ಕರ್ನಾಟಕ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ (Free Sewing Machine) ವಿತರಣಾ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಪೂರ್ಣ ಮಾಹಿತಿ ಇಲ್ಲಿದೆ…
ಮಹಿಳೆಯರಿಗೆ ಆತ್ಮವಿಶ್ವಾಸ ಮತ್ತು ಸ್ವಾವಲಂಬಿ ಜೀವನವನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ‘ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ನೇರವಾಗಿ ಜಾರಿಗೊಳಿಸಲಾಗಿದೆ.
ಸದರಿ ಯೋಜನೆಯ ಮೂಲಕ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡುವುದರ ಜೊತೆಗೆ, ಕೆಲವೊಂದು ಜಿಲ್ಲೆಗಳಲ್ಲಿ ತರಬೇತಿಯನ್ನು ಕೂಡ ನೀಡುವ ಮೂಲಕ, ಆರ್ಥಿಕವಾಗಿ ಸಬಲರಾಗುವ ದಾರಿಯನ್ನು ತೆರೆಯಲಾಗಿದೆ.
ಯೋಜನೆಯ ಉದ್ದೇಶ
- ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವುದು
- ಹೊಲಿಗೆ ವೃತ್ತಿಯಲ್ಲಿ ಸ್ವಯಂ ಉದ್ಯೋಗ ನಿರ್ಮಾಣ ಮಾಡುವುದು
- ಮನೆಯಲ್ಲಿಯೇ ಸಣ್ಣ ಮಟ್ಟದ ಉಡುಪು ತಯಾರಿಕೆ, ಬಟ್ಟೆ ಮರುಹೊಳಪಿನ ಕೆಲಸದ ಅವಕಾಶ
- ಕುಟುಂಬದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ
ಯಾರೆಲ್ಲಾ ಈ ಯೋಜನೆಗೆ ಅರ್ಹರು?
- ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ವಯಸ್ಸಿನ ಮಹಿಳೆಯರು ‘ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆ’ಗೆ ಅರ್ಜಿ ಸಲ್ಲಿಸಬಹುದಾಗಿದೆ.
- ಗ್ರಾಮೀಣ ಪ್ರದೇಶದವರಿಗೆ ವಾರ್ಷಿಕ ಆದಾಯ ₹98,000 ಹಾಗೂ ನಗರ ಪ್ರದೇಶದವರಿಗೆ ವಾರ್ಷಿಕ ಆದಾಯ ₹1,20,000 ಒಳಗೆ ಇರಬೇಕು.
- ಅರ್ಜಿ ಸಲ್ಲಿಸುವ ಮಹಿಳೆಯರು ಕಡ್ಡಾಯವಾಗಿ ಹಿಂದುಳಿದ ವರ್ಗಗಳ ಪ್ರವರ್ಗ 1, 2ಎ, 3ಎ, 3ಬಿ ಗೆ ಸೇರಿರಬೇಕು.
- ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ, ಲಿಂಗಾಯತ, ಒಕ್ಕಲಿಗ, ಮರಾಠ, ಹಟ್ಟಿಗೊಲ್ಲ, ಕಾಡುಗೊಲ್ಲ ಮತ್ತು ಇತರ ಸಜಾತಿ ಉಪಸಮುದಾಯಗಳ ಮಹಿಳೆಯರು ಈ ಯೋಜನೆಗೆ ಅರ್ಹರಲ್ಲ.
- ಗಮನಾರ್ಹವೆಂದರೆ, ಅರ್ಜಿದಾರರು ಈ ಹಿಂದೆ ಡಿ. ದೇವರಾಜ ಅರಸು ನಿಗಮದಿಂದ ಯಾವುದೇ ಸೌಲಭ್ಯ ಪಡೆದುಕೊಂಡಿರಬಾರದು.

