ಚಿನ್ನದ ಬೆಲೆ ಇದೀಗ ಬರೋಬ್ಬರಿ ₹1.54 ಲಕ್ಷ (Gold Price Rs.1.54 Lakh) ತಲುಪಿದ್ದು; ಒಂದೇ ದಿನಕ್ಕೆ ₹5,020 ಜಿಗಿತ ಕಂಡಿದೆ. ಚಿನ್ನ-ಬೆಳ್ಳಿಯ ವಿವಿಧ ಮಾರುಟ್ಟೆ ಬೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ…
ಚಿನ್ನದ ಬೆಲೆ (Gold Price) ಇತಿಹಾಸದಲ್ಲೇ ಕಾಣದ ಮಟ್ಟಿಗೆ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ ಬರೋಬ್ಬರಿ ₹5,020 ಜಿಗಿತ ಸಾಧಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಇದರಿಂದಾಗಿ 10 ಗ್ರಾಂ ಶುದ್ಧ ಚಿನ್ನದ ಬೆಲೆ (24 Carat Gold Price) ₹1,54,800ಕ್ಕೆ ತಲುಪಿದ್ದು, ಇದು ಸಾರ್ವಕಾಲಿಕ ಗರಿಷ್ಠ ದರವಾಗಿದೆ.
ಈ ಅಚ್ಚರಿಯ ಏರಿಕೆ ಗ್ರಾಹಕರಷ್ಟೇ ಅಲ್ಲದೆ ಹೂಡಿಕೆದಾರರು, ವ್ಯಾಪಾರಿಗಳು ಹಾಗೂ ಮದುವೆ ಖರೀದಿ ಯೋಚನೆ ಮಾಡುತ್ತಿರುವವರನ್ನೂ ಚಿಂತೆಗೆ ದೂಡಿದೆ. ಸದ್ಯಕ್ಕೆ ಚಿನ್ನ-ಬೆಳ್ಳಿಯ ಬೆಲೆ ಎಷ್ಟಿದೆ? ಧಾರಣೆ ಏರಿಕೆಗೆ ಕಾರಣವೇನು? ಎಂಬ ವಿವರವನ್ನು ಇಲ್ಲಿ ನೋಡೋಣ…
ಇದನ್ನೂ ಓದಿ: Pumpset Akrama Sakrama Yojana- ಪಂಪ್‌ಸೆಟ್ ಅಕ್ರಮ-ಸಕ್ರಮ ಯೋಜನೆ: ರೈತರಿಗೆ ಹಗಲು ಹೊತ್ತಲ್ಲೇ 7 ಗಂಟೆ ಉಚಿತ ವಿದ್ಯುತ್
24 Carat Gold Price Today – ಇಂದಿನ ಶುದ್ಧ ಚಿನ್ನದ ದರ ಎಷ್ಟು?
ಇಂದಿನ ಮಾರುಕಟ್ಟೆ ದರದ ಪ್ರಕಾರ 24 ಕ್ಯಾರೆಟ್ (ಶುದ್ಧ ಚಿನ್ನ) ಚಿನ್ನ 1 ಗ್ರಾಂ ಬೆಲೆ ₹15,480 ಆಗಿದ್ದು; ₹502 ಏರಿಕೆಯಾಗಿದೆ.
10 ಗ್ರಾಂ ಬೆಲೆ ₹1,54,800 ಆಗಿದ್ದು; ಒಂದೇ ದಿನದಕ್ಕೆ ಬರೋಬ್ಬರಿ ₹5,020 ಏರಿಕೆ ಕಂಡಿದೆ.
ಇದು ಕಳೆದ ಎಲ್ಲಾ ದಾಖಲೆಗಳನ್ನು ಮುರಿದ ದರವಾಗಿದ್ದು, ಚಿನ್ನದ ಬೆಲೆ ದಿನದಿಂದ ದಿನಕ್ಕೆ ಯಾವ ಮಟ್ಟಿಗೆ ಏರುತ್ತಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಇದನ್ನೂ ಓದಿ: UPI EPF Withdrawal- ಯುಪಿಐ ಮೂಲಕ ಇಪಿಎಫ್ | ಇನ್ಮುಂದೆ ಮೂರೇ ದಿನದಲ್ಲಿ ಉದ್ಯೋಗಿಗಳ ಕೈಗೆ ಪಿಎಫ್ ಹಣ
22 Carat Gold Rate Today – 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇನ್ನು ಆಭರಣಗಳಿಗಾಗಿ ಹೆಚ್ಚು ಬಳಕೆಯಾಗುವ 22 ಕ್ಯಾರೆಟ್ ಚಿನ್ನದ ದರವೂ ಭಾರೀ ಏರಿಕೆ ಕಂಡಿದೆ. 1 ಗ್ರಾಂ ಬೆಲೆ ₹14,190 ಆಗಿದ್ದು; ಇಂದು ₹460 ಏರಿಕೆ ಕಂಡಿದೆ.
10 ಗ್ರಾಂ ಬೆಲೆ ಒಟ್ಟು ₹1,41,900 ರೂಪಾಯಿ ಆಗಿದ್ದು ಒಂದೇ ದಿನದಲ್ಲಿ ಬರೋಬ್ಬರಿ ₹4,600 ಏರಿಕೆ ಕಂಡಿದೆ. ಮದುವೆ ಮತ್ತು ಶುಭಕಾರ್ಯಗಳಿಗೆ ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇದು ನಿಜಕ್ಕೂ ದೊಡ್ಡ ಹೊಡೆತವಾಗಿದೆ.
ಇದನ್ನೂ ಓದಿ: 1 BHK Flat ₹9.7 Lakhs- ಸರ್ಕಾರದಿಂದ ಕೇವಲ ₹9.7 ಲಕ್ಷಕ್ಕೆ 1 ಬಿಎಚ್‌ಕೆ ಫ್ಲಾಟ್ | ಅರ್ಜಿ ಆಹ್ವಾನ
Bangalore Gold Price – ಬೆಂಗಳೂರಿನ ಚಿನ್ನದ ದರ (ಇಂದಿನ ಸ್ಥಿತಿ)
ಬೆಂಗಳೂರು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹15,480 ಆಗಿದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನ ₹1,54,800 ಬೆಲೆಯಲ್ಲಿದೆ.
ಗಮನಿಸಿ: ಈ ದರಗಳಲ್ಲಿ ಜಿಎಸ್‌ಟಿ ಸೇರಿಲ್ಲ. ಹೀಗಾಗಿ ಆಭರಣ ಮಳಿಗೆಗಳಲ್ಲಿ ಮೆಕಿಂಗ್ ಚಾರ್ಜ್, ಜಿಎಸ್‌ಟಿ ಮತ್ತು ಸ್ಥಳೀಯ ವೆಚ್ಚಗಳ ಕಾರಣ ಬೆಲೆಯಲ್ಲಿ ವ್ಯತ್ಯಾಸ ಇರಬಹುದು.

Silver Price Surge – ಬೆಳ್ಳಿ ಬೆಲೆಯೂ ಭಾರೀ ಜಿಗಿತ!
ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಇಂದು ಭಾರೀ ಏರಿಕೆಯಾಗಿದೆ. 1 ಗ್ರಾಂ ಬೆಳ್ಳಿಗೆ ₹325 ಬೆಲೆ ಇದ್ದು; ಇವತ್ತು ಪ್ರತೀ ಗ್ರಾಂ ಗೆ ₹5 ಏರಿಕೆ ಕಂಡಿದೆ. 1 ಕೆಜಿ ಬೆಳ್ಳಿ ₹3,25,000 ಬೆಲೆ ಕಂಡಿದ್ದು; ಕೆ.ಜಿಗೆ ಭರ್ತಿ ₹5,000 ಏರಿಕೆಯಾಗಿದೆ.
ಇತ್ತೀಚಿನ ದಿನಗಳಲ್ಲಿ ಬೆಳ್ಳಿಯೂ ಹೂಡಿಕೆ ಆಯ್ಕೆಯಾಗಿ ಜನಪ್ರಿಯವಾಗುತ್ತಿರುವುದು ಈ ಏರಿಕೆಗೆ ಒಂದು ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
Gold Price Growth Over Years – ವರ್ಷದಿಂದ ವರ್ಷಕ್ಕೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ
ಚಿನ್ನವನ್ನು ಭಾರತೀಯರು ಕೇವಲ ಆಭರಣವಾಗಿ ಮಾತ್ರವಲ್ಲ, ಭದ್ರ ಹೂಡಿಕೆಯಾಗಿ ಕೂಡ ನೋಡುವ ಪರಂಪರೆ ಇದೆ. ಕಾಲಕ್ರಮೇಣ ಚಿನ್ನದ ಬೆಲೆ ಹೇಗೆ ಏರಿಕೆಯಾಗಿದೆ ಎಂಬುದನ್ನು ನೋಡಿದರೆ, ಅದರ ಮೌಲ್ಯ ಮತ್ತು ಮಹತ್ವ ಇನ್ನಷ್ಟು ಸ್ಪಷ್ಟವಾಗುತ್ತದೆ.
1955ರಲ್ಲಿ 10 ಗ್ರಾಂ ಚಿನ್ನದ ಬೆಲೆ ಕೇವಲ ₹79 ಮಾತ್ರವಾಗಿತ್ತು. ಅದೇ ಬೆಲೆ 1960ರಲ್ಲಿ ₹111ಕ್ಕೆ ಏರಿತು. 1970ರ ವೇಳೆಗೆ ಚಿನ್ನದ ಬೆಲೆ ₹184ಕ್ಕೆ ತಲುಪಿದ್ದು, 1980ರ ವೇಳೆಗೆ ಅದು ಏಕಾಏಕಿ ₹1,330ಕ್ಕೆ ಜಿಗಿತ ಕಂಡಿತು.
1990ರಲ್ಲಿ 10 ಗ್ರಾಂ ಚಿನ್ನದ ಬೆಲೆ ₹3,200 ಆಗಿದ್ದು, 2000ರಲ್ಲಿ ₹4,400ಕ್ಕೆ ಏರಿಕೆಯಾಯಿತು. 2005ರ ವೇಳೆಗೆ ಈ ಬೆಲೆ ₹7,000 ತಲುಪಿತು. ನಂತರದ ವರ್ಷಗಳಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಬಂದಿತು.
ಇದನ್ನೂ ಓದಿ: Karnataka Bank Personal Loan- ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ | ಕಡಿಮೆ ಬಡ್ಡಿಯಲ್ಲಿ ₹25 ಲಕ್ಷವರೆಗೆ ಸುಲಭ ಸಾಲ
2010ರಲ್ಲಿ ಚಿನ್ನದ ಬೆಲೆ ₹18,500 ಆಗಿದ್ದು, 2015ರಲ್ಲಿ ₹26,343ಕ್ಕೆ ತಲುಪಿತು. 2020ರಲ್ಲಿ ಈ ಬೆಲೆ ₹48,651 ಆಗಿದ್ದರೆ, 2022ರಲ್ಲಿ ₹52,670ಕ್ಕೆ ಏರಿಕೆಯಾಯಿತು. 2023ರಲ್ಲಿ ₹65,330 ಆಗಿ, 2024ರಲ್ಲಿ ₹77,913 ತಲುಪಿತು.
ಇತ್ತೀಚಿನ ಮಾಹಿತಿಯ ಪ್ರಕಾರ, 2025ರ ಡಿಸೆಂಬರ್ 31ರಂದು 10 ಗ್ರಾಂ ಚಿನ್ನದ ಬೆಲೆ ₹1,35,220 ಆಗಿತ್ತು. ಇದೀಗ ಜನವರಿ 21ಕ್ಕೆ ಬರೋಬ್ಬರಿ ₹1,54,800 ಸಾರ್ವಕಾಲಿಕ ದಾಖಲೆ ಮುಟ್ಟಿದೆ.
ಇದು ಚಿನ್ನದ ಮೇಲೆ ಜನರ ನಂಬಿಕೆ ಮತ್ತು ಅದರ ಹೂಡಿಕೆ ಮೌಲ್ಯ ಎಷ್ಟು ಬಲವಾಗಿದೆಯೆಂಬುದಕ್ಕೆ ಸ್ಪಷ್ಟ ಉದಾಹರಣೆ. ಈ ಅಂಕಿ-ಅAಶಗಳನ್ನು ಗಮನಿಸಿದರೆ, ಚಿನ್ನ ದೀರ್ಘಾವಧಿಯಲ್ಲಿ ಸದಾ ಲಾಭದಾಯಕ ಹೂಡಿಕೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದನ್ನೂ ಓದಿ: Personal Loan Tips- ತಕ್ಷಣಕ್ಕೆ ಪರ್ಸನಲ್ ಲೋನ್ ಬೇಕಾ? ಈ ಐದು ಟಿಪ್ಸ್ ಪಾಲಿಸಿ
Reasons Behind Gold Price Rise – ಚಿನ್ನದ ಬೆಲೆ ಏಕೆ ಇಷ್ಟೊಂದು ಏರಿಕೆ?
ತಜ್ಞರ ಪ್ರಕಾರ ಚಿನ್ನದ ಬೆಲೆ ಏರಿಕೆಗೆ ಜಾಗತಿಕ ಆರ್ಥಿಕ ಅನಿಶ್ಚಿತತೆ, ಡಾಲರ್ ಮೌಲ್ಯದ ಏರಿಳಿತ, ಷೇರು ಮಾರುಕಟ್ಟೆಯ ಅಸ್ಥಿರತೆ, ಕೇಂದ್ರ ಬ್ಯಾಂಕ್‌ಗಳ ಚಿನ್ನ ಖರೀದಿ ಹಾಗೂ ಹೂಡಿಕೆದಾರರ ಸುರಕ್ಷಿತ ಹೂಡಿಕೆ ಆಸಕ್ತಿಯ ಕಾರಣಗಳಿಂದ ಚಿನ್ನದ ಮೇಲೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಗಗನಕ್ಕೇರಿದೆ.
Should You Buy Gold Now? – ಈಗ ಚಿನ್ನ ಖರೀದಿಸಬೇಕಾ?
ಆಭರಣಕ್ಕಾಗಿ ಖರೀದಿಸುವವರು ತುರ್ತು ಅಗತ್ಯವಿಲ್ಲದಿದ್ದರೆ ಸ್ವಲ್ಪ ಕಾಯುವುದು ಉತ್ತಮ. ಹೂಡಿಕೆ ಉದ್ದೇಶಕ್ಕೆ ಖರೀದಿಸುವವರು ದೀರ್ಘಾವಧಿಗೆ ಚಿನ್ನ ಇನ್ನೂ ಸುರಕ್ಷಿತ ಆಯ್ಕೆಯೇ. ಚಿನ್ನಕ್ಕೆ ಪರ್ಯಾಯವಾಗಿ ಡಿಜಿಟಲ್ ಗೋಲ್ಡ್, ಗೋಲ್ಡ್ ETF ಗಳನ್ನೂ ಪರಿಗಣಿಸಬಹುದು.
ಒಟ್ಟಿನಲ್ಲಿ, ಜನವರಿ 21, 2026 ಚಿನ್ನದ ಮಾರುಕಟ್ಟೆಯಲ್ಲಿ ಇತಿಹಾಸದ ದಿನವಾಗಿ ಉಳಿಯಲಿದೆ. ಒಂದೇ ದಿನದಲ್ಲಿ ₹5,020 ಏರಿಕೆ ಎಂದರೆ ಇದು ಸಾಮಾನ್ಯ ಬೆಳವಣಿಗೆಯಲ್ಲ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುತ್ತದೆಯೇ ಅಥವಾ ಇಳಿಕೆಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
PhonePe Personal Loan- ₹5 ಲಕ್ಷದ ವರೆಗೆ ಫೋನ್‌ಪೇ ಪರ್ಸನಲ್ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.