ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯು ರೈತರಿಗೆ ಹಲವು ಸಬ್ಸಿಡಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ, ಕೃಷಿಕರ ಆದಾಯವನ್ನು ಹೆಚ್ಚಿಸಲು ಹಾಗೂ ತೋಟಗಾರಿಕೆ ಕೃಷಿಯನ್ನು ಪ್ರೋತ್ಸಾಹಿಸಲು ಅನೇಕ ಸಬ್ಸಿಡಿ ಹಾಗೂ ನೆರವಿನ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಗಳ ಸದುಪಯೋಗದಿಂದ ರೈತರು ತಾಂತ್ರಿಕ ಆಧುನಿಕತೆಯನ್ನು ಅಳವಡಿಸಿಕೊಳ್ಳಬಹುದು.
ಈ ಲೇಖನದಲ್ಲಿ ರೈತರಿಗೆ ಲಭ್ಯವಿರುವ ಪ್ರಮುಖ ತೋಟಗಾರಿಕೆ ಸಬ್ಸಿಡಿ ಯೋಜನೆಗಳು ಹಾಗೂ ಅವುಗಳ ಪ್ರಯೋಜನ ಮತ್ತು ಅರ್ಜಿ ಸಲ್ಲಿಕೆ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Ration Card Raddu- ರೇಷನ್ ಕಾರ್ಡ್ ರದ್ದು | ಸಿಎಂ ಖಡಕ್ ಸೂಚನೆ | ನಿಮ್ಮ ಕಾರ್ಡ್ ರದ್ದಾಗಿದೆಯಾ? ಈಗಲೇ ಚೆಕ್ ಮಾಡಿ
1. ಹನಿ ನೀರಾವರಿ (Drip Irrigation) ಯೋಜನೆ
ರೈತರು ಗರಿಷ್ಠ 5 ಹೆಕ್ಟೇರ್ (15 ಎಕರೆ) ವರೆಗೆ ಈ ಸೌಲಭ್ಯ ಪಡೆಯಬಹುದು. ಪರಿಶಿಷ್ಟ ಜಾತಿ/ಪಂಗಡ ರೈತರಿಗೆ 90% ಹಾಗೂ ಇತರ ವರ್ಗದ ರೈತರಿಗೆ: 75% ಸಹಾಯಧನ ಸಿಗುತ್ತದೆ. ತರಕಾರಿ ಮತ್ತು ಹೂವಿನ ಬೆಳೆಗಳಿಗೆ ಗರಿಷ್ಠ 5 ಎಕರೆ ವರೆಗೆ ಅನುದಾನ ಸಿಗಲಿದೆ.
2. ನರ್ಸರಿ ಸ್ಥಾಪನೆಗೆ ಪ್ರೋತ್ಸಾಹಧನ
ಗುಣಮಟ್ಟದ ಸಸಿಗಳನ್ನು ಸ್ಥಳೀಯವಾಗಿ ಪೂರೈಸಲು ಉತ್ತೇಜನೆಗಾಗಿ ಈ ಯೋಜನೆ ಜಾರಿಯಲ್ಲಿದ್ದು; ಕನಿಷ್ಠ 2.5 ಎಕರೆ ಜಮೀನು ಅಗತ್ಯ. ನಿರ್ಮಾಣ ವೆಚ್ಚದ ಶೇ.50ರಷ್ಟು ರಾಷ್ಟಿçÃಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅನುದಾನ ಸಿಗಲಿದೆ.
3. ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ
ಕೃಷಿಯಲ್ಲಿ ಆಧುನಿಕ ಉಪಕರಣ ಬಳಕೆಯನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ‘ಕೃಷಿ ಯಂತ್ರೋಪಕರಣ’ ಖರೀದಿಗೆ ಸಹಾಯಧನ ನೀಡಲಾಗುತ್ತದೆ. ಯಂತ್ರದ ಪ್ರಕಾರಕ್ಕೆ ಅನುಗುಣವಾಗಿ ಶೇ.40 ರಿಂದ 50ರಷ್ಟು ಸಹಾಯಧನ ಸಿಗಲಿದ್ದು; ಒಂದು ಕುಟುಂಬದಲ್ಲಿ ಓರ್ವ ರೈತ ಮಾತ್ರ ಅರ್ಹ.
4. ಅಡಿಕೆ ಒಣಗಿಸಲು ಸೋಲಾರ್ ಘಟಕ
ಮಳೆಗಾಲದಲ್ಲಿ ಅಡಿಕೆಗೆ ಸರಿಯಾದ ಒಣಗಿಸುವ ಸೌಲಭ್ಯ ನೀಡಲು 1000 ಕೆ.ಜಿ ಸಾಮರ್ಥ್ಯದ ಘಟಕಕ್ಕೆ ಗರಿಷ್ಠ ₹2.28 ಲಕ್ಷ ಸಹಾಯಧನ ನೀಡಲಾಗುತ್ತದೆ. ಈ ಯೋಜನೆಯಡಿ ಸಬ್ಸಿಡಿ ಪಡೆಯಲು ಕನಿಷ್ಠ 2.5 ಎಕರೆ ಜಮೀನು ಬೇಕಾಗಿರುತ್ತದೆ.
