ರಾಜ್ಯ ಸರಕಾರಿ ನೌಕರರ ಮುಷ್ಕರ: ನೌಕರರ ಬೇಡಿಕೆಗಳೇನು? ಸರಕಾರದ ಸವಾಲುಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… Govt Employees Strike and Demands

Spread the love

Govt Employees Strike and Demands : ರಾಜ್ಯ ಸರಕಾರದ ನೌಕರರು ಕೊನೆಗೂ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ನಿನ್ನೆ (ಜುಲೈ 07) ಚಿಕ್ಕಮಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ (Karnataka State Government Employees Association) ಕಾರ್ಯಕಾರಣಿಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು; ಇದೇ ಜುಲೈ 29ರಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now

ಪ್ರಮುಖ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊ೦ಡು ಮುಷ್ಕರದ ನಿರ್ಧಾಕ್ಕೆ ಬಂದಿರುವ ಸರಕಾರಿ ನೌಕರರು (Govt Employees) ಜುಲೈ 08ರಿಂದ 14ರ ವರೆಗೆ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮನವಿ ಸಲ್ಲಿಕೆ ಹೋರಾಟ ನಡೆಯಲಿದೆ. ಆನಂತರ ಜುಲೈ 29ರಂದು ಬೆಂಗಳೂರಿನಲ್ಲಿ ಮತ್ತೊಮ್ಮೆ ಕಾರ್ಯಕಾರಣಿ ಸಭೆ ನಡೆಸಿ ಬೇಡಿಕೆಗಳ ಈಡೇರಿಕೆ ಒತ್ತಾಯಿಸಲಾಗುವುದು. ಅದಕ್ಕೆ ಸ್ಪಂದನೆ ಸಿಗದೇ ಇದ್ದಲ್ಲಿ ಜುಲೈ 29ರಿಂದ ಮುಷ್ಕರ ಕೈಗೊಳ್ಳುವ ನಿರ್ಧಾರ ಪ್ರಕಟಿಸಲಾಗಿದೆ.

ಸರಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸು ವರದಿ ಆಗಸ್ಟ್’ನಲ್ಲಿ ಜಾರಿ? | ಸಿಎಂ ಸಿದ್ದರಾಮಯ್ಯ ಸೂಚನೆ ಏನು? Karnataka Govt Employees Good News

ರಾಜ್ಯ ಸರಕಾರಿ ನೌಕರರ ಬೇಡಿಕೆಗಳೇನು?

ಕರ್ನಾಟಕ ರಾಜ್ಯ ಸರಕಾರಿ ನೌಕರರು ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಹೊಂದಿದ್ದು; ಇವುಗಳ ಈಡೇರಿಕೆಗಾಗಿ ಸರಕಾರದ ವಿರುದ್ಧ ಇದೇ ಜುಲೈ 29ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ನೌಕರರ ಪ್ರಮುಖ ಮೂರು ಬೇಡಿಕೆಗಳು ಈ ಕೆಳಗಿನಂತಿವೆ:

  • 7ನೇ ವೇತನ ಆಯೋಗ ವರದಿಯ (7th Pay Commission Report) ಶಿಫಾರಸುಗಳನ್ನು ಯಥಾವತ್ ಜಾರಿಗೊಳಿಸುವುದು.
  • ಹೊಸ ಪಿಂಚಣಿ ಯೋಜನೆಯನ್ನು (New Pension Scheme) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನೇ (Old Pension Scheme) ಮರುಜಾರಿಗೊಳಿಸುವುದು.
  • ನಗದುರಹಿತ ಚಿಕಿತ್ಸೆಗೆ ಅವಕಾಶ ಕಲ್ಪಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ’ (Karnataka Arogya Sanjeevani Scheme) ಯೋಜನೆ ಜಾರಿಗೊಳಿಸುವುದು.

ಸರಕಾರಿ ನೌಕರರ ಸಂಬಳ ಏರಿಕೆ ಸದ್ಯಕ್ಕೆ ಅಸಾಧ್ಯ | ಆರ್ಥಿಕ ಇಲಾಖೆ ಸ್ಪಷ್ಟನೆ Govt employees Salary hike impossible for now

ಸರಕಾರದ ಮುಂದಿರುವ ಸವಾಲುಗಳೇನು?

