪದವೀಧರರಿಗೆ ಭರ್ಜರಿ ಅವಕಾಶವಾಗಿದೆ.
ರಾಜ್ಯದಲ್ಲಿ 1,425 ಹುದ್ದೆಗಳ ನೇಮಕಾತಿ
ದೇಶದಲ್ಲಿ ಒಟ್ಟು 13,217 ಹುದ್ದೆಗಳಿದ್ದು; ಕರ್ನಾಟಕದಲ್ಲಿ ಬರೋಬ್ಬರಿ 1,425 ಹುದ್ದೆಗಳ ನೇಮಕಾತಿ ನಡೆಯಲಿದೆ. ರಾಜ್ಯದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕುಗಳು ವಿಲೀನಗೊಂಡು ಇದೀಗ ‘ಕರ್ನಾಟಕ ಗ್ರಾಮೀಣ ಬ್ಯಾಂಕ್’ ಆಗಿದೆ. ಇದರ ಕೇಂದ್ರ ಕಚೇರಿ ಬಳ್ಳಾರಿಯಲ್ಲಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್ ರಾಜ್ಯಾದ್ಯಂತ ಸಾವಿರಾರು ಶಾಖೆಗಳು ವಿಸ್ತರಿಸಿಕೊಂಡಿದ್ದು ಈ ಪೈಕಿ ರಾಜ್ಯದ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್), ಆಫೀಸರ್ ಸ್ಕೇಲ್ 1, ಸ್ಕೇಲ್ 2 ಹಾಗೂ ಸ್ಕೇಲ್ 3 ಹುದ್ದೆಗಳ ನೇಮಕಾತಿ ನಡೆಯಲಿದೆ. ವಿಶೇಷವೆಂದರೆ ಎಲ್ಲ ಹಂತದ, ಎಲ್ಲ ರೀತಿಯ ವಿದ್ಯಾರ್ಹತೆಗೂ ಉದ್ಯೋಗಾವಕಾಶಗಳು ಇದರಲ್ಲಿವೆ.
ಹುದ್ದೆಗಳ ವಿವರ
- ಆಫೀಸ್ ಅಸಿಸ್ಟೆಂಟ್: 800
- ಆಫೀಸರ್ ಸ್ಕೇಲ್ 1: 500
- ಆಫೀಸರ್ ಸ್ಟೇಲ್ 2: 75
- ಆಫೀಸರ್ (ಐಟಿ): 10
- ಆಫೀಸರ್ (ಸಿಎ): 01
- ಆಫೀಸರ್ (ಕಾನೂನು): 05
- ಆಫೀಸರ್ (ಕೃಷಿ): 34
- ಒಟ್ಟು ಹುದ್ದೆಗಳು: 1,425

ವಯೋಮಿತಿ ವಿವರ
- ಗ್ರೂಪ್ ಬಿ ಹುದ್ದೆಗೆ (ಆಫೀಸ್ ಅಸಿಸ್ಟೆಂಟ್ ) 18-28 ವರ್ಷದ ಒಳಗಿನವರಾಗಿರಬೇಕು. 2-9-1997 ಹಾಗೂ 2-9-2007ರ ನಡುವೆ ಜನಿಸಿರಬೇಕು.
- ಅಸಿಸ್ಟೆಂಟ್ ಮ್ಯಾನೇಜರ್ ಸ್ಕೇಲ್ 1 ಹುದ್ದೆಗೆ 18ರಿಂದ 30 ವರ್ಷದೊಳಗಿರಬೇಕು. 2-9-1995 ಹಾಗೂ 2-9-2007ರ ನಡುವೆ ಜನಿಸಿರಬೇಕು.
- ಸ್ಕೇಲ್-2 ಆಫೀಸರ್ ಹುದ್ದೆಗೆ 21-32 ವರ್ಷದೊಳಗಿರಬೇಕು. ಸ್ಕೇಲ್-3 ಆಫೀಸರ್ (ಸೀನಿಯರ್ ಮ್ಯಾನೇಜರ್) 21-40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ.
- ಮೀಸಲಾತಿ ಅನ್ವಯ ವಿವಿಧ ವರ್ಗಗಳಿಗೆ ವಯೋಮಿತಿಯಲ್ಲಿ 3ರಿಂದ 10 ವರ್ಷಗಳ ವಿನಾಯ್ತಿ ಇರಲಿದೆ.
