HSRP Number Plate Registration : ಕರ್ನಾಟಕ ರಾಜ್ಯ ಸರ್ಕಾರವು ವಾಹನಗಳ ನಂಬರ್ ಪ್ಲೇಟ್ ಅನ್ನು HSRP (High Security Registration Plates) ನಂಬರ್ ಪ್ಲೇಟ್ ಆಗಿ ಅಳವಡಿಸಿಕೊಳ್ಳಲು ಈಗಾಗಲೇ ಮೂರು ಬಾರಿ ದಿನಾಂಕ ಮುಂದೂಡಿಕೆ ಮಾಡಲಾಗಿದೆ. ಈ ಹಿಂದೆ ಮೇ 31 ಕೊನೆಯ ದಿನಾಂಕವಾಗಿ ನಿಗದಿಪಡಿಸಿತ್ತು. ಇದೀಗ ಜೂನ್ 12ರ ಡೆಡ್‌ಲೈನ್ ಕೊಟ್ಟು ಕರ್ನಾಟಕ ಸರ್ಕಾರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಖಡಕ್ ವಾರ್ನಿಂಗ್ ಕೊಟ್ಟಿದೆ.
ರಾಜ್ಯದಲ್ಲಿ ಒಟ್ಟು ಎರಡು ಕೋಟಿ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಉದ್ದೇಶ ಹೊಂದಲಾಗಿದೆ. ಹೀಗಿದ್ದರೂ 2 ಕೋಟಿ ವಾಹನಗಳ ಪೈಕಿ, ಕೇವಲ 35 ಲಕ್ಷ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಲಾಗಿದೆ. ಹೀಗಾಗಿ ಇದೀಗ ಕರ್ನಾಟಕ ಸರಕಾರವು ದಂಡ ಪ್ರಯೋಗಕ್ಕೆ ಮುಂದಾಗಿದೆ.
ಏನಿದು HSRP ನಂಬರ್ ಪ್ಲೇಟ್?
ವಾಹನ ಸವಾರರ ಮತ್ತು ವಾಹನಗಳ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಹೊಸದಾಗಿ ಜಾರಿಗೆ ತಂದಿರುವ ಹೈ ಸೆಕ್ಯೂರಿಟಿ ರೆಜಿಸ್ಟ್ರೇಷನ್ ನಂಬರ್ ಪ್ಲೇಟ್ (High Security Registration Number Plate) ಇದಾಗಿದೆ. ಈ ನೋಂದಣಿ ಫಲಕವು ಅಲುಮಿನಿಯಂ ನಿಂದ ಮಾಡಲಾಗಿದ್ದು ಒಮ್ಮೆ ಇದನ್ನು ನಿಮ್ಮ ವಾಹನಕ್ಕೆ ಅಳವಡಿಸಿಕೊಂಡರೆ ಯಾವುದೇ ಕಾರಣಕ್ಕೂ ಮರುಉಪಯೋಗ ಮಾಡಲು ಸಾಧ್ಯವಾಗುವುದಿಲ್ಲ.
ವಾಹನದ ನೋಂದಣಿ ಫಲಕದ ಮುಂಭಾಗ ಮತ್ತು ಹಿಂಭಾಗದ ಮೇಲಿನ ಎಡ ಮೂಲೆಯಲ್ಲಿ 20X20 MM ಗಾತ್ರದ ಕ್ರೋಮಿಯಂ ಆಧಾರಿತ ಹೋಲೊಗ್ರಾಮ್ ಅನ್ನು ಅಳವಡಿಸಲಾಗುತ್ತದೆ. ಇದು ಅತ್ಯಂತ ಸುರಕ್ಷಿತವಾಗಿರುತ್ತದೆ.
ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಮಾಹಿತಿ FID Registration
HSRP ಪ್ಲೇಟ್ ಯಾರು ಅಳವಡಿಸಿಕೊಳ್ಳಬೇಕು?
