Govt Employees House Rent Allowance : ರಾಜ್ಯ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬಹುದೊಡ್ಡ ಬೇಡಿಕೆಯಾಗಿದ್ದ 7ನೇ ವೇತನ ಆಯೋಗದ (7th Pay Commission) ಶಿಫಾರಸುಗಳನ್ನು ಜಾರಿಗೊಳಿಸಿ ಆದೇಶಿಸಿದೆ. ಇದೇ ಆಗಸ್ಟ್ ತಿಂಗಳಿನಿ೦ದ ನೌಕರರ ವೇತನ, ಭತ್ಯೆ, ಪಿಂಚಣಿ ಸೌಲಭ್ಯಗಳು ಏರಿಕೆಯಾಗಲಿವೆ. mahitimane.com ಈ ಹಿಂದಿನ ಲೇಖನಗಳಲ್ಲಿ ನೌಕರರ ಪರಿಷ್ಕೃತ ವೇತನ, ಪಿಂಚಣಿ ವಿವರವನ್ನು ನೀಡಿದ್ದು: ಈ ಲೇಖನದಲ್ಲಿ ನೌಕರರ ಮನೆ ಬಾಡಿಗೆ ಭತ್ಯೆ (House Rent Allowance – HRA) ಕುರಿತ ಮಾಹಿತಿ ನೀಡಲಾಗಿದೆ…
ಮನೆ ಬಾಡಿಗೆ ಭತ್ಯೆಯು ಸರ್ಕಾರಿ ನೌಕರನ ಅಥವಾ ನೌಕರಳ ವಾಸ ಸ್ಥಾನಕ್ಕಾಗಿ ಭರಿಸುವ ವೆಚ್ಚಕ್ಕೆ ಸಂಬAಧಿಸಿದAತೆ ನೀಡಲಾಗುವ ಪರಿಹಾರವಾಗಿದೆ. ಇದನ್ನು ಆಯಾ ನೌಕರರ ಮೂಲ ವೇತನದ ಶೇಕಡಾವಾರು ಪ್ರಮಾಣದಲ್ಲಿ ಸೂಚಿಸಲಾಗುತ್ತದೆ. ಜನಸಂಖ್ಯೆಯ ಆಧಾರದ ಮೇಲೆ ನಗರ, ಪಟ್ಟಣಗಳು ಮತ್ತು ಇತರೆ ವಾಸಸ್ಥಳಗಳ ವರ್ಗೀಕರಣದ ಮೂಲಕ ಈ ಆರ್ಥಿಕ ಸೌಲಭ್ಯವನ್ನು ಒದಗಿಸಲಾಗುತ್ತದೆ.
ಮನೆ ಬಾಡಿಗೆ ಭತ್ಯೆ ನಿಗದಿಪಡಿಸಿದ ವರ್ಗವಾರು ನಗರಗಳು
2011ರ ಜನಗಣತಿಯ ಅಂಕಿ-ಅ೦ಶಗಳ ಆಧಾರದ ಮೇಲೆ 2015ರಲ್ಲಿ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಪ್ರದೇಶಗಳನ್ನು ವರ್ಗೀಕರಣ ಮಾಡಲಾಗಿದೆ. ಪ್ರಸ್ತುತ ವರ್ಗಗಳಿಗೆ ಸಂಬAಧಿಸಿದ ನಗರಗಳು ಈ ಕೆಳಗಿನಂತಿವೆ.
ಎ ಪ್ರವರ್ಗ : 25 ಲಕ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು ‘ಎ’ ಪ್ರವರ್ಗಕ್ಕೆ ಸೇರಿಸಲಾಗಿದ್ದು; ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಸಂಪೂರ್ಣ ಪ್ರದೇಶ ಈ ವರ್ಗಕ್ಕೆ ಬರುತ್ತದೆ.
ಬಿ ಪ್ರವರ್ಗ : 5 ಲಕ್ಷ ದಿಂದ 25 ಲಕ್ಷದೊಳಗಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು ‘ಬಿ’ ವರ್ಗಕ್ಕೆ ಸೇರಿಸಲಾಗಿದ್ದು, ಈ ವರ್ಗದಲ್ಲಿ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ ಪುರಸಭೆ ಪ್ರದೇಶಗಳನ್ನು ಬರುತ್ತವೆ.
ಸಿ ಪ್ರವರ್ಗ : ಬೆಂಗಳೂರು (ಬಿಬಿಎಂಪಿ ವ್ಯಾಪ್ತಿ) ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ ಹೊರತುಪಡಿಸಿ ರಾಜ್ಯದ ಉಳಿದೆಲ್ಲ ಪಟ್ಟಣ ಮತ್ತು ಊರುಗಳನ್ನು ‘ಸಿ’ ಪ್ರವರ್ಗಕ್ಕೆ ಸೇರಿಸಲಾಗಿದೆ.
