Gruha lakshmi Scheme August Money : ಗೃಹಲಕ್ಷ್ಮಿ ಯೋಜನೆಯ ಬಾಕಿ ಉಳಿದಿರುವ ಎಲ್ಲಾ ಕಂತುಗಳ ಹಣ ಸಂದಾಯಕ್ಕೆ ಸರ್ಕಾರ ಸಜ್ಜಾಗಿದೆ. ಈಗಾಗಲೇ ಜೂನ್ ತಿಂಗಳ ಹಣ ಪಾವತಿಯಾಗಿದ್ದು; ಬಹುತೇಕ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ (Credit to account) ಕೂಡ ಆಗಿದೆ. ಇನ್ನು ಜುಲೈ ಹಾಗೂ ಆಗಸ್ಟ್ ತಿಂಗಳ ಹಣ ಹೆಚ್ಚೂಕಮ್ಮಿ ಒಟ್ಟಿಗೇ ಮಹಿಳೆಯರ ಕೈ ಸೇರುವ ಸಾಧ್ಯತೆ ಇದೆ.
ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು, ಪ್ರತೀ ತಿಂಗಳೂ ಗೃಹಲಕ್ಷ್ಮಿ ಯೋಜನೆಗೆ 2,400 ಕೋಟಿ ರೂಪಾಯಿ ಖರ್ಚಾಗುತ್ತಿದೆ. ಇದೀಗ ತಾಂತ್ರಿಕ ದೋಷಗಳೆಲ್ಲವೂ ಬಗೆಹರಿದಿದ್ದು, ಎಲ್ಲರಿಗೂ ಹಣ ತಲುಪಲಿದೆ ಎಂದಿದ್ದಾರೆ.
ಮ೦ಡ್ಯದಲ್ಲಿ ಡಿಪಿಟಿಗೆ ಪುಷ್ ಮಾಡಿ ಮೂರು ದಿನಗಳಾಗಿದೆ. ಇನ್ನೂ ನಾಲ್ಕೈದು ಜಿಲ್ಲೆಗಳಿಗೆ ಯೋಜನೆಯ ಹಣ ಸಿಗಬೇಕಿದೆ. ಬ್ಯಾಂಕ್ಗಳಿಗೆ ಸಕಾಲಕ್ಕೆ ಹಣ ಕಳುಹಿಸಿರುತ್ತೇವೆ. ದೊಡ್ಡ ಮೊತ್ತದ ಹಣ ಆಗಿರುವ ಕಾರಣ ವಿಳಂಬ ಆಗುತ್ತಿರುತ್ತದೆ ಎಂದು ಹೇಳಿದ್ದಾರೆ.
ಜೂನ್ ಕಂತು ವರ್ಗಾವಣೆಯಾಗಿದ್ದು; ಜುಲೈ ತಿಂಗಳ ಹಣ ಇನ್ನೆರಡು ದಿನಗಳಲ್ಲಿ ಖಾತೆಗಳಿಗೆ ವರ್ಗಾವಣೆಯಾಗಲಿದೆ. ಆಗಸ್ಟ್ ತಿಂಗಳ ಹಣ ಕೂಡ ವರ್ಗಾವಣೆ ಮಾಡುತ್ತೇವೆ. ಒಂದು ದಿನಕ್ಕೆ ನನಗೆ 500 ಕರೆಗಳು ಬರುತ್ತಿದ್ದು; ಮಂತ್ರಿಯಾಗಿ ಎಲ್ಲ ಕರೆಗಳಿಗೂ ನಾನು ಉತ್ತರ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಇಂದೇ ಮಹಿಳೆಯರಿಗೆ ಅವರ ಖಾತೆಗೆ ಎರಡು ತಿಂಗಳ ಒಟ್ಟು 4,000 ರೂಪಾಯಿ ಹಣ ಜಮೆ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ಜುಲೈ ಮತ್ತು ಆಗಸ್ಟ್ ತಿಂಗಳ ಹಣ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಎಂದಿದ್ದಾರೆ.