ಮಹಿಳೆಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ, ಅರ್ಹ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ…
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತನ್ನ 2024-25ನೇ ಸಾಲಿನ ಕಲ್ಯಾಣ ಯೋಜನೆಗಳಡಿಯಲ್ಲಿ ಉಚಿತ ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ವಿವಿಧ ಆರ್ಥಿಕ ಪ್ರೋತ್ಸಾಹ ಪ್ಯಾಕೇಜುಗಳಿಗೆ ಅರ್ಜಿ ಆಹ್ವಾನಿಸಿದೆ. ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬಹುದು.
ಹೊಸ ಕಲ್ಯಾಣ ಯೋಜನೆ
ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಮಹಿಳೆಯರು ನಿತ್ಯ ದುಡಿಮೆಗೆ ಹೋಗಿ ಬರುತ್ತಾರೆ. ಗಾರ್ಮೆಂಟ್ಸ್ ಉದ್ಯೋಗಿಗಳು, ಪೌರ ಕಾರ್ಮಿಕರು, ಗೃಹ ಹೊಂದಾಣಿಕೆ ಕಾರ್ಮಿಕರು, ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ಇತ್ಯಾದಿ ಹಲವರು ಕಡಿಮೆ ಆದಾಯದ ಮೇಲೆ ಅವಲಂಬಿತರಾಗಿದ್ದಾರೆ. ಇಂಥವರಿಗೆ ಬೆಂಬಲವಾಗಿ ಬಿಬಿಎಂಪಿ ಈ ಹೊಸ ಯೋಜನೆಯನ್ನು ಆರಂಭಿಸಿದೆ.
ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಸ್ವಂತ ವಾಹನ ಹೊಂದಿದವರಾಗಬೇಕು ಎಂಬುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ಮಹಿಳೆಯರಿಗೆ ಮಾತ್ರವಲ್ಲದೆ, ಅವರ ಕುಟುಂಬದ ಸಮಗ್ರ ಅಭಿವೃದ್ಧಿಗೆ ಸಹ ಸಹಾಯಕವಾಗಬಲ್ಲದು. ಇಂತಹ ಯೋಜನೆಗಳು ಮಹಿಳೆಯರನ್ನು ಸ್ವಾವಲಂಬಿಗಳಾಗಿಸಬಲ್ಲದು.
Govt Loan Schemes- ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು
ಕಲ್ಯಾಣ ಕಾರ್ಯಕ್ರಮಗಳ ಪಟ್ಟಿ
ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಕೇವಲ ಉಚಿತ ಎಲೆಕ್ಟ್ರಿಕ್ ಸ್ಕೂಟರ್ ಮಾತ್ರವಲ್ಲದೇ ಇನ್ನೂ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಅರ್ಹರು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಕಲ್ಯಾಣ ಕಾರ್ಯಕ್ರಮಗಳ ಪಟ್ಟಿ ಈ ಕೆಳನಂತಿದೆ:
- ಉಚಿತ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ
- ಉಚಿತ ಹೊಲಿಗೆ ಯಂತ್ರ ವಿತರಣೆ
- ಎಲೆಕ್ಟ್ರಿಕ್ ತ್ರಿಚಕ್ರ ವಾಹನ ವಿತರಣೆ
- ಎಲೆಕ್ಟ್ರಿಕ್ ವೆಂಡಿಂಗ್ ಮೆಷಿನ್ ವಿತರಣೆ
- ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ
- ಫ್ಲಾಟ್ ಖರೀದಿಗೆ ಸಹಾಯಧನ (ಅಮೃತ ಮಹೋತ್ಸವ ಯೋಜನೆ)
- ಕ್ರೀಡಾಪಟುಗಳಿಗೆ, ಸಂಗೀತ ವಾದಕರಿಗೆ ಉಪಕರಣ ಖರೀದಿಗೆ ಸಹಾಯಧನ
- ಔಷಧಿ ಅಂಗಡಿ ಆರಂಭಿಸಲು ಸಹಾಯ
- ಆಟೋ/ಕಾರು ಖರೀದಿಗೆ ಸಹಾಯಧನ
- ಶಾಲಾ ಶುಲ್ಕ ಮರುಪಾವತಿ, ಉನ್ನತ/ವಿದೇಶ ವ್ಯಾಸಂಗಕ್ಕೆ ಸಹಾಯಧನ
- ಸ್ವಯಂ ಉದ್ಯೋಗ ಪ್ರಾರಂಭಿಸಲು ಪ್ರೋತ್ಸಾಹ ಧನ
ಹೀಗೆ ಹಲವು ಕಲ್ಯಾಣ ಕಾರ್ಯಕ್ರಮಗಳ ಅಡಿಯಲ್ಲಿ ಸಹಾಯಧನ, ಉಪಕರಣ, ವಾಹನ ಖರೀದಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಇಲ್ಲಿ ಉಚಿತ ಎಲೆಕ್ಟ್ರಿಕ್ ಸ್ಕೂಟರ್ ಯೋಜನೆ ಕುರಿತ ಸಂಪೂರ್ಣ ಮಾಹಿತಿ ನೀಡಲಾಗಿದೆ.