ಯಾವ ಜಿಲ್ಲೆಯ ನೌಕರರಿಗೆ ಎಷ್ಟೆಷ್ಟು ಮನೆ ಬಾಡಿಗೆ ಭತ್ಯೆ?
2015ರಲ್ಲಿ ವರ್ಗೀಕರಿಸಲಾದ ರಾಜ್ಯದ ನಗರಗಳು, ಪಟ್ಟಣಗಳು ಮತ್ತು ಇತರೆ ಪ್ರದೇಶಗಳಲ್ಲಿ 7ನೇ ವೇತನ ಆಯೋಗ ಯಾವುದೇ ಬದಲಾವಣೆ ಅಗತ್ಯವಿಲ್ಲವೆಂದು ಅಭಿಪ್ರಯಾಯ ಪಟ್ಟಿದ್ದು; ಪ್ರಸ್ತುತ ವ್ಯವಸ್ಥೆಯನ್ನು ಮುಂದುವರೆಸಬಹುದು ಎಂದಿದೆ.
ಮೇಲ್ಕಾಣಿಸಿದ ಪ್ರವರ್ಗವಾರು ಮನೆ ಬಾಡಿಗೆ ಭತ್ಯೆಯ ಪ್ರಮಾಣಕ್ಕೆ ಸಂಬ೦ಧಿಸಿದ೦ತೆ ಶಿಫಾರಸ್ಸು ಮಾಡಲಾದ ಪರಿಷ್ಕೃತ ವೇತನ ಶ್ರೇಣಿಗಳನ್ನು ಪರಿಗಣನೆಗೆ ತೆಗೆದುಕೊಂಡು ಆಯೋಗವು ಮೇಲ್ಕಾಣಿಸಿದ ಮೂರು ವರ್ಗಗಳ ಪ್ರದೇಶಗಳಿಗೆ ಮನೆ ಬಾಡಿಗೆ ಭತ್ಯೆಯನ್ನು ಈ ಕೆಳಗಿನಂತೆ ಶಿಫಾರಸ್ಸು ಮಾಡಿದೆ:
‘ಎ’ ಪ್ರವರ್ಗದಡಿಯಲ್ಲಿ ಬರುವ ನಗರಗಳಲ್ಲಿ ವಾಸವಿರುವ ಸರ್ಕಾರಿ ನೌಕರರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ದರ ಮೂಲ ವೇತನದ ಶೇ.24ರಷ್ಟಿದೆ. ಈ ಮಿತಿಯನ್ನು 7ನೇ ವೇತನ ಆಯೋಗವು ಶೇ.20ಕ್ಕೆ ಶೀಫಾರಸು ಮಾಡಲಾಗಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಗಿಫ್ಟ್? | ಯಾರಿಗೆ ಎಷ್ಟು ಸಿಗಲಿದೆ ಡಿಎ? DA Gift for Govt Employees
ಇನ್ನು ‘ಬಿ’ ಪ್ರವರ್ಗದಡಿಯಲ್ಲಿ ಬರುವ ನಗರಗಳಲ್ಲಿ ವಾಸವಿರುವ ಸರ್ಕಾರಿ ನೌಕರರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ದರವು ಮೂಲ ವೇತನದ ಶೇ.16ರಷ್ಟಿದೆ. ಈ ಮಿತಿಯನ್ನು 7ನೇ ವೇತನ ಆಯೋಗವು ಶೇ.15ಕ್ಕೆ ಶಿಫಾರಸು ಮಾಡಲಾಗಿದೆ.
ಅದೇ ರೀತಿ ‘ಸಿ’ ಪ್ರವರ್ಗದಡಿಯಲ್ಲಿ ಬರುವ ನಗರಗಳಲ್ಲಿ ವಾಸವಿರುವ ಸರ್ಕಾರಿ ನೌಕರರಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ದರವು ಮೂಲ ವೇತನದ ಶೇ.8ರಷ್ಟಿದೆ. ಈ ಮಿತಿಯನ್ನು 7ನೇ ವೇತನ ಆಯೋಗವು ಶೇ.7.5ಗೆ ಶಿಫಾರಸು ಮಾಡಲಾಗಿದೆ.