1ನೇ ಏಪ್ರಿಲ್ 2019ಕ್ಕಿಂತ ಮೊದಲ ನೋಂದಾಯಿಸಲ್ಪಟ್ಟ ನಂಬರ್ ಪ್ಲೇಟ್ ಹೊಂದಿರುವ ಎಲ್ಲಾ ವಾಹನೆಗಳಿಗೂ ಈ ಹೊಸ ಮಾದರಿಯ HSRP ನಂಬರ್ ಪ್ಲೇಟ್’ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದ ಒಳಗಾಗಿ (ಜೂನ್ 12) ನಿಮ್ಮ ವಾಹನಕ್ಕೆ ಈ ಹೊಸ ಮಾದರಿಯ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ವಾಹನ ಚಲಾಯಿಸಿದರೆ ಮೊದಲ ಬಾರಿಗೆ ಒಂದು ಸಾವಿರ ರೂಪಾಯಿ ದಂಡ ಹಾಗೂ ಎರಡನೇ ಬಾರಿ ಸಿಕ್ಕಿ ಬಿದ್ದರೆ 2000 ರೂಪಾಯಿ ದಂಡವನ್ನು ವಿಧಿಸುವ ಸಾಧ್ಯತೆ ಇದೆ.
ಹಳೆಯ ಮಾದರಿಯ ನಂಬರ್ ಪ್ಲೇಟ್’ಗಳಿಗೂ ಹಾಗೂ ಹೊಸ HSRP ನಂಬರ್ ಪ್ಲೇಟ್’ಗಳಿಗೂ ಇರುವ ವ್ಯತ್ಯಾಸ
ಈ ಹೊಸ ಮಾದರಿಯ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್’ನಲ್ಲಿ ನಿಮ್ಮ ವಾಹನದ ಎಲ್ಲಾ ಮಾಹಿತಿಯು ಸರ್ಕಾರಿ ಕಚೇರಿಯಲ್ಲಿ ಸಂಗ್ರಹವಾಗಿರುತ್ತದೆ. ಇದರಿಂದ ಒಂದು ವೇಳೆ ನಿಮ್ಮ ವಾಹನ ಕಳ್ಳತನವಾದರೂ ಕೂಡ ಬೇಗನೆ ಹುಡುಕಲು ಸಹಾಯವಾಗುತ್ತದೆ.
ಅದೇ ರೀತಿ ಒಮ್ಮೆ ನಿಮ್ಮ ವಾಹನಕ್ಕೆ ಈ ಹೊಸ ಮಾದರಿಯ ನಂಬರ್ ಪ್ಲೇಟ್ ಅಳವಡಿಸಿದರೆ ಅನಧಿಕೃತವಾಗಿ ಬದಲಾವಣೆ ಮಾಡಿಕೊಳ್ಳುವುದು ಮರುಬಳಕೆ ಮಾಡುವುದು ಅಸಾಧ್ಯವಾಗಿದೆ. ವಿಶೇಷವೇನೆಂದರೆ ಈ ನಂಬರ್ ಪ್ಲೇಟ್’ನಲ್ಲಿರುವ ಮಾಹಿತಿಯನ್ನು ತಿದ್ದಲು ಮತ್ತು ಬದಲಾಯಿಸಲು ಸಾಧ್ಯವಿಲ್ಲ.
