ಇದೇ ಮೇ ತಿಂಗಳಲ್ಲಿ ಮೂರು ಕಂತುಗಳ ‘ಗೃಹಲಕ್ಷ್ಮೀ’ ಬಾಕಿ ಹಣ (Gruhalakshmi Pending Payments) ಜಮೆಯಾಗಲಿದ್ದು; ಹಣಕಾಸು ಇಲಾಖೆಯಿಂದ (Finance Department Karnataka) ಅನುಮೋದನೆ ದೊರೆತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲಿದೆ…
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದಲೇ ಗ್ಯಾರಂಟಿ ಯೋಜನೆಗಳು ಜಾರಿಯಾಗಿದ್ದು; ಈ ಪೈಕಿ ಐದು ಗ್ಯಾರಂಟಿಗಳಲ್ಲಿ ಯೋಜನೆಗಳಲ್ಲಿ ‘ಗೃಹಲಕ್ಷ್ಮೀ ಯೋಜನೆ’ ಮಹತ್ವದ ಯೋಜನೆಯಾಗಿದೆ.
ಈ ಯೋಜನೆಯ ಅಡಿಯಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಮಾಸಿಕ ₹2,000 ಹಣವನ್ನು ನೇರವಾಗಿ ಫಲಾನುಭವಿ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಆದರೆ, ಈಚೆಗೆ ವಿವಿಧ ಕಾರಣಗಳಿಂದ ಹಣ ವರ್ಗಾವಣೆಯಲ್ಲಿ ತಡೆಯುಂಟಾಗಿದೆ.
ಮೂರು ತಿಂಗಳ ಹಣ ಬಾಕಿ
ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ‘ಗೃಹಲಕ್ಷ್ಮಿ’ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗದ ಹಿನ್ನೆಲೆಯಲ್ಲಿ, ವಿವಿಧ ಜಿಲ್ಲೆಗಳಲ್ಲಿ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಿರೋಧ ಪಕ್ಷಗಳು ಕೂಡ ಈ ಬಗ್ಗೆ ಸರ್ಕಾರವನ್ನು ಕಟುಟೀಕೆ ಮಾಡುತ್ತಿವೆ.
ಇದೀಗ ರಾಜ್ಯ ಸರ್ಕಾರವು ಇದೇ ಮೇ 20ಕ್ಕೆ ಎರಡು ವರ್ಷ ಪೂರೈಸಲಿದ್ದು; ಈ ಹಿನ್ನಲೆಯಲ್ಲಿ ಬಾಕಿ ಉಳಿದಿರುವ ಮೂರು ತಿಂಗಳ ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ಜಮೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.

ಇದೇ ತಿಂಗಳಲ್ಲಿ ಮೂರು ಕಂತಿನ ಹಣ ಜಮಾ
‘ಗೃಹಲಕ್ಷ್ಮೀ’ ಯೋಜನೆಯ ಹಣ ಬಿಡುಗಡೆ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದು; ಬಾಕಿ ಉಳಿದಿರುವ ಮೂರು ತಿಂಗಳ ಹಣವನ್ನು ಹಂತ ಹಂತವಾಗಿ ಇದೇ ಮೇ ತಿಂಗಳಿನಲ್ಲಿ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನಲ್ಲಿ ರೈತ ಸಂಪರ್ಕ ಕೇಂದ್ರದ ಉದ್ಘಾಟನೆ ವೇಳೆ ಮಾತನಾಡಿದ ಸಚಿವರು ‘ಜನವರಿ, ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ಉಳಿದಿದ್ದು, ಈಗ ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
e-Pouthi- ಮನೆ ಬಾಗಿಲಿಗೆ ಇ-ಪೌತಿ | ರೈತರ ಖಾತೆ ಸಮಸ್ಯೆ ಪರಿಹಾರಕ್ಕೆ ಕಂದಾಯ ಇಲಾಖೆ ಆಂದೋಲನ
ಹಣ ಬಿಡುಗಡೆಗೆ ಹಣಕಾಸು ಇಲಾಖೆ ಅನುಮೋದನೆ
ಮೊದಲ ಕಂತು ಒಂದು ವಾರದಲ್ಲಿ, ಎರಡನೇ ಕಂತು ಮುಂದಿನ ವಾರದಲ್ಲಿ ಹಾಗೂ ಮೂರನೇ ಕಂತು ಈ ತಿಂಗಳ ಅಂತ್ಯದೊಳಗೆ ಎಲ್ಲ ಫಲಾನುಭವಿಗಳ ಖಾತೆಗೆ ನೇರ ಜಮೆಯಾಗಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ವಿಸೇಷವೆಂದರೆ ‘ಗೃಹಲಕ್ಷ್ಮೀ’ ಯೋಜನೆಯ ಬಾಕಿ ಹಣವನ್ನು ಒಂದೇ ತಿಂಗಳಿನಲ್ಲಿ ಬಿಡುಗಡೆ ಮಾಡಲು ರಾಜ್ಯ ಆರ್ಥಿಕ ಇಲಾಖೆಯಿಂದ ಈಗಾಗಲೇ ಅನುಮೋದನೆ ದೊರೆತಿದೆ. ಹಣ ಜಮಾ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.