Gruhalakshmi Yojana 24th Installment Money Credit- ಗೃಹಲಕ್ಷ್ಮಿ ಯೋಜನೆ 24ನೇ ಕಂತಿನ ಹಣ ಜಮಾ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕೃತ ಮಾಹಿತಿ

Spread the love

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಜಮಾ (Gruhalakshmi Yojana 24th Installment Money Credit) ಪ್ರಕ್ರಿಯೆ ಶುರುವಾಗಿದೆ. ಈ ವಾರದಲ್ಲಿ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿಎ. ಈ ಕುರಿತ ಮಾಹಿತಿ ಇಲ್ಲಿದೆ…

ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಜಮಾ ಪ್ರಕ್ರಿಯೆ ಆರಂಭವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅಧಿಕೃತವಾಗಿ ತಿಳಿಸಿದ್ದಾರೆ.

ಈ ಸುದ್ದಿಯಿಂದ ಕಳೆದ ಕೆಲವು ತಿಂಗಳುಗಳಿಂದ ಹಣಕ್ಕಾಗಿ ಕಾಯುತ್ತಿದ್ದ ಫಲಾನುಭವಿ ಮಹಿಳೆಯರಲ್ಲಿ ಸ್ವಲ್ಪ ನಿರಾಳತೆಯ ವಾತಾವರಣ ನಿರ್ಮಾಣವಾಗಿದೆ. ಹಾಗಾದರೆ 24ನೇ ಕಂತಿನ ಹಣ ಯಾವಾಗ ಖಾತೆಗೆ ಬರಲಿದೆ? ಬಾಕಿ ಇರುವ ಕಂತುಗಳ ಸ್ಥಿತಿ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: HDFC Parivartan ECSS Scholarship 2025-26- ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್ ಸ್ಕಾಲರ್‌ಶಿಪ್ | 1ನೇ ತರಗತಿಯಿಂದ ಪದವಿ ವರೆಗೆ 75,000 ರೂ. ವರೆಗೂ ಹಣಕಾಸು ಸಹಾಯ

Fund transfer process starts from Dec 22 – ಡಿಸೆಂಬರ್ 22ರಿಂದ ಹಣ ಜಮಾ ಪ್ರಕ್ರಿಯೆ ಆರಂಭ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಪ್ರಕಾರ, ಡಿಸೆಂಬರ್ 22ರಿಂದ (ಸೋಮವಾರ) ಡಿಸೆಂಬರ್ 27ರ (ಶನಿವಾರ) ಒಳಗೆ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣವನ್ನು ಎಲ್ಲಾ ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ (DBT) ಮೂಲಕ ವರ್ಗಾವಣೆ ಮಾಡಲಾಗುತ್ತದೆ.

ಆರ್ಥಿಕ ಇಲಾಖೆ ಈಗಾಗಲೇ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು, ಜಿಲ್ಲಾವಾರು ಹಂತ ಹಂತವಾಗಿ ಫಲಾನುಭವಿ ಮಹಿಳೆಯರ ಖಾತೆಗಳಿಗೆ ಜಮಾ ಆಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: New Ration Card Application- ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆಗೆ ಅನುಮತಿ | ಯಾರೆಲ್ಲಾ ಅರ್ಜಿ ಹಾಕಬಹುದು? ಸಂಪೂರ್ಣ ವಿವರ ಇಲ್ಲಿದೆ…

Benefit to 1.26 crore women – 1.26 ಕೋಟಿ ಮಹಿಳೆಯರಿಗೆ ಲಾಭ

ರಾಜ್ಯದಲ್ಲಿ ಒಟ್ಟು 1.26 ಕೋಟಿ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರು ಇದ್ದು, ಈ ಎಲ್ಲರ ಖಾತೆಗಳಿಗೆ 2026ರ ಹೊಸ ವರ್ಷಕ್ಕೂ ಮೊದಲೇ ಈ ವಾರದೊಳಗೆ ಹಣ ತಲುಪಲಿದೆ ಎಂದು ಹೇಳಲಾಗಿದೆ.

