Karnataka CET Application Started 2026- ಸಿಇಟಿ ಅರ್ಜಿ ಸಲ್ಲಿಕೆೆ ಆರಂಭ | ಕೆಇಎ ಮಹತ್ವದ ಮಾಹಿತಿ ಇಲ್ಲಿದೆ…

Spread the love

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (Karnataka CET Application Started 2026)ಗೆ ಜನವರಿ 17ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಇಂಜಿನಿಯರಿಂಗ್, ಪಶು ಸಂಗೋಪನೆ, ಕೃಷಿ ವಿಜ್ಞಾನ, ಫಾರ್ಮಸಿ, ಬಿಎಸ್ಸಿ (ನರ್ಸಿಂಗ್) ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅತ್ಯಂತ ಪ್ರಮುಖವಾಗಿರುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET)ಗೆ ಇಂದಿನಿಂದ (ಜನವರಿ 17) ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಫೆಬ್ರವರಿ 16ರ ವರೆಗೆ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಇದನ್ನೂ ಓದಿ: Bhu Odetan Yojana- ಸ್ವಂತ ಜಮೀನು ಖರೀದಿಸಲು ಸರ್ಕಾರದಿಂದ 12.50 ಲಕ್ಷ ರೂ. ವರೆಗೆ ಹಣಕಾಸು ನೆರವು!

CET Eligible Courses – ಯಾವ ಕೋರ್ಸುಗಳಿಗೆ ಸಿಇಟಿ?

ಸಿಇಟಿ ಮೂಲಕ ರಾಜ್ಯದ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಕೆಳಕಂಡ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಬಹುದು:

  • ಇಂಜಿನಿಯರಿಂಗ್ (Engineering)
  • ಪಶು ಸಂಗೋಪನೆ (Veterinary)
  • ಕೃಷಿ ವಿಜ್ಞಾನ (Agriculture)
  • ಫಾರ್ಮಸಿ (Pharmacy)
  • ಬಿಎಸ್ಸಿ (ನರ್ಸಿಂಗ್)
  • ಇತರೆ ವೃತ್ತಿಪರ ಪದವಿ ಕೋರ್ಸುಗಳು

ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಈ ಪರೀಕ್ಷೆ ಅತ್ಯಂತ ಮಹತ್ವದ್ದಾಗಿರುವುದರಿಂದ, ಅರ್ಜಿ ಸಲ್ಲಿಕೆಯಲ್ಲಿಯೇ ಹೆಚ್ಚಿನ ಜಾಗ್ರತೆವಹಿಸುವುದು ಉತ್ತಮ.

ಇದನ್ನೂ ಓದಿ: Agniveer Vayu Recruitment 2026- ಪಿಯುಸಿ, ಡಿಪ್ಲೊಮಾ ಅಭ್ಯರ್ಥಿಗಳಿಗೆ ವಾಯುಪಡೆ ಅಗ್ನಿವೀರರ್ ಹುದ್ದೆಗಳು

Important Application Guidelines – ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಸೂಚನೆಗಳು

KEA ಅಭ್ಯರ್ಥಿಗಳಿಗೆ ಸಾಕಷ್ಟು ಸಮಯ ನೀಡಿರುವುದರಿಂದ, ಅವಸರದಲ್ಲಿ ಅರ್ಜಿ ಭರ್ತಿ ಮಾಡದೇ, ಮೊದಲು ಸಿಇಟಿ ಮಾಹಿತಿ ಬುಲೆಟಿನ್‌ನ್ನು ಸಂಪೂರ್ಣವಾಗಿ ಓದಿ, ಅರ್ಥ ಮಾಡಿಕೊಂಡ ನಂತರವೇ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದೆ.