ಮನೆ ಬಾಡಿಗೆ ಭತ್ಯೆ ಸಂಬ೦ಧಿತ ನೌಕರರ ಬೇಡಿಕೆಗಳು
ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಮನೆ ಬಾಡಿಗೆ ಭತ್ಯೆಯ ದರಗಳಲ್ಲಿ ಗಣನೀಯ ಹೆಚ್ಚಳಕ್ಕಾಗಿ ಅನೇಕ ಬೇಡಿಕೆಗಳನ್ನು ಆಯೋಗವು ಸ್ಪೀಕರಿಸಿದೆ. ಮನೆ ಬಾಡಿಗೆ ಭತ್ಯೆಯ ಮಂಜೂರಾತಿಯ ಉದ್ದೇಶಕ್ಕಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸಮನಾಗಿ ಪರಿಗಣಿಸಬೇಕೆಂದು ಕೆಲವರು ಮನವಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ತಮ್ಮ ವಿಸ್ತ್ರತ ಮನವಿಯಲ್ಲಿ ಇತರೆ ವಿಷಯಗಳೊಂದಿಗೆ, ಪ್ರದೇಶಗಳ ಮರುವರ್ಗೀಕರಣವನ್ನು ಕೋರಿದೆ ಮತ್ತು ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯನ್ನು (ಕೇವಲ ಬಿಬಿಎಂಪಿ ಪ್ರದೇಶವಲ್ಲದೆ) ‘ಎ’ ಪ್ರವರ್ಗದ ಅಡಿಯಲ್ಲಿ ತರಬೇಕೆಂಬುದನ್ನು ಸಹ ಕೋರಿದೆ.
ಹಾಗೇನೇ ಶಿವಮೊಗ್ಗ, ದಾವಣಗೆರೆ, ತುಮಕೂರು, ವಿಜಯಪುರ ಮತ್ತು ಬಳ್ಳಾರಿ ನಗರಗಳನ್ನು ‘ಬಿ’ ಪ್ರವರ್ಗದ ಅಡಿಯಲ್ಲಿ ಸೇರಿಸಬೇಕೆಂದು ಕೋರಿರುತ್ತದೆ. 7ನೇ ವೇತನ ಆಯೋಗವು ಈ ಎಲ್ಲಾ ಬೇಡಿಕೆಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದ್ದು; ಪ್ರದೇಶವಾರು ವರ್ಗೀಕರಣವು ನಿಖರವಾಗಿರಬೇಕು ಎಂಬುದು ಅಭಿಪ್ರಾಯಪಟ್ಟಿದೆ.
‘ಎ’ ಪ್ರವರ್ಗದ ಸೌಲಭ್ಯಗಳನ್ನು ಹೊರ ವಲಯದ ಪ್ರದೇಶಗಳಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯು ಮುಗಿಯದ ಪ್ರಕ್ರಿಯೆಯಾಗಿದೆ. ಅಲ್ಲದೆ ಹಿಂದಿನ ಬಿಎಂಪಿ ಹೊರ ವಲಯದ ಪ್ರದೇಶಗಳಿಗೆ ಮನೆ ಬಾಡಿಗೆ ಭತ್ಯೆ (HRA) ದರವನ್ನು ಹೆಚ್ಚಿಸುವ ವಿಷಯವು ಈ ಹಿಂದೆ ಅನೇಕ ಆಡಳಿತಾತ್ಮಕ ತೊಂದರೆಗಳನ್ನು ಸೃಷ್ಟಿಸಿದ್ದು, ತಪ್ಪಿಸಬಹುದಾಗಿದ್ದ ಹಲವು ವ್ಯಾಜ್ಯಗಳಿಗೆ ಎಡೆಮಾಡಿ ಕೊಟ್ಟಿತ್ತು.
ಮನೆ ಬಾಡಿಗೆ ಭತ್ಯೆಯ ಮಂಜೂರಾತಿ ಉದ್ದೇಶಕ್ಕಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ಸರಿಸಮನಾಗಿ ಪರಿಗಣಿಸುವ ಕೋರಿಕೆಗೆ ಸಂಬ೦ಧಿಸಿದ೦ತೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜೀವನಮಟ್ಟ ಮತ್ತು ಜೀವನ ವೆಚ್ಚದಲ್ಲಿ ಗಣನೀಯ ಅಂತರವಿರುವುದರಿ೦ದ ಈ ಕೋರಿಕೆಯನ್ನು ಅಂಗೀಕರಿಸುವುದು ಕಷ್ಟವಾಗುತ್ತದೆ. ಭತ್ಯೆಯು ವಾಸ್ತವಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸಬೇಕೇ ಹೊರತು ಇದು ಎಲ್ಲಾ ನೌಕರರಿಗೆ ವಿಸ್ತರಿಸಲಾಗುವ ಒಂದು ಸೌಲಭ್ಯ ಎಂಬ೦ತೆ ಪರಿಗಣಿಸಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
House rent in Tumkur is not less than any “A “ category cities. The minimum rent in the city is Rs. 12000. So, it is most unscientific to bifurcate Tumkur City under “ C “ category as the city has attained Corporation Status and recognised Smart City. it is one of the fastest growing cities in Karnataka. Either the House Rent Allowance should be 15% or at least 12.5%.