Ineligible Ration Card Return Deadline : ರೇಷನ್ ಕಾರ್ಡ್ ವಿಚಾರವಾಗಿ ರಾಜ್ಯ ಸರ್ಕಾರ (Karnataka State Govt) ಖಡಕ್ ತೀರ್ಮಾನ ಕೈಗೊಂಡಿದೆ. ಹಲವು ದಿನಗಳಿಂದ ಅಭಿಯಾನದ ಮಾದರಿಯಲ್ಲಿ ಅನರ್ಹರರ ಪಡಿತರ ಚೀಟಿ ರದ್ದುಪಡಿಸುತ್ತಿರುವ (Cancellation of ineligible ration card) ಆಹಾರ ಇಲಾಖೆ ಇದೀಗ ಅನರ್ಹ ರೇಷನ್ ಕಾರ್ಡ್ ವಾಪಾಸು ಮಾಡಲು ಆಗಸ್ಟ್ 31ರ ಗಡುವು ನೀಡಿದೆ.
ಹೌದು, ನಕಲಿ ದಾಖಲೆ ನೀಡಿ ಅನರ್ಹರು ಪಡೆದಿರುವ ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳನ್ನು ಇದೇ ಆಗಸ್ಟ್ 31ರೊಳಗೆ ಖುದ್ದಾಗಿ ವಾಪಾಸು ಮಾಡದಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಆಹಾರ ಇಲಾಖೆ ಹೇಳಿದೆ.
ಇದನ್ನೂ ಓದಿ: ಇನ್ಮುಂದೆ ಗ್ರಾಮ ಪಂಚಾಯತಿ ಹಗರಣಗಳಿಗೆ ಅಧ್ಯಕ್ಷ, ಸದಸ್ಯರಿಗೂ ಶಿಕ್ಷೆ | ಬಂತು ಹೊಸ ರೂಲ್ಸ್ Gram Panchayat Scam New Rules
ಇವರಿಗೆ ಖಡಕ್ ವಾರ್ನಿಂಗ್!
ರಾಜ್ಯದಲ್ಲಿ ಬರೋಬ್ಬರಿ 50 ಲಕ್ಷದಷ್ಟು ಅನರ್ಹ ರೇಷನ್ ಕಾರ್ಡುಗಳಿವೆ ಎನ್ನಲಾಗುತ್ತಿದೆ. ಈಗಾಗಲೇ 12.47 ಲಕ್ಷ ನಕಲಿ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ರದ್ದುಪಡಿಸಲಾಗಿದೆ. ಈ ಪಟ್ಟಿಯಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಮೊದಲ ಸ್ಥಾನದಲ್ಲಿದ್ದು; ದಕ್ಷಿಣ ಕನ್ನಡ, ಚಿತ್ರದುರ್ಗ, ವಿಜಯಪುರ, ಮೈಸೂರು ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
ಅನರ್ಹರು ರೇಷನ್ ಕಾರ್ಡ್ ಪಡೆಯುವುದನ್ನು ತಡೆಯಲು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಪ್ರತಿಯೊಬ್ಬರಿಗೂ ಇ-ಕೆವೈಸಿ (ಆಧಾರ್ ದೃಢೀಕರಣ) ಕಡ್ಡಾಯಗೊಳಿಸಲಾಗಿದೆ. ಅರ್ಹತೆ ಇಲ್ಲದ 2.18 ಲಕ್ಷಕ್ಕೂ ಹೆಚ್ಚು ಮಂದಿ ಎಪಿಎಲ್ ಕಾರ್ಡ್ ಪಡೆದಿದ್ದು; ಇಂಥವರಿಗೆ ಖುದ್ದಾಗಿ ಕಾರ್ಡ್ ವಾಪಾಸು ಮಾಡುವಂತೆ ಇಲಾಖೆ ಗಡುವು ನೀಡಿದೆ.
ಇದನ್ನೂ ಓದಿ: ರಾಜ್ಯಾದ್ಯಂತ 50 ಲಕ್ಷ ರೇಷನ್ ಕಾರ್ಡ್ ರದ್ದು | ನಿಮ್ಮ ಕಾರ್ಡ್ ಈ ಪಟ್ಟಿಯಲ್ಲಿದೆಯಾ? 50 lakh ration card cancellation
ಯಾರೆಲ್ಲ ಅನರ್ಹರು?