ಅಭ್ಯರ್ಥಿಗಳು ತಮಗೆ ಅನ್ವಯವಾಗುವ ಮೀಸಲು ವರ್ಗದ ದಾಖಲೆಗಳನ್ನು ಪೂರ್ವ ಸಿದ್ಧವಾಗಿ ಇಟ್ಟುಕೊಂಡು ಅರ್ಜಿ ಭರ್ತಿ ಮಾಡಬೇಕು. ತಪ್ಪಾದ ಮಾಹಿತಿಯನ್ನು ನೀಡಿದರೆ ಮುಂದಿನ ಹಂತಗಳಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Azim Premji Scholarship- ಅಜೀಂ ಪ್ರೇಮ್‌ಜಿ ವತಿಯಿಂದ ವಿದ್ಯಾರ್ಥಿಗಳಿಗೆ ₹30,000 ಸ್ಕಾಲರ್‌ಶಿಪ್ | ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ

College-Based Application Facility – ಕಾಲೇಜುಗಳಲ್ಲೇ ಅರ್ಜಿ ಸಲ್ಲಿಸಲು ಅವಕಾಶ

ಅಭ್ಯರ್ಥಿಗಳಿಗೆ ಸಹಾಯವಾಗುವ ಉದ್ದೇಶದಿಂದ, ಎಲ್ಲ ಕಾಲೇಜು ಸಿಬ್ಬಂದಿಗೆ 10 ದಿನಗಳ ಕಾಲ ಆನ್‌ಲೈನ್ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲೇ ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದು.ಅಗತ್ಯವಿದ್ದರೆ ಉಪನ್ಯಾಸಕರ ಸಹಾಯ ಪಡೆಯಬಹುದು.

ತಾಂತ್ರಿಕ ಸಮಸ್ಯೆಗಳಿಗೂ ಕಾಲೇಜು ಮಟ್ಟದಲ್ಲೇ ಪರಿಹಾರ ಸಿಗಲಿದೆ. ಇದು ಗ್ರಾಮೀಣ ಹಾಗೂ ತಾಂತ್ರಿಕ ಜ್ಞಾನ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತ ವ್ಯವಸ್ಥೆಯಾಗಿದೆ.

Karnataka CET Application Started 2026
Karnataka CET Application Started 2026

Document Verification Process – ದಾಖಲೆ ಪರಿಶೀಲನೆ ಹೇಗೆ?

ಆನ್‌ಲೈನ್‌ನಲ್ಲಿ ವೆರಿಫಿಕೇಷನ್ ಆದ ಅಭ್ಯರ್ಥಿಗಳು ಕಾಲೇಜಿಗೆ ಹೋಗುವ ಅಗತ್ಯವಿಲ್ಲ. ಅವರು ನೇರವಾಗಿ ತಮ್ಮ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು. ಆದರೆ ಆನ್‌ಲೈನ್ ಪರಿಶೀಲನೆ ಆಗದ ಅಭ್ಯರ್ಥಿಗಳು ಕಾಲೇಜು ಹಂತದಲ್ಲೇ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳಬೇಕು. ಪರಿಶೀಲನೆಯ ನಂತರ ಮಾತ್ರ ಅರ್ಜಿ ಮುದ್ರಣಕ್ಕೆ ಅವಕಾಶ ಸಿಗುತ್ತದೆ.

ಇದನ್ನೂ ಓದಿ: Small Savings Schemes Interest Rates 2026- ಸರ್ಕಾರದ ಈ ಉಳಿತಾಯ ಯೋಜನೆಗಳಲ್ಲಿ ಸಿಗಲಿದೆ ಭರ್ಜರಿ ಬಡ್ಡಿ | ಯಾವುದಕ್ಕೆ ಎಷ್ಟು ಬಡ್ಡಿ? ಇಲ್ಲಿದೆ ಸಂಪೂರ್ಣ ಪಟ್ಟಿ…

Required Documents – ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

ಸಿಇಟಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಕಂಡ ದಾಖಲೆಗಳನ್ನು ಹೊಂದಿರಬೇಕು:

  • ಎಸ್ಸೆಸ್ಸೆಲ್ಸಿ ಅಂಕಪಟ್ಟಿ
  • ಆಧಾರ್ ಕಾರ್ಡ್
  • ಆರ್.ಡಿ. ಸಂಖ್ಯೆ (RD Number)
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
WhatsApp Group Join Now
Telegram Group Join Now

ಆಧಾರ್ ಕಾರ್ಡ್ ಹಾಗೂ ಎಸ್ಸೆಸ್ಸೆಲ್ಸಿ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು ಒಂದೇ ರೀತಿಯಲ್ಲಿ ಇರಬೇಕು ಎಂದು KEA ಸ್ಪಷ್ಟ ಸೂಚನೆ ನೀಡಿದೆ.

