Gruha Lakshmi Yojane Life Certificate- ಗೃಹಲಕ್ಷ್ಮೀ ಫಲಾನುಭವಿಗಳಿಗೆ ಹೊಸ ನಿಯಮ | ಇನ್ಮುಂದೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ!

Spread the love

WhatsApp Group Join Now
Telegram Group Join Now

Gruha Lakshmi Yojane Life Certificate: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಹೊಸ ನಿಯಮ ಜಾರಿಗೆ ಬರಲಿದೆಯೇ? ಇನ್ಮುಂದೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸಂಪೂರ್ಣ ಮಾಹಿತಿ ಓದಿ…

ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಜನಪ್ರಿಯ ಹಾಗೂ ಲಕ್ಷಾಂತರ ಮಹಿಳೆಯರ ಜೀವನಕ್ಕೆ ಆರ್ಥಿಕ ಭದ್ರತೆ ನೀಡಿರುವ ಯೋಜನೆ ಎಂದರೆ ಗೃಹಲಕ್ಷ್ಮೀ ಯೋಜನೆ (Gruha Lakshmi Scheme).

ಈ ಯೋಜನೆಯಡಿ ಪ್ರತಿ ತಿಂಗಳು ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ₹2,000 ಹಣ ನೇರವಾಗಿ ಜಮಾ (Direct Benefit Transfer – DBT) ಆಗುತ್ತಿದೆ. ಈಗ ಇದೇ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮ (New Rule) ತರಲು ಮುಂದಾಗಿದೆ.

ಮುಂದಿನ ದಿನಗಳಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಲು ಜೀವಿತ ಪ್ರಮಾಣಪತ್ರ (Life Certificate) ಸಲ್ಲಿಸುವುದು ಕಡ್ಡಾಯವಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: Karnataka Grama Panchayat Election: ಗ್ರಾಮ ಪಂಚಾಯತಿ ಚುನಾವಣೆ: ಸರ್ಕಾರದಿಂದ ಮಹತ್ವದ ಮಾಹಿತಿ

ಸಿಎಂ ಸಿದ್ದರಾಮಯ್ಯ ಅವರ ಮಹತ್ವದ ಸೂಚನೆ

ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಜೀವಿತ ಪ್ರಮಾಣಪತ್ರ ಸಲ್ಲಿಕೆ (Life Certificate Submission) ಕಡ್ಡಾಯಗೊಳಿಸುವ ಕುರಿತು ಪರಿಶೀಲನೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

ಈ ಸೂಚನೆಗೆ ಹಿನ್ನೆಲೆ ಏನೆಂದರೆ, ರಾಜ್ಯ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಿಎಂ, ಈ ವಿಷಯದ ಕುರಿತು ತಕ್ಷಣ ಪರಿಶೀಲನೆ ನಡೆಸುವಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ: Thayi Lakshmi Bond Yojana: ಈ ಮಹಿಳೆಯರಿಗೆ 50,000 ರೂ. ಹೆರಿಗೆ ಸಹಾಯಧನ | ತಾಯಿ ಲಕ್ಷ್ಮೀ ಬಾಂಡ್ ಯೋಜನೆ ಸಂಪೂರ್ಣ ಮಾಹಿತಿ

Gruha Lakshmi Yojane Life Certificate
Gruha Lakshmi Yojane Life Certificate

ಮನವಿಯ ಹಿಂದಿರುವ ಕಾರಣವೇನು?

ಮನವಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿರುವ ಅಂಶವೆಂದರೆ, ಮರಣ ಹೊಂದಿರುವ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುತ್ತಿರುವ ಪ್ರಕರಣಗಳು (Wrong Payment Issue) ಕೆಲವೆಡೆ ಕಂಡು ಬರುತ್ತಿವೆ. ಇದರಿಂದ ಸರ್ಕಾರದ ಹಣ ಸದ್ವಿನಿಯೋಗವಾಗದೆ, ಇತರೆ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ಹಣ ವ್ಯರ್ಥವಾಗುವ ಸಾಧ್ಯತೆ ಇದೆ.

ನಿವೃತ್ತ ಸರ್ಕಾರಿ ನೌಕರರು ತಮ್ಮ ಪಿಂಚಣಿ ಹಣ (Pension Amount) ಪಡೆಯಲು ಪ್ರತಿ ವರ್ಷ ಬ್ಯಾಂಕ್‌ಗೆ ಜೀವಿತ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

ಇದೇ ಮಾದರಿಯಲ್ಲಿ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೂ ವರ್ಷಕ್ಕೆ ಒಮ್ಮೆ ಜೀವಿತ ಪ್ರಮಾಣಪತ್ರ ಸಲ್ಲಿಸುವ ನಿಯಮ ಜಾರಿಗೊಳಿಸಿದರೆ, ಅನರ್ಹ ಪಾವತಿಗಳನ್ನು ತಡೆಯಬಹುದು ಎಂಬುದು ಮನವಿಯ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: SBI Recruitment 2026- ಬೆಂಗಳೂರು ಎಸ್‌ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಕನ್ನಡ ಬಲ್ಲವರಿಗೆ ಭರ್ಜರಿ ಅವಕಾಶ