7ನೇ ವೇತನ ಆಯೋಗದ ವರದಿ ಜಾರಿಗೊಳಿಸುವುದು ರಾಜ್ಯ ಸರಕಾರಿ ಉದ್ಯೋಗಿಗಳ ಬೇಡಿಕೆಗಳಲ್ಲಿ ಅತ್ಯಂತ ಮಹತ್ವದ ಬೇಡಿಕೆಯಾಗಿದೆ. ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗವು ತನ್ನ ವರದಿಯಲ್ಲಿ ಕನಿಷ್ಠ ಮೂಲವೇತನವನ್ನು ರೂ. 17,000 ದಿಂದ ರೂ. 27,000ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸಿದರೆ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಹೆಚ್ಚಳವಾಗಲಿದ್ದು, ಅದಕ್ಕೆ ಸರ್ಕಾರ ಹಣ ಹೊಂದಿಸಬೇಕಾಗುತ್ತದೆ.

ರಾಜ್ಯ ಸರ್ಕಾರಿ ಉದ್ಯೋಗಿಗಳ ಮೂಲ ವೇತನ ಹೆಚ್ಚಳವಾದರೆ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 17,440 ಕೋಟಿ ರೂಪಾಯಿ ಹೊರೆಯಾಗಲಿದೆ. 2024-25ನೇ ಸಾಲಿನ ಬಜೆಟ್‌ನಲ್ಲಿ ಇದಕ್ಕಾಗಿಯೇ ಸರ್ಕಾರ 15,000 ಕೋಟಿ ರೂಪಾಯಿ ಮೀಸಲಿಟ್ಟಿದೆ. ವಿವಿಧ ಭತ್ಯೆಗಳು ಹೆಚ್ಚಳವಾಗಲಿದ್ದು, 3,791 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಸದರಿ ವರದಿಯನ್ನು ಕಳೆದ ಏಪ್ರಿಲ್ 2024ರಿಂದಲೇ ಅನ್ವಯವಾಗುವಂತೆ ಜಾರಿಗೊಳಿಸಬೇಕಿದ್ದು; ಸರ್ಕಾರಕ್ಕೆ 2,800 ಕೋಟಿ ರೂಪಾಯಿ ಹೆಚ್ಚುವರಿ ಹೊಣೆಯಾಗಲಿದೆ. ಅದೇ ರೀತಿ ಮರಣ, ನಿವೃತ್ತಿ ಉಪದಾನ 1,083 ಕೋಟಿ ರೂಪಾಯಿ ಹಾಗೂ ಪಿಎಫ್ ವಂತಿಗೆ ಮೊತ್ತ 530.45 ಕೋಟಿ ರೂಪಾಯಿ ಆಗಲಿದೆ. ಹೀಗಾಗಿ ಸರ್ಕಾರ ಆಯೋಗದ ವರದಿ ಶಿಫಾರಸು ಜಾರಿಯಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

Govt Employees Strike and Demands

ಸರಕಾರಿ ನೌಕರರ ಸಂಬಳ, ಭತ್ಯೆ ಏರಿಕೆಯ ಸಂಪೂರ್ಣ ಮಾಹಿತಿ | 7ನೇ ವೇತನ ಆಯೋಗದ ಶಿಫಾರಸುಗಳು 7th pay Commission Complete Information

ಹಳೆಯ ಪಿಂಚಣಿ ಯೋಜನೆ ಮರುಜಾರಿ

ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮರುಜಾರಿಗೊಳಿಸುವುದು ರಾಜ್ಯ ಸರಕಾರಿ ನೌಕರರ ಮತ್ತೊಂದು ಬೇಡಿಕೆಯಾಗಿದೆ. ಕರ್ನಾಟಕ ಮಾತ್ರವಲ್ಲ ಕೇಂದ್ರ ಸರ್ಕಾರಿ ನೌಕರರು ಸಹ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ನೂತನ ಪಿಂಚಣಿ ಯೋಜನೆ ಜಾರಿಗೊಳಿಸಿದ್ದರಿಂದ ಸುಮಾರು 2.50 ಲಕ್ಷ ನೌಕರರು ತೊಂದರೆಗೆ ಒಳಗಾಗಿದ್ದಾರೆ. ಇದರ ಈಡೇರಿಕೆಗಾಗಿ ನೌಕರರ ಸಂಘ ಹಾಗೂ ನಿವೃತ್ತ ನೌಕರರ ಸಂಘ ಸರಕಾರಕ್ಕೆ ಮನವಿ ಮಾಡುತ್ತ ಬಂದಿದೆ. ಸದ್ಯದಲ್ಲಿ ರಾಜ್ಯ ಸರಕಾರದ ಆರ್ಥಿಕ ಸ್ಥಿತಿ ಈ ಬೇಡಿಕೆ ಈಡೇರುವಷ್ಟು ಸುಭದ್ರವಾಗಿಲ್ಲ ಎನ್ನಲಾಗುತ್ತಿದೆ.