ಇದನ್ನೂ ಓದಿ: SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

Application Fee – ಅರ್ಜಿ ಶುಲ್ಕ ವಿವರ

ವರ್ಗವಾರು ಅರ್ಜಿ ಶುಲ್ಕವನ್ನು ಕೆಳಕಂಡಂತೆ ನಿಗದಿಪಡಿಸಲಾಗಿದೆ:

  • ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳು: ₹200
  • ಸಾಮಾನ್ಯ ವರ್ಗದ ವಿದ್ಯಾರ್ಥಿಗಳು: ₹500
  • ಕರ್ನಾಟಕ ಹೊರಗಿನ ರಾಜ್ಯದ ವಿದ್ಯಾರ್ಥಿಗಳು: ₹750

CET Exam Dates – ಸಿಇಟಿ ಪರೀಕ್ಷೆ ದಿನಾಂಕಗಳು

  • ಹೊರನಾಡು ಹಾಗೂ ಗಡಿನಾಡು ಕನ್ನಡಿಗರ ಭಾಷಾ ಪರೀಕ್ಷೆ: ಏಪ್ರಿಲ್ 22, 2026
  • ಸಾಮಾನ್ಯ ಸಿಇಟಿ ಪರೀಕ್ಷೆ: ಏಪ್ರಿಲ್ 23 ಮತ್ತು 24, 2026

KEA ಈಗಾಗಲೇ ಸಿಇಟಿ ದಿಕ್ಕೂಚಿಯನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಸಂಪೂರ್ಣ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: Karnataka Yashasvini Yojana 2026- ಯಶಸ್ವಿನಿ ಯೋಜನೆಯಡಿ ಹಸುಗೂಸಿನಿಂದ ವೃದ್ಧರ ವರೆಗೂ 5 ಲಕ್ಷ ರೂ. ಉಚಿತ ಚಿಕಿತ್ಸೆ | ಹೊಸ ಮಾರ್ಗಸೂಚಿ ಬಿಡುಗಡೆ

ಸಿಇಟಿ ಅರ್ಜಿ ಸಲ್ಲಿಸುವ ಲಿಂಕ್: Apply Now

Apply Carefully – ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಿ…

ಸಿಇಟಿ ಪರೀಕ್ಷೆ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿ ತೋರಿಸುವ ಮಹತ್ವದ ಹಂತವಾಗಿದೆ. ಆದ್ದರಿಂದ, ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿಯೇ ಎಚ್ಚರಿಕೆಯಿಂದ ನಡೆದು, ಸರಿಯಾದ ದಾಖಲೆಗಳೊಂದಿಗೆ, ಸಮಯ ಮೀರದೇ ಅರ್ಜಿ ಸಲ್ಲಿಸುವುದು ಅತ್ಯಗತ್ಯ.

ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ. ಇಂತಹ ಶಿಕ್ಷಣ, ಪರೀಕ್ಷೆ ಮತ್ತು ಸರ್ಕಾರಿ ಯೋಜನೆಗಳ ಕುರಿತ ಸಮಗ್ರ ಮಾಹಿತಿಗಾಗಿ ನಮ್ಮ mahitimane.com ಅನ್ನು ನಿರಂತರವಾಗಿ ಅನುಸರಿಸಿ.

Low Interest Loan Eligibility- ಕಡಿಮೆ ಬಡ್ಡಿ ಸಾಲ ಪಡೆಯುವ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ


Spread the love
error: Content is protected !!