ಪ್ರತಿ ಕುಟುಂಬದ ಯಜಮಾನಿಗೆ ಸರ್ಕಾರ ನೀಡುವ ಮಾಸಿಕ 2,000 ರೂ. ನೆರವು, ಹಲವು ಕುಟುಂಬಗಳ ಆರ್ಥಿಕ ಸ್ಥಿತಿಗೆ ಆಧಾರವಾಗಿದೆ. ವಿಶೇಷವಾಗಿ ಗ್ರಾಮೀಣ ಹಾಗೂ ಮಧ್ಯಮ ವರ್ಗದ ಮಹಿಳೆಯರಿಗೆ ಈ ಯೋಜನೆ ದೊಡ್ಡ ಸಹಾಯವಾಗಿದೆ.

ಇದನ್ನೂ ಓದಿ: Karnataka Govt SSP Scholarship 2025-26- ಕರ್ನಾಟಕ ಸರ್ಕಾರದಿಂದ SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ | ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಆರ್ಥಿಕ ನೆರವು

CM expresses anger in Cabinet meeting – ಕ್ಯಾಬಿನೆಟ್ ಸಭೆಯಲ್ಲಿ ಸಿಎಂ ಗರಂ

ಇತ್ತೀಚೆಗೆ ನಡೆದ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ, ಗೃಹಲಕ್ಷ್ಮಿ ಯೋಜನೆಯ ಹಣ ಎರಡು ತಿಂಗಳು ಬಾಕಿ ಉಳಿದಿರುವ ವಿಚಾರವಾಗಿ ಮುಖ್ಯಮಂತ್ರಿ ಸಚಿವರ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬ ಮಾಹಿತಿ ಇದೆ.

ಬಾಕಿ ಇರುವ ಫೆಬ್ರವರಿ ಮತ್ತು ಮಾರ್ಚ್ ಕಂತಿನ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದರು. ಆದರೆ ಆ ಸೂಚನೆಗಳ ನಂತರವೂ, ಸಚಿವರು ಈ ಎರಡು ತಿಂಗಳ ಹಣದ ಬಗ್ಗೆ ಮೌನ ವಹಿಸಿರುವುದು ಗಮನಾರ್ಹ.

ಇದನ್ನೂ ಓದಿ: Tata Capital Pankh Scholarship 2025-26- ಪಿಯುಸಿ, ಪದವಿ, ಡಿಪ್ಲೊಮಾ, ಐಟಿಐ ವಿದ್ಯಾರ್ಥಿಗಳಿಗೆ ₹15,000 ದಿಂದ ₹1 ಲಕ್ಷ ವರೆಗೆ ಟಾಟಾ ಕ್ಯಾಪಿಟಲ್ ಸ್ಕಾಲರ್‌ಶಿಪ್ | ಅರ್ಜಿ ಆಹ್ವಾನ

Gruhalakshmi Yojana 24th Installment Money Credit
Gruhalakshmi Yojana 24th Installment Money Credit

₹29,000 crore allocated in the Budget – ಬಜೆಟ್‌ನಲ್ಲಿ 29,000 ಕೋಟಿ ರೂ. ನಿಗದಿ

ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲೊಂದು ಆಗಿರುವ ಗೃಹಲಕ್ಷ್ಮಿ ಯೋಜನೆಗೆ 2025-26ನೇ ಸಾಲಿನ ಬಜೆಟ್‌ನಲ್ಲಿ ಬರೋಬ್ಬರಿ 29,000 ಕೋಟಿ ರೂ. ಹಣವನ್ನು ನಿಗದಿ ಮಾಡಲಾಗಿದೆ.

WhatsApp Group Join Now
Telegram Group Join Now

ಇಷ್ಟು ದೊಡ್ಡ ಮೊತ್ತ ಮೀಸಲಿಟ್ಟಿದ್ದರೂ ಸಹ, ಪ್ರತಿ ತಿಂಗಳು ಹಣ ಜಮಾ ಮಾಡುವಲ್ಲಿ ವಿಳಂಬವಾಗುತ್ತಿರುವುದು ಸರ್ಕಾರದ ಮೇಲಿನ ಟೀಕೆಗೆ ಕಾರಣವಾಗಿದೆ. ‘ಹಣ ಸಮಯಕ್ಕೆ ಸರಿಯಾಗಿ ಬರಬೇಕು’ ಎಂಬುದು ಮಹಿಳೆಯರ ಪ್ರಮುಖ ಬೇಡಿಕೆಯಾಗಿಯೇ ಉಳಿದಿದೆ.

