Karnataka Free Tailoring Machine- ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

Spread the love

WhatsApp Group Join Now
Telegram Group Join Now

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ (Karnataka Free Tailoring Machine) ಅವಕಾಶ ಕಲ್ಪಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಮಹಿಳೆಯರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ. ರಾಜ್ಯ ಸರ್ಕಾರವು 2025-26ನೇ ಸಾಲಿನ ಉಚಿತ ಹೊಲಿಗೆ ಯಂತ್ರ ಯೋಜನೆಯಡಿ ಅರ್ಜಿ ಆಹ್ವಾನಿಸಿದೆ. ಈ ಯೋಜನೆಯ ಪ್ರಯೋಜನ ಪಡೆದು ಮಹಿಳೆಯರು ಮನೆಯಲ್ಲೇ ಕುಳಿತು ಸ್ವಂತ ಉದ್ಯಮ ಆರಂಭಿಸಬಹುದು. ಆದಾಯ ಹೆಚ್ಚಿಸಲು ಹಾಗೂ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಇದು ಸಹಾಯಕವಾಗಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದೀಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರ್ಜಿ ಕರೆಯಲಾಗಿದೆ.

Navodaya Admission 2026- ನವೋದಯ ಸ್ಕೂಲ್ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅವಕಾಶ ಕಲ್ಪಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Karnataka Free Tailoring Machine Women Yojana 2025
ಅರ್ಜಿ ಸಲ್ಲಿಕೆಗೆ ಯಾರು ಅರ್ಹರು?

ಈ ಯೋಜನೆಯ ಲಾಭ ಪಡೆಯಲು ಅಭ್ಯರ್ಥಿಗಳು ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು:

  • ಜಾತಿ/ಪ್ರವರ್ಗ: ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿ
  • ಅರ್ಹವಲ್ಲದ ಸಮುದಾಯಗಳು: ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ, ಅರೆಅಲೆಮಾರಿ, ಲಿಂಗಾಯತ, ಒಕ್ಕಲಿಗ, ಮರಾಠ, ಹಟ್ಟಿಗೊಲ್ಲ, ಕಾಡುಗೊಲ್ಲ ಮತ್ತು ಅವರ ಉಪಸಮುದಾಯಗಳು
  • ವಯಸ್ಸು: ಕನಿಷ್ಠ 18 ರಿಂದ ಗರಿಷ್ಠ 55 ವರ್ಷಗಳ ವಯಸ್ಸಿನೊಳಗೆ ಇರಬೇಕು
  • ಆದಾಯ ಮಿತಿ: ಗ್ರಾಮಾಂತರ ಪ್ರದೇಶ- ವಾರ್ಷಿಕ ಆದಾಯ ರೂ. 98,000 ಒಳಗೆ ಹಾಗೂ ನಗರ ಪ್ರದೇಶ- ವಾರ್ಷಿಕ ಆದಾಯ ರೂ. 1,20,000 ಒಳಗೆ ಇರಬೇಕು.
  • ಇತರೆ ಶರತ್ತುಗಳು: ನಿಗಮದ ಯಾವುದೇ ಬೇರೆ ಯೋಜನೆಯ ಸೌಲಭ್ಯ ಪಡೆದಿರಬಾರದು
  • ಅಗತ್ಯ ದಾಖಲೆಗಳು: ಆಧಾರ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಪಾಸ್‌ಪೋರ್ಟ್ ಅಳತೆಯ ಫೋಟೋ, ಬ್ಯಾಂಕ್ ಪಾಸ್‌ಬುಕ್ ನಕಲು

Free Solar Electricity- ಮನೆಗೆ ಉಚಿತ ಸೋಲಾರ್ ಕರೆಂಟ್ | ಮನೆಗೆ 20 ವರ್ಷ ಉಚಿತ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ..

ಅರ್ಜಿ ಸಲ್ಲಿಸುವ ವಿಧಾನ

ಸರ್ಕಾರದ ಅಧಿಕೃತ ಸೇವಾ ಸಿಂಧು ಪೋರ್ಟಲ್ sevasindhu.karnataka.gov.in ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸಲು ಗ್ರಾಮಒನ್, ಕರ್ನಾಟಕಒನ್ ಅಥವಾ ಬೆಂಗಳೂರುಒನ್ ಕೇಂದ್ರಗಳ ಸಹಾಯ ಪಡೆಯಬಹುದು.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ

ಅರ್ಜಿ ಸಲ್ಲಿಸಲು 2025ರ ಜೂನ್ 30 ಕೊನೆಯ ದಿನವಾಗಿದೆ. ಈ ದಿನಾಂಕದ ಬಳಿಕ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗದು. ಅರ್ಹ ಮಹಿಳೆಯರು ನಿಗದಿತ ಸಮಯದೊಳಗೆ ನಿಮ್ಮೂರಿನ ಗ್ರಾಮ ಒನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆಗಳನ್ನು ಪಡೆಯಲು ಇಲ್ಲಿ ಒತ್ತಿ…

Free Borewell- ರೈತರಿಗೆ ಉಚಿತ ಬೋರ್‌ವೆಲ್ | ಗಂಗಾಕಲ್ಯಾಣ ಯೋಜನೆ ಅರ್ಜಿ ಆಹ್ವಾನ | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ…


Spread the love
error: Content is protected !!