ಸರಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸು ವರದಿ ಆಗಸ್ಟ್’ನಲ್ಲಿ ಜಾರಿ? | ಸಿಎಂ ಸಿದ್ದರಾಮಯ್ಯ ಸೂಚನೆ ಏನು? Karnataka Govt Employees Good News

Spread the love

Karnataka Govt Employees Good News : ಕರ್ನಾಟಕ ಸರ್ಕಾರಿ ನೌಕರ ಪ್ರಮುಖ ಬೇಡಿಕೆಯಾದ 7ನೇ ವೇತನ ಆಯೋಗದ (7th Pay Commission) ವರದಿಯ ಶಿಫಾರಸುಗಳ ಅನುಷ್ಠಾನ ಕುರಿತಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ. ಶೀಘ್ರದಲ್ಲಿಯೇ ನೌಕರರ ಸಂಬಳ, ಭತ್ಯೆ ಸೇರಿದಂತೆ ವಿವಿಧ ಬೇಡಿಕೆ ಕುರಿತು ಸರಕಾರ ಸಿಹಿಸುದ್ದಿ ನೀಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

WhatsApp Group Join Now
Telegram Group Join Now

ಈಗಾಗಲೇ ಎರಡು ಸಚಿವ ಸಂಪುಟಗಳಲ್ಲಿ 7ನೇ ವೇತನ ಆಯೋಗದ ವರದಿ ಕುರಿತ ಚರ್ಚೆ ನಡೆದು ತಮ್ಮ ಬೇಡಿಕೆಗೆ ಸ್ಪಂದನೆ ಸಿಗಲಿದೆ ಎಂದು ನೌಕರರು ನಿರೀಕ್ಷಿಸಿದ್ದರು. ಆದರೆ ಕಳೆದ ಜೂನ್ 20 ಹಾಗೂ ಜುಲೈ 04ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗ ಜಾರಿ ಕುರಿತು ಗಂಭೀರ ಚರ್ಚೆಗಳಾದೇ ನೌಕರರನ್ನು ಹತಾಶರನ್ನಾಗಿ ಮಾಡಿದೆ.

ಸರಕಾರಿ ನೌಕರರ ಸಂಬಳ ಏರಿಕೆ ಸದ್ಯಕ್ಕೆ ಅಸಾಧ್ಯ | ಆರ್ಥಿಕ ಇಲಾಖೆ ಸ್ಪಷ್ಟನೆ Govt employees Salary hike impossible for now

ಸರಕಾರದ ಎಚ್ಚರಿಕೆಯ ನಡೆ

ಏಕಾಏಕಿ 7ನೇ ವೇತನ ಆಯೋಗದ ವರದಿ ಜಾರಿಗೊಳಿಸಿದರೆ ಸರಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಎಲ್ಲವೂ ಹೆಚ್ಚಾಗಲಿದೆ. ಸರ್ಕಾರಿ ನೌಕರರ ಮೂಲ ವೇತನ ವರದಿಯಂತೆ ಯಥಾವತ್ ಏರಿಕೆಯಾದರೆ ಸರ್ಕಾರದ ಖಜಾನೆಗೆ ವಾರ್ಷಿಕ 17,440 ಕೋಟಿ ರೂಪಾಯಿ ಹೊರೆಯಾಗಲಿದೆ ಎಂಬ ಅಂದಾಜಿದೆ. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ.

ಇತ್ತ, ವರದಿ ಜಾರಿ ವಿಳಂಬದಿ೦ದ ಹತಾಶರಾಗಿರುವ ರಾಜ್ಯ ಸರಕಾರಿ ನೌಕರರ ಸಂಘವು ಇದೇ ಜುಲೈ 29ರಂದು ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಜುಲೈ 15ರಂದು ನಡೆಯಲಿರುವ ಸಚಿವರ ಸಭೆಯಲ್ಲಿ ಈ ಬಗ್ಗೆ ಸರಕಾರದ ಅಂತಿಮ ತೀರ್ಮಾನ ಪ್ರಕಟವಾಗಬಹುದಾದ ನಿರೀಕ್ಷೆ ನೌಕರರಲ್ಲಿದೆ.