ಇದನ್ನೂ ಓದಿ: BOI Credit Officer Recruitment 2026- ಪದವಿಧರರಿಗೆ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉದ್ಯೋಗ | 514 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ

₹2,500 crore required every month – ಪ್ರತೀ ತಿಂಗಳು 2,500 ಕೋಟಿ ರೂ. ಹಣ ಬೇಕು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 1.27 ಕೋಟಿ ಕುಟುಂಬದ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಈ ಎಲ್ಲರ ಖಾತೆಗೆ ಪ್ರತಿ ತಿಂಗಳು ಹಣ ವರ್ಗಾವಣೆ ಮಾಡಲು ಸುಮಾರು 2,500 ಕೋಟಿ ರೂ. ಅಗತ್ಯವಿದೆ.

ಆದರೆ ಹಣಕಾಸಿನ ಕೊರತೆ, ತಾಂತ್ರಿಕ ಸಮಸ್ಯೆಗಳು ಮತ್ತು ಆಡಳಿತಾತ್ಮಕ ವಿಳಂಬಗಳಿಂದಾಗಿ ಇತ್ತೀಚಿನ ಕೆಲವು ತಿಂಗಳುಗಳಿಂದ ಗೃಹಲಕ್ಷ್ಮಿ ಹಣ ಸರಿಯಾಗಿ ಜಮೆಯಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Zero Interest Agriculture Loan- ರೈತರಿಗೆ ಶೂನ್ಯ ಬಡ್ಡಿ ಕೃಷಿ ಸಾಲ: ಯಾರಿಗೆ, ಹೇಗೆ ಸಿಗುತ್ತದೆ? ಸಂಪೂರ್ಣ ಮಾಹಿತಿ…

How much amount released so far? – ಇದುವರೆಗೆ ಎಷ್ಟು ಹಣ ಬಿಡುಗಡೆ?

ಸರ್ಕಾರದ ಅಧಿಕೃತ ಜಾಹೀರಾತಿನ ಪ್ರಕಾರ, 2023ರಿಂದ ಇಲ್ಲಿವರೆಗೆ 22ನೇ ಕಂತಿನವರೆಗೆ ಒಟ್ಟು 1.24 ಕೋಟಿ ಫಲಾನುಭವಿಗಳಿಗೆ 52,416.17 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ.

ಆದರೆ, 23ನೇ ಕಂತಿನ ಹಣದ ಬಗ್ಗೆ ಯಾವುದೇ ಉಲ್ಲೇಖವಿಲ್ಲದೇ, ಈಗ ನೇರವಾಗಿ 24ನೇ ಕಂತಿನ ಹಣ ಜಮಾ ಕುರಿತು ಮಾಹಿತಿ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

Expectation of 24th instalment credit – 24ನೇ ಕಂತಿನ ಹಣ ಜಮಾ ನಿರೀಕ್ಷೆ

ಒಟ್ಟಾರೆ, 24ನೇ ಕಂತಿನ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿರುವುದು ಸಕಾರಾತ್ಮಕ ಬೆಳವಣಿಗೆಯೇ ಆಗಿದ್ದರೂ, ಬಾಕಿ ಇರುವ ಕಂತುಗಳು ಯಾವಾಗ? ಹಣ ನಿಯಮಿತವಾಗುತ್ತದೆಯೇ? ಎಂಬ ಪ್ರಶ್ನೆಗಳು ಇನ್ನೂ ಉತ್ತರ ಕಾಯುತ್ತಿವೆ.

ಗೃಹಲಕ್ಷ್ಮಿ ಯೋಜನೆ ಮೇಲೆ ನಂಬಿಕೆ ಇಟ್ಟು ಬದುಕು ಸಾಗಿಸುತ್ತಿರುವ ಲಕ್ಷಾಂತರ ಮಹಿಳೆಯರಿಗೆ, ಸರ್ಕಾರದಿಂದ ಸ್ಪಷ್ಟತೆ ಹಾಗೂ ಸಮಯಪಾಲನೆ ಬಹಳ ಅಗತ್ಯವಾಗಿದೆ.

ಇದನ್ನೂ ಓದಿ: Karnataka Kukkut Sanjeevini Yojane- ಕುಕ್ಕುಟ ಸಂಜೀವಿನಿ ಯೋಜನೆ | ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್ ನಿರ್ಮಾಣಕ್ಕೆ ಭರ್ಜರಿ ಸಹಾಯಧನ


Spread the love
error: Content is protected !!