Home Guard Recruitment Shivamogga : 173 ಪುರುಷರು ಹಾಗೂ 16 ಮಹಿಳೆಯರು ಸೇರಿ ಒಟ್ಟು 189 ಹೋಮ್‌ಗಾರ್ಡ್ ಹುದ್ದೆಗಳಿಗೆ 10ನೇ ತರಗತಿ ಪಾಸಾದ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಗೃಹರಕ್ಷಕ ದಳದಲ್ಲಿ (Gruharakshaka Dala) ಸೇವೆ ಸಲ್ಲಿಸಬಯಸುವ ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.
ನೇಮಕಾತಿ ಕುರಿತ ಸಂಕ್ಷಿಪ್ತ ವಿವರ
- ನೇಮಕಾತಿ ಸಂಸ್ಥೆ : ಗೃಹರಕ್ಷಕ ದಳ, ಶಿವಮೊಗ್ಗ
- ಹುದ್ದೆಗಳ ಹೆಸರು : ಗೃಹರಕ್ಷಕ/ ಗೃಹರಕ್ಷಕಿ
- ಒಟ್ಟು ಖಾಲಿ ಹುದ್ದೆಗಳು : 173+16 ಹುದ್ದೆಗಳು
- ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
- ಉದ್ಯೋಗ ಸ್ಥಳ : ಶಿವಮೊಗ್ಗ ಜಿಲ್ಲೆ
ವಯೋಮಿತಿ ಮತ್ತು ವಿದ್ಯಾರ್ಹತೆ
18 ರಿಂದ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಈ ವಯಸ್ಸಿನೊಳಗಿರುವ 10ನೇ ತರಗತಿ ಪಾಸಾಗಿರುವ ಅರ್ಹ ಪುರುಷರು ಹಾಗೂ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ರಾಜಕೀಯ ಪಕ್ಷ-ಸಂಘ ಸಂಸ್ಥೆಗಳ ಸದಸ್ಯರು, ಕಾರ್ಯಕರ್ತರು ಆಗಿರಬಾರದು ಮತ್ತು ಯಾವುದೇ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿರಬಾರದು.
ಗೃಹರಕ್ಷಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು 10 ದಿನಗಳ ಮೂಲ ತರಬೇತಿ ನೀಡಲಾಗುತ್ತದೆ. ನೆರೆ ರಕ್ಷಣೆ, ಅಗ್ನಿಶಮನ ತರಬೇತಿ, ಪ್ರಥಮ ಚಿಕಿತ್ಸೆ, ರೈಫಲ್ ಟ್ರೈನಿಂಗ್, ಸಂಚಾರ ನಿಯಂತ್ರಣ, ಶಸ್ತ್ರಾಸ್ತ್ರ ತರಬೇತಿ ಮೊದಲಾದ ತರಬೇತಿ ನೀಡಿ ತುರ್ತು ಸಂದರ್ಭಗಳಲ್ಲಿ ಅವರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತದೆ.
ಖಾಲಿ ಹುದ್ದೆಗಳ ವಿವರ ಮತ್ತು ಘಟನಾಧಿಕಾರಿಗಳ ಸಂಪರ್ಕ ಸಂಖ್ಯೆ
- ಶಿವಮೊಗ್ಗ : 37 (ಪುರುಷ), 02 (ಮಹಿಳೆ)
ಶೋಭರಾಜ್ ಮೊ: 8310190881 - ಕುಂಸಿ 02 (ಪುರುಷ)
ಹಾರನಹಳ್ಳಿ 18 (ಪುರುಷ) - ಭದ್ರಾವತಿ 18 (ಪುರುಷ)
ಪಿ. ಆರ್. ರಾಘವೇಂದ್ರ ಜೆಟ್ಟಿ ಮೊ: 9916573291 - ಹೊಳೆಹೊನ್ನೂರು ಪುರುಷ 06 (ಪುರುಷ) 14 (ಮಹಿಳೆ)
ಸಿ. ಮಧು ಮೊ: 9686631428 - ತೀರ್ಥಹಳ್ಳಿ 10 (ಪುರುಷ)
ಜಗದೀಶ್ ಮೊ: 9900283490 - ಸಾಗರ 15 (ಪುರುಷ)
ಹೆಚ್. ಎಸ್. ಸುನೀಲ್ ಕುಮಾರ್ ಮೊ: 8105840345
- ಜೋಗ 05 (ಪುರುಷ)
ಹೆಚ್ .ಪಿ. ರಾಘವೇಂದ್ರ ಮೊ: 9535388472 - ಆನಂದಪುರ 09 (ಪುರುಷ)
ಎಂ. ರಾಘವೇಂದ್ರ ಮೊ: 9632614031 - ಶಿಕಾರಿಪುರ 05 (ಪುರುಷ)
ಡಿ. ಸಿದ್ದರಾಜು ಮೊ: 9449699459 - ಶಿರಾಳಕೊಪ್ಪ 06 (ಪುರುಷ)
ಎಂ. ರಾಘವೇಂದ್ರ : 9632614031 - ಹೊಸನಗರ 16 (ಪುರುಷ)
ಡಾ. ಸಂತೋಷ್ ಎಸ್ ಶೆಟ್ಟಿ ಮೊ: 9845402789 - ರಿಪ್ಪನ್‌ಪೇಟೆ 16 (ಪುರುಷ)
ವೀರಭದ್ರಸ್ವಾಮಿ ಮೊ: 9741629961 - ಸೊರಬ 13 (ಪುರುಷ)
ಕೆ. ಅಶೋಕ್ ಮೊ: 9241434669
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು
- ಅರ್ಜಿಯೊಂದಿಗೆ ವಿದ್ಯಾರ್ಹತೆಯ ಪ್ರಮಾಣ ಪತ್ರ
- ಜನ್ಮ ದಿನಾಂಕದ ದೃಢೀಕರಣ ಪತ್ರ
- ವೈದ್ಯಕೀಯ ಪ್ರಮಾಣ ಪತ್ರ
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಗಳು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್ಶನ್, ಎರಡನೇ ಮಹಡಿ, ಗಾಂಧಿನಗರ ಮುಖ್ಯ ರಸ್ತೆ, ಶಿವಮೊಗ್ಗ ಹಾಗೂ ಆಯಾ ಗೃಹರಕ್ಷಕ ದಳ ಘಟಕ / ಉಪ ಘಟಕಗಳ ಕಚೇರಿಗಳಲ್ಲಿ ದೊರೆಯಲಿದೆ. ಅಲ್ಲಿ ಅರ್ಜಿ ಪಡೆದು ನಿಗದಿತ ದಿನಾಂಕದೊಳಗೆ ಅದೇ ಕಚೇರಿಗೆ ಅರ್ಜಿ ಸಲ್ಲಿಸಬೇಕು.