ಸರ್ಕಾರಿ ನೌಕರರ ವರ್ಗಾವಣೆ ಅವಧಿಯನ್ನು (Karnataka Govt Employees Transfer) ರಾಜ್ಯ ಸರ್ಕಾರ ವಿಸ್ತರಿಸಿ ಆದೇಶ ಹೊರಡಿಸಿದೆ. ವರ್ಗಾವಣೆಯ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು; ಈ ಕುರಿತ ಮಾಹಿತಿ ಇಲ್ಲಿದೆ…
2025-26ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ನಿರೀಕ್ಷೆಯಲ್ಲಿದ್ದ ಸಾವಿರಾರು ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ. ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ಕಳೆದ ಜೂನ್ 14ಕ್ಕೆ ಮುಕ್ತಾಯವಾಗಿದ್ದು; ರಾಜ್ಯ ಸರ್ಕಾರ ಈಗ ವರ್ಗಾವಣೆ ಅವಧಿಯನ್ನು ಜೂನ್ 30, 2025ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಭಾ ಕೆ. ಅವರು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಈ ಆದೇಶವು ನಿಗದಿತ ಅವಧಿಯೊಳಗೆ ವರ್ಗಾವಣೆ ಪ್ರಕ್ರಿಯೆ ಆಗದ ಬಹಳಷ್ಟು ನೌಕರರಿಗೆ ಸುವರ್ಣಾವಕಾಶವಾಗಿದೆ.
ವರ್ಗಾವಣೆಗೆ ಮತ್ತೊಂದು ಅವಕಾಶ
ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ, ಸರ್ಕಾರಿ ಇಲಾಖೆಗಳಲ್ಲಿನ ನೌಕರರ ವರ್ಗಾವಣೆಯನ್ನು ಸುಧಾರಿತ ಸೇವಾ ವಾತಾವರಣಕ್ಕಾಗಿ ಹಾಗೂ ನಿರ್ವಹಣಾ ಸುಧಾರಣೆಗೆ ನೆರವಾಗುವಂತೆ ಕೈಗೊಳ್ಳಲಾಗುತ್ತದೆ. ಈ ವರ್ಷದ ವರ್ಗಾವಣೆ ಪ್ರಕ್ರಿಯೆಯು ಮೇ 12ರಿಂದ ಆರಂಭಗೊಂಡಿತ್ತು. ಕಳೆದ ಜೂನ್ 14ರೊಳಗೆ ಮುಕ್ತಾಯಗೊಂಡಿದೆ.
ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ವರ್ಗಾವಣೆಗಳು ಆಗದೇ ಉಳಿದ ಹಿನ್ನೆಲೆಯಲ್ಲಿ, ಈಗ ಹೊಂದಿಕೊಂಡಿರುವ ಮಾರ್ಗಸೂಚಿಯಲ್ಲಿಯೇ ಉಳಿಸಿ, ಜೂನ್ 30ರ ವರೆಗೆ ಅವಧಿ ವಿಸ್ತರಿಸಿ ಮತ್ತೊಂದು ಅವಕಾಶ ನೀಡಲಾಗಿದೆ.
ಅಧಿಕೃತ ನಿಯಮಾವಳಿಗಳ ಪ್ರಕಾರ ಅಧಿಕಾರ ವಹಿಸುವಿಕೆ
2025-26ನೇ ಸಾಲಿನ ಸರಕಾರಿ ಆದೇಶದ ಪ್ರಕಾರ, ವರ್ಗಾವಣೆಗಳಿಗೆ ಸಂಬAಧಿತ ಅಧಿಕಾರವನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ:
- ಗ್ರೂಪ್-ಎ ಮತ್ತು ಗ್ರೂಪ್-ಬಿ ಅಧಿಕಾರಿಗಳ ವರ್ಗಾವಣೆಯನ್ನು ಸಂಬಂಧಿತ ಇಲಾಖೆಯ ಸಚಿವರಿಗೆ ವಹಿಸಲಾಗಿದೆ.
- ಗ್ರೂಪ್-ಸಿ ಮತ್ತು ಗ್ರೂಪ್-ಡಿ ನೌಕರರ ವರ್ಗಾವಣೆಯನ್ನು ಸಂಬಂಧಿತ ನೇಮಕಾತಿ ಪ್ರಾಧಿಕಾರಗಳಿಗೆ ವಹಿಸಲಾಗಿದೆ.
Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…

ವರ್ಗಾವಣೆ ಮಾರ್ಗಸೂಚಿಗಳ ಪಾಲನೆಗೆ ಸೂಚನೆ
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಎಲ್ಲ ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ನಿರ್ದೇಶಕರು ಹಾಗೂ ನೌಕರಿ ವ್ಯವಸ್ಥಾಪಕರಿಗೆ, ವರ್ಗಾವಣೆ ವೇಳೆ ಕರಾರುವಾಕ್ಕಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಕೆಲವು ಇಲಾಖೆಗಳು ನಿಗದಿತ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವರ್ಗಾವಣೆ ಆದೇಶ ನೀಡಿದ್ದ ಕಾರಣಕ್ಕೆ ಹಲವು ಪ್ರಕರಣಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ (KAT) ದಾಖಲಾಗಿವೆ. ಹೀಗಾಗಿ ಈ ಈ ಬಾರಿ ವರ್ಗಾವಣೆ ಪ್ರಕ್ರಿಯೆಗೆ ಸರ್ಕಾರ ಮಾರ್ಗಸೂಚಿ ಪಾಲನೆಗೆ ಕಠಿಣ ಸೂಚನೆ ನೀಡಿದೆ.
