ಸರಕಾರಿ ನೌಕರರ ಸಂಬಳ ಏರಿಕೆ ಸದ್ಯಕ್ಕೆ ಅಸಾಧ್ಯ | ಆರ್ಥಿಕ ಇಲಾಖೆ ಸ್ಪಷ್ಟನೆ Govt employees Salary hike impossible for now

Spread the love

Govt employees Salary hike impossible for now : ರಾಜ್ಯ ಸರಕಾರಿ ನೌಕರರ ಬಹುದಿನದ ಬೇಡಿಕೆಯಾದ ಏಳನೇ ವೇತನ ಆಯೋಗದ ವರದಿ ಶಿಫಾರಸು ಕುರಿತು ಆರ್ಥಿಕ ಇಲಾಖೆ ಆಘಾತಕಾರಿ ಮಾಹಿತಿ ನೀಡಿದೆ. ನಿನ್ನೆ (ಜುಲೈ 4) ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಈ ಬಗ್ಗೆ ಅಂಕಿ-ಅ೦ಶಗಳ ಸಹಿತ ಸ್ಪಷ್ಟನೆ ನೀಡಲಾಗಿದೆ.

WhatsApp Group Join Now
Telegram Group Join Now

ಹೌದು, ರಾಜ್ಯ ಸರಕಾರಿ ನೌಕರರ (State Government Employees) ಏಳನೇ ವೇತನ ಆಯೋಗದ (Karnataka 7th Pay Commission) ಬೇಡಿಕೆಗಳೂ ಸೇರಿದಂತೆ ನೌಕರರ ಬಹುತೇಕ ಬೇಡಿಕೆ ಈಡೇರಿಕೆ ಸದ್ಯಕ್ಕೆ ಅಸಾಧ್ಯವೆಂಬ ಮಾಹಿತಿ ಸಿಕ್ಕಿದೆ. ಅದಕ್ಕೆ ಕಾರಣ ‘ಹಣಕಾಸು ಮುಗ್ಗಟ್ಟು’ ಎಂಬುವುದನ್ನು ಆರ್ಥಿಕ ಇಲಾಖೆಯ ಅಧಿಕಾರಿಗಳು ಸಂಪುಟ ಸಭೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸರಕಾರಿ ನೌಕರರ ಸಂಬಳ, ಭತ್ಯೆ ಏರಿಕೆಯ ಸಂಪೂರ್ಣ ಮಾಹಿತಿ | 7ನೇ ವೇತನ ಆಯೋಗದ ಶಿಫಾರಸುಗಳು 7th pay Commission Complete Information

ಸದ್ಯಕ್ಕೆ ನೌಕರರ ವೇತನ ಪರಿಷ್ಕರಣೆ ಅಸಾಧ್ಯ!

ರಾಜ್ಯ ಸರಕಾರಿ ನೌಕರರ ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ? ಎಂಬುವುದನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಮನವರಿಕೆ ಮಾಡಿದ್ದಾರಾದರೂ ಸದ್ಯಕ್ಕೆ ಮಾತ್ರ ಇದು ಕಷ್ಟಸಾಧ್ಯ ಎಂಬುವುದನ್ನು ಒತ್ತಿ ಹೇಳಲಾಗಿದೆ. ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರವಾಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಸಂಪನ್ಮೂಲ ವಿನಿಯೋಗವಾಗುತ್ತಿದೆ. ಹೀಗಾಗಿ ಸದ್ಯಕ್ಕೆ ನೌಕರರ ಬೇಡಿಕೆ ಈಡೇರಿಕೆ ಕಷ್ಟಕರ ಎಂಬುವುದು ಆರ್ಥಿಕ ಇಲಾಖೆಯ ಸ್ಪಷ್ಟನೆ.

