Govt employees Basic Salary Increment : ಕರ್ನಾಟಕ ಸರಕಾರಿ ನೌಕರರ ಸಂಬಳ ಹೆಚ್ಚಳ ಕುರಿತ 7ನೇ ವೇತನ ಆಯೋಗದ (7th pay commission) ಶಿಫಾರಸುಗಳನ್ನು ಜಾರಿಗೆ ತರಲು ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಕಳೆದ ಜೂನ್ 20ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
7ನೇ ವೇತನ ಆಯೋಗ ಜಾರಿ ಸರಕಾರಿ ನೌಕರರ ಬಹುದಿನದ ಬೇಡಿಕೆಯಾಗಿದೆ. 6ನೇ ವೇತನ ಆಯೋಗದ ಅಧಿಕಾರಾವಧಿಯು ಜುಲೈ 2022ರಲ್ಲಿ ಕೊನೆಗೊಂಡಿದ್ದು; ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರ್ ರಾವ್ ಅವರ ನೇತೃತ್ವದ 7ನೇ ವೇತನ ಆಯೋಗವು ಕಳೆದ ಮಾರ್ಚ್ 16ರಂದು ತನ್ನ ಅಂತಿಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಶಿಫಾರಸುಗಳನ್ನು ಜಾರಿಗೊಳಿಸಲು ಇದೇ ಜೂನ್ ಅಂತ್ಯಕ್ಕೆ ಗಡುವು ನಿಗದಿಪಡಿಸಲಾಗಿದೆ.
ಎರಡು ವರ್ಷಗಳ ನಂತರ ಇದೀಗ ಸರ್ಕಾರಿ ನೌಕರರ ವೇತನ ಹೆಚ್ಚಳ ಸೇರಿದಂತೆ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಲು ಸಂಪುಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ನೀಡಿದೆ. ಕೆಲ ಸಚಿವರು ಶೇ.25ರಷ್ಟು ಹೆಚ್ಚಳ ಮಾಡುವಂತೆ ಸೂಚಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ಶಿಫಾರಸು ವರದಿಯಂತೆ 27.5% ವೇತನ ಹೆಚ್ಚಳಕ್ಕೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.
ನೌಕರರ ಮೂಲವೇತನ ಎಷ್ಟು ಹೆಚ್ಚಾಗಲಿದೆ?
ಲೋಕಸಭೆ ಚುನಾವಣೆಗೂ ಮುನ್ನವೇ 7ನೇ ವೇತನ ಆಯೋಗವು ರಾಜ್ಯ ಸರಕಾರಕ್ಕೆ ಸವಿಸ್ತಾರವಾದ ವರದಿ ಸಲ್ಲಿಸಿತ್ತು. ಆ ಪ್ರಕಾರ ಸರ್ಕಾರಿ ನೌಕರರ ಮೂಲವೇತನದಲ್ಲಿ (Basic Salary) 27.5% ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದ್ದು; ಇದರ ಜೊತೆಗೆ ಬೇಸಿಕ್ ಸ್ಯಾಲರಿ 17,000 ರಿಂದ 27,000 ರೂಪಾಯಿ ವರೆಗೆ ಏರಿಕೆಯಾಗುವ ಸಂಭವವಿದೆ.
ಈ ಹೆಚ್ಚಳವು ರಾಜ್ಯದಾದ್ಯಂತ ಸುಮಾರು 1.2 ಮಿಲಿಯನ್ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ವರದಿಯ ಬಹುತೇಕ ಶಿಫಾರಸುಗಳ ಜಾರಿಗೆ ಇದೀಗ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು; 7ನೇ ವೇತನ ಆಯೋಗದ ಹೊಸ ವರದಿ ಪ್ರಕಾರ ಸರ್ಕಾರಿ ನೌಕರರ ಸಂಬಳ ಈ ಕೆಳಗಿನಂತೆ ಹೆಚ್ಚಳವಾಗಲಿದೆ:
- 20,900 ರೂಪಾಯಿ ಸರಕಾರಿ ನೌಕರರ ಹಳೆಯ ಬೆಸಿಕ್ ಸ್ಯಾಲರಿ ಇದ್ದರೆ, ಹೊಸ ವರದಿಯ ಪ್ರಕಾರ 33,300 ರೂಪಾಯಿಗೆ ಹೆಚ್ಚಳವಾಗಲಿದೆ.
- ಮೂಲವೇತನ 40,900 ರೂಪಾಯಿ ಇದ್ದರೆ, ಅದು 65,950 ರೂಪಾಯಿಗೆ ಹೆಚ್ಚಳವಾಗಲಿದೆ.
- 50,150 ರೂಪಾಯಿ ನೌಕರರ ಬೇಸಿಕ್ ಸ್ಯಾಲರಿ ಇದ್ದರೆ, ಅದು 79,900 ರೂಪಾಯಿ ಹೆಚ್ಚಳವಾಗಲಿದೆ.
- ಹಿರಿಯ ನೌಕರರ ಬೇಸಿಕ್ ಸ್ಯಾಲರಿ 1,04,600 ರೂಪಾಯಿ ಇದ್ದರೆ, ಅದು 1,67,200 ರೂಪಾಯಿಗೆ ಹೆಚ್ಚಳವಾಗಲಿದೆ.
ವಿಸೇಷವೆಂದರೆ ಮೂಲವೇತನ ಏರಿಕೆ ಆಗುವುದರ ಜೊತೆಗೆ ಡಿಎ (DA – Dearness Allowance), ಐಆರ್ (IR – Interim Relief) ಸೇರಿ ನೌಕರರ ವೇತನ ಮತ್ತಷ್ಟು ಏರಿಕೆಯಾಗಲಿದೆ. ಅಧಿಕಾರಿಗಳ ಪ್ರಕಾರ ಇದು ಜಾರಿಯಾದರೆ ರಾಜ್ಯ ಸರಕಾರಕ್ಕೆ 12,000 ಕೋಟಿ ಹೆಚ್ಚುವರಿ ಹೊರೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಸರಕಾರಿ ನೌಕರರಿಗೆ ಜೂನ್ 24ರಿಂದ ಹೊಸ ರೂಲ್ಸ್ | ಕೇಂದ್ರ ಸರಕಾರದ ಖಡಕ್ ಎಚ್ಚರಿಕೆ Govt employees new rules
ದಯವಿಟು ಬೇಗ ಏನಾದರೂ ಮಾಡಲಿ ಎಂಬ ಆಶಯ