Indian Navy Tradesman Recruitment 2025- ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ | ನೌಕಾಪಡೆಯಲ್ಲಿ 1,266 ಹುದ್ದೆಗಳ ನೇಮಕಾತಿ

Spread the love

ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳಿಂದ ಕೇಂದ್ರ ಸರ್ಕಾರಿ ಅಧೀನದ ನೌಕಾಪಡೆಯ ಟ್ರೇಡ್ ಮನ್ ಹುದ್ದೆಗಳಿಗೆ (Indian Navy Tradesman Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

ಭಾರತೀಯ ನೌಕಾಪಡೆಯು ದೇಶದ ವಿವಿಧೆಡೆಯಲ್ಲಿರುವ ನೌಕಾನೆಲೆಗಳು ಹಾಗೂ ಘಟಕಗಳಲ್ಲಿ ಟ್ರೇಡ್ಸ್ ಮನ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಕನಿಷ್ಠ 10ನೇ ತರಗತಿ ಪಾಸಾದವರು ಈ ಹುದ್ದೆಗಳಿಗೆ ಅರ್ಹರಾಗಿದ್ದಾರೆ.

ಐಟಿಐ ಅಥವಾ ಸಂಬಂಧಿಸಿದ ಟ್ರೇಡ್‌ನಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿಲ್ಲದಿದ್ದರೂ, ಹುದ್ದೆಗೆ ಸೂಕ್ತವಾಗಿದ್ದಲ್ಲಿ ವಿದ್ಯಾರ್ಹತೆಯಿಂದ ವಿನಾಯ್ತಿ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಆದರೆ, ನೌಕಾಪಡೆಯ ಘಟಕಗಳಲ್ಲಿ ಈಗಾಗಲೇ ಅಫ್ರೆಂಟೀಸ್‌ಶಿಪ್ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 02 ಕೊನೆಯ ದಿನವಾಗಿದೆ.

Bank Holiday- ಆಗಸ್ಟ್ 13ರಿಂದ 17ರ ವರೆಗೆ ಸಾಲು ಸಾಲು ಬ್ಯಾಂಕ್ ರಜಾ | ಆರ್‌ಬಿಐ ಘೋಷಿಸಿದ ರಜಾ ಪಟ್ಟಿ ಇಲ್ಲಿದೆ…

ವೇತನ ಮತ್ತು ವಯೋಮಿತಿ ವಿವರ

ಜನರಲ್ ಸೆಂಟ್ರಲ್ ಸರ್ವೀಸ್‌ನ ಗ್ರೂಪ್ ‘ಸಿ’ ವೃಂದದ ನಾನ್ ಗೆಜೆಟೆಡ್ ಹುದ್ದೆಗಳು ಇವಾಗಿದ್ದು, ನೇಮಕವಾಗುವ ಅಭ್ಯರ್ಥಿಗಳಿಗೆ 19,900 ರಿಂದ 63,200 ರೂ.ಗಳ ವೇತನಶ್ರೇಣಿ ಹೊಂದಿವೆ.

ಅಭ್ಯರ್ಥಿಗಳು 18ರಿಂದ 25 ವರ್ಷದೊಳಗಿನವರಾಗಿರಬೇಕು. ಆಯಾ ಮೀಸಲು ಅನ್ವಯಿಸಿ 5 ರಿಂದ 15 ವರ್ಷದವರೆಗೆ ವಯೋ ಸಡಿಲಿಕೆ ನೀಡಲಾಗುತ್ತದೆ.

ಎಸ್‌ಎಸ್‌ಎಲ್‌ಸಿ ಪಾಸಾದ ಅಭ್ಯರ್ಥಿಗಳಿಂದ ನೌಕಾಪಡೆಯ ಟ್ರೇಡ್ ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
Indian Navy Tradesman Recruitment 2025
ವಿದ್ಯಾರ್ಹತೆ ಎಷ್ಟಿರಬೇಕು?

