Gold Silver Price- ಚಿನ್ನದ ಬೆಲೆ ಭಾರೀ ಇಳಿಕೆ | 10 ಗ್ರಾಂಗೆ ಕೇವಲ ₹55,000 ಇಳಿಯಲಿದೆಯೇ?

Spread the love

ಗಗನಕ್ಕೇರಿದ್ದ ಚಿನ್ನದ ಬೆಲೆ (Gold Price) ಇಳಿಮುಖದ ಹಾದಿ ಹಿಡಿದಿದೆ. ಕಳೆದ ಕೆಲವು ದಿನಗಳಿಂದ ಬಂಗಾರದ ಬೆಲೆ ಸಿಕ್ಕಾಪಟ್ಟೆ ದುಬಾರಿ ಆಗುತ್ತ ಬಂದಿದೆ. ಜಾಗತಿಕ ಮಾರುಕಟ್ಟೆ ಪರಿಸ್ಥಿತಿ, ಅಮೇರಿಕ ಅಧ್ಯಕ್ಷ ಟ್ರಂಪ್ ನಿರ್ಧಾರಗಳು, ಯುದ್ಧಗಳ ಕಾರಣದಿಂದ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿತ್ತು.

WhatsApp Group Join Now
Telegram Group Join Now

ಈಚೆಗೆ ಸತತ ಐದು ದಿನಗಳ ಚಿನ್ನ-ಬೆಳ್ಳಿ ದರ ಏರಿಕೆಗೆ ಹಠಾತ್ ಬ್ರೇಕ್ ಬಿದ್ದಿದೆ. ಏಪ್ರಿಲ್ 4ರ ಶುಕ್ರವಾರ ಹೊಸದಿಲ್ಲಿಯ ಚಿನಿವಾರ ಪೇಟೆಯಲ್ಲಿ (Chinatown, New Delhi) ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ.

ಚಿನ್ನ ಬೆಳ್ಳಿ ಧಾರಣೆ ಕುಸಿತ Gold and silver prices fall

ಏಪ್ರಿಲ್ 4ರಂದು 10 ಗ್ರಾಂ ಶುದ್ಧ ಚಿನ್ನದ ದರವು 1,350 ಕುಸಿದು 93 ಸಾವಿರ ರೂ. ತಲುಪಿದೆ. ಆಭರಣ ಚಿನ್ನವು ಇಷ್ಟೇ ಪ್ರಮಾಣದಲ್ಲಿ ಇಳಿಕೆಯಾಗಿ 92,550 ರೂ. ಆಗಿದೆ. ಇನ್ನು ಬೆಳ್ಳಿ ಧಾರಣೆಯು ಕೆ.ಜಿಗೆ 5,000 ರೂ. ಕಡಿಮೆಯಾಗಿ 95,500 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.

ಜಾಗತಿಕ ಅನಿಶ್ಚಿತತೆ ನಡುವೆ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸುವುದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಚಿನ್ನದ ದರ ಏರಿಕೆಯಾಗಬೇಕಿತ್ತು. ಆದರೆ, ಟ್ರಂಪ್ ಹೆಚ್ಚುವರಿ ಸುಂಕ ನೀತಿಯಲ್ಲಿ ಚಿನ್ನಕ್ಕೆ ವಿನಾಯಿತಿ ನೀಡಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

Karnataka 2nd PUC Result 2025- ದ್ವಿತೀಯ ಪಿಯುಸಿ ಫಲಿತಾಂಶ 2025 | ಮಹತ್ವದ ಮಾಹಿತಿ ಇಲ್ಲಿದೆ…

ಚಿನ್ನ-ಬೆಳ್ಳಿ ದರ ಸತತ ಏರಿಕೆಗೆ ಬ್ರೇಕ್ ಬಿದ್ದಿದೆ. ಏಪ್ರಿಲ್ 4ರಂದು ಹೊಸದಿಲ್ಲಿಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಇಳಿಕೆಯಾಗಿದೆ...
Gold Silver Price Analysis India
10 ಗ್ರಾಂ ಚಿನ್ನಕ್ಕೆ ಕೇವಲ 55,000 ರೂ..?

