
ಕೇಂದ್ರ ಸರ್ಕಾರದ ಬುಡಕಟ್ಟು ಸಚಿವಾಲಯದ ಅಧೀನದಲ್ಲಿರುವ ನ್ಯಾಷನಲ್ ಎಜುಕೇಷನ್ ಸೊಸೈಟಿ ಫಾರ್ ಟ್ರೈಬಲ್ ಸ್ಟುಡೆಂಟ್ಸ್ (ಎನ್‌ಇಎಸ್‌ಟಿಎಸ್) ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (Eklavya Model Residential Schools Recruitment 2025) ಶಿಕ್ಷಕರು, ಶಿಕ್ಷಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರು, ಸ್ನಾತಕೋತ್ತರ ಶಿಕ್ಷಕರು, ಪದವೀಧರ ಶಿಕ್ಷಕರು, ಹಾಸ್ಟೆಲ್ ವಾರ್ಡನ್, ಸ್ಟಾಫ್ ನರ್ಸ್, ಅಕೌಂಟೆಂಟ್, ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್ ಮತ್ತು ಲ್ಯಾಬ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಏನಿದು ಏಕಲವ್ಯ ವಸತಿ ಶಾಲೆ?
ದೇಶದಲ್ಲಿ ಒಟ್ಟಾರೆ 708 ಎಕಲವ್ಯ ಮಾದರಿ ಶಾಲೆಗಳಿವೆ. ನವೋದಯ ವಿದ್ಯಾಲಯಗಳ ಮಾದರಿಯಲ್ಲಿಯೇ 6ರಿಂದ 12ನೇ ತರಗತಿಯ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗಾಗಿ ಗುಣಮಟ್ಟದ ಶಿಕ್ಷಣ ನೀಡಲು ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ಬ್ಲಾಕ್ ಹಂತದಲ್ಲಿ ಸ್ಥಾಪಿಸಲಾಗಿದೆ. ಬಾಲಕ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್, ಊಟದ ವ್ಯವಸ್ಥೆ ಹಾಗೂ ಸಿಬ್ಬಂದಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ಹುದ್ದೆಗಳ ವಿವರ
- ಪ್ರಾಂಶುಪಾಲ: 225
- ಸ್ನಾತಕೋತ್ತರ ಶಿಕ್ಷಕ: 1460
- ಪದವೀಧರ ಶಿಕ್ಷಕ: 3962
- ಅಕೌಂಟೆಂಟ್: 61
- ಸ್ಟಾಫ್ ನರ್ಸ್: 550
- ಹಾಸ್ಟೆಲ್ ವಾರ್ಡನ್: 346
- ಹಾಸ್ಟೆಲ್ ವಾರ್ಡನ್ (ಮಹಿಳೆ): 289
- ಜೂ.ಸೆಕ್ರೆಟರಿ ಅಸಿಸ್ಟೆಂಟ್: 228
- ಲ್ಯಾಬ್ ಅಟೆಂಡೆಂಟ್: 146
- ಒಟ್ಟು ಹುದ್ದೆಗಳು: 7,267

ಮಹಿಳೆಯರಿಗೆ ಆದ್ಯತೆ
ಮೇಲ್ಕಾಣಿಸಿದ ಎಲ್ಲಾ ಹುದ್ದೆಗಳ ನೇಮಕಾತಿಗಾಗಿ ಇಎಂಆರ್‌ಎಸ್ ಸ್ಟಾಫ್ ಸೆಲೆಕ್ಷನ್ ಎಕ್ಸಾಮ್ ನಡೆಸಲಾಗುತ್ತಿದೆ. ವಿವಿಧ ಹುದ್ದೆಗಳಿಗೆ ವಿವಿಧ ಹಂತದ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಶಿಕ್ಷಕ ಹುದ್ದೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿಯಿಲ್ಲ. ಆದರೆ, ಆಯಾ ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಕನಿಷ್ಠ ಶೇ.20 ಹಾಗೂ ಗರಿಷ್ಠ ಶೇ.60ರ ವರೆಗೆ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಶೈಕ್ಷಣಿಕ ಅರ್ಹತೆ ವಿವರ
ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಮತ್ತು ಶಿಕ್ಷಕೇತರ ಹುದ್ದೆಗಳಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ:
- ಪ್ರಾಂಶುಪಾಲ: ಈ ಹುದ್ದೆಗೆ ಸ್ನಾತಕೋತ್ತರ ಪದವೀಧರರಾಗಿದ್ದು, ಬಿ.ಇಡಿ ಪೂರ್ಣಗೊಳಿಸಿರಬೇಕು.
- ಸ್ನಾತಕೋತ್ತರ ಶಿಕ್ಷಕ: ಆಯಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಮಾಡಿರಬೇಕು.
- ಪದವೀಧರ ಶಿಕ್ಷಕ: ಪದವಿಯೊಂದಿಗೆ ಬಿ.ಇಡಿ ಪೂರ್ಣಗೊಳಿಸಿರಬೇಕು.
