
ಪಿಯುಸಿ ಹಾಗೂ ಐಟಿಐ ಪಾಸಾದವರಿಂದ ಬಿಎಸ್‌ಎಫ್ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ (Head Constable Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಗಡಿ ಭದ್ರತಾ ಪಡೆಯಲ್ಲಿ (Border Security Force – BSF) ಹೆಡ್ ಕಾನ್‌ಸ್ಟೆಬಲ್ ರೇಡಿಯೋ ಆಪರೇಟರ್ ಹಾಗೂ ರೇಡಿಯೋ ಮೆಕಾನಿಕ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ‘ಸಿ’ ವೃಂದದ ನಾನ್ -ಮಿನಿಸ್ಟ್ರಿಯಲ್ ಹುದ್ದೆಗಳಾಗಿದ್ದು; ನಂತರದಲ್ಲಿ ಇವುಗಳನ್ನು ಕಾಯಂ ಸೇವಾ ಹುದ್ದೆಗಳಾಗಿ ಪರಿಗಣಿಸಲಾಗುತ್ತದೆ.
ಹುದ್ದೆಗಳ ವಿವರ
- ಹೆಡ್ ಕಾನ್‌ಸ್ಟೆಬಲ್ (ರೇಡಿಯೋ ಆಪರೇಟರ್): 910
- ಹೆಡ್ ಕಾನ್‌ಸ್ಟೆಬಲ್ (ರೇಡಿಯೋ ಮೆಕಾನಿಕ್): 211
- ಒಟ್ಟು ಹುದ್ದೆಗಳು: 1,121
ಒಟ್ಟು 1,121 ಹುದ್ದೆಗಳ ಪೈಕಿ 280 ಹುದ್ದೆಗಳನ್ನು ಇಲಾಖೆ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲು ಮೀಸಲಿಡಲಾಗಿದೆ. ಇನ್ನುಳಿದವುಗಳಿಗೆ ನೇರ ನೇಮಕಾತಿ ಅನ್ವಯವಾಗಲಿದೆ.
ವಿದ್ಯಾರ್ಹತೆ ಮತ್ತು ವಯೋಮಿತಿ
ಕಾನ್‌ಸ್ಟೆಬಲ್ (ಆರ್.ಓ) ಹುದ್ದೆಗಳಿಗೆ ಪಿಯುಸಿ ಅಥವಾ 12ನೇ ತರಗತಿಯನ್ನು ಪಾಸಾಗಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಪಡೆದಿರಬೇಕು ಅಥವಾ ರೇಡಿಯೋ/ ಟೆಲಿವಿಷನ್/ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್/ ಕಂಪ್ಯೂಟರ್ ಅಪರೇಟರ್/ ಪ್ರೋಗ್ರಾಮಿಂಗ್ ಅಸಿಸ್ಟೆಂಟ್/ಡೇಟಾ ಪ್ರಿಪರೇಷನ್/ ಕಂಪ್ಯೂಟರ್ ಸಾಫ್ಟ್ವೇರ್/ಜನರಲ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ಇನ್ನು ಕಾನ್‌ಸ್ಟೆಬಲ್ (ಆರ್.ಎಂ) ಹುದ್ದೆಗೆ ಪಿಯು ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು. ಇಲ್ಲವೇ ಹಾರ್ಡ್ವೇರ್/ನೆಟ್ವರ್ಕ್ ಟೆಕ್ನಿಷಿಯನ್/ ಮೆಕಟ್ರಾನಿಕ್ಸ್/ ಡೇಟಾ ಎಂಟ್ರಿ ಆಪರೇಟರ್‌ನಲ್ಲಿ ಎರಡು ವರ್ಷಗಳ ಐಟಿಐ ಪೂರೈಸಿದವರನ್ನು ಪರಿಗಣಿಸಲಾಗುತ್ತದೆ.
ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 25 ವರ್ಷದೊಳಗಿರಬೇಕು. ಒಬಿಸಿ ವರ್ಗದವರಿಗೆ 3 ವರ್ಷ, ಪರಿಶಿಷ್ಟರಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
LIC Recruitment- LICಯ 841 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಭರ್ಜರಿ ಅವಕಾಶ
ಮಾಸಿಕ ವೇತನಶ್ರೇಣಿ
ಇವು 7ನೇ ವೇತನ ಆಯೋಗದ 4ನೇ ಹಂತದ ಹುದ್ದೆಗಳಾಗಿದ್ದು, 25,500 ರಿಂದ 81,100 ರೂ. ವರೆಗೆ ಮಾಸಿಕ ವೇತನಶ್ರೇಣಿ ಇರಲಿದೆ. ಇದಲ್ಲದೆ, ವಿಶೇಷ ಪಿಂಚಣಿ ಸೌಲಭ್ಯವೂ ಸೇರಿ ಇತರ ಭತ್ಯೆಗಳನ್ನು ನೀಡಲಾಗುತ್ತದೆ.