SSLC 2025 Results- SSLC ಫಲಿತಾಂಶ | ಮೌಲ್ಯಮಾಪನ, ರಿಸೆಲ್ಟ್ ಕುರಿತ KSEAB ಪ್ರಮುಖ ಮಾಹಿತಿ ಇಲ್ಲಿದೆ…

ಉಚಿತ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ
ಬೆಂಗಳೂರು ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಉದ್ಯೋಗ ಮಾಡುವ ಅರ್ಹ ಮಹಿಳೆಯರಿಗೆ ಮನೆಯಿಂದ ಉದ್ಯೋಗ ಸ್ಥಳಕ್ಕೆ ಸುಲಭವಾಗಿ ಸಂಚರಿಸಲು ಅನುಕೂಲವಾಗುವಂತೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆಯಡಿ ಪ್ರಯೋಜನ ಪಡೆಯಲು ಫಲಾನುಭವಿಗಳು ಆರ್ಥಿಕವಾಗಿ ಹಿಂದುಳಿದವರಾಗಿರಬೇಕು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ವಾಸ ಮಾಡುತ್ತಿರಬೇಕು. ಈ ಹಿಂದೆ ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮದ ಅಡಿಯಲ್ಲಿ ಬೇರೆ ಯಾವುದಾದರೂ ಸೌಲಭ್ಯ, ಸಹಾಯಧನ ಪಡೆದುಕೊಂಡಿದ್ದರೆ ಅಂಥವರಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಮೇಲ್ಕಾಣಿಸಿದ ಅರ್ಹತೆಯುಳ್ಳ ಮಹಿಳೆಯರು ಉಚಿತ ಎಲೆಕ್ಟ್ರಿಕ್ ಸ್ಕೂಟರ್ ಪಡೆಯಲು ಅರ್ಜಿ ಸಲ್ಲಿಸಬಹುದಾದರೂ ಈ ಕೆಳಗಿನ ವರ್ಗದವರಿಗೆ ಪ್ರಥಮ ಆದ್ಯತೆ ನೀಡಲಾಗಿದೆ:
- ಗಾರ್ಮೆಂಟ್ಸ್ ಉದ್ಯೋಗಿಗಳು
- ಬಿಬಿಎಂಪಿ ಪೌರ ಕಾರ್ಮಿಕರು
- ಉದ್ಯೋಗಸ್ಥ ಮಹಿಳೆಯರು
Welfare Schemes- ಉಚಿತ ಲ್ಯಾಪ್‌ಟಾಪ್ ಮತ್ತು ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ಆಧಾರ್ ಕಾರ್ಡ್ ಪ್ರತಿ
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್ ಪ್ರತಿ
- ವಾಸ ದೃಢೀಕರಣ ದಾಖಲೆ (ಉದಾ: ವಿದ್ಯುತ್ ಬಿಲ್/ರೇಶನ್ ಕಾರ್ಡ್ ವಿಳಾಸ)
- ವಯಸ್ಸು ದೃಢೀಕರಿಸುವ ದಾಖಲೆ (SSLC ಮಾರ್ಕ್ಸ್ ಕಾರ್ಡ್, ಜನನ ಪ್ರಮಾಣ ಪತ್ರ ಮುಂತಾದವು)
ಅರ್ಜಿ ಸಲ್ಲಿಸುವ ವಿಧಾನ
ಮೇಲ್ಕಂಡ ದಾಖಲೆಗಳನ್ನು ಸಿದ್ಧಪಡಿಸಿ ಕೆಳಗಿನ ಲಿಂಕ್‌ನಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ, ಎಲ್ಲಾ ದಾಖಲಾತಿಗಳ ಸ್ವ-ದೃಢೀಕರಿತ ಪ್ರತಿಗಳನ್ನು ಹೊಂದಿಸಿ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ (ಕಲ್ಯಾಣ ವಿಭಾಗ) ಕಚೇರಿಗೆ ನೇರವಾಗಿ ಅರ್ಜಿ ಸಲ್ಲಿಸಿ…
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-05-2025
ಈ ಯೋಜನೆಗಳು ಮಹಿಳೆಯರಿಗೆ ತುಂಬ ಪ್ರಯೋಜನಕಾರಿ ಆಗಿದ್ದು; ನೀವು ಮಾತ್ರವಲ್ಲದೇ ನಿಮಗೆ ಗೊತ್ತಿರುವ ಅರ್ಹ ಮಹಿಳೆಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ. ಅವರಿಗೂ ಇದರ ಪ್ರಯೋಜನ ಸಿಗಲಿ…
ಅರ್ಜಿ ನಮೂನೆಯನ್ನು ಇಲ್ಲಿ Download ಮಾಡಿ

Founder and Editor-in-Chief of mahitimane.com, a credible news portal. He has over 20 years of rich experience in the print media and has worked as a reporter, sub-editor, and editor. In line with the changing landscape of journalism, he has recently been actively engaged in the digital media space, focusing on delivering accurate and trustworthy news to readers.