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ: ಕುರಿ-ಮೇಕೆ ಸಾಕಾಣಿಕೆಗೆ ₹1.75 ಲಕ್ಷ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ Amrita Swabhimani Kurigahi Scheme

ಜುಲೈ 15ರ ಸಭೆಯ ಮೇಲೆ ನಿರೀಕ್ಷೆ

ಈಗಾಗಲೇ ರಾಜ್ಯ ಸರಕಾರದ ಜಂಟಿ ಕಾರ್ಯದರ್ಶಿ (ಸಚಿವ ಸಂಪುಟ) ಆರ್. ಚಂದ್ರಶೇಖರ್ ಅವರು ಸಚಿವ ಸಂಪುಟದ 2024ನೇ ಸಾಲಿನ 12ನೇ ಸಭೆಯ ಸೂಚನಾ ಪತ್ರವನ್ನು ಹೊರಡಿಸಿದ್ದಾರೆ. ಅದರಂತೆ ದಿನಾಂಕ 15-07-2024ರ ಸೋಮವಾರ ಸಂಜೆ 6 ಗಂಟೆಗೆ ವಿಧಾನಸೌಧದ ಸಚಿವ ಸಂಪುಟ ಸಭಾಮಂದಿರದಲ್ಲಿ ಈ ವರ್ಷದ ಸಚಿವ ಸಂಪುಟದ 12ನೇ ಸಭೆ ನಡೆಯಲಿದೆ.

ಜುಲೈ 15ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ವರದಿ ಅನುಷ್ಠಾನದ ಕುರಿತು ತೀರ್ಮಾನವನ್ನು ಕೈಗೊಳ್ಳಬಹುದು ಅಥವಾ ನೌಕರರಿಗೆ ಯಾವುದರೂ ಭರವಸೆ ನೀಡಬಹುದು ಎಂದು ಅಂದಾಜಿಸಲಾಗಿದೆ.

10,000 ಸರಕಾರಿ ಶಾಲೆ ಶಿಕ್ಷಕರ ನೇಮಕಾತಿ | ಶೀಘ್ರದಲ್ಲಿಯೇ ಅರ್ಜಿ ಆಹ್ವಾನ Karnataka Govt School Teacher Recruitment 2024

ಆಗಸ್ಟ್’ನಲ್ಲಿ ವರದಿ ಜಾರಿ?

ಇದೆಲ್ಲದರ ನಡುವೆ ಆಗಸ್ಟ್’ನಲ್ಲಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಗೆ ಬರುವುದು ಖಚಿತ ಎಂಬ ಸುದ್ದಿ ಇದೆ. ಮೂಲಗಳ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ಶಿಫಾರಸುಗಳ ಹಣಕಾಸು ಹೊಂದಾಣಿಕೆ ಕುರಿತಂತೆ ಪರಿಶೀಲನೆ ನಡೆಸಿ ಮಾಹಿತಿ ಕೊಡುವಂತೆ ಆರ್ಥಿಕ ಇಲಾಖೆಗೆ ಸೂಚಿನೆ ನೀಡಿದ್ದಾರೆ. ಆ ಪ್ರಕಾರ ಆರ್ಥಿಕ ಇಲಾಖೆ ಒದಗಿಸುವ ಮಾಹಿತಿ ಆಧರಿಸಿ ಇದೇ ಆಗಸ್ಟ್’ನಲ್ಲಿ 7ನೇ ವೇತನ ಆಯೋಗ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವೇತನ ಹೆಚ್ಚಳಕ್ಕಾಗಿಯೇ ಬಜೆಟ್‌ನಲ್ಲಿ 14,000 ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದ್ದು, ಜುಲೈ 15 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಬಳಿಕ ಆದೇಶ ಪ್ರಕಟವಾಗಿ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.

7ನೇ ರಾಜ್ಯ ವೇತನ ಆಯೋಗದ ವರದಿಯ ಸಾರಾಂಶ ಓದಲು ಇಲ್ಲಿ ಒತ್ತಿ…

ಸರಕಾರಿ ನೌಕರರ ಸಂಬಳ, ಭತ್ಯೆ ಏರಿಕೆಯ ಸಂಪೂರ್ಣ ಮಾಹಿತಿ | 7ನೇ ವೇತನ ಆಯೋಗದ ಶಿಫಾರಸುಗಳು 7th pay Commission Complete Information


Spread the love
WhatsApp Group Join Now
Telegram Group Join Now

2 thoughts on “ಸರಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸು ವರದಿ ಆಗಸ್ಟ್’ನಲ್ಲಿ ಜಾರಿ? | ಸಿಎಂ ಸಿದ್ದರಾಮಯ್ಯ ಸೂಚನೆ ಏನು? Karnataka Govt Employees Good News”

Leave a Comment

error: Content is protected !!