Karnataka Govt Vacancy List : ಈಚೆಗಷ್ಟೇ ರಾಜ್ಯ ಸರ್ಕಾರಿ ನೌಕರರ (Karnataka Govt Employees) ಪ್ರಮುಖ ಬೇಡಿಕೆಯಾಗಿದ್ದ 7ನೇ ವೇತನ ಆಯೋಗ (7th Pay Commission) ಜಾರಿಯಾಗಿದೆ. ಇದೇ ಆಗಸ್ಟ್’ನಿಂದ ನೌಕರರ ವೇತನ, ಪಿಂಚಣಿ ಮತ್ತು ಇತರ ಸವಲತ್ತುಗಳು ಏರಿಕೆಯಾಗಿವೆ. ಆದರೆ ಖಾಲಿ ಹುದ್ದೆಗಳ ಭರ್ತಿ ಕೂಡ ನೌಕರರ ಮಹತ್ವದ ಬೇಡಿಕೆಯಾಗಿದ್ದು; ಈ ಬಗ್ಗೆಯೂ ಕಾಲಕಾಲಕ್ಕೆ ಮನವಿ, ಹೋರಾಟಗಳು ನಡೆಯುತ್ತ ಬಂದಿವೆ.
ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಅಂಕಿ-ಅ೦ಶಗಳ ಪ್ರಕಾರ 2023-24ನೇ ಸಾಲಿನಲ್ಲಿ ಒಟ್ಟು 22,55,920 ರಾಜ್ಯ ಸರ್ಕಾರಿ ಖಾಲಿ ಹುದ್ದೆಗಳಿವೆ. ರಾಜ್ಯದಲ್ಲಿ ಶೇ.33ರಷ್ಟು ಖಾಲಿ ಹುದ್ದೆಗಳಿದ್ದು; ಈ ಹುದ್ದೆಗಳು ಭರ್ತಿಯಾಗದೇ ಇರುವುದರಿಂದ ಬಹುತೇಕ ನೌಕರರ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿರುವ ಖಾಲಿ ಹುದ್ದೆಗಳ ವಿವರ
ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ 255 ಪುಟಗಳ ಸಂಪುಟ-1ರ ವರದಿಯಲ್ಲಿ ಹಲವಾರು ಅಂಶಗಳನ್ನು ಸರ್ಕಾರದ ಗಮನಕ್ಕೆ ತಂದಿದೆ. ಖಾಲಿ ಹುದ್ದೆಗಳ ಅಂಕಿ-ಅ೦ಶಗಳ ಸಹಿತ ವಿವರವಾದ ಮಾಹಿತಿಯನ್ನು ಕೂಡ ಒದಗಿಸಲಾಗಿದೆ. 7ನೇ ವೇತನ ಆಯೋಗದ ವರದಿಯ ಪ್ರಕಾರ ರಾಜ್ಯ ಸರ್ಕಾರದ ಹುದ್ದೆಗಳ ವಿವರ ಈ ಕೆಳಗಿನಂತಿದೆ:
- ಒಟ್ಟು ಮಂಜೂರಾದ ಹುದ್ದೆಗಳು : 7,72,025
- ಪ್ರಸ್ತುತ ಕಾರ್ಯನಿರತ ನೌಕರರು : 5,16,105
- ಒಟ್ಟು ಖಾಲಿ ಹುದ್ದೆಗಳು : 2,55,920
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees

ರಾಜ್ಯ ಸರ್ಕಾರದ ವೃಂದಗಳು ಮತ್ತು ಹುದ್ದೆಗಳು
ರಾಜ್ಯ ಸರ್ಕಾರದಲ್ಲಿ ಒಟ್ಟು 94 ಇಲಾಖೆಗಳಿದ್ದು, 2,500 ವೃಂದಗಳು ಮತ್ತು 7,72,025 ಮಂಜೂರಾದ ಹುದ್ದೆಗಳಿರುತ್ತದೆ. ಸರ್ಕಾರಿ ನೌಕರರ ಒಟ್ಟು ಕಾರ್ಯಬಲದಲ್ಲಿ ಶಿಕ್ಷಣ, ಒಳಾಡಳಿತ ಮತ್ತು ಆರೋಗ್ಯ ಇಲಾಖೆಗಳು ಒಟ್ಟಾಗಿ ಅಂದಾಜು ಶೇ.73 ರಷ್ಟು ಸಿಬ್ಬಂದಿ ಸಂಖ್ಯಾಬಲವನ್ನು ಹೊಂದಿದ್ದರೆ, ಇತರೆ ಎಲ್ಲಾ ಇಲಾಖೆಗಳು ಉಳಿದ ಶೇ.27 ರಷ್ಟು ಸಿಬ್ಬಂದಿ ಸಂಖ್ಯಾಬಲವನ್ನು ಹೊಂದಿರುತ್ತವೆ. ಈ ಪ್ರಮುಖ ಇಲಾಖೆಗಳ ಮಂಜೂರಾದ ಹುದ್ದೆಗಳ ಸಂಖ್ಯೆ ಮತ್ತು ಪ್ರಸ್ತುತ ಇರುವ ನೌಕರರ ಕಾರ್ಯಬಲ (31-03-2023ರಂತೆ) ಈ ಕೆಳಗಿನಂತಿದೆ:
ಶಿಕ್ಷಣ ಇಲಾಖೆ
ಮಂಜೂರಾದ ಹುದ್ದೆಗಳು : 3,08,860
ಕಾರ್ಯನಿರತ ನೌಕರರು: 2,33,702
ಗೃಹ ಇಲಾಖೆ
ಮಂಜೂರಾದ ಹುದ್ದೆಗಳು : 1,27,481
ಕಾರ್ಯನಿರತ ನೌಕರರು: 1,05,412
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಮಂಜೂರಾದ ಹುದ್ದೆಗಳು : 74,799
ಕಾರ್ಯನಿರತ ನೌಕರರು: 39,603
ಇತರೆ ಇಲಾಖೆಗಳು
ಮಂಜೂರಾದ ಹುದ್ದೆಗಳು : 2,60,885
ಕಾರ್ಯನಿರತ ನೌಕರರು: 1,37,388
ಒಟ್ಟು ಹುದ್ದೆಗಳು
ಮಂಜೂರಾದ ಹುದ್ದೆಗಳು : 7,72,022
ಕಾರ್ಯನಿರತ ನೌಕರರು : 5,16,105
2017-18 ಮತ್ತು 2023-24ರಲ್ಲಿ ಇಲಾಖಾವಾರು ಸರ್ಕಾರಿ ಸಿಬ್ಬಂದಿ ವಿವರ

Source: 7th Commission Volume-1

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.