Govt Employees DA Hike- ಸರಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳ | ನೌಕರರ ಸಂಬಳದಲ್ಲಿ ಭಾರೀ ಏರಿಕೆ

ಇದೇ ಸೆಪ್ಟೆಂಬರ್‌ನಲ್ಲಿ ಸರಕಾರಿ ನೌಕರರಿಗೆ ತುಟ್ಟಿಭತ್ಯೆ (Govt Employees DA Hike) ಹೆಚ್ಚಳವಾಗಲಿದ್ದು; ಇದರಿಂದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ…
ಇದೇ ಸೆಪ್ಟೆಂಬರ್’ನಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (Dearness Allowance – DA) ಸಿಗುವ ಸಾಧ್ಯತೆ ಹೆಚ್ಚಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಜನವರಿ 2025ರಿಂದ ಜೂನ್ 2025ರ ಅವಧಿಯ ಡಿಎ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು; ಇದೇ ಸೆಪ್ಟೆಂಬರ್’ನಲ್ಲಿ ಇದರ ಅನುಷ್ಠಾನವಾಗುವ ಸಂಭವ ಹೆಚ್ಚಿದೆ.
ಸೆಪ್ಟೆಂಬರ್’ನಲ್ಲಿ ಮೊದಲ ಹಂತದ ಡಿಎ ಬಿಡುಗಡೆ
ಸರ್ಕಾರಿ ನೌಕರರಿಗೆ ಪ್ರತೀ ವರ್ಷ ಎರಡು ಬಾರಿ ತುಟ್ಟುಭತ್ಯೆ ಪರಿಷ್ಕರಣೆ ಮಾಡಲಾಗುತ್ತದೆ. ಮೊದಲ ಪರಿಷ್ಕರಣೆಯೂ ಜನವರಿಯಿಂದ ಜೂನ್ ಅವಧಿಯಲ್ಲಿ ನಡೆಯಲಿದೆ. ಎರಡನೇ ಪರಿಷ್ಕರಣೆ ಜುಲೈದಿಂದ ಡಿಸೆಂಬರ್ ಅವಧಿಗೆ ನಡೆಯುತ್ತದೆ.
All India Consumer Price Index (AICPI) ಡೇಟಾನೇ ತುಟ್ಟುಭತ್ಯೆ ಏರಿಕೆಗೆ ಮೂಲ ಆಧಾರವಾಗಿದೆ. ನಿತ್ಯ ಬಳಕೆ ವಸ್ತು, ಸಾಮಗ್ರಿಗಳ ಬೆಲೆ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚುವರಿ ಭತ್ಯೆ ನಿಗದಿ ಮಡಲಾಗುತ್ತದೆ. ಇದೀಗ ಜನವರಿ-ಜೂನ್ ವರೆಗಿನ ಮೊದಲ ಹಂತದ ಡಿಎ ಸೆಪ್ಟೆಂಬರ್’ನಲ್ಲಿ ಸಿಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: A Khata Distribution- ನಗರ, ಪಟ್ಟಣದ ಎಲ್ಲಾ ಆಸ್ತಿಗಳಿಗೂ ‘ಎ’ ಖಾತಾ ವಿತರಣೆ | ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ
ಈ ಬಾರಿ ತುಟ್ಟಿಭತ್ಯೆ ಮತ್ತಷ್ಟು ಹೆಚ್ಚಳ
ಕೇಂದ್ರ ಸರ್ಕಾರವು ಇದೇ ವರ್ಷ (2025) ಮಾರ್ಚ್’ನಲ್ಲಿ ತುಟ್ಟಿಭತ್ಯೆಯನ್ನು ಶೇ.2ರಷ್ಟು ಹೆಚ್ಚಿಸಿತ್ತು. ಆ ಮೂಲಕ ತುಟ್ಟಿಭತ್ಯೆ ಪ್ರಮಾಣವು ಶೇ.53ರಿಂದ ಶೇ55ಕ್ಕೆ ಏರಿಕೆಯಾಗಿತ್ತು. ಈ ಏರಿಕೆಯಿಂದ ನೌಕರರ ಸಂಬಳ ಹೆಚ್ಚಳವಾಗಿತ್ತು. ಜೊತೆಗೆ ಪಿಂಚಣಿದಾರರ ಪಿಂಚಣಿಯಲ್ಲೂ ಸಾಕಷ್ಟು ಏರಿಕೆಯಾಗಿತ್ತು.
ಕೇಂದ್ರ ಸರ್ಕಾರವು ಈ ಬಾರಿ 7ನೇ ವೇತನ ಆಯೋಗದ ಶಿಫಾರಸುಗಳ ಅನುಸಾರ ಶೇ.3ರಿಂದ ಶೇ4ರಷ್ಟು ಡಿಎ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಬದಲಾವಣೆಯಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ.
ನೌಕರರು ಹಾಗೂ ನಿವೃತ್ತರಿಗೆ ಏನೇನು ಪ್ರಯೋಜನ
ಸೆಪ್ಟೆಂಬರ್’ನಲ್ಲಿ ತುಟ್ಟಿಭತ್ಯೆ ಹೆಚ್ಚಳವಾದರೆ ನಿರೀಕ್ಷೆಯಂತೆಯೇ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಬಹಳಷ್ಟು ಪ್ರಯೋಜನವಾಗಲಿದೆ.ಮೊದಲನೆಯದಾಗಿ ನೌಕರರ ಮಾಸಿಕ ಸಂಬಳ ಹೆಚ್ಚಳವಾಗಲಿದೆ. ಅದೇ ರೀತಿ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಕೂಡ ಏರಿಕೆಯಾಗಲಿದೆ.
ಈ ಏರಿಕೆಯು ಬರಲಿರುವ ದಸರಾ, ದೀಪಾವಳಿ ಹಬ್ಬಗಳಿಗೆ ಹಣಕಾಸಿನ ನೆರವು ನೀಡಲಿದೆ. ನಿತ್ಯ ಬಳಕೆ ವಸ್ತುಗಳು ಮತ್ತು ಸಾಮಗ್ರಿಗಳ ಬೆಲೆ ಏರಿಕೆಯ ಹೊರೆ ತಗ್ಗಿಸಿ ವೆಚ್ಚವನ್ನು ಸಮತೋಲನಗೊಳಿಸಲು ಸಹಕಾರಿ ಆಗಲಿದೆ.
ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಈ ಬಾರಿ ಕನಿಷ್ಠ ಶೇ4ರಷ್ಟು ಡಿಎ ಏರಿಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಪ್ರಸ್ತುತ ಬೆಲೆ ಏರಿಕೆಯ ಪರಿಸ್ಥಿತಿಯನ್ನು ಗಮನಿಸಿದರೆ, ತುಟ್ಟುಭತ್ಯೆ ಏರಿಕೆಯ ನಿರ್ಧಾರವು ಇದೇ ಸೆಪ್ಟೆಂಬರ್ ಮೊದಲ ವಾರದಲ್ಲೇ ಘೋಷಿಸುವ ಸಂಭವ ಹೆಚ್ಚಿದೆ. 8ನೇ ವೇತನ ಆಯೋಗದ ನಿರೀಕ್ಷೆಯಲ್ಲಿರುವ ನೌಕರರು ಮತ್ತು ಪಿಂಚಣಿದಾರರಿಗೆ ಈ ತುಟ್ಟಿಭತ್ಯೆ ಏರಿಕೆ ದೊಡ್ಡ ನೆಮ್ಮದಿ ತರಲಿದೆ.