10,000 ಸರಕಾರಿ ಶಾಲೆ ಶಿಕ್ಷಕರ ನೇಮಕಾತಿ | ಶೀಘ್ರದಲ್ಲಿಯೇ ಅರ್ಜಿ ಆಹ್ವಾನ Karnataka Govt School Teacher Recruitment 2024

ಆರೋಗ್ಯ ಸಂಜೀವಿನ ಯೋಜನೆ ಜಾರಿ

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯು (Karnataka Arogya Sanjeevani Scheme- KASS) ಸರಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಅನಾರೋಗ್ಯ ಸಂದರ್ಭದಲ್ಲಿ ನೆರವಾಗುವ ಯೋಜನೆಯಾಗಿದೆ. ಇದು ನಗದುರಹಿತ, ತಡೆರಹಿತ, ಸಮಗ್ರ ಆರೋಗ್ಯ ರಕ್ಷಣಾ ಯೋಜನೆಯಾಗಿದ್ದು, ಅಲೋಪತಿ ಮತ್ತು ಆಯುಷ್ ವೈದ್ಯಕೀಯ ವ್ಯವಸ್ಥೆಗಳೆರಡನ್ನೂ ಒಳಗೊಳ್ಳುತ್ತದೆ.

…ಹೀಗೆ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದು; ರಾಜ್ಯ ಸರಕಾರದ ಭರವಸೆಗಾಗಿ ಎದುರು ನೋಡುತ್ತಿದ್ದಾರೆ. ಇದೇ ಜುಲೈ 15ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನೌಕರರ ಬೇಡಿಕೆಗೆ ಸಂಬAಧಿಸಿದAತೆ ಚರ್ಚೆ ನಡೆಸಲಿದ್ದು; 7ನೇ ವೇತನ ಆಯೋಗದ ವರದಿ ಜಾರಿ ಬಗ್ಗೆ ಸಿಹಿಸುದ್ದಿ ನೀಡುವ ನಿರೀಕ್ಷೆ ಇದೆ.

PUC, SSLC ಪಾಸಾದವರಿಗೆ ಸರ್ಕಾರಿ LKG-UKG ಶಾಲೆ ಶಿಕ್ಷಕರು ಮತ್ತು ಆಯಾ ಹುದ್ದೆಗಳ ನೇಮಕಾತಿ | ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿ ಇಲ್ಲಿದೆ… Govt LKG UKG Teachers Recruitment 2024


Spread the love
WhatsApp Group Join Now
Telegram Group Join Now

3 thoughts on “ರಾಜ್ಯ ಸರಕಾರಿ ನೌಕರರ ಮುಷ್ಕರ: ನೌಕರರ ಬೇಡಿಕೆಗಳೇನು? ಸರಕಾರದ ಸವಾಲುಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… Govt Employees Strike and Demands”

  1. ನನ್ನ 30 ವರ್ಷಗಳ ಸೇವಾಧಿಯಲ್ಲಿ ಇಂತಹುದೇ ಅನೇಕ ಘಟನೆಗಳನ್ನು ನೋಡಿದ್ದೇನೆ. ದುಃಖದ ಸಂಗತಿ ಎಂದರೆ ಯಾವೊಬ್ಬ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೂ ಕೇಂದ್ರ ಸರಕಾರದ ವೇತನ ಕೊಡಿಸಲು ಆಗಲಿಲ್ಲ, ಆಗುವುದೂ ಇಲ್ಲ.

    Reply

Leave a Comment

error: Content is protected !!