5. ಶೀತಲೀಕೃತ ಘಟಕ (Cold Storage)
ಕೊಯ್ಲು ಆದ ಬೆಳೆಗಳನ್ನು ಶೀತ ನಿರ್ವಹಣೆಯಲ್ಲಿ ಸಂಗ್ರಹಿಸಿ ಉತ್ತಮ ದರಕ್ಕೆ ಮಾರಾಟ ಮಾಡಲು ಈ ಸಬ್ಸಿಡಿ ನೀಡಲಾಗುತ್ತದೆ. ಬೇಗ ನಾಶವಾಗುವ ಹಣ್ಣು, ಹಂಪಲು, ತರಕಾರಿಗಳಿಗೆ ಶೀತಲೀಕೃತ ಘಟಕ (Cold Storage) ಅತ್ಯಂತ ಉಪಯುಕ್ತವಾಗಿದೆ. ಘಟಕ ಸ್ಥಾಪನೆಗೆ ಶೇ.25 ರಿಂದ 50ರಷ್ಟು ಸಹಾಯಧನ ಸಿಗಲಿದೆ.

6. ಪ್ಯಾಕ್ ಹೌಸ್ ಸ್ಥಾಪನೆ
ಮಾರುಕಟ್ಟೆಗೆ ಸಾಗಣೆಗೆ ಪೂರ್ವ ಸಿದ್ಧತೆಗಾಗಿ ಪ್ಯಾಕಿಂಗ್ ಘಟಕ ಸ್ಥಾಪಿಸಲು ಗರಿಷ್ಠ ₹2 ಲಕ್ಷ ಸಹಾಯಧನ ನೀಡಲಾಗುತ್ತದೆ. ಇದಕ್ಕಾಗಿ ರೈತರು ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.
7. ಅಣಬೆ ಬೆಳೆಗೆ ಸಹಾಯಧನ
ಪ್ರೋಟೀನ್-ಪೂರಕ ಆಹಾರದ ಉತ್ಪಾದನೆಯಲ್ಲಿ ರೈತರನ್ನು ತೊಡಗಿಸಲು ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅಣಬೆ ಬೆಳೆಯುವ ಘಟಕ, ಬೀಜ ಘಟಕ, ಕಾಂಪೋಸ್ಟ್ ಘಟಕಗಳಿಗೆ ಶೇ.40ರಷ್ಟು ಪ್ರತ್ಯೇಕ ಸಹಾಯಧನ ಸಿಗುತ್ತದೆ.
8. ಪಾಲಿಹೌಸ್ (Polyhouse) ನಿರ್ಮಾಣ
ನಿಯಂತ್ರಿತ ಪರಿಸರದಲ್ಲಿ ಬೆಳೆಯುವ ವ್ಯವಸ್ಥೆ ನಿರ್ಮಿಸಲು ರೈತರಿಗೆ ಪಾಲಿಹೌಸ್ ನಿರ್ಮಾಣಕ್ಕೆ ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ. ಪಾಲಿಹೌಸ್ ಒಳಗೆ ಬೆಳೆಯುವ ಹೂವು, ತರಕಾರಿ ಬೆಳೆಯಿಗೂ ಸಬ್ಸಿಡಿ ಲಭ್ಯವಿದೆ.
9. ರೈತ ಉತ್ಪಾದಕ ಸಂಸ್ಥೆಗಳಿಗೆ ಪ್ರೋತ್ಸಾಹ
ರೈತರಿಗೆ ಉತ್ಪಾದನೆಯಿಂದ ಮಾರಾಟದವರೆಗಿನ ಸದುಪಯೋಗದ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರಕಾರದ ‘ಅಮೃತ ರೈತ ಉತ್ಪಾದಕ ಸಂಸ್ಥೆ’ ಯೋಜನೆ ಹಾಗೂ ಕೇಂದ್ರ ಸರಕಾರದ ‘ಎಫ್‌ಪಿಒ (Farmer Producer Organization)’ ಯೋಜನೆಯಡಿ ಅನುದಾನ ಜಾರಿಯಲ್ಲಿವೆ. ಈ ಯೋಜನೆಗಳ ಅಡಿಯಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ.