ಆರ್ಥಿಕ ಸ್ಥಿತಿ, ಹಣದುಬ್ಬರ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಚಿನ್ನದ ಇತ್ತೀಚಿನ ಏರಿಕೆಗೆ ಕಾರಣವಾಗಿದ್ದವು. ಇದೀಗ ಚಿನ್ನದ ಧಾರಣೆ ಇಳಿಮುಖದತ್ತ ಸಾಗಿದೆ. ಈ ಇಳಿಮುಖದ ಪ್ರಮಾಣ ಇನ್ನು ಹೆಚ್ಚಲಿದ್ದು, ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಸಾಕಷ್ಟು ಇಳಿಕೆಯಾಗಲಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

24 ಕ್ಯಾರೆಟ್ ಚಿನ್ನದ ಬೆಲೆ ಭಾರತೀಯ ಮಾರುಕಟ್ಟೆಗಳಲ್ಲಿ 10 ಗ್ರಾಂಗೆ 93,000 ರೂ.ಗಳ ಸಮೀಪದಲ್ಲಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನವು ಭಾರತದಲ್ಲಿ 10 ಗ್ರಾಂಗೆ ಸುಮಾರು 55,000 ರೂ.ಗಳಿಗೆ ಇಳಿಯಬಹುದು ಎಂದು ಅಮೆರಿಕ ಮೂಲದ ಹಣಕಾಸು ಸೇವಾ ಸಂಸ್ಥೆ (financial services firm) ಮಾರ್ನಿಂಗ್‌ಸ್ಟಾರ್‌ನ (Morningstar) ಮಾರುಕಟ್ಟೆ ತಂತ್ರಜ್ಞ ಜಾನ್ ಮಿಲ್ಸ್ ವಿಶ್ಲೇಷಿಸಿದ್ದಾರೆ.

Unified Pension Scheme- ಏಪ್ರಿಲ್‌ನಿಂದ ಸರ್ಕಾರಿ ನೌಕರರಿಗೆ ಭರ್ಜರಿ ಪಿಂಚಣಿ | ಯಾರಿಗೆ ಎಷ್ಟು ಸಿಗಲಿದೆ ಪೆನ್ಶನ್‌?

ಇತರ ಸಮೀಕ್ಷೆಗಳು ಏನು ಹೇಳುತ್ತವೆ?

ಹಣಕಾಸು ಸೇವಾ ಸಂಸ್ಥೆ ಮಾರ್ನಿಂಗ್ ಸ್ಟಾರ್‌ನ ಮಾರುಕಟ್ಟೆ ತಂತ್ರಜ್ಞ ಜಾನ್ ಮಿಲ್ಸ್ (Market strategist John Mills) ಅವರ ವಿಶ್ಲೇಷಣೆಯ ಹೊರತಾಗಿಯೂ, ಕೆಲವು ಪ್ರಮುಖ ಹಣಕಾಸು ಸಂಸ್ಥೆಗಳು ಚಿನ್ನದ ಧಾರಣೆ ಇಳಿಕೆಯ ಬಗ್ಗೆ ವರದಿ ಬಿಡುಗಡೆ ಮಾಡಿವೆ.

ಈ ಪೈಕಿ ಬ್ಯಾಂಕ್ ಆಫ್ ಅಮೇರಿಕಾ (Bank of America) ಮುಂದಿನ ಎರಡು ವರ್ಷಗಳಲ್ಲಿ ಚಿನ್ನವು ಪ್ರತಿ ಔನ್ಸ್ಗೆ $3,500 ತಲುಪಬಹುದು ಎಂದು ಭವಿಷ್ಯ ನುಡಿದಿದೆ. ಗೋಲ್ಡ್ಮನ್ ಸ್ಯಾಚ್ಸ್ (Goldman Sachs) ವರ್ಷಾಂತ್ಯದ ಬೆಲೆಯು ಪ್ರತಿ ಔನ್ಸ್ಗೆ $3,300 ಎಂದು ತಿಳಿಸಿದೆ.

ಬರೋಬ್ಬರಿ ಒಂದು ಲಕ್ಷದ ಗಡಿ ದಾಟಲು ದಾಪುಗಾಲು ಹಾಕುತ್ತ ಬಂದಿದ್ದ ಹಳದಿ ಲೋಹದ ವೇಗ ಕುಂಠಿತವಾಗುತ್ತಿದ್ದು; ಮುಂದಿನ ದಿನಗಳಲ್ಲಿ ಚಿನ್ನವು ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತದೆಯೋ ಅಥವಾ ಕುಸಿತವನ್ನು ಮುಂದುವರೆಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

Govt Employees Low Interest Loan- ಇನ್ಮುಂದೆ ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಏನೆಲ್ಲ ಸೌಲಭ್ಯ ಸಿಗಲಿದೆ? ಇಲ್ಲಿದೆ ಮಾಹಿತಿ…


Spread the love
WhatsApp Group Join Now
Telegram Group Join Now
error: Content is protected !!