ದೈಹಿಕ ಪರೀಕ್ಷೆ ಅರ್ಹತೆ
ಪುರುಷರು 168 ಸೆಂ. ಮೀಟರ್ ಹಾಗೂ ಮಹಿಳೆಯರು 157 ಸೆಂ. ಮೀಟರ್ ಎತ್ತರವಿರಬೇಕು. ಎತ್ತರಕ್ಕೆ ಅನುಗುಣವಾದ ತೂಕ ಹೊಂದಿರಬೇಕು. ಪುರುಷರು ಆರೂವರೆ ನಿಮಿಷಗಳಲ್ಲಿ 1.6 ಕಿ.ಮೀ ಓಟ, 11 ಅಡಿಗಳ ಉದ್ದ ಜಿಗಿತ, ಮೂರುವರೆ ಅಡಿಗಳ ಎತ್ತರ ಜಿಗಿತವನ್ನು ಮೂರು ಪ್ರಯತ್ನಗಳಲ್ಲಿ ಪೂರೈಸಬೇಕು. ಮಹಿಳೆಯರು ನಾಲ್ಕು ನಿಮಿಷಗಳಲ್ಲಿ 800 ಮೀಟರ್ ಓಟ, ಮೂರು ಪ್ರಯತ್ನಗಳಲ್ಲಿ 9 ಅಡಿ ಉದ್ದ ಜಿಗಿತ, 3 ಅಡಿಗಳ ಎತ್ತರ ಜಿಗಿತ ಪೂರ್ಣಗೊಳಿಸಬೇಕು.

ಆಯ್ಕೆಯ ಹಂತಗಳು
ಮೊದಲ ಹಂತದಲ್ಲಿ ದೈಹಿಕ ಸಾಮರ್ಥ್ಯ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಗೆ ಮೂರು ದಿನ ಮುಂಚೆ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಮೊದಲ ಹಂತದಲ್ಲಿ ಅರ್ಹತೆ ಪಡೆದವರನ್ನು ಇದಕ್ಕೆ ಪರಿಗಣಿಸಲಾಗುತ್ತದೆ.
ಈ ಪರೀಕ್ಷೆಯು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತ್ರ ನಡೆಯಲಿದೆ. ಮೂರನೇ ಹಂತದಲ್ಲಿ ದಾಖಲಾತಿ ಪರಿಶೀಲನೆ ನಡೆಸಲಾಗುತ್ತದೆ. ರೇಡಿಯೋ ಆಪರೇಟರ್ (ಆರ್‌ಒ) ಹುದ್ದೆಯ ಅಭ್ಯರ್ಥಿಗಳಿಗೆ ಉಕ್ತ ಲೇಖನ/ ಪ್ಯಾರಾಗ್ರಾಫ್ ಓದು ಇರಲಿದೆ. ಜತೆಗೆ ವೈದ್ಯಕೀಯ ತಪಾಸಣೆಯನ್ನು ನಡೆಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಡೆದ ಅಂಕ ಹಾಗೂ ಉಕ್ತ ಲೇಖನ ಪರೀಕ್ಷೆ (50 ಅಂಕಗಳು) ಸೇರಿ ಒಟ್ಟಾರೆ 250ಕ್ಕೆ ಪಡೆದ ಅಂಕಗಳನ್ನು ಆಧರಿಸಿ ರೇಡಿಯೋ ಅಪರೇಟರ್ ಹುದ್ದೆಗಳಿಗೆ ಹಾಗೂ ರೇಡಿಯೋ ಮೆಕಾನಿಕ್ ಹುದ್ದೆಗಳಿಗೆ 200 ಅಂಕಗಳಿಗೆ ಪಡೆದ ಒಟ್ಟು ಅಂಕ ಪರಿಗಣಿಸಲಾಗುತ್ತದೆ.
ಪರೀಕ್ಷೆ ಪಠ್ಯಕ್ರಮ
ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ಸಿಬಿಎಸ್‌ಇ/ ರಾಜ್ಯ ಶಿಕ್ಷಣ ಮಂಡಳಿಗಳ 12ನೇ ತರಗತಿ ಪಠ್ಯಕ್ರಮದ 80 ಪ್ರಶ್ನೆಗಳಿದ್ದು, 20 ಪ್ರಶ್ನೆಗಳು ಇಂಗ್ಲಿಷ್ ಭಾಷೆ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ್ದಾಗಿರುತ್ತವೆ. 100 ಪ್ರಶ್ನೆಗಳಿಗೆ 200 ಅಂಕಗಳಿದ್ದು, ತಪ್ಪು ಉತ್ತರಗಳಿಗೆ 1/4 ಅಂಕಗಳನ್ನು ಕಳೆಯಲಾಗುತ್ತದೆ.
ಅರ್ಜಿ ಶುಲ್ಕವೆಷ್ಟು?
ಬಿಎಸ್‌ಎಫ್ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 100 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪರಿಶಿಷ್ಟರು ಹಾಗೂ ಮಹಿಳೆಯರಿಗೆ ಶುಲ್ಕ ವಿನಾಯ್ತಿ ಇದ್ದು; ಈ ವರ್ಗದ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನ: 24-08-2025
- ಅರ್ಜಿ ಸಲ್ಲಿಕೆ ಕೊನೆಯ ದಿನ: 23-09-2025
ಅಧಿಸೂಚನೆ: Download
ಅಧಿಕೃತ ವೆಬ್‌ಸೈಟ್ ಲಿಂಕ್: bsf.gov.in