Government Schemes for Women : ಮಹಿಳೆಯರಿಗಾಗಿ ಇರುವ ವಿಶೇಷ ಸರಕಾರಿ ಯೋಜನೆಗಳು
HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಈ ಹೊಸ ಮಾದರಿಯ ನಂಬರ್ ಪ್ಲೇಟ್’ಗಳನ್ನು ನೀವು ‘ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮನುಫಾಕ್ಚರ್’ (SIAM) ಅಧಿಕೃತ ವೆಬ್‌ಸೈಟ್’ನಿಂದ ಮಾತ್ರ ಬುಕ್ ಮಾಡಿಕೊಳ್ಳಲು ಅವಕಾಶವಿದೆ. ಆನ್‌ಲೈನ್ ಮುಖಾಂತರ ಅರ್ಜಿ ಹಾಕಲು ಸಾಮಾನ್ಯವಾಗಿ ನಿಮ್ಮ ಹೆಸರು, ನಿಮ್ಮ ಮೊಬೈಲ್ ನಂಬರ್ ಹಾಗೂ ವಾಹನದ ನಂಬರ್, ರಾಜ್ಯ ಸೇರಿದಂತೆ ಇನ್ನಿತರೇ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಯ ಬಳಿಕ ನಿಮ್ಮ ನಂಬರ್ ಪ್ಲೇಟ್ ಅನ್ನು ಹತ್ತಿರದ ಶೋ ರೂಂಗೆ ಡೆಲಿವರಿ ಮಾಡಿಸಿಕೊಂಡು, ಅಲ್ಲಿಂದ ಪಡೆದುಕೊಳ್ಳಬಹುದಾಗಿದೆ. ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ತೊಂದರೆಯಲ್ಲಿ ನಿಮ್ಮ ಸಮೀಪದ ಆರ್‌ಟಿಓ ಕಚೇರಿಗೆ ಅಥವಾ ಶೋರೂಂ ಗೆ ಭೇಟಿ ನೀಡಿ ಸುಲಭವಾಗಿ ಪಡೆದುಕೊಳ್ಳಬಹುದು.
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವವರು ಎಚ್ಚರ ವಹಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರಿಗೆ ನಡೆಯುತ್ತಿರುವ ವಂಚನೆಯ ಬಗ್ಗೆ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ವಿವರಣೆ ನೀಡಿದೆ. ಹಲವಾರು ಸೈಬರ್ ವಂಚಕರು ನಕಲಿ ಲಿಂಕ್’ಗಳನ್ನು ಕ್ರಿಯೇಟ್ ಮಾಡಿ QR CODE ಸ್ಕ್ಯಾನ್ ಮಾಡಿಸಿಕೊಂಡು ಹಣ ಪಡೆಯುವಂತಹ ವಂಚನೆಗೆ ಇಳಿದಿದ್ದಾರೆ. ಎಚ್‌ಎಸ್‌ಆರ್‌ಪಿ ಪ್ಲೇಟ್ ನೋಂದಣಿಯ ಹೆಸರಿನಲ್ಲಿ ಲಿಂಕ್’ಗಳನ್ನು ಸೃಷ್ಟಿ ಮಾಡಿ ಜನರಿಗೆ ಮೋಸ ಮಾಡುವ ವಂಚಕರಿ೦ದ ಸುರಕ್ಷಿತವಾಗಿರಲು ಸರ್ಕಾರವು ಸೂಚಿಸಿದೆ.
HSRP ನಂಬರ್ ಪ್ಲೇಟ್ ನೋಂದಣಿ ನಿಮ್ಮ ಮೊಬೈಲ್’ನಲ್ಲಿಯೆ ಮಾಡುವುದು ಹೇಗೆ ?
HSRP ನಂಬರ್ ಪ್ಲೇಟ್ ನೋಂದಣಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು SIAMನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಥವಾ ಕೆಳಗಿನ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ. ಜಾಲತಾಣದಲ್ಲಿ ಕೇಳಲಾಗುವ ನಿಮ್ಮ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಜೂನ್ 12, 2024 ಕೊನೆಯ ದಿನಾಂಕವಾಗಿರುತ್ತದೆ. HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ನಿಗದಿಸಿರುವ ಕೊನೆಯ ದಿನಾಂಕ : 12-06-2024
ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
ರೈತರಿಗೆ ಸಿಗುವ ತೋಟಗಾರಿಕೆ ಇಲಾಖೆ ಸಬ್ಸಿಡಿ ಯೋಜನೆಗಳು Horticulture Department Subsidy Schemes
Instead of putting penalty or fine,
They has to arrenge at local Dealers ,
Coz ,online application is very fraud
I lost 1095 in online hsrp site who is responsible for that they could have arranged local dealers everywhere instead of making strict decisions, make easy for public