IBPS Bank Recruitment 2025 – ವಿವಿಧ 11 ಸರ್ಕಾರಿ ಬ್ಯಾಂಕುಗಳಲ್ಲಿ 6,215 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಸುವರ್ಣಾವಕಾಶ

Spread the love

ದೇಶದ 11 ಸರ್ಕಾರಿ ಬ್ಯಾಂಕುಗಳಲ್ಲಿ ಒಟ್ಟು 6,215 ಹುದ್ದೆಗಳಿಗೆ ಪದವೀಧರರಿಂದ (IBPS Bank Recruitment 2025 ) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

2026-27ನೇ ಸಾಲಿಗೆ ಬ್ಯಾಂಕ್ ಉದ್ಯೋಗವನ್ನು ಕನಸು ಕಾಣುವ ಪದವೀಧರರಿಗೆ ಬಂಪರ್ ಸುದ್ದಿ! ಐಬಿಪಿಎಸ್ (Institute of Banking Personnel Selection) ಸಂಸ್ಥೆ ಬರೋಬ್ಬರಿ 6,215 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ಈ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರೊಬೇಷನರಿ ಆಫೀಸರ್ (PO), ಮ್ಯಾನೇಜ್‌ಮೆಂಟ್ ಟ್ರೇನಿ (MT) ಮತ್ತು ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ವಿವಿಧ ರೀತಿಯ ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
  • ಪ್ರೊಬೇಷನರಿ ಆಫೀಸರ್ಸ್, ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳು: 5,208
  • ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು (ಸ್ಕೇಲ್-1): 1,007
  • ಒಟ್ಟು ಹುದ್ದೆಗಳು: 6,215

PM Yasasvi Scholarship 2025- ಕೇಂದ್ರ ಸರ್ಕಾರದಿಂದ ₹3.72 ಲಕ್ಷ ವರೆಗೆ ವಿಶೇಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ | 9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಅವಕಾಶ

ಯಾವ್ಯಾವ ಬ್ಯಾಂಕುಗಳಲ್ಲಿ ನೇಮಕಾತಿ?

ಈ ನೇಮಕಾತಿಗೆ ಒಟ್ಟು 11 ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳು ಭಾಗಿಯಾಗಲಿದ್ದು, ಈ ಕೆಳಗಿನ ಬ್ಯಾಂಕುಗಳಲ್ಲಿ ನೇಮಕಾತಿ ನಡೆಯಲಿದೆ:

  1. ಬ್ಯಾಂಕ್ ಆಫ್ ಬರೋಡಾ
  2. ಬ್ಯಾಂಕ್ ಆಫ್ ಇಂಡಿಯಾ
  3. ಬ್ಯಾಂಕ್ ಆಫ್ ಮಹಾರಾಷ್ಟ್ರ
  4. ಕೆನರಾ ಬ್ಯಾಂಕ್
  5. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
  6. ಇಂಡಿಯನ್ ಬ್ಯಾಂಕ್
  7. ಇಂಡಿಯನ್ ಓವರ್‌ಸೀಸ್ ಬ್ಯಾಂಕ್
  8. ಪಂಜಾಬ್ ನ್ಯಾಷನಲ್ ಬ್ಯಾಂಕ್
  9. ಪಂಜಾಬ್ ಅಂಡ್ ಸಿಂಡ್ ಬ್ಯಾಂಕ್
  10. ಯುಕೋ ಬ್ಯಾಂಕ್
  11. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ವೇತನ ಶ್ರೇಣಿ ಎಷ್ಟು?

ಪಿಒ/ ಎಂಟಿ/ ಸ್ಪೆಷಲಿಸ್ಟ್ ಹುದ್ದೆಗಳಿಗೆ 48,400 ರಿಂದ 85,920 ರೂ. ಆಯಾ ಬ್ಯಾಂಕ್‌ಗಳಲ್ಲಿನ ನಿಯಮಾವಳಿಗಳ ಪ್ರಕಾರ ಇತರ ಭತ್ಯೆಗಳು ಅನ್ವಯವಾಗಲಿವೆ.

ದೇಶದ 11 ಸರ್ಕಾರಿ ಬ್ಯಾಂಕುಗಳಲ್ಲಿ ಒಟ್ಟು 6,215 ಹುದ್ದೆಗಳಿಗೆ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
IBPS Bank Recruitment 2025 Govt Bank Jobs
ವಯೋಮಿತಿ ವಿವರ

ಕನಿಷ್ಠ 20, ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು 02-07-1995 ಹಾಗೂ 01-07-2005ರ ನಡುವೆ ಜನಿಸಿರಬೇಕು. ಪರಿಶಿಷ್ಟರಿಗೆ 5 ವರ್ಷ, ಒಬಿಸಿ ವರ್ಗದವರಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

KCET Seat Blocking- ಸಿಇಟಿ ಸೀಟ್ ಬ್ಲಾಕಿಂಗ್ | ವಿದ್ಯಾರ್ಥಿಗಳಿಗೆ ಕೆಇಎ ಎಚ್ಚರಿಕೆ | ಬೇಕಾಬಿಟ್ಟಿ ಆಪ್ಷನ್ ಎಂಟ್ರಿಗೆ ಬ್ರೇಕ್

ವಿದ್ಯಾರ್ಹತೆ ಎಷ್ಟು?