ಪಡಿತರ ಚೀಟಿ ಹೊಂದಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ಧಿಷ್ಟವಾದ ಮಾನದಂಡ ನಿಗದಿಪಡಿಸಿದೆ. ಆ ಪೈಕಿ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಮೇಲ್ಪಟ್ಟ ಆದಾಯವುಳ್ಳವರು, ವೈಟ್ ಬೋರ್ಡಿನ ನಾಲ್ಕು ಚಕ್ರದ ವಾಹನ ಹೊಂದಿರುವವರು, ಆದಾಯ ತೆರಿಗೆ ಪಾವತಿಸುವವರು ರೇಷನ್ ಕಾರ್ಡ್ ಪಡೆಯಲು ಅನರ್ಹರು.
ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ನೀರಾವರಿ ಭೂಮಿ ಹೊಂದಿರುವವರು, ನಗರ ಪ್ರದೇಶಗಳಲ್ಲಿ ಒಂದು ಸಾವಿರ ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿರುವವರು, ಸರ್ಕಾರಿ ಹಾಗೂ ಅರೆ ಸರ್ಕಾರಿ ಉದ್ಯೋಗದಲ್ಲಿರುವವರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅರ್ಹರಾಗಿರುವುದಿಲ್ಲ.
ಇದನ್ನೂ ಓದಿ: ಕಡೆಗೂ ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಹಣ ಬಿಡುಗಡೆ | ಈ ಜಿಲ್ಲೆಯ ಮಹಿಳೆಯರಿಗೆ ಮೊದಲು ಹಣ ಜಮಾ Gruha Lakshmi money release
ಅನರ್ಹರರು ಕಾರ್ಡ್ ಪಡೆಯುವುದು ಶಿಕ್ಷಾರ್ಹ ಅಪರಾಧ
ಈಗಾಗಲೇ ಆಹಾರ ಇಲಾಖೆ ಅನರ್ಹರರ ಶೋಧ ಕಾರ್ಯ ನಡೆಸುತ್ತ ಬಂದಿದೆ. ಸರ್ಕಾರ ಹಲವು ಬಾರಿ ಅನರ್ಹ ಕಾರ್ಡ್ ಹಿಂದಿರುಗಿಸುವAತೆ ಸೂಚನೆ ಕೂಡ ನೀಡಿದೆ. ಇಷ್ಟಾಗಿಯೂ ಅನರ್ಹರರು ಸಿಕ್ಕಿ ಬಿದ್ದರೆ ಕಾರ್ಡ್ ರದ್ದಾಗುವುದು ಮಾತ್ರವಲ್ಲ ದಂಡ, ಶಿಕ್ಷೆ ಕೂಡ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಕರ್ನಾಟಕ ಪ್ರಿವೆನ್ಷನ್ ಆಫ್ ಅನ್‌ಆಥರೈಜಡ್ ಪೊಸಿಷನ್ ಆಫ್ ರೇಷನ್ ಕಾರ್ಡ್ 1977ರ ಆದೇಶದಂತೆ ಅನರ್ಹತೆ ಇರುವ ಹಾಗೂ ಕಾನೂನು ಬಾಹಿರವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಶಿಕ್ಷಾರ್ಹ ಅಪರಾಧ ಎಂಬುವುದನ್ನು ಆಹಾರ ಇಲಾಖೆ ಒತ್ತಿ ಒತ್ತಿ ಹೇಳುತ್ತಿದೆ.
ಬೋಗಸ್ ಕಾರ್ಡ್ ಹೊಂದಿರುವವರು ಇದೇ ಆಗಸ್ಟ್ 31 ರೊಳಗಾಗಿ ತಹಸೀಲ್ದಾರ್ ಕಚೇರಿಯ ಆಹಾರ ಶಾಖೆಗೆ ಅಥವಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ವಾಪಾಸು ನೀಡಬೇಕು. ಇಲ್ಲದಿದ್ದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
1 thought on “ಬೋಗಸ್ ರೇಷನ್ ಕಾರ್ಡ್ ಆಗಸ್ಟ್ 31ರೊಳಗೆ ವಾಪಾಸು ಮಾಡುವಂತೆ ಆಹಾರ ಇಲಾಖೆ ಖಡಕ್ ವಾರ್ನಿಂಗ್ Ineligible Ration Card Return Deadline”