ಮೊದಲೇ ಹೇಳಿದಂತೆ ಈ ಹುದ್ದೆಗಳಿಗೆ ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದು, ಆಯಾ ವಿಭಾಗದಲ್ಲಿ ಅಪ್ರೆಂಟೀಸ್‌ಶಿಪ್ ಪೂರೈಸಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ಆಯಾ ವಿಭಾಗದಲ್ಲಿ ಎರಡು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ.

ಅಭ್ಯರ್ಥಿಗೆ ಅಗತ್ಯ ಅನುಭವ ಅಥವಾ ಹುದ್ದೆಗೆ ಸೂಕ್ತ ಎನಿಸಿದಲ್ಲಿ ವಿದ್ಯಾರ್ಹತೆಯಲ್ಲಿ ವಿನಾಯ್ತಿ ನೀಡುವ ಅಧಿಕಾರ ನೇಮಕಾತಿ ಪ್ರಾಧಿಕಾರಕ್ಕಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Vidyasiri- ಎಸ್‌ಎಸ್‌ಎಲ್‌ಸಿ ನಂತರದ ವಿದ್ಯಾರ್ಥಿಗಳಿಗೆ 15,000 ರೂ. ಆರ್ಥಿಕ ನೆರವು | ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಈಗಲೇ ಅರ್ಜಿ ಸಲ್ಲಿಸಿ…

ಆಯ್ಕೆ ಹೇಗೆ?

ಅರ್ಜಿ ಪರಿಶೀಲನೆ ವಿಚಾರದಲ್ಲಿ ನೌಕಾ ಪಡೆಯು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳದಿದ್ದರೂ, ದಾಖಲಾತಿ ಪರಿಶೀಲನೆಯಲ್ಲಿ ಕಟ್ಟುನಿಟ್ಟು ಪಾಲಿಸಲಾಗುತ್ತದೆ. ತರಬೇತಿ ಪಡೆದ ಎಲ್ಲ ಅರ್ಜಿದಾರರನ್ನು ಲಿಖಿತ ಪರೀಕ್ಷೆಗೆ ಪರಿಗಣಿಸಲಾಗುತ್ತದೆ.

ಲಿಖಿತ ಪರೀಕ್ಷೆಯು ಬಹುಆಯ್ಕೆ ಮಾದರಿಯ ವಸ್ತುನಿಷ್ಠ ಪ್ರಶ್ನೆಗಳನ್ನೊಳಗೊಂಡ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಒಟ್ಟಾರೆ 100 ಅಂಕಗಳಿಗೆ ಸಾಮಾನ್ಯ ಬುದ್ಧಿಮತ್ತೆ-ರೀಸನಿಂಗ್, ಸಾಮಾನ್ಯ ತಿಳಿವಳಿಕೆ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ ಹಾಗೂ ಇಂಗ್ಲಿಷ್ ಭಾಷೆಯ ಪ್ರಶ್ನೆಗಳಿರುತ್ತವೆ.

100 ಪ್ರಶ್ನೆಗಳಿಗೆ ಎರಡು ತಾಸಿನಲ್ಲಿ ಉತ್ತರಿಸಬೇಕಿದೆ. ಇಲ್ಲಿ ಪಡೆದ ಅಂಕಗಳು ಅಥವಾ ಮೆರಿಟ್ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು onlineregistrationportal.in ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಫೋಟೋ ಹಾಗೂ ಇತರ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ ಲೋಡ್ ಮಾಡಬೇಕಿದೆ. ನೇಮಕಾತಿ ಬಯಸುವ ನೌಕಾಪಡೆಯ ವಿವಿಧ ಕಮಾಂಡ್‌ಗಳಿಗೆ ಘಟಕಗಳಿಗೆ ಅನುಗುಣವಾಗಿ ಆದ್ಯತೆಯನ್ನು ನಮೂದಿಸಬೇಕು.

BRBNMPL Recruitment 2025- ಮೈಸೂರು ನೋಟು ಮುದ್ರಣಾಲಯ ಕೇಂದ್ರದ ಹುದ್ದೆಗಳಿಗೆ ಅರ್ಜಿ ಆಹ್ವಾನ | 88 ಹುದ್ದೆಗಳ ನೇಮಕಾತಿ


Spread the love
WhatsApp Group Join Now
Telegram Group Join Now
error: Content is protected !!