ಗೃಹಲಕ್ಷ್ಮೀ ಯೋಜನೆಯ ಮಹತ್ವ ಮತ್ತು ಅಂಕಿ-ಅಂಶಗಳು

ಗೃಹಲಕ್ಷ್ಮೀ ಯೋಜನೆ 2023ರ ಜೂನ್ ತಿಂಗಳಿನಿAದ ಜಾರಿಗೆ ಬಂದಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ (Antyodaya), ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯೇ ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.

ಈವರೆಗೂ ರಾಜ್ಯದಲ್ಲಿ 1,24,12,543 ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯಡಿ ಸುಮಾರು ₹57,300 ಕೋಟಿ ರೂ.ಗಳ ಆರ್ಥಿಕ ಸಹಾಯ (Financial Assistance) ಪಾವತಿಸಲಾಗಿದೆ. ಇದು ರಾಜ್ಯ ಸರ್ಕಾರದ ದೊಡ್ಡ ಮಟ್ಟದ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಾಗಿದೆ.

WhatsApp Group Join Now
Telegram Group Join Now

ಇದನ್ನೂ ಓದಿ: SBI Digital Personal Loan- ಎಸ್‌ಬಿಐ ಡಿಜಿಟಲ್ ಪರ್ಸನಲ್ ಲೋನ್ | ₹35 ಲಕ್ಷದ ವರೆಗೆ ಸಾಲ ಸೌಲಭ್ಯ | ಸಂಪೂರ್ಣ ಮಾಹಿತಿ ಇಲ್ಲಿದೆ…

ಜೀವಿತ ಪ್ರಮಾಣಪತ್ರ ಕಡ್ಡಾಯವಾದರೆ ಏನು ಲಾಭ?

  • ಜೀವಿತ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವುದರಿಂದ ಮರಣ ಹೊಂದಿರುವ ಫಲಾನುಭವಿಗಳ ಖಾತೆಗೆ ಹಣ ಹೋಗುವುದನ್ನು ತಡೆಯಬಹುದು
  • ಸರ್ಕಾರದ ಹಣದ ದುರುಪಯೋಗ (Misuse of Funds) ತಪ್ಪಿಸಬಹುದು
  • ಅರ್ಹ ಫಲಾನುಭವಿಗಳಿಗೆ ಹಣ ಸರಿಯಾಗಿ ತಲುಪಲು ಸಹಕಾರಿಯಾಗುತ್ತದೆ
  • ಯೋಜನೆಯ ಪಾರದರ್ಶಕತೆ (Transparency) ಹೆಚ್ಚುತ್ತದೆ

ಈ ಎಲ್ಲ ಕಾರಣಗಳಿಂದಾಗಿ, ಗೃಹಲಕ್ಷ್ಮೀ ಯೋಜನೆಯಲ್ಲಿ ಜೀವಿತ ಪ್ರಮಾಣಪತ್ರ ನಿಯಮ ಜಾರಿಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಇದನ್ನೂ ಓದಿ: Kisan Tractor Yojana- ಸರ್ಕಾರದಿಂದ ರೈತರಿಗೆ ಅರ್ಧ ಬೆಲೆಗೆ ಹೊಸ ಟ್ರಾಕ್ಟರ್ ವಿತರಣೆ | ಈಗಲೇ ಅರ್ಜಿ ಹಾಕಿ

ಮುಂದೇನು?

ಸದ್ಯಕ್ಕೆ ಇದು ಪರಿಶೀಲನಾ ಹಂತದಲ್ಲಿರುವ ಸೂಚನೆ (Under Consideration Order) ಆಗಿದ್ದು, ಅಧಿಕೃತ ಸರ್ಕಾರದ ಆದೇಶ (Official Government Order) ಇನ್ನಷ್ಟೇ ಹೊರಬರಬೇಕಿದೆ.

ನಿಯಮ ಜಾರಿಗೆ ಬಂದಲ್ಲಿ, ಫಲಾನುಭವಿಗಳು ಪ್ರತಿ ವರ್ಷ ತಮ್ಮ ಬ್ಯಾಂಕ್ ಅಥವಾ ನಿಗದಿತ ಕೇಂದ್ರಗಳಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸಬೇಕಾಗುತ್ತದೆ. ಈ ಬಗ್ಗೆ ಸರ್ಕಾರದ ಅಧಿಕೃತ ಪ್ರಕಟಣೆ ಹೊರಬಿದ್ದ ಕೂಡಲೇ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…


Spread the love
error: Content is protected !!