Karnataka Domestic Workers Salary Law- ಇನ್ಮುಂದೆ ಮನೆ ಕೆಲಸದವರಿಗೂ ಸರ್ಕಾರದಿಂದಲೇ ಸಂಬಳ ಫಿಕ್ಸ್ | ಕಡಿಮೆ ಸಂಬಳ ಕೊಟ್ಟರೆ ಜೈಲು | ರಾಜ್ಯ ಸರ್ಕಾರದ ಹೊಸ ನಿಯಮ
Karnataka Domestic Workers Salary Law

ಇನ್ಮುಂದೆ ಮನೆ ಕೆಲಸದವರಿಗೆ (ಮೇಡ್’ಗಳು) ಸ್ವತಃ ರಾಜ್ಯ ಸರ್ಕಾರವೇ ಸಂಬಳ ಮತ್ತು ಸಮಯವನ್ನು ನಿಗದಿ (Karnataka Domestic Workers Salary Law) ಮಾಡಲಿದೆ. ಜೊತೆಗೆ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ವಿಶೇಷ ಕಲ್ಯಾಣ ಯೋಜನೆಗಳನ್ನು ಕೂಡ ಅನುಷ್ಠಾನಗೊಳಿಸಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿರುವ ರಾಜ್ಯ ಸರ್ಕಾರವು ಇದೀಗ ಮನೆ ಕೆಲಸದವರು, ಚಾಲಕರು ಹಾಗೂ ಸ್ವಚ್ಛತಾಗಾರರ ಕಲ್ಯಾಣಕ್ಕಾಗಿ ‘ಕರ್ನಾಟಕ ಮನೆಗೆಲಸದವರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ-2025’ ಅನ್ನು ರೂಪಿಸಲು ಮುಂದಾಗಿದೆ.
ಮನೆ ಮಾಲೀಕರಿಂದ ಸೆಸ್ ವಸೂಲಿ
ಹೌದು, ರಾಜ್ಯ ಸರ್ಕಾರವು ಮನೆಗೆಲಸದ ಕಾರ್ಮಿಕ ಸಾಮಾಜಿಕ ಭದ್ರತೆಯ ಹಿತದೃಷ್ಟಿಯಿಂದ ‘ಕರ್ನಾಟಕ ಮನೆಗೆಲಸದವರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ-2025’ಯನ್ನು ರೂಪಿಸಲು ಮುಂದಾಗಿದೆ.
ಸದರಿ ಕಾಯ್ಡೆಯ ಮೂಲಕ ಮನೆ ಮಾಲೀಕರೇ ಮನೆಗೆಲಸದವರ ಮಾಹಿತಿಯನ್ನು ನೋಂದಣಿ ಮಾಡಿಸುವುದು ಹಾಗೂ ಕೆಲಸಗಾರರ ಕಲ್ಯಾಣ ಕಾರ್ಯಗಳಿಗೆ ಶೇ.5ರಷ್ಟು ಸೆಸ್ ಪಾವತಿಸುವಂತಹ ನಿಯಮ ರೂಪಿಸಲು ಚಿಂತನೆ ನಡೆಸಿದೆ.

ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಕಾಯ್ದೆ ರೂಪಿಸಿದ್ದ ರಾಜ್ಯ ಸರ್ಕಾರ ಅದರ ಬೆನ್ನಲ್ಲೇ ಇದೀಗ ಮನೆಗೆಲಸದವರ ಸಾಮಾಜಿಕ ಭದ್ರತೆಗೂ ಮುಂದಾಗಿದ್ದು; ಕಾಯ್ದೆಗೆ ಸಂಬಂಧಿಸಿದ ಕರಡು ಸಿದ್ದಪಡಿಸುತ್ತಿದೆ. ಈ ಬಗ್ಗೆ ಸಾಧಕ-ಬಾಧಕಗಳನ್ನು ಚರ್ಚೆಸಿ ಶೀಘ್ರದಲ್ಲಿಯೇ ಆಕ್ಷೇಪಣೆ ಆಹ್ವಾನಿಸಿ ಸ್ಪಷ್ಟ ರೂಪ ನೀಡಲಿದೆ.
ಯಾರಿಗೆಲ್ಲ ಅನುಕೂಲವಾಗಲಿದೆ?
‘ಕರ್ನಾಟಕ ಮನೆಗೆಲಸದವರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಕಾಯ್ದೆ-2025’ಯನ್ನು ಪ್ರಮುಖವಾಗಿ ಮನೆಕೆಲಸದವರು, ಚಾಲಕರು ಹಾಗೂ ಸ್ವಚ್ಛತಾಗಾರರು ಸೇರಿ ವಿವಿಧ ರೀತಿಯ ಗೃಹ ಸಹಾಯಕ ಸಿಬ್ಬಂದಿಗೆ ಅನ್ವಯವಾಗಲಿದೆ.
ಈ ಕೆಲಸಗಾರರನ್ನು ನೇಮಿಸಿಕೊಳ್ಳಲು ಮನೆ ಮಾಲೀಕರು ಹಾಗೂ ಕೆಲಸಗಾರರ ನಡುವೆ ಮೊದಲೇ ಕೆಲಸದ ಅವಧಿ, ಸಂಬಳ, ಸೌಲಭ್ಯ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಒಪ್ಪಂದ ಮಾಡಿಕೊಳ್ಳಬೇಕು.
ಕಮ್ಮಿ ಸಂಬಳ ಪಾವತಿಸಿದೆ ಜೈಲು ಶಿಕ್ಷೆ!
‘ಕರ್ನಾಟಕ ರಾಜ್ಯ ಮನೆಕೆಲಸದವರ ಸಾಮಾಜಿಕ ಮತ್ತು ಕಲ್ಯಾಣ ಮಂಡಳಿ’ಯನ್ನು ಸ್ಥಾಪಿಸಿ ಆ ಮೂಲಕ ಕಾರ್ಮಿಕರಿಗೆ ಭದ್ರತೆ ಒದಗಿಸಲಾಗುವುದು. ಮಂಡಳಿಯ ಮೂಲಕವೇ ಹಣಕಾಸು ಸಂಗ್ರಹ, ಯೋಜನೆಗಳ ಅನುಷ್ಠಾನ, ಕೌಶಲ್ಯ ತರಬೇತಿಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಸದರಿ ಮಂಡಳಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳ ಮುಖಂಡರು, ಆಯಾ ಬಡಾವಣೆ ಕ್ಷೇಮಾಭಿವೃದ್ಧಿ ಸಂಘಗಳ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗುತ್ತದೆ. ಕೆಲಸಗಾರರಿಗೆ ಕಮ್ಮಿ ಸಂಬಳ ಪಾವತಿಸಿದೆ ಜೈಲು ಶಿಕ್ಷೆ, ದಂಡ ವಿಧಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.