ದಿಢೀರ್ ವೇತನ ಪರಿಷ್ಕರಣೆ ಮಾಡಿದರೆ ಇದಕ್ಕಾಗಿ ಪ್ರತೀ ತಿಂಗಳು ಹಣ ಹೊಂದಿಸುವುದು ಕಷ್ಟ ಆಗಬಹುದು. ಹೀಗಾಗಿ ವೇತನ ಏರಿಕೆ ಸೇರಿದಂತೆ ಹೊಸ ಪಿಂಚಣಿ ಯೋಜನೆ ಜಾರಿ ಕೂಡ ಅಸಾಧ್ಯ ಎಂದು ಸಂಪುಟ ಸಭೆಗೆ ವಿವರಿಸಲಾಗಿದೆ. 7ನೇ ವೇತನ ಆಯೋಗ ಅನುಷ್ಠಾನ ಕುರಿತಂತೆ ಸಂಪುಟ ಸಭೆಯಲ್ಲಿ ಭಾಗಿಯಾಗಿದ್ದ ಯಾವೊಬ್ಬ ಸಚಿವರೂ ಈ ಬಗ್ಗೆ ಪಟ್ಟು ಹಿಡಿದು ಮಾತನಾಡದೇ ಮುಖ್ಯಮಂತ್ರಿಗಳ ನಿರ್ಧಾರಕ್ಕೆ ವಹಿಸಿದರು ಎನ್ನಲಾಗುತ್ತಿದೆ.

ಸ್ವಂತ ಮನೆಗಾಗಿ ಗೃಹ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ Types of Home Loan

Govt employees Salary hike impossible for now
ಹಳೆ ಪಿಂಚಣಿ ಯೋಜನೆ ಮರುಜಾರಿ ಕೂಡ ಅಸಾಧ್ಯ

ಏಳನೇ ವೇತನ ಆಯೋಗ ಅನುಷ್ಠಾನ ಮಾತ್ರವಲ್ಲದೇ ಸ್ವತಃ ಕಾಂಗ್ರೆಸ್ ಪಕ್ಷವೇ ಕಳೆದ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆಯನ್ನೇ ಮುರು ಜಾರಿಗೊಳಿಸುವುದು ಸಹ ಈಗ ಅಸಾಧ್ಯ ಎಂಬ ಮಾಹಿತಿಯನ್ನು ಹಣಕಾಸು ಇಲಾಖೆ ಅಧಿಕಾರಿಗಳು ಅಭಿಮತ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ಹಣಕಾಸಿನ ಕೊರತೆ ಇದೆ ಎಂದ ಮಾತ್ರಕ್ಕೆ ನೌಕರರ ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಸಾಧ್ಯವೇ ಇಲ್ಲವೆಂದೇನಲ್ಲ. ಸದ್ಯಕ್ಕೆ ಸಾಧ್ಯವಾಗದಿದ್ದರೂ ಮುಂದೆ ನೌಕರರ ವೇತನ ಪರಿಷ್ಕರಣೆ ಮಾಡಲೇ ಬೇಕು ಎಂಬ ಅಭಿಪ್ರಾಯವನ್ನೂ ಸಹ ಹಣಕಾಸು ಇಲಾಖೆ ಅಧಿಕಾರಿಗಳು ಒತ್ತಿ ಹೇಳಿದ್ದಾರೆ ಎನ್ನಲಾಗುತ್ತಿದೆ.

PUC, 7th ಪಾಸಾದವರಿಗೆ ಗ್ರಾಮ ಪಂಚಾಯತಿ ಹುದ್ದೆಗಳ ನೇಮಕ | ನಿಮ್ಮೂರ ಪಂಚಾಯ್ತಿಯಲ್ಲೇ ಕೆಲಸ | ಖಾಲಿ ಹುದ್ದೆಗಳ ವಿವರ ಇಲ್ಲಿದೆ… Gram Panchayat Recruitment 2024

ನೌಕರರ ಪ್ರಮುಖ ಬೇಡಿಕೆಗಳೇನು?

ರಾಜ್ಯ ಸರಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅವರ ನೇತೃತ್ವದ 7ನೇ ವೇತನ ಆಯೋಗವು ಕಳೆದ ಮಾರ್ಚ್ 16ರಂದು ಒಟ್ಟು 244 ಪುಟಗಳ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಆ ವರದಿಯ ಶಿಫಾರಸುಗಳ ಜೊತೆಗೆ ನೌಕರರ ಪ್ರಮುಖ ಬೇಡಿಕೆಗಳ ಪಟ್ಟಿ ಈ ಕೆಳಗಿನಂತಿದೆ:

  • ಶೇ.31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ಸೇರಿಸಬೇಕು. ಜೊತೆಗೆ ಶೇ 27.50ರಷ್ಟು ಫಿಟ್‌ಮೆಂಟ್ ನೀಡಬೇಕು.
  • ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆಯನ್ನೇ ಮರು ಜಾರಿಗೊಳಿಸಬೇಕು.
  • ‘ಆರೋಗ್ಯ ಸಂಜೀವಿನಿ ಯೋಜನೆ’ ಜಾರಿಗೊಳಿಸುವ ಮೂಲಕ ನೌಕರರಿಗೆ ನಗದುರಹಿತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು.
  • ಕೌನ್ಸೆಲಿಂಗ್ ಮೂಲಕ ಕರ್ನಾಟಕ ರಾಜ್ಯ ಸರಕಾರದ ಎಲ್ಲ ವೃಂದದ ಅಧಿಕಾರಿಗಳು, ನೌಕರರ ವರ್ಗಾವಣೆಗಳನ್ನು ಮಾಡಬೇಕು.
  • ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 2.58 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನೌಕರರ ಮೇಲೆ ಒತ್ತಡ ಕಡಿಮೆ ಮಾಡಬೇಕು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 825 ಹಾಸ್ಟೆಲ್ ಹುದ್ದೆಗಳ ನೇಮಕಾತಿ | SSLC ಪಾಸಾದವರಿಗೂ ಅವಕಾಶ BCWD Hostel Recruitment 2024

ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಮೊದಲೇ ತೀರ್ಮಾನವಾದಂತೆ ಇದೇ ಜುಲೈ 7ರಂದು ಚಿಕ್ಕಮಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ನಡೆಯಲಿದೆ. ಇಲ್ಲಿ ನೌಕರರ ಬೇಡಿಕೆಗಳ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಲಿದ್ದು; 7ನೇ ವೇತನ ಆಗೋಗದ ಶಿಫಾರಸುಗಳು ಜಾರಿಯಾಗದ ಹಿನ್ನಲೆಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ನೌಕರರ ಸಂಘ ತಯಾರಿ ನಡೆಸಿದೆ ಎನ್ನಲಾಗುತ್ತಿದೆ.

ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಅನುಮೋದನೆ ಸಿಗದೇ ಇದ್ದುದರಿಂದ ರಾಜ್ಯ ಸರಕಾರದ ಎಲ್ಲ ವೃಂದದ ನೌಕgರು ಬೇಸರ ಹೊರ ಹಾಕಿ, ಹೋರಾಟ ಆರಂಭಿಸಲು ಒತ್ತಡ ಹೇರಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆಯುವ ಕಾರ್ಯಕಾರಣಿ ಸಭೆ ನಂತರ ಮುಷ್ಕರದ ಅಂತಿಮ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.

PUC, SSLC ಪಾಸಾದವರಿಗೆ ಸರ್ಕಾರಿ LKG-UKG ಶಾಲೆ ಶಿಕ್ಷಕರು ಮತ್ತು ಆಯಾ ಹುದ್ದೆಗಳ ನೇಮಕಾತಿ | ಖಾಲಿ ಹುದ್ದೆಗಳ ಜಿಲ್ಲಾವಾರು ಪಟ್ಟಿ ಇಲ್ಲಿದೆ… Govt LKG UKG Teachers Recruitment 2024


Spread the love
WhatsApp Group Join Now
Telegram Group Join Now

3 thoughts on “ಸರಕಾರಿ ನೌಕರರ ಸಂಬಳ ಏರಿಕೆ ಸದ್ಯಕ್ಕೆ ಅಸಾಧ್ಯ | ಆರ್ಥಿಕ ಇಲಾಖೆ ಸ್ಪಷ್ಟನೆ Govt employees Salary hike impossible for now”

  1. ರಾಜಕಾರಣಿಗಳ ಅನಗತ್ಯ ದುಂಡು ವೆಚ್ಚಕ್ಕೆ ಮತ್ತು ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣವಿದೆ; ವೇತನ ಪರಿಷ್ಕರಣೆಗೆ ಹಣವಿಲ್ಲ!

    ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ jayakumarcsj@gmail.com

    Reply

Leave a Comment

error: Content is protected !!