ಅರ್ಜಿಗೆ ಅಗತ್ಯ ದಾಖಲೆಗಳ ಪಟ್ಟಿ
- ಆಧಾರ್ ಕಾರ್ಡ್ (UID)
- ಪರಿಷ್ಕೃತ ಜಾತಿ ಪ್ರಮಾಣ ಪತ್ರ
- ಇತ್ತೀಚಿನ ಆದಾಯ ಪ್ರಮಾಣ ಪತ್ರ
- 2 ಪಾಸ್‌ಪೋರ್ಟ್ ಅಳತೆಯ ಫೋಟೋ
- ಬ್ಯಾಂಕ್ ಖಾತೆ ವಿವರ (ಪಾಸ್‌ಬುಕ್ ನಕಲು)
- ವಿಳಾಸದ ದೃಢೀಕರಣ (ರೇಷನ್ ಕಾರ್ಡ್ ಅಥವಾ ವೋಟರ್ ಐಡಿ)
ಅರ್ಜಿ ಸಲ್ಲಿಸುವ ವಿಧಾನ
ಸರ್ಕಾರದ ಅಧಿಕೃತ ಸೇವಾಸಿಂಧು ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇದಕ್ಕೆ ಯಾವುದೇ ಶುಲ್ಕವಿಲ್ಲ. ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್ ಅನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ ಗಮನಿಸಿ.
ಇನ್ನು ನೇರವಾಗಿ ನೀವೇ ಆನ್‌ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ ಗ್ರಾಮಒನ್, ಕರ್ನಾಟಕಒನ್, ಬೆಂಗಳೂರುಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇಲ್ಲಿ ಕನಿಷ್ಠ ಸೇವಾ ಶುಲ್ಕ ಪಾವತಿಸಬೇಕುತ್ತದೆ.
ಕೊನೆಯ ದಿನಾಂಕ: ಜೂನ್ 30, 2025
ಯೋಜನೆಯ ವೇಳಾಪಟ್ಟಿಯಂತೆ 2025ರ ಜೂನ್ 30 ಅಂತಿಮ ದಿನಾಂಕ. ಆನಂತರ ಸಲ್ಲಿಸಲಾದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಅರ್ಹ ಮಹಿಳೆಯರು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಬೇಕು.
DA Hike July 2025- ಸರ್ಕಾರಿ ನೌಕರರಿಗೆ ಜುಲೈನಿಂದ ತುಟ್ಟಿಭತ್ಯೆ (DA) ಹೆಚ್ಚಳ | ಸಂಬಳ ಎಷ್ಟು ಏರಿಕೆಯಾಗಲಿದೆ?
ಯಂತ್ರ ವಿತರಣೆಯ ವಿಧಾನ ಮತ್ತು ತರಬೇತಿ ಸೌಲಭ್ಯ
ಆಯ್ಕೆಯಾದ ಫಲಾನುಭವಿಗಳ ಪಟ್ಟಿ ನಿಗಮದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ನಂತರ ಅರ್ಹರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗುತ್ತದೆ. ಕೆಲವೊಂದು ಜಿಲ್ಲೆಯ ಫಲಾನುಭವಿಗಳಿಗೆ ಮೂಲಭೂತ ಹೊಲಿಗೆ ತರಬೇತಿ ಕೋರ್ಸ್ ಸಹ ನೀಡಲಾಗುತ್ತದೆ. ಇದರಿಂದ ಯಂತ್ರದ ಸರಿಯಾದ ಬಳಕೆ ಕಲಿಯಬಹುದು.
ನಿಮಗೆ ಹೊಲಿಗೆ ಯಂತ್ರ ದೊರೆತ ಮೇಲೆ, ನೀವು ದಿನನಿತ್ಯದ ಉಡುಪು ಹೊಲಿಗೆ, ಶಾಲೆಯ ಮಕ್ಕಳ ಯೂನಿಫಾರ್ಮ್ ತಯಾರಿಕೆ, ಸೀರೆ ಪಿಕೊ ಹಾಗೂ ಫಾಲ್ ಕೆಲಸದಿಂದ ಉತ್ತಮ ಆದಾಯ ಸಂಪಾದಿಸಬಹುದು. ಈ ಯೋಜನೆಯಿಂದ ಮಹಿಳೆಯರಿಗೆ ತಮ್ಮ ಮನೆಯಲ್ಲಿಯೇ ಉದ್ಯಮ ಆರಂಭಿಸುವ ಅವಕಾಶ ಸಿಗಲಿದೆ.
- ಅರ್ಜಿ ಲಿಂಕ್: Apply Now
- ಹೆಚ್ಚಿನ ಮಾಹಿತಿಗೆ ಆಯಾ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆಗಳನ್ನು ಪಡೆಯಲು ಇಲ್ಲಿ ಒತ್ತಿ…

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.