Govt Employees Pension Revision Order : ರಾಜ್ಯ ಸರ್ಕಾರದ (Karnataka State Government) ನೀತಿ ನಿರ್ಣಯದಂತೆ, ದಿನಾಂಕ: 22-07-2024ರ ಆದೇಶದಲ್ಲಿ 7ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಿ ನೌಕರರ (State Government Employees) ವೇತನ ಶ್ರೇಣಿಗಳು ಮತ್ತು ಪಿಂಚಣಿಯನ್ನು ಪರಿಷ್ಕರಿಸಿ ಅನುಷ್ಠಾನಗೊಳಿಸಲು ಆದೇಶಗಳನ್ನು ಹೊರಡಿಸಲಾಗಿದೆ.
ಮುಂದುವರೆದು, ಕರ್ನಾಟಕ ನಾಗರೀಕ ಸೇವಾ (ಪರಿಷ್ಕೃತ ವೇತನ) ನಿಯಮಗಳು, 2024ರ ಅವಕಾಶಗಳಂತೆ ಪರಿಷ್ಕೃತ ವೇತನ ಶ್ರೇಣಿಗಳು ಮತ್ತು ಪರಿಷ್ಕೃತ ಪಿಂಚಣಿಯನ್ನು ಅನುಷ್ಠಾನಗೊಳಿಸಲು 23-08-2024ರಲ್ಲಿ ವಿಸ್ತ್ರತವಾದ ಆದೇಶಗಳನ್ನು ಹೊರಡಿಸಲಾಗಿದೆ.
ಅದರಂತೆ, 7ನೇ ರಾಜ್ಯ ವೇತನ ಆಯೋಗವು (7th State Pay Commission) ಶಿಫಾರಸ್ಸು ಮಾಡಿ ಸದರಿ ಆದೇಶದಲ್ಲಿ ಅಂಗೀಕರಿಸಿರುವAತೆ ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಮತ್ತು ಪಿಂಚಣಿ ಸೌಲಭ್ಯಗಳನ್ನು ಪರಿಷ್ಕರಿಸಿ ಈ ಕೆಳಕಂಡAತೆ ಸರ್ಕಾರ ಆದೇಶಿಸಿದೆ.
ವಯೋನಿವೃತ್ತಿ ಸೇರಿದಂತೆ ಇತರೆ ಐದು ನಿವೃತ್ತಿ ವೇತನದ ಕನಿಷ್ಠ ಮೊತ್ತವನ್ನು ಮಾಸಿಕ 8,500 ರೂಪಾಯಿಗಳಿಂದ 13,500ಗೆ ಹೆಚ್ಚಿಸಲಾಗಿದೆ. ಗರಿಷ್ಠ ನಿವೃತ್ತಿ ವೇತನವನ್ನು 75,300 ರೂಪಾಯಿಗಳಿಂದ 1.20 ಲಕ್ಷ ರೂಪಾಯಿ ವರೆಗೆ ಪರಿಷ್ಕರಿಸಲಾಗಿದೆ. ಕುಟುಂಬ ನಿವೃತ್ತಿ ವೇತನದ ಗರಿಷ್ಠ ಪರಿಮಿತಿಯನ್ನು ಪ್ರಸ್ತುತ ಇರುವ 45,180 ರೂಪಾಯಿಗಳಿಂದ 80,400 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಅದೇ ರೀತಿ ಸರ್ಕಾರಿ ನೌಕರರು ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸಂದರ್ಭದಲ್ಲಿ ನೀಡುವ ಉಪದಾನವನ್ನು (ಪರಿಹಾರ) 1 ವರ್ಷಕ್ಕಿಂತ ಕಡಿಮೆ ಸೇವೆಗೆ ಪ್ರಸ್ತುತ ಇದ್ದ ಮೊತ್ತಕ್ಕೆ ಎರಡರಷ್ಟು, 1 ವರ್ಷಕ್ಕಿಂತ ಹೆಚ್ಚು 5 ವರ್ಷಕ್ಕಿಂತ ಕಡಿಮೆ ಸೇವಾ ಅವಧಿಗೆ ಪ್ರಸ್ತುತಿದ್ದ ಮೊತ್ತಕ್ಕೆ 6ರಷ್ಟು, 5 ರಿಂದ 20 ವರ್ಷಗಳ ವರೆಗಿನ ಸೇವೆಗೆ ಪ್ರಸ್ತುತ ಮೊತ್ತಕ್ಕಿಂತ ಹನ್ನೆರಡರಷ್ಟು ಮತ್ತು 20 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ಅವರ ಪ್ರತಿ ಅರ್ಧ ವರ್ಷದ ಅರ್ಹತಾ ಸೇವೆಗೆ ಪ್ರಸ್ತುತ ಇದ್ದ ಉಪಲಬ್ದಗಳ ಅರ್ಧದಷ್ಟು ನೀಡಬೇಕು. ಈ ಉಪದಾನವು ಗರಿಷ್ಠ ಮೊತ್ತ 33 ಲಕ್ಷ ಹಾಗೂ ಮರಣ ಉಪದಾನವು 20 ಲಕ್ಷಗಳಿಗೆ ಮೀರಬಾರದು ಎಂದು ತಿಳಿಸಲಾಗಿದೆ.
ಪಿಂಚಣಿ ಪರಿಷ್ಕೃರಣೆ ಕುರಿತ ರಾಜ್ಯ ಸರ್ಕಾರದ ಆದೇಶ ಪ್ರತಿ (Download)
2 thoughts on “ರಾಜ್ಯ ಸರ್ಕಾರಿ ನೌಕರರಿಗಿನ್ನು ₹1.2 ಲಕ್ಷದ ವರೆಗೆ ಪಿಂಚಣಿ | ಸರ್ಕಾರದ ವಿಸ್ತ್ರತ ಆದೇಶ ಪ್ರತಿ ಇಲ್ಲಿದೆ… Govt Employees Pension Revision Order”