- ಸ್ಟಾಫ್ ನರ್ಸ್: ಬಿಎಸ್‌ಸಿ ನರ್ಸಿಂಗ್ ವ್ಯಾಸಂಗ ಮಾಡಿರಬೇಕು.
- ಅಕೌಂಟೆಂಟ್: ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
- ಜೂನಿಯರ್ ಸೆಕ್ರೆಟರಿ ಅಸಿಸ್ಟೆಂಟ್: ಈ ಹುದ್ದೆಗಳಿಗೆ 12ನೇ ತರಗತಿ, ಪಾಸಾಗಿರಬೇಕು.
- ಲ್ಯಾಬ್ ಅಸಿಸ್ಟೆಂಟ್: ಎಸ್‌ಎಸ್‌ಎಲ್‌ಸಿ ಬಳಿಕ ಲ್ಯಾಬ್ ಟೆಕ್ನಿಕ್’ನಲ್ಲಿ ಡಿಪ್ಲೊಮಾಮಾಡಿರಬೇಕು.
ಅರ್ಜಿ ಶುಲ್ಕವೆಷ್ಟು?
ಮಹಿಳೆಯರು, ಎಸ್‌ಟಿ, ಎಸ್‌ಸಿ ಹಾಗೂ ಅಂಗವಿಕಲ ಅಭ್ಯರ್ಥಿಗಳು 500 ರೂ. ಸಂಸ್ಕರಣಾ ಶುಲ್ಕ ಮಾತ್ರ ಪಾವತಿಸಬೇಕಿದೆ. ಉಳಿದ ವರ್ಗದವರು ಪ್ರಾಂಶುಪಾಲ ಹುದ್ದೆಗೆ 2,500, ಶಿಕ್ಷಕ ಹುದ್ದೆಗಳಿಗೆ 2,000 ರೂ. ಹಾಗೂ ಬೋಧಕೇತರ ಹುದ್ದೆಗಳಿಗೆ 1,500 ರೂ. ಶುಲ್ಕ ಪಾವತಿಸಬೇಕಿದೆ.
ವಯೋಮಿತಿ ವಿವರ
ಪ್ರಾಂಶುಪಾಲ ಹುದ್ದೆ 50 ವರ್ಷ, ಸ್ನಾತಕೋತ್ತರ ಶಿಕ್ಷಕರು 40, ಪದವೀಧರ ಶಿಕ್ಷಕರು, ಹಾಸ್ಟೆಲ್ ವಾರ್ಡನ್, ಸ್ಟಾಫ್ ನರ್ಸ್ 35, ಅಕೌಂಟೆಂಟ್ಸ್ ಹಾಗೂ ಲ್ಯಾಬ್ ಅಟೆಂಡೆಂಟ್ಸ್ ಜೂನಿಯರ್ ಸೆಕೆಟರಿಯೇಟ್ ಅಸಿಸ್ಟೆಂಟ್ ಹುದ್ದೆಗಳಿಗೆ 30 ವರ್ಷ ನಿಗದಿಪಡಿಸಲಾಗಿದೆ. ಉಳಿದಂತೆ ಆಯಾ ಮೀಸಲಾತಿಯನ್ವಯ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಆಯಾ ಹುದ್ದೆಗೆ ತಕ್ಕಂತೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಪ್ರಾಂಶುಪಾಲ ಹುದ್ದೆಗೆ ಎರಡು ಹಂತದ ಪರೀಕ್ಷೆ ಹಾಗೂ ಸಂದರ್ಶನವಿದೆ. ಉಳಿದ ಹುದ್ದೆಗಳಿಗೆ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ಅಕೌಂಟೆAಟ್ ಹಾಗೂ ಅಸಿಸ್ಟೆಂಟ್ ಹುದ್ದೆಗಳಿಗೆ ಕೌಶಲ ಪರೀಕ್ಷೆ (ಟೈಪಿಂಗ್) ಇರಲಿದೆ.
ಮಾಸಿಕ ವೇತನಶ್ರೇಣಿ
- ಪ್ರಾಂಶುಪಾಲ: ₹78,800- ₹2,09,200
- ಸ್ನಾತಕೋತ್ತರ ಶಿಕ್ಷಕ: ₹47,600- ₹1,51,100
- ಪದವೀಧರ ಶಿಕ್ಷಕ: ₹44,900- ₹1,42,400
- ಲೈಬ್ರರಿಯನ್: ₹44,900- ₹1,42,400
- ಅಕೌಂಟೆಂಟ್: ₹35,400- ₹1,12,400
- ಸ್ಟಾಫ್ ನರ್ಸ್: ₹29,200- ₹92,300
- ಹಾಸ್ಟೆಲ್ ವಾರ್ಡನ್: ₹29,200- ₹92,300
- ಜೂ.ಸೆಕ್ರೆಟರಿ ಅಸಿಸ್ಟೆಂಟ್: ₹19,900- ₹63,200
- ಲ್ಯಾಬ್ ಅಟೆಂಡೆAಟ್: ₹8000- ₹56,900
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 23-10-2025