ನೌಕರರಿಂದ ಸರ್ಕಾರಕ್ಕೆ 3 ಬೇಡಿಕೆ ಈಡೇರಿಕೆಗೆ ಮನವಿ ಸಮರ್ಪಣೆ | ಏನೀ ಹೊಸ ಬೇಡಿಕೆಗಳು? ಸಂಪೂರ್ಣ ಮಾಹಿತಿ ಇಲ್ಲಿದೆ… Karnataka Govt employees New demands

Spread the love

Karnataka Govt employees New demands : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು (Karnataka State Government Employees Association) ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಸಹಯೋಗದೊಂದಿಗೆ ಮತ್ತೆ ಮೂರು ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರಕ್ಕೆ ಮನವಿ ಸಮರ್ಪಣೆಗೆ (Petition submission to the State Govt) ಮುಂದಾಗಿದೆ. ಈ ಸಂಬ೦ಧ ಇದೇ ಆಗಸ್ಟ್ 17ರಂದು ಬೆಂಗಳೂರಿನಲ್ಲಿ ಕಾರ್ಯಾಗಾರ (Workshop) ಏರ್ಪಡಿಸಿದ್ದು; ಈ ವೇದಿಕೆಯಲ್ಲೇ ಬೇಡಿಕೆಗಳ ಮನವಿ ಸಮರ್ಪಣೆ ಕೂಡ ನಡೆಯಲಿದೆ.

ನಮ್ಮಭಿಮಾನದ ಅಭಿನಂದನಾ ಸಮಾರಂಭ
WhatsApp Group Join Now
Telegram Group Join Now

ಈಚೇಗಷ್ಟೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬಹುಮುಖ್ಯ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ (7th pay pension) ವರದಿ ಶಿಫಾರಸುಗಳನ್ನು ಜಾರಿಗೊಳಿಸಿದೆ. ಈ ಸಂಬ೦ಧ ಈಗಾಗಲೇ ಅಧಿಕೃತ ಆದೇಶವೂ ಹೊರಬಿದ್ದಿದ್ದು; ಅದರಂತೆ ಇದೇ ಆಗಸ್ಟ್ನಿಂದ ನೌಕರರ ಸಂಬಳ, ಭತ್ಯೆ, ಪಿಂಚಣಿ ಏರಿಕೆಯಾಗಲಿದೆ.

ಸರ್ಕರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೆ ಕಾರಣೀಭೂತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಆಗಸ್ಟ್ 17ರಂದು ‘ನಮ್ಮಭಿಮಾನದ ಅಭಿನಂದನಾ ಸಮಾರಂಭ’ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯಲಿರುವ ಸದರಿ ಅಭಿನಂದನಾ ಸಮಾರಂಭ ವೇದಿಕೆಯಲ್ಲೇ ಮತ್ತೆ ಮೂರು ಬೇಡಿಕೆಗಳ ಈಡೇರಿಕೆ ಕುರಿತು ಸರ್ಕಾರಕ್ಕೆ ಮನವಿ ಸಮರ್ಪಣೆ ಪ್ರಕ್ರಿಯೆ ನಡೆಯಲಿದೆ.

Karnataka Govt employees New demands

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಎಷ್ಟೆಷ್ಟು ಸಂಬಳ ಏರಿಕೆ ಆಗಲಿದೆ? ನಿಮ್ಮ ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ… 7th Pay Commission Calculation

ಕಾರ್ಯಾಗಾರ ಮತ್ತು ಸರ್ಕಾರಕ್ಕೆ ಮನವಿ ಸಮರ್ಪಣೆ

ದಿನಾಂಕ: 17-08-2024ನೇ ಶನಿವಾರ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಈ ಕೆಳಕಂಡ ಮೂರು ಮುಖ್ಯ ಬೇಡಿಕೆಗಳ ಕುರಿತ ಕಾರ್ಯಗಾರ ನಡೆಯಲಿದೆ:

  • ಹಳೇ ಪಿಂಚಣಿ ಯೋಜನೆ ಮರು ಜಾರಿ
  • ಆರೋಗ್ಯ ಸಂಜೀವಿನಿ ಯೋಜನೆ ಜಾರಿ
  • ಪಿಎಸ್‌ಟಿ ಪದವೀಧರ ಶಿಕ್ಷಕರ ಸಿ & ಆರ್ ತಿದ್ದುಪಡಿ

ಕಾರ್ಯಾಗಾರಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ರಾಜ್ಯದ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಸದಸ್ಯರು, ಪದಾಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ. ಕಾರ್ಯಾಗಾರದಲ್ಲಿ ಭಾಗವಹಿಸುವ ಎಲ್ಲಾ ನೌಕರರಿಗೆ ಓ.ಓ.ಡಿ ಸೌಲಭ್ಯ ಕೂಡ ಇರಲಿದೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಸಿಗುವ ಪರಿಷ್ಕೃತ ಪಿಂಚಣಿ ಹಣವೆಷ್ಟು? ಮೊಬೈಲ್’ನಲ್ಲೇ ಹೀಗೆ ಚೆಕ್ ಮಾಡಿ…. 7th pay pension calculator

ನೌಕರರ ಹೊಸ ಬೇಡಿಕೆಗಳೇನು?

ಹೊಸ ಪಿಂಚಣಿ ಯೋಜನೆಯನ್ನು (Old Pension Scheme – NPS) ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು (New Pension Scheme – NPS) ಮರುಜಾರಿಗೊಳಿಸುವ ಬೇಡಿಕೆ ನೌಕರರ ಬಹುಮುಖ್ಯ ಬೇಡಿಕೆಯಾಗಿದೆ. ಇದು ರಾಜ್ಯ ಸರ್ಕಾರಿ ನೌಕರರು ಮಾತ್ರವಲ್ಲದೇ ಕೇಂದ್ರ ಸರ್ಕಾರಿ ನೌಕರರ ಬೇಡಿಕೆಯೂ ಹೌದು.

ಒಪಿಎಸ್ ಯೋಜನೆಯನ್ನು ಮರು ಸ್ಥಾಪಿಸುವಲ್ಲಿ ರಾಷ್ಟ್ರ ಮಟ್ಟದ ಬೆಳವಣಿಗೆಗಳು ಹಾಗೂ ಒಪಿಎಸ್ ಮರುಜಾರಿಯ ಸಾಧ್ಯತೆಗಳ ಕುರಿತು ಚರ್ಚೆ ನಡೆಸುವ ಮೂಲಕ ಒಪಿಎಸ್ ಮರುಜಾರಿಗೊಳಿಸುವಂತೆ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಲು ರಾಜ್ಯ ಸರ್ಕಾರಿ ನೌಕರರು ಮುಂದಾಗಿದ್ದಾರೆ.

ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಆಗಸ್ಟ್’ನಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿ | ಯಾರಿಗೆಲ್ಲ ಸಿಗಲಿದೆ ಉಚಿತ ಚಿಕಿತ್ಸೆ? Karnataka Arogya Sanjeevini Scheme

ಕರ್ನಾಟಕ ಆರೋಗ್ಯ ಸಂಜೀವಿನಿ ಜಾರಿ

‘ಕರ್ನಾಟಕ ಆರೋಗ್ಯ ಸಂಜೀವಿನಿ’ ಯೋಜನೆಯಡಿ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ಅಂದರೆ ಸಂಪೂರ್ಣ ಉಚಿತ ವೈದ್ಯಕೀಯ ಸೌಲಭ್ಯ ಸಿಗಲಿದೆ. 2021ರ ರಾಜ್ಯ ಬಜೆಟ್’ನಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಘೋಷಿಸಲಾಗಿತ್ತು. ಕರ್ನಾಟಕ ರಾಜ್ಯ ಸಚಿವ ಸಮಿತಿಯು 2021ರ ಜುಲೈ 22ರಂದು ಈ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಿತ್ತು.