e-Swathu Property Details- ನಿಮ್ಮ ಆಸ್ತಿಯ ಇ-ಸ್ವತ್ತು ದಾಖಲೆಯನ್ನು ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಿರಿ
10. ಜೇನು ಕೃಷಿಗೆ ಸಹಾಯಧನ
ಪಾರಂಪರಿಕ ಕೃಷಿಯಿಂದ ವಿಭಿನ್ನ ಕಸುಬಿಗೆ ಉತ್ತೇಜಿಸುವ ಉದ್ದೇಶದಿಂದ ಜೇನು ಕೃಷಿಗೆ ಶೇ.75ರಷ್ಟು (ರಾಜ್ಯ ಯೋಜನೆ), ಶೇ.40ರಷ್ಟು (ಕೇಂದ್ರ ಯೋಜನೆ) ಸಹಾಯಧನ ನೀಡಲಾಗುತ್ತದೆ. ಜೇನುಪೆಟ್ಟಿಗೆ ಖರೀದಿ, ತರಬೇತಿ, ಮಾರಾಟದಲ್ಲಿ ಸಹಾಯ ಕೂಡ ¯ಭ್ಯವಿದೆ.
ಇತರೆ ಪ್ರಮುಖ ಸಬ್ಸಿಡಿ ಯೋಜನೆಗಳು
- ತೆಂಗಿನ ಬೆಳೆಯಲ್ಲಿ ಪಕ್ಷಿ, ಕೀಟ, ಆಲಿಕಲ್ಲು ನಿರೋಧಕ ಬಲೆ
- ಜೈವಿಕ ನಿಯಂತ್ರಕಗಳ ಉತ್ಪಾದನಾ ಪ್ರಯೋಗಾಲಯ
- ಸಮುದಾಯ ನೀರು ಸಂಗ್ರಹಣಾ ಘಟಕ
- ವೈಯಕ್ತಿಕ ನೀರು ಸಂಗ್ರಹಣಾ ಘಟಕ
- ಸಮಗ್ರ ಪೋಷಕಾಂಶ ನಿರ್ವಹಣೆ ಹಾಗೂ ಸಮಗ್ರ ರೋಗ-ಕೀಟ ನಿಯಂತ್ರಣ
- ಔಷಧ ಸಿಂಪಡಿಸುವ ಸಂಪ್
- ನೀರಾವರಿಗೆ ಬಳಸುವ ಪಂಪ್
- ಟಾರ್ಪಲ್, ಕಟಾವು ಯಂತ್ರ ಖರೀದಿ
- ಪ್ಲಾಸ್ಟಿಕ್ ಹೊದಿಕೆ
- ಸಸ್ಯಾಗಾರಗಳ ಸ್ಥಾಪನೆ
- ಈರುಳ್ಳಿ ಶೇಖರಣಾ ಘಟಕ
- ಪ್ರಾಥಮಿಕ ಸಂಸ್ಕರಣಾ ಘಟಕ
- ಶೀತಲ ವಾಹನ
- ಹಣ್ಣು ಮಾಗಿಸುವ ಘಟಕ
- ಬೀಜ ಸಂಸ್ಕರಣೆಯ ಮೂಲಸೌಕರ್ಯ ಅಭಿವೃದ್ಧಿ
- ಅಂಗಾಂಶ ಕೃಷಿ ಪ್ರಯೋಗ ಶಾಲೆ
- ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
- ಪರಂಪರಾಗತ ಕೃಷಿ ವಿಕಾಸ ಯೋಜನೆ
- ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ
ಅರ್ಜಿಯ ವಿಧಾನ ಮತ್ತು ಸಂಪರ್ಕ
ಈ ಎಲ್ಲಾ ಯೋಜನೆಗಳಿಗೆ ತೋಟಗಾರಿಕೆ ಇಲಾಖೆಯು ಕಾಲಕಾಲಕ್ಕೆ ಅರ್ಜಿ ಆಹ್ವಾನಿಸುತ್ತದೆ. ಆಗ ನಿಮ್ಮ ಭೂಮಿ ದಾಖಲೆ, ಪಹಣಿ, ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣಪತ್ರ ಹಾಜರು ಮಾಡಿ, ಆಯಾ ಯೋಜನೆಗೆ ಅರ್ಹತೆ ದೃಢಪಡಿಸಿ, ಅರ್ಜಿ ಸಲ್ಲಿಸಬಹುದು.
ಪ್ರಾಥಮಿಕ ಮಾಹಿತಿಗಾಗಿ ಇಲ್ಲಿ ಸಂಕ್ಷಿಪ್ತ ವಿವರ ನೀಡಲಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಕೆಗೆ ಇಂದೇ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ. ಅರ್ಹತೆ, ಡಾಕ್ಯುಮೆಂಟ್ ವಿವರಗಳು ಹಾಗೂ ಅರ್ಜಿ ಸಲ್ಲಿಕೆ ದಿನಾಂಕಗಳ ಕುರಿತು ಸ್ಪಷ್ಟ ಮಾಹಿತಿ ಪಡೆದು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ…