Karnataka Crop Loss Compensation- ಬೆಳೆ ನಷ್ಟಕ್ಕೆ ಹೆಚ್ಚುವರಿ ಪರಿಹಾರ | ಇಂದು ರೈತರ ಬ್ಯಾಂಕ್ ಖಾತೆಗೆ ಜಮೆ | ಯಾರಿಗೆ ಎಷ್ಟು ಹಣ ಸಿಗಲಿದೆ?

Spread the love

WhatsApp Group Join Now
Telegram Group Join Now

ಮುಂಗಾರು ಮಳೆಯಿಂದ ಬೆಳೆ ಹಾನಿಗೊಳಗಾಗಿದ್ದ ರೈತರಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಬೆಳೆನಷ್ಟ ಪರಿಹಾರ ಹಣ ಬಿಡುಗಡೆ (Karnataka Crop Loss Compensation) ಮಾಡಿದೆ. ಹಣ ಜಮಾ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯದಲ್ಲಿ ಮುಂಗಾರು ಹಂಗಾಮಿನ ಅವಧಿಯಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಲಕ್ಷಾಂತರ ರೈತರಿಗೆ ಬೆಳೆ ನಷ್ಟವಾಗಿತ್ತು. ಈ ನಷ್ಟಕ್ಕೆ ರೈತರು ಸರ್ಕಾರದಿಂದ ಹೆಚ್ಚಿನ ಪರಿಹಾರ ನಿರೀಕ್ಷಿಸುತ್ತಿದ್ದರು. ಅವರ ನಿರೀಕ್ಷೆ ಇದೀಗ ಈಡೇರಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನವೆಂಬರ್ 27ರಂದು ಬರೋಬ್ಬರಿ ₹1,033.60 ಕೋಟಿ ಹೆಚ್ಚುವರಿ ವಿಶೇಷ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಸಂತ್ರಸ್ತ ರೈತರಿಗೆ ಈಗಾಗಲೇ ದೊರಕಿದ್ದ ಮೊತ್ತಕ್ಕಿಂತ ದುಪ್ಪಟ್ಟು ಪರಿಹಾರ ಸಿಗುವಂತಾಗಿದೆ.

ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ

ಒಟ್ಟಾರೆ ಬೆಳೆ ಹಾನಿ ಎಷ್ಟು?

ಈ ವರ್ಷದ ಮುಂಗಾರು ರಾಜ್ಯಕ್ಕೆ ಅನೇಕ ಕಡೆಗಳಲ್ಲಿ ದಾಖಲೆಯ ನಷ್ಟವನ್ನು ಉಂಟುಮಾಡಿದೆ. ಒಟ್ಟು 82.56 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದ್ದರೂ, ಜೂನ್-ಸೆಪ್ಟೆಂಬರ್ ಅವಧಿಯ ಅತಿವೃಷ್ಟಿಯಿಂದ 14.58 ಲಕ್ಷ ಹೆಕ್ಟೇರ್‌ಗಿಂತ ಹೆಚ್ಚು ಬೆಳೆಗಳು ಹಾನಿಗೊಳಗಾಗಿದ್ದವು.

ಒಟ್ಟಾರೆ ಅಂದಾಜು ₹10,748 ಕೋಟಿ ನಷ್ಟ ಸಂಭವಿಸಿದ್ದು; ಇದು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ದೊಡ್ಡ ಮಟ್ಟದ ಬೆಳೆಹಾನಿಗಳಲ್ಲಿ ಒಂದಾಗಿದೆ. ಹೀಗಾಗಿ ಬಹುತೇಕ ರೈತರು ಹೆಚ್ಚುವರಿ ಪರಿಹಾರಕ್ಕಾಗಿ ಸರ್ಕಾರವನ್ನು ಕೋರಿಕೊಂಡಿದ್ದರು.

ಮುಂಗಾರು ಮಳೆಯಿಂದ ಬೆಳೆ ಹಾನಿಗೊಳಗಾಗಿದ್ದ ರೈತರಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಬೆಳೆನಷ್ಟ ಪರಿಹಾರ ಹಣ ಬಿಡುಗಡೆ ಮಾಡಿದೆ. ಹಣ ಜಮಾ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...
Karnataka Crop Loss Compensation
ಹೆಚ್ಚು ಹಾನಿಗೊಳಗಾದ ಬೆಳೆ ಮತ್ತು ಜಿಲ್ಲೆಗಳ ವಿವರ

ಈ ಬಾರಿ ಮುಖ್ಯವಾಗಿ ತೊಗರಿ, ಹೆಸರುಕಾಳು, ಹತ್ತಿ ಹಾಗೂ ಮೆಕ್ಕೆಜೋಳ ಬೆಳೆಗಳು ಹೆಚ್ಚು ಹಾನಿಗೆ ಒಳಗಾಗಿದ್ದವು. ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಕೊಯ್ಲಿನ ಹಂತಕ್ಕೆ ಬಂದಿದ್ದ ಬೆಳೆಗಳು ಮಳೆಗೆ ಸಿಲುಕಿ ನಾಶವಾಗಿದ್ದವು.

ಕೃಷ್ಣಾ-ಭೀಮಾ ನದೀ ತಟ ಪ್ರದೇಶಗಳಲ್ಲಿ ನಿರಂತರ ಒಳ ಹರಿವು ಹೆಚ್ಚಳದಿಂದ ಕಲಬುರಗಿ, ಯಾದಗಿರಿ, ಬೀದರ್ ಜಿಲ್ಲೆಗಳ ರೈತರು ಹೆಚ್ಚಿನ ನಷ್ಟ ಅನುಭವಿಸಿದ್ದರು.

ಇದನ್ನೂ ಓದಿ: Toilet Subsidy Karnataka- ಶೌಚಾಲಯ ನಿರ್ಮಾಣಕ್ಕೆ ₹12,000 ಸಹಾಯಧನ | ಈಗಲೇ ಅರ್ಜಿ ಹಾಕಿ

ಹೆಚ್ಚುವರಿ ಪರಿಹಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

ರಾಜ್ಯ ಸರ್ಕಾರ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಈಗಾಗಲೇ ₹1,218 ಕೋಟಿ ಮೊತ್ತವನ್ನು 14.24 ಲಕ್ಷ ರೈತರಿಗೆ ವರ್ಗಾವಣೆ ಮಾಡಿತ್ತು. ಆದರೆ ನಷ್ಟದ ಪ್ರಮಾಣ ಹೆಚ್ಚಾಗಿರುವುದರಿಂದ ಮತ್ತು ರೈತರ ಒತ್ತಾಯದ ಹಿನ್ನೆಲೆಯಲ್ಲಿ, ಸರ್ಕಾರ ಮತ್ತೆ ₹1,033.60 ಕೋಟಿ ಹೆಚ್ಚುವರಿಯಾಗಿ ಬಿಡುಗಡೆ ಮಾಡಿದೆ.

ನಿನ್ನೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಿಚ್ ಒತ್ತುವ ಮೂಲಕ ನೇರ ನಗದು ವರ್ಗಾವಣೆಗೆ (DBT) ಅಧಿಕೃತ ಚಾಲನೆ ನೀಡಿದ್ದಾರೆ.ಇದರೊಂದಿಗೆ ರಾಜ್ಯದ ರೈತರಿಗೆ ಎಸ್‌ಡಿಆರ್‌ಎಫ್ ಅನ್ವಯ ಒಟ್ಟಾರೆ ₹2,251 ಕೋಟಿಗೂ ಹೆಚ್ಚು ಪರಿಹಾರ ಬಿಡುಗಡೆಗೊಂಡಂತಾಗಿದೆ.

ಇದನ್ನೂ ಓದಿ: How to Check Land Loan Details- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ

ಹಣ ಇಂದು ಖಾತೆಗೆ ಹಣ ಜಮೆ

ರಾಜ್ಯದಲ್ಲಿ ಕಳೆದ ಮುಂಗಾರು ಅವಧಿಯಲ್ಲಿ 27 ಜಿಲ್ಲೆಗಳಲ್ಲಿ 14.58 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿತ್ತು. ಈ ಸಂಬAಧ ಒಟ್ಟು 14.24 ಲಕ್ಷ ರೈತರು ಅಧಿಕೃತವಾಗಿ ಸಂತ್ರಸ್ತರಾಗಿದ್ದರು.

ಇದೀಗ ಎಲ್ಲಾ ಸಂತ್ರಸ್ತ ರೈತರಿಗೆ ಇಂದು ನವೆಂಬರ್ 28ರ ಸಂಜೆ ಒಳಗಾಗಿ, ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AEPS) ಮೂಲಕ ಪರಿಹಾರ ಮೊತ್ತ ಖಚಿತವಾಗಿ ಜಮೆಯಾಗಲಿದೆ ಎಂದು ಸಿಎಂ ಭರವಸೆ ನೀಡಿದ್ದಾರೆ.

WhatsApp Group Join Now
Telegram Group Join Now

ಇದನ್ನೂ ಓದಿ: BPL Card Cancellation Check- ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯಾ? ಮೊಬೈಲ್’ನಲ್ಲೇ ಚೆಕ್ ಮಾಡಿ…

ಯಾವ ಜಮೀನಿಗೆ ಎಷ್ಟು ಪರಿಹಾರ? 

ಸರ್ಕಾರವು ಈ ಬಾರಿ ಇನ್‌ಪುಟ್ ಸಬ್ಸಿಡಿಗಳ ದರವನ್ನು ಹೆಚ್ಚಿಸಿರುವುದು ಗಮನಾರ್ಹ. ಗರಿಷ್ಠ 2 ಹೆಕ್ಟೇರ್ ಜಮೀನಿಗೆ ಮಾತ್ರ ಈ ಪರಿಹಾರ ಅನ್ವಯವಾಗುತ್ತದೆ. ಪ್ರತಿ ಹೆಕ್ಟೇರ್’ಗೆ ಅನ್ವಯವಾಗುವಂತೆ ಹಿಂದಿನ ಮತ್ತು ಇಂದಿನ ದರಗಳ ವಿವರ ಹೀಗಿದೆ:

ಮಳೆಯಾಶ್ರಿತ (Rainfed) ಬೆಳೆಗಳು

  • ಹಿಂದಿನ ದರ: ₹8,500
  • ಈಗಿನ ದರ: ₹17,000

ನೀರಾವರಿ (Irrigated) ಬೆಳೆಗಳು

  • ಹಿಂದಿನ ದರ: ₹17,000
  • ಈಗಿನ ದರ: ₹25,000

ಬಹುವಾರ್ಷಿಕ (Perennial) ಬೆಳೆಗಳು

  • ಹಿಂದಿನ ದರ: ₹22,500
  • ಈಗಿನ ದರ: ₹31,000

ಈ ಬಾರಿ ಸರ್ಕಾರ ಕೈಗೊಂಡಿರುವ ಕ್ರಮಗಳು ರೈತರಿಗೆ ತಾತ್ಕಾಲಿಕ ಮಾತ್ರವಲ್ಲ, ಮುಂದಿನ ಹಂಗಾಮಿನ ಕೃಷಿಗೆ ಆತ್ಮವಿಶ್ವಾಸ ನೀಡಿದ್ದು; ಬೆಳೆಹಾನಿಗೆ ತಕ್ಕ ಪರಿಹಾರದ ಹಣ ಇಂದು ಎಲ್ಲಾ ರೈತರ ಖಾತೆ ಜಮೆಯಾಗಲಿದೆ.

Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ


Spread the love
error: Content is protected !!