ಕೋವಿಡ್ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ತಾತ್ಕಾಲಿಕವಾಗಿ ಅನ್ವಯವಾಗಿದ್ದ ಈ ಯೋಜನೆ ಆನಂತರ ಸ್ಥಗಿತಗೊಂಡಿದೆ. ಇದನ್ನು ಮತ್ತೆ ಜಾರಿಸಬೇಕು ಎಂದು ನೌಕರರು ಆಗ್ರಹಿಸುತ್ತ ಬಂದಿದ್ದು; ಇದೀಗ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವಂತೆ ಸರ್ಕಾರಕ್ಕೆ ಮನವಿ ಸಮರ್ಪಣೆ ಮಾಡಲಾಗುತ್ತಿದೆ.

Karnataka Govt employees New demands

ಇದನ್ನೂ ಓದಿ: 7ನೇ ವೇತನ ಆಯೋಗ ಜಾರಿ ಸರ್ಕಾರಿ ಆದೇಶ : ಸರಕಾರಿ ನೌಕರರಿಗೆ ಆಗಸ್ಟ್ ನಿಂದ ಸಿಗುವ ಸವಲತ್ತುಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ… Govt Employees Revised Pay Scale List

ಪಿಎಸ್‌ಟಿ ಪದವೀಧರ ಶಿಕ್ಷಕರ ಸಿ & ಆರ್ ತಿದ್ದುಪಡಿ

ಅದೇ ರೀತಿ ಪಿಎಸ್‌ಟಿ ಪದವೀಧರ ಶಿಕ್ಷಕರ ಸಿ & ಆರ್ ತಿದ್ದುಪಡಿ ಕುರಿತೂ ಕಾರ್ಯಾಗಾರ ನಡೆಯಲಿದ್ದು; ಸಿಎಂ ಹಾಗೂ ಡಿಸಿಎಂ ಅವರಿಗೆ ಈ ಗೊಂದಲಕ್ಕೆ ತೆರೆ ಎಳೆಯುವಂತೆ ಮನವಿ ಸಲ್ಲಿಕೆಗೂ ಸರ್ಕಾರಿ ನೌಕರರು ಮುಂದಾಗಿದ್ದಾರೆ.

2017ನೇ ಸಾಲಿನಲ್ಲಿ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಪದನಾಮ ಮತ್ತು ವೃಂದಬಲವನ್ನು ಬದಲಾಯಿಸಿ 1-5ನೇ ತರಗತಿ ವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್‌ಟಿ) ಹಾಗೂ 6-8ನೇ ತರಗತಿ ವರೆಗಿನ ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದು ವಿಂಗಡಿಸಿದೆ. ಈ ಎರಡೂ ವಿಧದ ಶಿಕ್ಷರ ಭಡ್ತಿ ಪ್ರಕ್ರಿಯೆ ಕುರಿತ ನಿಯಮಗಲಲ್ಲಿ ಗೊಂದಲ ಏರ್ಪಟ್ಟಿದ್ದು; ಸದರಿ ನಿಯಮ ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ.

ಇದನ್ನೂ ಓದಿ: ಒಪಿಎಸ್ ಮರುಜಾರಿ: ಸರ್ಕಾರಿ ನೌಕರರ ಹೊಸ ಪಟ್ಟು, ರಾಜ್ಯ ಸರ್ಕಾರಕ್ಕೆ ಇಕ್ಕಟ್ಟು | ಎಲ್ಲಾ ನೌಕರರಿಗೂ ಜಾರಿಯಾಗುತ್ತಾ ಹಳೇ ಪಿಂಚಣಿ ಯೋಜನೆ? OPS Relaunch for Govt Employees


Spread the love
WhatsApp Group Join Now
Telegram Group Join Now
error: Content is protected !!