JobsNews

IB Security Assistant Recruitment 2025- ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಪ್ತಚರ ಇಲಾಖೆ 455 ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Spread the love

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಪ್ತಚರ ಇಲಾಖೆ ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ (IB Security Assistant Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

2025ನೇ ಸಾಲಿನಲ್ಲಿ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ ಪರ್ವ ಶುರುವಾಗಿದೆ. ಕಳೆದ ಜುಲೈನಲ್ಲಿ 4,987 ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದ್ದ ಐಬಿ, ಆನಂತರ 394 ಜೂನಿಯರ್ ಇಂಟೆಲಿಜೆನ್ಸ್ ಅಫೀಸರ್ ಹುದ್ದೆಗಳಿಗೂ ಅಧಿಸೂಚನೆ ಪ್ರಕಟಿಸಿದೆ.

ಇದನ್ನೂ ಓದಿ: Unauthorized BPL Ration Card- 12 ಲಕ್ಷ ಬಿಪಿಎಲ್ ಕಾರ್ಡ್ ರದ್ದತಿಗೆ ಸರ್ಕಾರದ ಸಿದ್ಧತೆ | ನೀವು ಈ ಪಟ್ಟಿಯಲ್ಲಿದ್ದೀರಾ?

455 ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗಳು

ಈ ನೇಮಕಾತಿಗಳು ಚಾಲ್ತಿಯಲ್ಲಿರುವಾಗಲೇ ಇದೀಗ 455 ಸೆಕ್ಯೂರಿಟಿ ಅಸಿಸ್ಟೆಂಟ್ (Security Assistant – Motor Transport) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಸೆಪ್ಟೆಂಬರ್ 6ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಆಸಕ್ತರು ಸೆಪ್ಟೆಂಬರ್ 28ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು 455 ಹುದ್ದೆಗಳ ಪೈಕಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಐಬಿ ಕಚೇರಿಯಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಇದು ನೇರ ನೇಮಕಾತಿಯಾಗಿದ್ದು, ಅರ್ಜಿ ಸಲ್ಲಿಸಿ ಅರ್ಹತೆ ಮೇರೆಗೆ ದೇಶದ ಯಾವುದೇ ಭಾಗದಲ್ಲಾದರೂ ಕಾರ್ಯ ನಿರ್ವಹಿಸಬಹುದಾಗಿದೆ.

ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಗುಪ್ತಚರ ಇಲಾಖೆ ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ...
IB Security Assistant Recruitment 2025
ವಿದ್ಯಾರ್ಹತೆ ಮತ್ತು ಮಾಸಿಕ ವೇತನ

ಅರ್ಜಿ ಸಲ್ಲಿಸುವವರು 10ನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಇದರೊಂದಿಗೆ ಲಘು ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಮೋಟಾರ್ ಮೆಕಾನಿಸಂ ಬಗ್ಗೆ ತಿಳಿವಳಿಕೆ ಹೊಂದಿರಬೇಕು. ಕನಿಷ್ಠ ಒಂದು ವರ್ಷದ ಚಾಲನಾ ಅನುಭವ ಹೊಂದಿರಬೇಕು.

ಗುಪ್ತಚರ ಇಲಾಖೆಯ ಸೆಕ್ಯೂರಿಟಿ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕವಾದ ಅಭ್ಯರ್ಥಿಗಳಿಗೆ  21,700 ರೂ. ದಿಂದ 69,100 ರೂ. ವರೆಗೂ ಮಾಸಿಕ ವೇತನ ಇರಲಿದೆ. ಇದರ ಜೊತೆಗೆ ಕೇಂದ್ರರ ಸರ್ಕಾರದ ವಿವಿಧ ಸವಲತ್ತುಗಳು ಅನ್ವಯವಾಗಲಿವೆ.

ಇದನ್ನೂ ಓದಿ: AAI Recruitment 2025- ಕೇಂದ್ರ ಸರ್ಕಾರದ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ

ವಯೋಮಿತಿ ಮತ್ತು ಅರ್ಜಿ ಶುಲ್ಕ

18ರಿಂದ 27 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಮೀಸಲಾತಿ ವ್ಯಾಪ್ತಿಗೆ ಒಳಪಡುವ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಎಲ್ಲರಿಗೂ 550 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್.ಟಿ, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಲ್ಲಿ ವಿನಾಯಿತಿ ಇದೆ. ಈ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Karnataka Gramin Bank Recruitment 2025- ಕರ್ನಾಟಕ ಗ್ರಾಮೀಣ ಬ್ಯಾಂಕ್ 1,425 ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಲ್ಲಾ ಹಂತದ ವಿದ್ಯಾರ್ಹತೆಗೂ ಅವಕಾಶ

ಪರೀಕ್ಷಾ ವಿಧಾನ ಮತ್ತು ಪರೀಕ್ಷಾ ಕೇಂದ್ರಗಳು

100 ಅಂಕಗಳಿಗೆ ಆನ್‌ಲೈನ್ ಪರೀಕ್ಷೆ ನಡೆಯಲಿದೆ. ಜನರಲ್ ಅವೇರ್ನೆಸ್, ಬೇಸಿಕ್ ಟ್ರಾನ್ಸ್ಪೋರ್ಟ್/ಡೈವಿಂಗ್ ರೂಲ್ಸ್, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್, ನ್ಯೂಮರಿಕಲ್ /ಅನಾಲಿಟಿಕಲ್ /ಲಾಜಿಕಲ್ ಎಬಿಲಿಟಿ ಮತ್ತು ರೀಸನಿಂಗ್ ಮತ್ತು ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಒಟ್ಟು 100 ಅಂಕಗಳನ್ನು ನಿಗದಿಪಡಿಸಲಾಗಿದೆ.

ಮೋಟಾರ್ ಮೆಕಾನಿಸಂ ಮತ್ತು ಡೈವಿಂಗ್ ಟೆಸ್ಟ್/ಸಂದರ್ಶನಕ್ಕೆ 50 ಅಂಕಗಳಿರುತ್ತವೆ. ರಾಜ್ಯದಲ್ಲಿ ರಾಜಧಾನಿ ಬೆಂಗಳೂರು, ಮಂಗಳೂರು, ಬೆಳಗಾವಿ, ಮೈಸೂರು ಮತ್ತು ಶಿವಮೊಗ್ಗಗಳಲ್ಲಿ ಪರೀಕ್ಷಾ ಕೇಂದ್ರಗಳು ಇರಲಿವೆ.

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 28-09-2025

Karnataka Police Recruitment 2025- ಪೊಲೀಸ್ ಕಾನ್‌ಸ್ಟೇಬಲ್ ಕರ್ನಾಟಕ ಪೊಲೀಸ್ ಇಲಾಖೆ 4,656 ಹುದ್ದೆಗಳ ನೇಮಕಾತಿ | ರಾಜ್ಯ ಸರ್ಕಾರದಿಂದ ಚಾಲನೆ


Spread the love
WhatsApp Group Join Now
Telegram Group Join Now

Related Articles

Back to top button
error: Content is protected !!