21-07-2025ಕ್ಕೆ ಅನ್ವಯವಾಗುವಂತೆ ಪ್ರೊಬೇಷನರಿ ಆಫೀಸರ್ಸ್, ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳಿಗೆ ಕನಿಷ್ಠ ಪದವೀಧರರಾಗಿರಬೇಕು. ಇನ್ನು ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಆಯಾ ವಿಭಾಗದಲ್ಲಿ BE/B.Tech, BSc, MBA, LLB, PG ಪದವಿ ಪಡೆದಿರಬೇಕು.

ಅರ್ಜಿ ಶುಲ್ಕ ವೆಷ್ಟು?

ಎಸ್‌ಸಿ, ಎಸ್‌ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ. ಮತ್ತು ಉಳಿದವರಿಗೆ 850 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಪರೀಕ್ಷಾ ಪೂರ್ವ ತರಬೇತಿ

ಪರಿಶಿಷ್ಟ. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯದ ಆಯ್ದ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಆಕಾಂಕ್ಷಿಗಳು ಅರ್ಜಿಯಲ್ಲಿಯೇ ಈ ಬಗ್ಗೆ ನಮೂದಿಸಬೇಕು. ಆನ್‌ಲೈನ್‌ನಲ್ಲಿಯೇ ಈ ತರಬೇತಿ ನಡೆಯಲಿದೆ ಅಥವಾ ಭೌತಿಕವಾಗಿ ತರಬೇತಿ ನೀಡಲಾಗುತ್ತದೆ. ಸೆಪ್ಟೆಂಬರ್ ನಡೆಸಲಾಗುತ್ತದೆ.

Anganwadi LKG UKG Classes- ಅಕ್ಟೋಬರ್‌ನಿಂದ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭ | ಟೀಚರ್ ನೇಮಕಾತಿ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಆನ್‌ಲೈನ್ ಪರೀಕ್ಷೆ ಹೇಗಿರುತ್ತದೆ?

ಪಿಒ/ ಎಂಟಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯಲ್ಲಿ ನೂರು ವಸ್ತುನಿಷ್ಠ ಪ್ರಶ್ನೆಗಳಿಗೆ ನೂರು ಅಂಕಗಳಿದ್ದು 50 ನಿಮಿಷಗಳಲ್ಲಿ ಉತ್ತರಿಸಬೇಕಾಗುತ್ತದೆ. ಇಂಗ್ಲಿಷ್ ಭಾಷೆ-30 ಅಂಕ, ಕ್ಯಾಂಟಿಟೇಟಿವ್ ಅಪ್ಟಿಟ್ಯೂಡ್ 35, ರೀಸಸಿಂಗ್ ಎಬಿಲಿಟಿಯ 35 ಪ್ರಶ್ನೆಗಳು ಇರಲಿವೆ. ಪ್ರಶ್ನೆಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಇರಲಿದೆ.

ಮುಖ್ಯ ಪರೀಕ್ಷೆಯಲ್ಲಿ 145 ಪಶ್ನೆಗಳಿಗೆ 200 ಅಂಕಗಳಿದ್ದು, 160 ನಿಮಿಷಗಳಲ್ಲಿ ಉತ್ತರಿಸಬೇಕಾಗುತ್ತದೆ. ಇಂಗ್ಲಿಷ್ ಪ್ರಬಂಧ ರಚನೆ ಹಾಗೂ ಗದ್ಯಭಾಗದ 2 ಪ್ರಶ್ನೆಗಳಿದ್ದು, 25 ಅಂಕಗಳಿರುತ್ತವೆ. ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಳೆಯಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲು ಪರಿಗಣಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?

ಐಬಿಪಿಎಸ್ ಪೋರ್ಟಲ್‌ನಲ್ಲಿ ಸಿಆರ್‌ಪಿ ಪಿಒ/ಎಂಟಿ/ ಸ್ಪೆಷಲಿಸ್ಟ್ ಆಫೀಸರ್ಸ್ ನೇಮಕಾತಿ ವಿಭಾಗದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿ ಭರ್ತಿ ಮಾಡುವಾಗ ಭಾವಚಿತ್ರ, ಸಹಿ, ಹೆಬ್ಬೆಟ್ಟು ಗುರುತು, ಕೈಬರಹದ ಘೋಷಣಾ ಪತ್ರ, ಪ್ರಮಾಣಪತ್ರಗಳು, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಮೊದಲಾದವುಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು.

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-07-2025
  • PO/MT ಹುದ್ದೆಗಳ ಅಧಿಸೂಚನೆ: Download
  • ಸ್ಪೆಷಲಿಸ್ಟ್ ಕೇಡರ್ ಹುದ್ದೆಗಳ ಅಧಿಸೂಚನೆ: Download

Solar Free Electricity- ಮನೆಗೆ 20 ವರ್ಷ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಹೀಗೆ ಅರ್ಜಿ ಸಲ್ಲಿಸಿ…


Spread the love
WhatsApp Group Join Now
Telegram Group Join Now
error: Content is protected !!