ವರ್ಗಾವಣೆ ಮಾರ್ಗಸೂಚಿಯ ನಿಷಿದ್ಧ ಸೂಚನೆಗಳು
ವರ್ಗಾವಣೆಯ ವೇಳೆ ತಪ್ಪು ನಿರ್ಧಾರಗಳನ್ನು ತಪ್ಪಿಸಲು ರಾಜ್ಯ ಸರ್ಕಾರ ಈ ಕೆಳಗಿನ ಆಕ್ಷೇಪಾರ್ಹ ಕ್ರಮಗಳನ್ನು ನಿಷಿದ್ಧಗೊಳಿಸಿದೆ:
- ಕನಿಷ್ಠ ಸೇವಾವಧಿ ಪೂರ್ಣಗೊಳ್ಳದ ನೌಕರರನ್ನು ವರ್ಗಾಯಿಸುವುದು
- ನಿವೃತ್ತಿಗೆ 2 ವರ್ಷಕ್ಕಿಂತ ಕಡಿಮೆ ಬಾಕಿಯಿರುವ ನೌಕರರನ್ನು ಯಾವುದೇ ಉದ್ದೇಶವಿಲ್ಲದೇ ವರ್ಗಾಯಿಸುವುದು
- ಅವಧಿ ಪೂರ್ವ ವರ್ಗಾವಣೆಗಳಿಗೆ ಸಮರ್ಪಕ ಕಾರಣವಿಲ್ಲದೇ ಅನುಮೋದನೆ ನೀಡುವುದು
- ವಿಕಲಚೇತನ (Specially-abled) ನೌಕರರಿಗೆ ನೀಡಲಾದ ವಿನಾಯಿತಿಗಳನ್ನು ಉಲ್ಲಂಘಿಸುವುದು
- ವರ್ಗಾವಣೆ ಆದೇಶದಲ್ಲಿ ಸ್ಪಷ್ಟ ಹುದ್ದೆ ವಿವರ ನೀಡದೇ ಇರುವುದು
- ವರ್ಗಾವಣೆ ಅವಧಿ ಮುಕ್ತಾಯವಾದ ನಂತರ ಮುಖ್ಯಮಂತ್ರಿ ಅನುಮೋದನೆ ಇಲ್ಲದೇ ಆದೇಶ ಹೊರಡಿಸುವುದು
- ವಿಭಾಗೀಯ ವರ್ಗಾವಣಾ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವುದು
ಈ ಎಲ್ಲಾ ಅಂಶಗಳು ನೌಕರರ ಹಕ್ಕುಗಳನ್ನು ಹಾಗೂ ಅಧಿಕಾರಿಗಳ ಜವಾಬ್ದಾರಿಗಳನ್ನು ಸಮಾನವಾಗಿ ರಕ್ಷಿಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
ನೌಕರರು ತಿಳಿಯಬೇಕಾದ ಅಂಶಗಳು
- ಈ ಹೊಸ ಆದೇಶವು ಅನೇಕ ಅರ್ಹ ನೌಕರರಿಗೆ ಅನುಕೂಲವಾಗಲಿದೆ, ಆದರೆ ನಿಯಮ ಉಲ್ಲಂಘನೆಯು ಕಠಿಣ ಕ್ರಮಗಳಿಗೆ ಕಾರಣವಾಗಬಹುದು.
- ಅರ್ಜಿ ಸಲ್ಲಿಸಿರುವ ಅಥವಾ ವರ್ಗಾವಣೆಗೆ ನಿರೀಕ್ಷೆಯಲ್ಲಿರುವವರು ತಮ್ಮ ಸಂಬಂಧಿತ ಇಲಾಖೆಗಳ ನಿರ್ಧಾರಗಳಿಗಾಗಿ ತಕ್ಷಣ ಸಂಪರ್ಕಿಸಬೇಕು.
- ವಿಭಾಗದ ಅಧಿಕಾರಿಗಳು ಕಾನೂನುಬದ್ಧ ಹಾಗೂ ಪ್ರಮಾಣಿತ ಮಾನದಂಡಗಳ ಅನ್ವಯ ಮಾತ್ರ ವರ್ಗಾವಣೆ ಆದೇಶಗಳನ್ನು ಜಾರಿಗೆ ತರಬೇಕು.
ವರ್ಗಾವಣೆ ಅವಧಿಯ ವಿಸ್ತರಣೆ ಸರಕಾರದ ಒಂದು ತಾತ್ಕಾಲಿಕ ನಿರ್ಧಾರವಾಗಿದ್ದು, ನೌಕರರು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸರ್ಕಾರದಿಂದ ಹೊರಡಿಸಲಾದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವ ಮೂಲಕವೇ ವ್ಯವಸ್ಥಿತ ಆಡಳಿತ ಸಾಧ್ಯವಾಗುತ್ತದೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.