EPS pensioners can get pension from anywhere : ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಭವಿಷ್ಯ ನಿಧಿ ಮಂಡಳಿ (Provident Fund Board) ನಡೆಸುವ 1995ರ ಅಡಿಯ ನೌಕರರ ಪಿಂಚಣಿ ಯೋಜನೆಯ (Employee Pension Schem – EPS) ಪಿಂಚಣಿದಾರರು ಜನವರಿಯಿಂದ ಭಾರತದಾದ್ಯಂತ ಯಾವುದೇ ಬ್ಯಾಂಕ್ ಅಥವಾ ಶಾಖೆಯಿಂದ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಪಿಎಫ್ ಮಂಡಳಿ ಅಧೀನದ 78 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಸೆಪ್ಟೆಂಬರ್ 4ರಂದು ಈ ಘೋಷಣೆ ಮಾಡಿದ್ದು, ಇದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆಯ ಪ್ರಸ್ತಾವನೆಯನ್ನು ಪಿಎಫ್ ಬಗ್ಗೆ ನಿರ್ಧಾರ ಕೈಗೊಳ್ಳುವ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ (Central Board of Trustees) ಅನುಮೋದಿಸಿದೆ ಎಂದು ಹೇಳಿದ್ದಾರೆ.
ಈವರೆಗೆ ಭವಿಷ್ಯ ನಿಧಿ ಮಂಡಳಿಯ ಪ್ರತಿ ವಲಯ, ಪ್ರಾದೇಶಿಕ ಕಚೇರಿಗಳು ಕೇವಲ 3-4 ಬ್ಯಾಂಕ್ಗಳೊ೦ದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಳ್ಳುತ್ತಿದ್ದವು. ಹೀಗಾಗಿ ಪಿಂಚಣಿದಾರರು ಅದೇ ಬ್ಯಾಂಕುಗಳಲ್ಲಿ ಪಿಂಚಣಿ ಪಡೆಯಬೇಕಾಗಿತ್ತು.ಕೇಂದ್ರ ಕೇಂದ್ರ ಸರ್ಕಾರ ಇದನ್ನು ಸರಳೀಕರಿಸಿದೆ.
ಜನವರಿಯಿಂದ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ದೇಶದ ಎಲ್ಲಿಂದಲಾದರೂ ಪಡೆಯಬಹುದಾಗಿದೆ. ಯಾವುದೇ ಬ್ಯಾಂಕಿನ ಯಾವುದೇ ಶಾಖೆಲ್ಲಿ ಪಂಚಣಿ ಪಡೆಯಲು ಅವಕಾಶವಿದೆ.
ಅಷ್ಟೇ ಅಲ್ಲದೇ ಪಿಂಚಣಿದಾರರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಗೊ೦ಡಾಗ ಅಥವಾ ಅವರ ಬ್ಯಾಂಕ್ ಇಲ್ಲವೇ ಶಾಖೆಯನ್ನು ಬದಲಾಯಿಸಿದಾಗ ಪಿಂಚಣಿ ಪಾವತಿ ಆದೇಶಗಳನ್ನು (Pension Payment Order -PPO) ವರ್ಗಾಯಿಸುವ ಅಗತ್ಯ ಕೂಡ ಇರುವುದಿಲ್ಲ.
ಇದೇ ವೇಳೆ, ನೌಕರರು ನಿವೃತ್ತರಾಗಿ ಪಿಂಚಣಿ ಆರಂಭವಾಗುವ ವೇಳೆ ಪರಿಶೀಲನೆಗಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ಪಿಂಚಣಿ ಬಿಡುಗಡೆಯಾದ ತಕ್ಷಣ ಅವರ ಖಾತೆಗೆ ಹಣವನ್ನು ಕ್ರೆಡಿಟ್ ಮಾಡಲಾಗುತ್ತದೆ.