ವಿದ್ಯಾರ್ಹತೆ ವಿವರ
ಕನಿಷ್ಠ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಫೀಸರ್ ಸ್ಕೇಲ್-2ರ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಅಪೇಕ್ಷಿಸಲಾಗಿದೆ. ಕೆಲ ಹುದ್ದೆಗಳಿಗೆ ಅನುಭವವನ್ನು ಕೋರಲಾಗಿದೆ.
ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ
ಆಯಾ ರಾಜ್ಯದ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಸ್ಥಳೀಯ ಭಾಷೆಯನ್ನು ಬಲ್ಲವರಾಗಿರಬೇಕು. ಮ್ಯಾನೇಜರ್ ಹಾಗೂ ಆಫೀಸ್ ಅಸಿಸ್ಟೆಂಟ್‌ಗಳ ರಾಜ್ಯದ ಹುದ್ದೆಗಳಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದು.
ಇತರ ಭಾಷೆಗಳ ಪರಿಚಯವಿದ್ದರೆ ಬೇರೆ ರಾಜ್ಯಗಳ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದು. ಆದರೆ, ಅವುಗಳಿಗೆ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ. ಮೇಲ್ಮಟ್ಟದ ಹುದ್ದೆಗಳಿಗೆ ಎರಡು ಹಂತದ ಹಾಗೂ ಉಳಿದವುಗಳಿಗೆ ಒಂದೇ ಹಂತದ ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ.
ಆಫೀಸರ್ ಸ್ಕೇಲ್-1, 2 ಹಾಗೂ 3ರ ಹುದ್ದೆಗಳಿಗೆ 100 ಅಂಕಗಳಿಗಾಗಿ ಸಂದರ್ಶನ ನಡೆಸಲಾಗುತ್ತದೆ. ಎರಡೂ ಹಂತದ ಪರೀಕ್ಷೆಯಲ್ಲಿ ಅರ್ಹತೆ ಪಡೆದು ಹೆಚ್ಚು ಅಂಕ ಗಳಿಸಿದವರನ್ನು ಅಯಾ ರಾಜ್ಯದ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
ರಾಜ್ಯದಲ್ಲಿ ಪರೀಕ್ಷಾ ಕೇಂದ್ರಗಳು
ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21-09-2025
- ಶುಲ್ಕ ಪಾವತಿಸಲು ಕೊನೆಯ ದಿನ: 21-09-2025
- ಪರೀಕ್ಷಾ ಪೂರ್ವ ತರಬೇತಿ ನಿಗದಿ: ನವೆಂಬರ್ 2025
- ಪೂರ್ವಭಾವಿ ಪರೀಕ್ಷೆಗೆ ಪ್ರವೇಶಪತ್ರ: ನವೆಂಬರ್/ಡಿಸೆಂಬರ್ 2025
- ಪೂರ್ವಭಾವಿ ಪರೀಕ್ಷೆಗೆ ಸಂಭಾವ್ಯ ಅವಧಿ: ನವೆಂಬರ್/ಡಿಸೆಂಬರ್ 2025
- ಆನ್‌ಲೈನ್ ಪರೀಕ್ಷೆಯ ಫಲಿತಾಂಶ: ಡಿಸೆಂಬರ್ 2025-ಜನವರಿ-2026
- ಮುಖ್ಯ ಪರೀಕ್ಷೆ ಸಂಭಾವ್ಯ ಅವಧಿ: ಡಿಸೆಂಬರ್ 2025- ಜನವರಿ 2026
- ಮುಖ್ಯ ಪರೀಕ್ಷೆ ಫಲಿತಾಂಶ: ಜನವರಿ 2026
- ಸಂದರ್ಶನಕ್ಕೆ ಪ್ರವೇಶಪತ್ರ: ಜನವರಿ 2026
- ತಾತ್ಕಾಲಿಕ ನೇಮಕಾತಿ ಪತ್ರ ವಿತರಣೆ: ಫೆಬ್ರವರಿ/ ಮಾರ್ಚ್ 2026
ಅಧಿಸೂಚನೆ: Download
ಅರ್ಜಿ ಲಿಂಕ್: ibps.in